ಶುಕ್ರವಾರ ನೀವೇನಾದ್ರು ದುಡ್ಡನ್ನು ಬೇರೆಯವರಿಗೆ ಕೊಟ್ಟಿದ್ದೀರಾ ಹಾಗಾದ್ರೆ ಎಚ್ಚರ … ಯಾವುದೇ ಕಾರಣಕ್ಕೂ ಶುಕ್ರವಾರದ ದಿವಸ ಲಕ್ಷ್ಮಿ ಯನ್ನು ಹೊರಗೆ ಕಳಿಸಬೇಡ ಕಷ್ಟ ತಪ್ಪಿದ್ದಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶುಕ್ರವಾರದ ದಿನ ಹಣವನ್ನು ಮನೆಯಿಂದ ಹೊರಗೆ ಕೊಡಬಹುದಾ ಅಥವಾ ಬೇಡವೇ ಎನ್ನುವ ಸಂದೇಹವಿದ್ದರೆ ಈ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ.
ಹಾಯ್ ಸ್ನೇಹಿತರೆ ಹಣ ಇಲ್ಲದೆ ಈಗ ಯಾವುದೇ ವ್ಯವಹಾರ ಅಥವಾ ವ್ಯಾಪಾರ ವಹಿವಾಟುಗಳು ನಡೆಯುವುದಿಲ್ಲ ಮೊದಲು ಕೈಯಲ್ಲಿ ಹಣ ಇಟ್ಟುಕೊಂಡು ನಂತರ ವ್ಯಾಪಾರವನ್ನು ಮಾಡಬೇಕಾಗಿದೆ ಯಾವುದೇ ವ್ಯಾಪಾರದಲ್ಲಿ ಲಾಭ ಅಥವಾ ನಷ್ಟ ಇದ್ದೇ ಇರುತ್ತದೆ ಒಬ್ಬರಿಗೆ ಲಾಭ ಆದಾಗ ಮಾತ್ರ ಇನ್ನೊಬ್ಬರಿಗೆ ನಷ್ಟವಾಗಿರುತ್ತದೆ ಇನ್ನೊಬ್ಬರಿಗೆ ನಷ್ಟವಾದಾಗ ಮಾತ್ರ ಮತ್ತೊಬ್ಬರಿಗೆ ಲಾಭವಿರುತ್ತದೆ. ಇಂತಹದ್ದನ್ನೆಲ್ಲ ನೋಡಿದರೆ ಲಕ್ಷ್ಮಿ ದೇವಿಯ ಸ್ವರೂಪವಾದ ಹಣ ಅಥವಾ ಹಣದ ರೂಪದಲ್ಲಿರುವ ಲಕ್ಷ್ಮೀದೇವಿ ತುಂಬಾ ಚಂಚಲ ಮನಸ್ಸಿನವಳು ಎಂದು ಎಲ್ಲರಿಗೂ ತಿಳಿಯುತ್ತದೆ. ಶುಕ್ರವಾರದ ದಿನ ನಾವು ವ್ಯಾಪಾರ ಮಾಡಬಹುದು ಅಥವಾ ಇಲ್ಲವಾ ಮತ್ತು ಹಣವನ್ನು ಕೊಡುವುದು ಹಾಗೂ ತೆಗೆದುಕೊಳ್ಳುವುದನ್ನು ಮಾಡಬೇಕು ಅಥವಾ ಬೇಡ ಎನ್ನುವ ಎಲ್ಲ ಗೊಂದಲಗಳನ್ನು ನಾನು ನಿಮಗೆ ಈಗ ತಿಳಿಸುತ್ತೇನೆ.

