ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ದೇವಿಯ ಸ್ಥಿರ ವಾಸ ಆಗಬೇಕಾ ಹಾಗಾದ್ರೆ ಈಗಲೇ ಒಗ್ಗರಣೆ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಹಾಕಿಡಿ ಆಮೇಲೆ ನೋಡಿ ಚಮತ್ಕಾರ ನಿಮ್ಮ ಮನೆಯಲ್ಲಿ ಉತ್ತಮವಾದ ಬದಲಾವಣೆಗಳು ಉಂಟಾಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲಕ್ಷ್ಮೀದೇವಿಯ ಸ್ವರೂಪವಾದ ಇದನ್ನು ನೀವು ಒಗ್ಗರಣೆ ಡಬ್ಬಿ ಅಥವಾ ಮಸಾಲೆ ಡಬ್ಬಿಯಲ್ಲಿ ಹಾಕಿರುವುದರಿಂದ ನಿಮಗೆ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಸಿಗುತ್ತದೆ ಹಾಗೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಸದಾ ಇರುತ್ತದೆ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಒಂದು ಸರಳವಾದ ಪರಿಹಾರವನ್ನು ಹೇಳುತ್ತಿದ್ದೇನೆ ಇದನ್ನು ಏಕೆ ಮಾಡಬೇಕೆಂದರೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಆಗಬಾರದು ಹಾಗೂ ನಿಮಗೆ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕು ಹಾಗೆಂದರೆ ಈ ಪರಿಹಾರವನ್ನು ನೀವು ಮಾಡಿ ನೋಡಿ. ಒಬ್ಬ ಮಹಿಳೆಯು ಅಡುಗೆ ಮನೆಯಲ್ಲಿ ಇದ್ದರೆ ಅಡುಗೆಮನೆ ಶುದ್ಧ ಹಾಗೂ ಆರೋಗ್ಯದಿಂದ ಇರುತ್ತದೆ. ಯಾವ ಮನೆಯಲ್ಲಿ ಹೆಣ್ಣು ಮಗಳು ಇರುತ್ತಾಳೆ ಆ ಮನೆಯಲ್ಲಿ ಲಕ್ಷ್ಮೀದೇವಿ ವಾಸಿಸುತ್ತಾಳೆ ಎನ್ನುವ ನಂಬಿಕೆ ಇದೆ. ಸ್ನೇಹಿತರೆ ಮನೆಯಲ್ಲಿ ಹೆಣ್ಣು ಮಗಳು ಇದ್ದರೆ ಒಂದು ಅಪಾರವಾದ ಶಕ್ತಿ ಇದ್ದ ಹಾಗೆ.

ನಿಜವಾಗಲೂ ಹೇಳಬೇಕೆಂದರೆ ಹೆಣ್ಣು ಇದ್ದ ಮನೆ ಬೆಳಕಿನಿಂದ ಕೂಡಿರುತ್ತದೆ. ಮನೆಯವರ ಕಷ್ಟಗಳನ್ನು ತನ್ನ ಕಷ್ಟದಂತೆ ಎಲ್ಲವನ್ನು ಪರಿಹಾರ ಮಾಡುವಳು ಮನೆಯವರೆಲ್ಲ ಬೇಕುಬೇಡಗಳನ್ನು ನೋಡಿಕೊಂಡು ತನ್ನ ಸಂಸಾರವನ್ನು ನಡೆಸುವ ಶಕ್ತಿ ಉಳ್ಳವಳು. ಮನೆಯಲ್ಲಿ ಏನಿದೆ ಹೇಗಿದೆ ಎಷ್ಟಿದೆ ಎಂದು ಎಲ್ಲಾ ಕಡೆ ಗಮನವಿಟ್ಟು ಮನೆಯನ್ನು ನಡೆಸಿಕೊಂಡು ಹೋಗುತ್ತಾಳೆ. ಹಾಗಾಗಿ ಹೆಣ್ಣು ಲಕ್ಷ್ಮೀದೇವಿಯ ಸ್ವರೂಪವಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ಯಾವ ಮನೆಯಲ್ಲಿ ಬೆಲೆ ಇರುತ್ತದೆ ಹಾಗೂ ಮರ್ಯಾದೆ ಕೊಡುತ್ತಾರೆ ಅವರ ಮನೆಯಲ್ಲಿ ಲಕ್ಷ್ಮೀದೇವಿಯು ಸದಾ ಇರುತ್ತಾಳೆ. ಮಹಾಲಕ್ಷ್ಮಿಯು ಚಂಚಲ ಮನಸ್ಸಿನವಳು. ಅವಳಿಗೆ ಅವಮಾನವಾದ ಜಾಗದಲ್ಲಿ ಇರಲು ಇಷ್ಟಪಡುವುದಿಲ್ಲ.

