ಪಿತ್ರಾರ್ಜಿತ ಅಸ್ತಿ ನೀವು ಎಷ್ಟೇ ಪ್ರಯತ್ನ ಮಾಡಿದರೂ ನಿಮ್ಮ ಕೈಗೆ ಸೇರುತ್ತಿಲ್ವಾ .. ಹಾಗಾದ್ರೆ ರಾಹುಕಾಲದಲ್ಲಿ ಈ ಚಿಕ್ಕ ಕೆಲಸ ಮಾಡಿ ಸಾಕು ಎಲ್ಲಾ ಅಸ್ತಿ ನಿಮ್ಮ ಕೈ ಸೇರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ರಾಹುಕಾಲದಲ್ಲಿ ಈ ಒಂದು ಪರಿಹಾರ ಮಾಡಿಕೊಂಡರೆ ನಿಮಗೆ ನಿಮ್ಮ ಪಿತ್ರಾರ್ಜಿತ ಆಸ್ತಿ ಸಲೀಸಾಗಿ ಸಿಗುತ್ತದೆ.ಹಾಯ್ ಸ್ನೇಹಿತರೆ ಜೀವನದಲ್ಲಿ ನಿಮಗೇನಾದರೂ ಬೇರೆಯವರಿಂದ ಮೋಸ ವಂಚನೆ ಆಗಿದ್ದರೆ ಒಂದು ಪರಿಹಾರ ನಿಮಗೆ ಅನುಕೂಲ ಮಾಡುತ್ತದೆ ಯಾರು ತಮ್ಮ ಆಸ್ತಿಯನ್ನು ಕಳೆದುಕೊಂಡು ತುಂಬಾ ನೋವನ್ನು ಅನುಭವಿಸುತ್ತಾರೆ ಅಂತವರು ಈ ಒಂದು ಪರಿಹಾರವನ್ನು ಮಾಡಿ. ಸ್ನೇಹಿತರೆ ಇಂತಹ ತೊಂದರೆಗಳು ಈಗ ಮಾತ್ರ ಅಲ್ಲದೆ ಪುರಾತನ ಕಾಲದಿಂದಲೂ ಇವೆ. ಆಸ್ತಿ ವಿಷಯವಾಗಿ ಎಷ್ಟೋ ಕುಟುಂಬಗಳು ವೈರತ್ವವನ್ನು ಬೆಳೆಸಿಕೊಂಡು ತುಂಬಾ ಕಷ್ಟಗಳನ್ನು ಎದುರಿಸಿದ್ದಾರೆ ಹಾಗೆ ಎಷ್ಟು ಕೊಲೆಗಳು ಕೂಡ ಆಗಿಹೋಗಿವೆ. ಅದರಲ್ಲೂ ಹಳ್ಳಿಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿವೆ.

ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೊಳ್ಳಲು ಜಗಳ ಮಾಡುತ್ತಾ ಇರುತ್ತಾರೆ ಕೆಲವೊಬ್ಬರಿಗೆ ಕಡಿಮೆ ಆಸ್ತಿ ಹಾಗೂ ಇನ್ನು ಕೆಲವೊಬ್ಬರಿಗೆ ಹೆಚ್ಚು ಆಸ್ತಿ ಎಂದು ಸುಮಾರು ಸಮಸ್ಯೆಗಳು ಬರುತ್ತವೆ. ಆದರೆ ಕೆಲವೊಬ್ಬರಿಗೆ ಇದರಿಂದ ತುಂಬಾ ಮೋಸ ಅನ್ಯಾಯ ಆಗಿರುತ್ತದೆ ಅದನ್ನು ನೀವು ಕೇಳಿದರೂ ಅವರು ಕೊಡುವುದಿಲ್ಲ ಮೋಸ ವಂಚನೆಯಿಂದ ಅವರೆಲ್ಲ ಆಸ್ತಿಯನ್ನು ಪಡೆದುಕೊಂಡು ಸುಖ ಪಡುತ್ತಾರೆ. ಆದರೆ ಸ್ನೇಹಿತರೆ ಇಂತಹ ಆಸ್ತಿಯಿಂದ ಅವರಿಗೂ ಕೂಡ ಯಾವುದೇ ಲಾಭ ಆಗುವುದಿಲ್ಲ ಬದಲಾಗಿ ಆಸ್ತಿಗೆ ತಕ್ಕಷ್ಟು ಹೆಚ್ಚಿನ ಆಸ್ತಿ ಅವರಿಗೆ ನಷ್ಟ ಆಗುತ್ತಾ ಬರುತ್ತದೆ ಆದರೆ ಅವರಿಗೆ ಅದು ಆಸ್ತಿಯನ್ನು ಕಸಿದುಕೊಂಡ ತಿಳಿಯುವುದಿಲ್ಲ.