ಸ್ನೇಹಿತರೆ ಹಣವನ್ನು ಶುಕ್ರವಾರದ ದಿನ ತೆಗೆದುಕೊಂಡರೆ ಒಳ್ಳೆಯದು ಆದರೆ ಕೊಡುವುದರ ಬಗ್ಗೆ ಸ್ವಲ್ಪ ಯೋಚನೆ ಮಾಡುತ್ತಾರೆ ಸ್ನೇಹಿತರೆ ಸಾಮಾನ್ಯವಾಗಿ ನಾವು ಬೇಕಂತಲೇ ಅಂದಿನ ದಿನವೇ ವ್ಯಾಪಾರ ವ್ಯವಹಾರ ಮಾಡುವುದು ಒಳ್ಳೆಯದಲ್ಲ ಆದರೆ ಅವಶ್ಯಕತೆ ಇದ್ದಾಗ ಎಲ್ಲರಿಗೂ ನಾವು ಸಹಾಯ ಮಾಡಲೇಬೇಕಾಗುತ್ತದೆ ಅವರಿಗೆ ಬೇಕಾದ ಹಣವನ್ನು ಕೊಡುವುದು ಧರ್ಮ ಅವರಿಗೆ ಬೇಡವಾದಾಗ ನಾವು ಹಣವನ್ನು ಕೊಟ್ಟರೆ ಅವರಿಗೆ ಉಪಯೋಗ ಆಗುವುದಿಲ್ಲ ಇಂತಹ ಸಮಯವನ್ನು ಅಥವಾ ಸಂದರ್ಭವನ್ನು ನೀವು ನೋಡಿದರೆ ಹಣವನ್ನು ಕೊಡುವುದು ಒಳ್ಳೆಯದು. ಆದರೆ ಅನಾವಶ್ಯಕವಾಗಿ ಶುಕ್ರವಾರದ ದಿನ ವ್ಯವಹಾರ ಮಾಡಿ ಮನೆಯಿಂದ ಹೊರಗೆ ಹಣವನ್ನು ಕೊಡುವುದು ಒಳ್ಳೆಯದಲ್ಲ.

ಅದರಿಂದ ಇನ್ನೊಬ್ಬರಿಗೆ ಸಹಾಯ ಆಗುತ್ತದೆ ಅಂದರೆ ಮಾತ್ರ ಅವಶ್ಯಕತೆ ಇದ್ದಹಾಗೆ ಅಂತಹ ಸಮಯದಲ್ಲಿ ನೀವು ಹಣವನ್ನು ತೆಗೆದುಕೊಳ್ಳಬಹುದು ಅಥವಾ ಕೊಡಬಹುದು. ಇನ್ನೊಂದು ವಿಷಯ ಏನೆಂದರೆ ಶುಕ್ರವಾರದ ದಿನ ಮಹಿಳೆಯರು ತಲೆ ಸ್ನಾನ ಮಾಡಬಹುದು ಆದರೆ ಪುರುಷರು ತಲೆಸ್ನಾನ ಶುಕ್ರವಾರದ ದಿನ ಮಾಡಬಾರದು ಇನ್ನು ಮಹಿಳೆಯರು ಸ್ನಾನ ಮಾಡುವ ಮುಂಚೆ ಅರಿಶಿಣವನ್ನು ಮುಖಕ್ಕೆ ಹಚ್ಚಿ ತಲೆಸ್ನಾನ ಮಾಡಿದರೆ ನಿಮಗೆ ಸೌಭಾಗ್ಯ ಹೆಚ್ಚಾಗುತ್ತದೆ ಎಂದು ನಂಬಲಾಗುತ್ತದೆ ಅಂದರೆ ನಿಮ್ಮ ಗಂಡನಿಗೆ ಶ್ರೇಯಸ್ಸು ಹಾಗೂ ನಿಮ್ಮ ಮನೆಗೆ ಸಮೃದ್ಧಿ ಹಾಗೂ ನೀವು ಸುಮಂಗಲಿ ಯಾಗಿರುವ ಭಾಗ್ಯ ನಿಮಗೆ ಸಿಗುತ್ತದೆ. ಇನ್ನು ಮಹಿಳೆಯರು ಯಾವುದೇ ಕಾರಣಕ್ಕೂ ಶುಕ್ರವಾರ ಕಪ್ಪು ಬಟ್ಟೆ ಹಾಕಿಕೊಳ್ಳಬಾರದು