ಇನ್ನೂ ಅಡುಗೆಮನೆಯಲ್ಲಿ ಮಸಾಲೆ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀದೇವಿ ವಾಸಿಸುತ್ತಾಳೆ ಹಾಗಾದರೆ ಹೇಗೆ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ನಾನು ನಿಮಗೆ ತಿಳಿಸುತ್ತೇನೆ. ಜೀವನದಲ್ಲಿ ಏನೇ ಕಷ್ಟ ತೊಂದರೆಗಳು ಬಂದರೂ ಹಣದಿಂದ ಪರಿಹಾರ ಮಾಡುವುದು ತುಂಬಾ ಅವಶ್ಯಕವಾಗಿದೆ. ಹಣ ಇಲ್ಲದೆ ಯಾವ ಒಂದು ಕೆಲಸ ಈಗ ನೆರವೇರುವುದಿಲ್ಲ. ಪ್ರತಿನಿತ್ಯ ಹಣದಿಂದಲೇ ನಮ್ಮ ಜೀವನ ಪ್ರಾರಂಭವಾಗಿ ಹಣದಿಂದಲೇ ನಮ್ಮ ಜೀವನ ಮುಕ್ತಾಯವಾಗುತ್ತದೆ. ಅದರಲ್ಲೂ ಈಗಿನ ಕಲಿಯುಗದಲ್ಲಿ ಹಣಕ್ಕೆ ಇರುವ ಬೆಲೆ ಯಾರಿಗೂ ಇಲ್ಲ. ನಮ್ಮ ಹತ್ತಿರ ಹಣ ಇಲ್ಲದಿದ್ದರೆ ಯಾರೂ ನಮ್ಮನ್ನು ನೋಡುವುದಿಲ್ಲ. ಸ್ನೇಹಿತರೆ ಎಲ್ಲರಿಗೂ ಅದರಲ್ಲೂ ಮಧ್ಯಮ ವರ್ಗದವರಿಗೆ ಹಣವನ್ನು ಕೂಡಿಡಬೇಕು ಕಷ್ಟಗಳು ಬಂದಾಗ ಆ ಹಣವನ್ನು ನಾವು ಉಪಯೋಗಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ.

ಆದರೆ ಮನೆಯಲ್ಲಿ ಮೇಲಿಂದ ಮೇಲೆ ಖರ್ಚು ಹಾಗೂ ಹಣಕಾಸಿನ ತೊಂದರೆಗಳು ಇದ್ದರೆ ಈ ಒಂದು ಪರಿಹಾರವನ್ನು ಮಾಡಿ. ಸ್ನೇಹಿತರೆ ಎಲ್ಲರ ಅಡುಗೆಮನೆಯಲ್ಲಿ ಒಂದು ಮಸಾಲೆ ಡಬ್ಬಿ ಇರುತ್ತದೆ. ಇದರಲ್ಲಿ ಅವರು ಏಲಕ್ಕಿ ಲವಂಗ ಕೊತ್ತಂಬರಿ ಬೀಜ ಚಿಕ್ಕಿ ಮೆಣಸಿನಕಾಳು ಹೀಗೆ ಎಲ್ಲವನ್ನೂ ಇಟ್ಟಿರುತ್ತಾರೆ ಒಂದು ದೊಡ್ಡ ಬಾಕ್ಸ್ನಲ್ಲಿ ಆರು ಅಥವಾ ಏಳು ಚಿಕ್ಕ ಬಾಕ್ಸ್ ಗಳು ಇರುತ್ತವೆ. ಇಂತಹ ಡಬ್ಬಿಯಲ್ಲಿ ನಾವು 11 ರೂಪಾಯಿ ಅಂದರೆ ಹತ್ತು ರೂಪಾಯಿ ನೋಟು ಹಾಗೂ ಒಂದು ರೂಪಾಯಿ ಕಾಯಿನ್ ಇಷ್ಟು ಹಣವನ್ನು ಆ ಚಿಕ್ಕ-ಚಿಕ್ಕ ಬಾಕ್ಸ್ ಗಳ ಕೆಳಗೆ ಇಡಬೇಕು ಹಾಗೆ ಮೇಲೆ ಇರುವ ಒಂದು ಕಾಲಿ ಬಾಕ್ಸ್ ನಲ್ಲಿ ನಾವು ಚಿಲ್ಲರೆ ಅಂದರೆ ಕಾಯಿನ್ ಗಳನ್ನು ಹಾಕುತ್ತ ಬರಬೇಕು.

ಹೀಗೆ ಮಾಡುವುದರಿಂದ ನೀವು ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತೀರಿ ಹಾಗೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಗಳು ಆಗುವುದಿಲ್ಲ. ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಇದ್ದರೆ ಏನೇ ಕಷ್ಟಗಳು ಬಂದರೂ ದೂರವಾಗುತ್ತವೆ ಹಾಗೆ ಮನೆಯಲ್ಲಿ ನೆಮ್ಮದಿ ಸಮಾಧಾನ ಶಾಂತಿ ಇರುತ್ತದೆ. ಈ ಒಂದು ಸರಳವಾದ ಪರಿಹಾರವನ್ನು ನೀವು ಯಾವುದೇ ದಿನದಿಂದ ಆದರೂ ಪ್ರಾರಂಭ ಮಾಡಬಹುದು. ಮಸಾಲೆ ಡಬ್ಬಿಯನ್ನು ಧನ್ವಂತರಿ ಎಂದು ಕೂಡ ಕರೆಯುತ್ತಾರೆ. ಹಾಗಾಗಿ ಡಬ್ಬಿಗೆ ವಿಶೇಷವಾದ ಮಹತ್ವವಿದೆ. ಅದರಲ್ಲೂ ನಮಗೆ ಚಿಕ್ಕ ಚಿಕ್ಕ ಆರೋಗ್ಯದ ತೊಂದರೆಗಳು ಇದ್ದರೆ ಈ ಒಂದು ಡಬ್ಬಿಯಲ್ಲಿರುವ ಪದಾರ್ಥಗಳೇ ನಮಗೆ ಔಷಧಿಗಳಾಗಿವೆ. ಹಾಗಾದರೆ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published.