ನಿಮ್ಮ ಮನೆಯಲ್ಲಿ ಅತೀಯಾಗಿ ಪದೇ ಪದೇ ಹಣಕಾಸಿನ ತೊಂದರೆಗಳು ಉಂಟಾಗುತ್ತಿವೆಯೇ .. ಹಾಗಾದ್ರೆ ಶನಿವಾರದ ದಿವಸ ಹೀಗೆ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರವಾಗಿ ಶನಿದೇವರ ಕೃಪೆ ನಿಮ್ಮ ಮೇಲೆ ಉಂಟಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶನಿವಾರದಂದು ಈ ಪ್ರಯೋಗವನ್ನು ಮಾಡಿದರೆ ನಿಮಗೆ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ ಹಾಗೂ ನಿಮಗೆ ಯಾವುದೇ ಶನಿ ದೇವರ ಕಾಟಗಳು ಬರುವುದಿಲ್ಲ.ಹಾಯ್ ಸ್ನೇಹಿತರೆ ಜೀವನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಹಣಕಾಸಿನ ತೊಂದರೆಗಳು ಉಂಟಾಗುತ್ತದೆ. ಮನುಷ್ಯನ ಆಸೆಗಳಿಗೆ ಕೊನೆಯೇ ಇಲ್ಲ ಒಂದನ್ನು ತೆಗೆದುಕೊಂಡರೆ ಮತ್ತೊಂದನ್ನು ತೆಗೆದುಕೊಳ್ಳುವ ಇದೇ ರೀತಿಯಾಗಿ ಮೇಲಿಂದಮೇಲೆ ಆಸೆಗಳನ್ನು ಪಟ್ಟು ನಾವು ಕಷ್ಟಗಳನ್ನು ಜೀವನದಲ್ಲಿ ಎದುರಿಸುತ್ತೇವೆ. ಇಷ್ಟಪಡುವುದು ತಪ್ಪಲ್ಲ ಆದರೆ ಎಲ್ಲವನ್ನೂ ಇಷ್ಟಪಟ್ಟು ಮೇಲಿಂದ ಮೇಲೆ ಕಷ್ಟಗಳನ್ನು ಪಡುವುದು ಒಳ್ಳೆಯದಲ್ಲ. ನಿಮ್ಮ ಅವಶ್ಯಕತೆಗೆ ತಕ್ಕಷ್ಟು ದುಡ್ಡು ನಿಮ್ಮಲ್ಲಿದ್ದರೆ ಚಿಂತೆ ಬಿಟ್ಟುಬಿಡಿ ಜೀವನದಲ್ಲಿ ಒಂದು ಸಲ ನಾವು ಜನಿಸಿದ ಮೇಲೆ ಕೊನೆಗೊಂದು ದಿನ ಏನನ್ನು ಕೂಡ ತೆಗೆದುಕೊಳ್ಳದೆ ಈ ಭೂಮಿಯನ್ನು ಬಿಟ್ಟು ಹೋಗುತ್ತೇವೆ. ಆಗ ನಮ್ಮ ಹಿಂದೆ ಹಣ ಬರುವುದಿಲ್ಲ ಕೇವಲ ನಾವು ಮಾಡಿರುವ ಪಾಪಪುಣ್ಯಗಳು ಮಾತ್ರ ನಮಗೆ ಸಿಕ್ಕಿರುತ್ತವೆ.