ಹಾಗೂ ಹಣೆಗೆ ಕಪ್ಪು ಬಣ್ಣದ ಕುಂಕುಮ ಹಚ್ಚಿಕೊಳ್ಳಬಾರದು ಇದು ಸ್ತ್ರೀಯರಿಗೆ ಒಳ್ಳೆಯದಲ್ಲ. ಸ್ನೇಹಿತರೆ ಲಕ್ಷ್ಮಿ ರೂಪದಲ್ಲಿರುವ ಯಾವ ವಸ್ತು ಆದರೂ ಶುಕ್ರವಾರ ದಿನ ಹೊರಗೆ ಕೊಡಬಾರದು ಎಂದು ಹೇಳುತ್ತಾರೆ. ಇನ್ನು ಮನೆಯ ಮಗಳನ್ನು ಶುಕ್ರವಾರದ ದಿನ ಗಂಡನ ಮನೆಗೆ ಕಳುಹಿಸಬಾರದು ಎಂಬ ಶಾಸ್ತ್ರ ಸಂಪ್ರದಾಯ ಇದೆ ಅಂದರೆ ಲಕ್ಷ್ಮಿ ರೂಪದಲ್ಲಿರುವ ಮಗಳು ಗಂಡನ ಮನೆಗೆ ಶುಕ್ರವಾರ ಹೋದರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋದಂತೆ ಎನ್ನುವ ನಂಬಿಕೆ ಇದೆ ಆದರೆ ಸ್ನೇಹಿತರೆ ಈಗಿನ ಕಾಲದಲ್ಲಿ ಅವಳು ಕೂಡ ಮನೆಯಿಂದ ಹೋಗಬಹುದು ಏಕೆಂದರೆ ಮನೆ ಕೂಡ ನಮ್ಮ ಮನೆ ಹಾಗೂ ನಮ್ಮ ಮಗಳು ವಾಸಿಸುವ ಮನೆ ಎಂದು ಕೆಲವೊಬ್ಬರು ನಂಬುತ್ತಾರೆ ಸ್ನೇಹಿತರೆ ಇಂತಹ ನಂಬಿಕೆಗಳು ಕೂಡ ಕೆಟ್ಟದ್ದಲ್ಲ ಅವರವರ ಚಿಂತನೆಗಳಿಗೆ ಬೆಲೆ ಕೊಡುತ್ತಾರೆ

ಆದರೆ ಒಳ್ಳೆಯ ಉದ್ದೇಶ ಆಗಿದ್ದರೆ ಯಾವುದೇ ಕಾರಣಕ್ಕೂ ಇಂತಹ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಸ್ನೇಹಿತರೆ ಹಾಗಾದರೆ ಈ ಮಾಹಿತಿಯಲ್ಲಿ ನಿಮಗೆ ಶುಕ್ರವಾರದ ದಿನ ವ್ಯಾಪಾರ ವಹಿವಾಟುಗಳನ್ನು ಮಾಡಬಹುದು ಲಕ್ಷ್ಮಿ ರೂಪದಲ್ಲಿರುವ ಮಗಳನ್ನು ಗಂಡನ ಮನೆಗೆ ಕಳುಹಿಸುವುದು ಕೂಡ ತಪ್ಪಲ್ಲ ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಲಕ್ಷ್ಮಿ ದೇವಿಯನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಪ್ರಯತ್ನ ಮಾಡಬೇಕು ಆದರೆ ದುರಾಸೆಯಿಂದ ಅವಳನ್ನು ಕಟ್ಟಿ ಹಾಕಬಾರದು. ಅವಳು ಕೆಲವೊಂದು ಸಲ ಮನೆಯಿಂದ ಹೋದಾಗಲೇ ಇನ್ನೂ ಒಂದು ವ್ಯಾಪಾರದಿಂದ ಹೊರಗೆ ಬರುವ ಅವಕಾಶ ಕೂಡ ನಮಗೆ ಇರುತ್ತದೆ. ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ನೀವು ಕೂಡ ಓದಿ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬವರ್ಗದವರಿಗೆ ತಿಳಿಸಿ ಧನ್ಯವಾದಗಳು.

Leave a Reply

Your email address will not be published.