ನೀವು ಕೂಡ ಎಷ್ಟೇ ಪ್ರಯತ್ನಪಟ್ಟು ಆಸ್ತಿಯನ್ನು ಸಮಪಾಲು ಕೇಳಲು ಹೋದರೆ ನಿಮಗೆ ಸಿಗದೇ ಹೋಗಬಹುದು ಅಂತಹ ಸಮಯದಲ್ಲಿ ನೀವು ಈ ಒಂದು ಪರಿಹಾರವನ್ನು ಮಾಡಿನೋಡಿ. ಈ ಒಂದು ಪರಿಹಾರಕ್ಕೆ ಒಂದು ಗ್ಲಾಸ್ ಗೋಧಿ ರವ ಅಥವಾ ಗೋಧಿ ನುಚ್ಚು ಹಾಗೂ ಒಂದು ಗ್ಲಾಸ್ ನೀರು ಹಾಗೂ ಎರಡು ಮಣ್ಣಿನಿಂದ ಮಾಡಿರುವ ದೀಪ ಹಚ್ಚುವ ಹಣತೆಗಳು ಅಥವಾ ಪಣತೆಗಳು. ಹಾಗಾದರೆ ಇವುಗಳನ್ನೆಲ್ಲ ಬಳಸಿಕೊಂಡು ಯಾವ ರೀತಿಯಾದ ಪರಿಹಾರ ಮಾಡಬೇಕು ಮತ್ತು ಯಾವ ದಿನದಂದು ಮಾಡಬೇಕು ಮತ್ತು ಹೇಗೆ ಈ ಪೂಜೆಯನ್ನು ಅಥವಾ ಪರಿಹಾರವನ್ನು ಮಾಡಬೇಕು ಎಂದು ನಾನು ನಿಮಗೆ ತಿಳಿಸುತ್ತೇನೆ.

ಸ್ನೇಹಿತರೆ ಈ ಒಂದು ಪರಿಹಾರ ಮಾಡಲು ಭಾನುವಾರ ತುಂಬಾ ಒಳ್ಳೆಯ ದಿನ ಈ ದಿನದಂದು ನೀವು ಬೆಳಿಗ್ಗೆ ಸ್ನಾನ ಮಾಡಿ ಅಶ್ವತಮರ ಅಥವಾ ಅರಳಿ ಮರಕ್ಕೆ ಹೋಗಬೇಕು ಅಲ್ಲಿ ಒಂದು ಗ್ಲಾಸ್ ನೀರನ್ನು ಸುತ್ತ ಮರಕ್ಕೆ ಹಾಕಬೇಕು. ನಂತರ ಗೋಧಿ ನುಚ್ಚು ಅಥವಾ ಅದಿರನ್ನು ಬಲಕ್ಕೆ ಹಾಗೂ ಅದಕ್ಕೆ ಇಟ್ಟು ಅದರ ಮೇಲೆ ಮಣ್ಣಿನ ಪಣತಿಗಳನ್ನು ಬಿಟ್ಟು ದೀಪವನ್ನು ಹಚ್ಚಬೇಕು ಎಳ್ಳುಎಣ್ಣೆಯಿಂದ ದೀಪವನ್ನು ಹಚ್ಚಿದರೆ ತುಂಬಾ ಶ್ರೇಷ್ಠವಾದದ್ದು ಶನಿ ರಾಹು ಹಾಗೂ ಕೇತು ಯಾವುದೇ ಗ್ರಹಗಳ ದೋಷವಿದ್ದರೆ ನಿಮ್ಮಿಂದ ದೂರ ಹೋಗುತ್ತವೆ. ಇಂತಹ ತೊಂದರೆಗಳಿಗೆ ಮುಖ್ಯವಾಗಿ ಶನಿ ಹಾಗೂ ರಾಹು ಮತ್ತು ಬುಧ ಗ್ರಹಗಳು ದೋಷ ಹೆಚ್ಚಾಗಿರುತ್ತದೆ. ಈ ದೀಪವನ್ನು ಹಚ್ಚಿ ಅರಳಿ ಮರವನ್ನು ಪೂಜೆ ಮಾಡಿ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು

ನಮ್ಮ ಮನೆಯ ಎಲ್ಲಾ ಕಷ್ಟಗಳು ಪರಿಹಾರವಾಗಬೇಕು ಎಂದು ಕೇಳಬೇಕು. ಇನ್ನೂ ಒಂದು ಪರಿಹಾರ ಏನೆಂದರೆ ರಾಮ ವಿಷ್ಣು ಇಂತಹ ದೇವಸ್ಥಾನಗಳಿಗೆ ಬುಧವಾರ ಹೆಸರು ಬೇಳೆಯಿಂದ ಮಾಡಿದ ಪಾಯಸವನ್ನು ತೆಗೆದುಕೊಂಡು ಹೋಗಿ ದೇವರಿಗೆ ನೈವೇದ್ಯ ಮಾಡಬೇಕು. ವಿಷ್ಣು ಸಹಸ್ರನಾಮ ಓದುವುದರಿಂದ ಕೂಡ ಇಂತಹ ಸಮಸ್ಯೆಗಳು ದೂರ ಆಗುತ್ತದೆ. ಹಾಗಾದರೆ ಸ್ನೇಹಿತರೆ ಆಸ್ತಿ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆಗಳು ನಿಮಗೆ ಅಥವಾ ನಿಮ್ಮ ಸಂಬಂಧಿಕರಲ್ಲಿ ಹೆಚ್ಚಾಗಿದ್ದರೆ ಇಂತಹ ಪರಿಹಾರಗಳನ್ನು ಮಾಡಿನೋಡಿ. ಸ್ನೇಹಿತರೆ ಪರಿಹಾರಗಳು ತಿಳಿದಮೇಲೆ ತೊಂದರೆಗಳನ್ನು ಸರಿಪಡಿಸುವ ಪ್ರಯತ್ನವನ್ನು ಒಂದು ಸಲ ಮಾಡಿ ನೋಡಿ ನಿಮಗೆ ಒಳ್ಳೆಯ ಫಲ ಸಿಕ್ಕರೆ ನೀವು ಕೂಡ ಇತರರಿಗೂ ಅಂದರೆ ಸ್ನೇಹಿತರಿಗೂ ಹಾಗೂ ಸುತ್ತಮುತ್ತಲಿನವರಿಗೆ ತಿಳಿಸಿರಿ. ಹಾಗಾದರೆ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.