ಹೀಗೆ ನಾವು ಎಷ್ಟು ದಿನಗಳು ಯೋಚಿಸಿದರು ಇರುವಷ್ಟು ದಿನ ನಮ್ಮ ಜೀವನಕ್ಕೆ ಹಣದ ಅವಶ್ಯಕತೆ ಇದ್ದೇ ಇದೆ. ಹಾಗೆ ಜೀವನವನ್ನು ನಡೆಸುವುದು ಅನಿವಾರ್ಯವಾಗಿದೆ ನಾವು ಎಷ್ಟೇ ದುಡಿದರೂ ಎಷ್ಟೇ ಕಡಿಮೆ ಖರ್ಚು ಮಾಡಿದರು ಮೇಲಿಂದ ಮೇಲೆ ಹಣದ ಕೊರತೆ ನಮ್ಮನ್ನು ಕಾಡುತ್ತಿರುತ್ತದೆ ಅಂತಹ ಸಮಯದಲ್ಲಿ ನಾವು ಧೈರ್ಯವನ್ನು ಕಳೆದುಕೊಳ್ಳದೆ ಮುಂದಿನ ದಾರಿಯಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಪ್ರಯತ್ನಪಡಬೇಕು ಅಂದರೆ ದುಡಿಯಬೇಕು ಹಾಗೂ ಹಣವನ್ನು ಗಳಿಸಬೇಕು ಅದನ್ನು ನಮ್ಮ ಜೀವನಕ್ಕೆ ಬಳಸಿಕೊಳ್ಳಬೇಕು ಎಂಬ ಆಸೆ ಕನಸುಗಳು ಇರಬೇಕು. ಹಾಗಾದರೆ ಹಣದ ಸಮಸ್ಯೆ ಬಂದರೆ ಇಂತಹ ಪರಿಹಾರಗಳನ್ನು ನೀವು ಮನೆಯಲ್ಲಿ ಮಾಡಿ ನೋಡಿ ಸ್ನೇಹಿತರೆ ಪರಿಹಾರಗಳಿಂದ ಯಾವುದೇ ಲಾಭ ಇಲ್ಲ ಎಂದರೆ ನೀವು ಮುಂದಿನ ದಿನಗಳಲ್ಲಿ ಪರಿಹಾರಗಳನ್ನು ಮಾಡಬೇಡಿ

ಆದರೆ ಇಂತಹ ಪರಿಹಾರಗಳನ್ನು ಮಾಡಿದ ಮೇಲೆ ಖಂಡಿತವಾಗಿಯೂ ನಿಮಗೆ ಸಿಕ್ಕೆ ಸಿಗುತ್ತದೆ. ಆದರೆ ನಿಮಗೆ ಎಲ್ಲವೂ ತಿಳಿಯುವುದಿಲ್ಲ ಬದಲಾಗಿ ಜೀವನದಲ್ಲಿ ಒಳ್ಳೆಯ ಬದಲಾವಣೆಯಂತೂ ಇದ್ದೇ ಇರುತ್ತದೆ. ಇವಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಹಣದ ಸಮಸ್ಯೆ ಕಡಿಮೆಯಾಗಿ ಮನೆಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿ ನಿಮಗೆ ಬರುತ್ತದೆ ಎಂದರೆ ಏಕೆ ಇಂತಹ ಚಿಕ್ಕಪುಟ್ಟ ಪರಿಹಾರಗಳನ್ನು ಮಾಡಬಾರದು ಎಂಬುದು ನನ್ನ ಅನಿಸಿಕೆ. ಆದರೆ ಇಂಥ ಪರಿಹಾರಗಳನ್ನು ಮಾಡುವ ಮೊದಲು ನಿಮ್ಮ ಮನಸ್ಸಿನಲ್ಲಿ ಮಾಡಬೇಕು ಎಂಬ ಛಲ ಇರಬೇಕು ಹಾಗೆ ಇದರಿಂದ ಒಳ್ಳೆಯದಾಗುತ್ತದೆ ನಂಬಿಕೆಯಂತೆ ಮೊದಲು ಬೇಕು. ಲಕ್ಷ್ಮೀದೇವಿ ಚಂಚಲ ಮನಸ್ಸಿನವಳು ಇವಳಿಗೆ ಅವಮಾನವಾದ ಸ್ಥಳದಲ್ಲಿ ಅವಳು ಇರುವುದಿಲ್ಲ ಹಾಗೂ ಇವಳು ಅಂದಚೆಂದವನ್ನು ನೋಡಿ ಮನೆಗೆ ಬರುವುದಿಲ್ಲ ಬದಲಾಗಿ ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ

ಹಾಗೆ ಮನೆಯಲ್ಲಿ ಎಲ್ಲರೂ ದೇವಿಯನ್ನು ಆರಾಧಿಸುತ್ತಾರೆ ಅಂದಾಗ ಮಾತ್ರ ತಾಯಿ ಲಕ್ಷ್ಮೀದೇವಿಯ ಕಟಾಕ್ಷ ನಿಮ್ಮ ಮನೆಗೆ ಬರುತ್ತದೆ. ಮಹಾಲಕ್ಷ್ಮಿ ಮನೆಯಲ್ಲಿ ಒಮ್ಮೆ ನೆಲೆಸಿದರೆ ನಿಮ್ಮ ಅದೃಷ್ಟ ರೇಖೆಯೇ ಬದಲಾಗುವುದು. ಹಾಗೂ ಮನೆಯಲ್ಲಿ ಒಳ್ಳೆ ಒಳ್ಳೆಯ ಬದಲಾವಣೆಗಳು ಸಿಗಬಹುದು. ಮನಸ್ಸಿನಲ್ಲಿ ಖುಷಿ ಸಂತೋಷ ನೆಮ್ಮದಿ ಹಾಗೂ ಮನೆಯಲ್ಲಿ ನೆಮ್ಮದಿ ಖಂಡಿತವಾಗಿಯೂ ನೆರವೇರುತ್ತದೆ. ಹಾಗಾದರೆ ಒಂದು ಪರಿಹಾರವನ್ನು ನೀವು ಶನಿವಾರ ಮಾಡಬೇಕು. ಸ್ನೇಹಿತರೆ ಒಂದೊಂದು ಪರಿಹಾರ ಗಳಿಗೂ ಯಾವ ದಿನ ಮಾಡಬೇಕು ಎಂಬ ವಿಶೇಷತೆ ಇರುತ್ತದೆ ಇಂತಹ ಪರಿಹಾರಗಳಿಗೆ ಶನಿವಾರ ತುಂಬಾ ಮುಖ್ಯವಾದ ದಿನ ಹಾಗೂ ವಿಶೇಷವಾದ ದಿನ.

ಈ ಒಂದು ಪರಿಹಾರಕ್ಕೆ ಐದು ಏಲಕ್ಕಿ 5 ಲವಂಗ ಹಾಗೂ 5 ವೀಳೆದೆಲೆ ಗಳು ಮತ್ತು ಪಚ್ಚಕರ್ಪೂರ ಹಾಗೂ ಒಂದು ರೂಪಾಯಿಯ ನಾಣ್ಯ ಬೇಕು. ಸ್ನೇಹಿತರೆ ಇವುಗಳನ್ನೆಲ್ಲ ಬಳಸಿಕೊಂಡು ಪರಿಹಾರ ಮಾಡಿದ್ದರೆ ಖಂಡಿತವಾಗಿಯೂ ನಿಮಗೆ ಹಣದ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ನೀವು ವ್ಯಾಪಾರ ಸ್ಥಳದಲ್ಲಿ ಮಾಡಬಹುದು ಅಥವಾ ಮನೆಯಲ್ಲಿ ಮಾಡಬಹುದು. ಇವುಗಳನ್ನೆಲ್ಲಾ ಒಂದು ಕೆಂಪು ಬಟ್ಟೆಯ ಒಳಗಡೆ ಹಾಕಬೇಕು ದೇವರ ಮನೆಯಲ್ಲಿ ಜಗಲಿಯ ಮೇಲೆ ಇದನ್ನು ಇಟ್ಟು ಪೂಜಿಸಬೇಕು. ಈ ಪರಿಹಾರಕ್ಕೆ ಬಳಸುವ ಏಲಕ್ಕಿ ಹಾಗೂ ಲವಂಗಗಳು ಚೆನ್ನಾಗಿರಬೇಕು ಅಂದರೆ ಮುರಿದಿರಬಾರದು. ಈ ಗಂಟನ್ನು ಒಂದು ದಾರದಲ್ಲಿ ಹಾಕಿ ಕಟ್ಟಿ ವ್ಯಾಪಾರ ಮಾಡುವ ಸ್ಥಳದಲ್ಲಿ ಇಡುವುದಾದರೆ ನಿಮ್ಮ ಗಲ್ಲಾಪೆಟ್ಟಿಗೆಯಲ್ಲಿ ಇದನ್ನು ಇಡಬೇಕು

ಮನೆಯಲ್ಲೇ ಇಡುವುದಾದರೆ ದುಡ್ಡು ಇಡುವ ಸ್ಥಳದಲ್ಲಿ ಈ ಗಂಟನ್ನು ಇಡಬೇಕು. ಸ್ನೇಹಿತರೆ ಇದನ್ನು ಇಟ್ಟ ಮೇಲೆ ನಿಮಗೆ ನಷ್ಟವಂತೂ ಆಗುವುದಿಲ್ಲ ಬದಲಾಗಿ ಲಾಭದ ಸೂಚನೆಗಳು ಬರುತ್ತದೆ ಹಾಗೂ ಲಾಭವಾಗುತ್ತದೆ. ಸ್ನೇಹಿತರೆ ಈ ಒಂದು ಸರಳವಾದ ಪರಿಹಾರ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.