16 ದಿನ ನಿಂಬೆಹಣ್ಣಿನಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿರುವ ದಾರಿದ್ರ್ಯ ಬಾದೆ ಹಾಗೂ ಸಾಲಬಾದೆ ಮತ್ತು ಆರ್ಥಿಕ ಸಮಸ್ಯೆ ಎಲ್ಲಾ ದೂರವಾಗುವುದು.
ಹಾಯ್ ಸ್ನೇಹಿತರೆ ಯಾರ ಮನೆಯಲ್ಲಿ ಸಾಲದ ಬಾಧೆ ಅಂದರೆ ಸಾಲ ಜಾಸ್ತಿ ಆಗಿರುವುದು ಅಥವಾ ಯಾರು ನಿಮ್ಮಿಂದ ಸಾಲವನ್ನು ತೆಗೆದುಕೊಂಡು ಕೊಡದೆ ಇರುವುದು ಇಂತಹ ತೊಂದರೆಗಳು ಆದರೆ ಹಾಗೆ ನಿಮ್ಮ ಮನೆಯಲ್ಲಿ ದಾರಿದ್ರ ಬಾದೆ ಅಂದರೆ ಮನೆಯಲ್ಲಿ ಎಲ್ಲರೂ ಕೆಲಸ ಮಾಡದೆ ದರಿದ್ರ ವಾಗಿ ಇರುವುದು ಹಾಗೂ ನೀವು ಏನೇ ಮಾಡಿದರೂ ಲಾಭ ಇರದೇ ಇರುವುದು ಮತ್ತು ಕೆಲವೊಬ್ಬರು ಹೇಳುತ್ತಾರೆ ನಿಮಗೆ ದರಿದ್ರ ಅಂಟಿದೆ ಎಂದು ಹೇಳುತ್ತಾರೆ. ಹಾಗೆ ಮನೆಯಲ್ಲಿ ಕಷ್ಟಗಳ ಮೇಲೆ ಕಷ್ಟ ವ್ಯಾಪಾರ ವಹಿವಾಟುಗಳಲ್ಲಿ ತೊಂದರೆ ಆರೋಗ್ಯದ ಸಮಸ್ಯೆ ಮೇಲಿಂದ ಮೇಲೆ ಹಣಕಾಸಿನ ಸಮಸ್ಯೆ ಇಂತಹ ಎಲ್ಲಾ ಸಮಸ್ಯೆಗಳಿಗೆ ನಾನು ಹೇಳಿದಂತೆ 16 ದಿನ ನಿಂಬೆಹಣ್ಣಿನಿಂದ ಹೀಗೆ ಮಾಡಿದರೆ ಖಂಡಿತವಾಗಿಯೂ ನೀವು ಒಳ್ಳೆಯ ಫಲವನ್ನು ನೋಡುತ್ತೀರಾ
ಇದು ತುಂಬಾ ವಿಶೇಷವಾದ ಪರಿಹಾರ ಅಂದುಕೊಳ್ಳಿ. ಹೌದು ಸ್ನೇಹಿತರೆ ಈ ಒಂದು ಪರಿಹಾರ ಮಾಡಿಕೊಂಡರೆ ನೀವು ಅಂದುಕೊಳ್ಳುವ ಅಥವಾ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಂತೆ ಎಲ್ಲಾ ಕಷ್ಟಗಳು ದೂರವಾಗುವವು. ಒಂದು ತಿಂಗಳಲ್ಲಿ ಇಂತಹ ಮೇಲಿನ ಎಲ್ಲಾ ಸಮಸ್ಯೆಗಳು ದೂರ ಆಗುವವು. ಸ್ನೇಹಿತರೆ ನಮಗೆಲ್ಲ ತಿಳಿದ ಹಾಗೆ ಇಂತಹ ಕಷ್ಟಗಳು ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿ ಕಾಡುತ್ತಿವೆ. ಇದರಿಂದ ಬೇಸತ್ತು ಎಷ್ಟೋ ಜನ ತಮ್ಮ ಪ್ರಾಣವನ್ನೇ ಇಟ್ಟಿದ್ದಾರೆ ಹಾಗೂ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಸ್ನೇಹಿತರೆ ದೇವರ ಆಶೀರ್ವಾದ ಇದ್ದರೆ ನಮಗೆ ಧೈರ್ಯ ನಂಬಿಕೆ ಇದ್ದರೆ ಇಂತಹ ಪರಿಹಾರಗಳಿಂದ ನಾವು ತುಂಬಾ ಲಾಭವನ್ನು ಕಾಣುತ್ತೇವೆ. ಎಲ್ಲಾ ಸಂಕಷ್ಟಗಳಿಗೂ ಒಂದು ಪರಿಹಾರ ಅನ್ನುವುದು ಇದ್ದೇ ಇರುತ್ತದೆ
ಆದರೆ ಅದಕ್ಕೆ ಸರಿಯಾದ ಪರಿಹಾರ ಮಾಡುವುದು ನಮ್ಮ ಕೈಯಲ್ಲಿ ಇರುತ್ತದೆ ಹಾಗಾಗಿ ಇಂತಹ ಮಾಹಿತಿಗಳು ತಿಳಿದ ಮೇಲೆ ನೀವು ಕೂಡ ನಾನು ಈಗ ಹೇಳುವ ಈ ಪರಿಹಾರವನ್ನು ಮಾಡಿನೋಡಿ. ಸ್ನೇಹಿತರೆ ಒಂದು ಪರಿಹಾರವನ್ನು ನೀವು ಸೋಮವಾರ ಅಥವಾ ಶುಕ್ರವಾರ ಪ್ರಾರಂಭ ಮಾಡಬೇಕು ಪ್ರಾರಂಭ ಮಾಡಿದ ದಿನದಿಂದ ನಿರಂತರವಾಗಿ 16 ದಿನ ಈ ಒಂದು ಪರಿಹಾರ ಮಾಡಬೇಕು. ಇದಕ್ಕೆ ನಿಂಬೆಹಣ್ಣು ಹಾಗೂ ಇಪ್ಪೆ ಎಣ್ಣೆ ಬೇಕು. ಮೊದಲನೇ ದಿನ ಒಂದು ನಿಂಬೆಹಣ್ಣನ್ನು ಅರ್ಧ ಭಾಗ ಮಾಡಿ ಎರಡು ಹೋಳುಗಳನ್ನಾಗಿ ಮಾಡಿಕೊಳ್ಳಬೇಕು ನಂತರ ಅದರ ಮೇಲೆ ಇಪ್ಪೆ ಎಣ್ಣೆಯಿಂದ ದೀಪವನ್ನು ಮಾಡಿಕೊಂಡು ಅದರ ಮೇಲೆ ಇಟ್ಟು ನಿಮ್ಮ ಊರಲ್ಲಿರುವ ಅಥವಾ ನಿಮ್ಮ ಮನೆಯ ಸಮೀಪದಲ್ಲಿ ಇರುವ ಯಾವುದಾದರೂ ಶಕ್ತಿದೇವತೆಗಳ ಮುಂದೆ ದೀಪಗಳನ್ನು ಹಚ್ಚಿ ಮನಸ್ಸಿನಲ್ಲಿ ನೀವು ಸಂಕಲ್ಪ ಮಾಡಿಕೊಳ್ಳಬೇಕು
ತಾಯಿ ನಮ್ಮ ಮನೆಯಲ್ಲಿರುವ ಈ ಸಾಲಬಾಧೆ ಅಥವಾ ದರಿದ್ರ ಬಾಧೆ ಅಥವಾ ಆರ್ಥಿಕ ಪರಿಸ್ಥಿತಿ ಎಲ್ಲವನ್ನು ನೀನು ಸುಧಾರಿಸು ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ಹಾಗೆ ಎರಡನೆಯ ದಿನ ಎರಡು ನಿಂಬೆಹಣ್ಣುಗಳನ್ನು ಅರ್ಧ-ಅರ್ಧ ಮಾಡಿ 4 ಹೋಳುಗಳನ್ನು ಮಾಡಿ ಅದರ ಮೇಲೆ ದೀಪವನ್ನು ಹಚ್ಚಿ ಬರಬೇಕು. ಹೀಗೆ ಮುಂದಿನ ದಿನ ಒಂದೊಂದು ನಿಂಬೆಹಣ್ಣನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾ 16ನೇ ದಿನ 16 ನಿಂಬೆಹಣ್ಣುಗಳನ್ನು ಅರ್ಧ ಹೋಳುಗಳನ್ನಾಗಿ ಮಾಡಿ ದೀಪ ಹಚ್ಚಬೇಕು. ಸ್ನೇಹಿತರೆ ಲಕ್ಷ್ಮಿದೇವಿ ಹಾಗೂ ಸರಸ್ವತೀದೇವಿಯ ದೇವಸ್ಥಾನದ ಮುಂದೆ ಇಂತಹ ದೀಪಗಳನ್ನು ಹಚ್ಚಬಾರದು ಸೌಮ್ಯ ದೇವತೆಗಳು ಆಗಿವೆ. ಬದಲಾಗಿ ಗ್ರಾಮದೇವತೆ ದ್ಯಾಮಮ್ಮ ದುರ್ಗಮ್ಮ ಊರಮ್ಮ ಮಾರಮ್ಮ ಕರಿಯಮ್ಮ ಇಂತಹ ಶಕ್ತಿದೇವತೆಗಳ ಮುಂದೆ ದೀಪಗಳನ್ನು ಹಚ್ಚಿ ಸಂಕಲ್ಪ ಮಾಡಿ ಪರಿಹಾರ ಮಾಡಿಕೊಳ್ಳಿ
ನಿಜವಾಗಿಯೂ ನಿಮಗೆ ತುಂಬಾ ಸಹಾಯವಾಗುತ್ತದೆ ಹಾಗೂ ನಿಮ್ಮ ಮನೆಯ ಎಲ್ಲಾ ಕಷ್ಟಗಳಿಗೂ ಪರಿಹಾರ ಸಿಗುತ್ತದೆ. ಸ್ನೇಹಿತರೆ ಈ ಒಂದು ಪರಿಹಾರ ನಿಮಗೆ ತುಂಬಾ ಒಳ್ಳೆಯದನ್ನು ಮಾಡಲಿ ಎಂದು ನಾನು ಆಶಿಸುತ್ತೇನೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