ಒಂದು ಒಳ್ಳೆಯ ವಿಚಾರಗಳನ್ನು ಕೊಟ್ಟರೆ ಅದರ ಹಿಂದೆ ಹಲವಾರು ತರನಾದ ಪ್ರಶ್ನೆಗಳು ಉದ್ಭವವಾಗುತ್ತವೆ, ಪ್ರಶ್ನೆಗಳ ಪ್ರಕಾರ ನಿಮಗೆ ಅದರ ಬಗ್ಗೆ ಯಾಕೆ ಹಾಗೂ ಯಾರು ತಿಂತಾರೆ ಅದರ ಬಗ್ಗೆ ನೀವ್ಯಾಕೆ ಆಲೋಚನೆ ಮಾಡುತ್ತೀರಾ ಅದರ ಬಗ್ಗೆ. ನಮ್ಮ ಈ ಲೇಖನದ ಪ್ರಕಾರ ನಾವು ಆರೋಗ್ಯದ ಕುರಿತು ಕೆಲವೊಂದು ಮಾಹಿತಿಗಳನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಮಾಹಿತಿಗಳ ಪ್ರಕಾರ ನೀವು ನಾವು ಹೆಚ್ಚಾಗಿ ಮನೆಯ ಊಟಕ್ಕಿಂತ ರೋಡ್ ಅಲ್ಲಿ ಸಿಗುವಂತಹ ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ಅಂತ ಹೇಳುತ್ತಾರೆ ಅಲ್ವಾ ,
ಆ ತರದ ತಿಂಡಿ ತಿನಿಸುಗಳಿಗೆ ಹೆಚ್ಚಾಗಿ ನಾವು ಮಾರು ಹೋಗುತ್ತೇವೆ ಹಾಗೂ ಹೆಚ್ಚಾಗಿ ಅದರ ಬಗ್ಗೆ ಆಕರ್ಷಿತರಾಗುತ್ತೇವೆ. ಹಾಗಾದರೆ ಆ ತರದ ತಿಂಡಿಗಳನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವಂತಹ ಗೋಜಿಗೆ ನೀವೇನಾದರೂ ಹೋದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.ಇವತ್ತಿನ ನಮ್ಮ ಈ ಲೇಖನದ ಮುಖಾಂತರ ಪಾನಿಪುರಿಯನ್ನು ಹೇಗೆ ಮಾಡುತ್ತಾರೆ ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಣ, ಏಕೆಂದರೆ ರೋಡಿನಲ್ಲಿ ಸಿಗುವಂತಹ ಅತಿ ಹೆಚ್ಚು ಫಾಸ್ಟ್ ಫುಡ್ ಜೊತೆಗೆ ನಾವು ಈ ಪಾನಿಪುರಿಯನ್ನು ಹೋಲಿಸಿದಾಗ ಹೆಚ್ಚಾಗಿ ಜನಗಳು ಪಾನಿಪುರಿಯನ್ನು ತಿನ್ನುತ್ತಾರೆ ಯಾಕೆಂದರೆ ಪಾನಿಪುರಿ ಇರುವಂತಹ ಆ ತರದ ಒಂದು ರುಚಿ. ಹಾಗಾದರೆ ಪಾನಿಪುರಿಯನ್ನು ಹೇಗೆ ತಯಾರು ಮಾಡುತ್ತಾರೆ ಇದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.
ನಿಮಗೆ ಗೊತ್ತಿರಬಹುದು ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಪಾನಿಪುರಿಯನ್ನು ಮಾರಾಟ ಮಾಡುವವರು ಕೆಲವೊಂದು ಬಂಡಿಗಳನ್ನು ಇಟ್ಟುಕೊಂಡು ಅದರಲ್ಲಿ ಪಾನಿ ಹಾಗೂ ಪೂರಿಗಳನ್ನು ಮಾಡಿಕೊಂಡು ರೋಡಲ್ಲಿ ಪಾನಿಪುರಿಯನ್ನು ಮಾರುತ್ತಾರೆ.ಫುಡ್ ಡಿಪಾರ್ಟ್ಮೆಂಟ್ ನವರೇ ಕೆಲವೊಂದು ಪಾನಿಪುರಿ ಸ್ಟಾಲ್ ಗಳಲ್ಲಿ ಪಾನಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಟಾರ್ಟಾರಿಕ್ ಆಸಿಡ್ ಮತ್ತು ಅಸಿಟಿಕ್ ಆಸಿಡ್ ಅಂಶ ದೊರೆತಿತ್ತು ಆದ ಕಾರಣ ನೀವು ಪಾನಿಪುರಿ ತಿನ್ನುವ ಅಂಗಡಿಯಲ್ಲಿ ಒಮ್ಮೆ ಪಾನಿಯನ್ನು ಪರೀಕ್ಷಿಸಿ ಈ ಪಾನಿ ಬ್ರೌನ್ ಅಥವಾ ಗಾಢ ಹಸಿರು ಬಣ್ಣವನ್ನು ಹೊಂದಿದ್ದರೆ ಇದರಲ್ಲಿ ರಾಸಾಯನಿಕ ಪದಾರ್ಥದ ಬಳಕೆಯಾಗಿದೆ ಎಂದು ತಿಳಿಯಬೇಕು ಮತ್ತು ನೀವು ಪಾನಿಪುರಿಯ ಸ್ಟಾಲ್ ಗಳಲ್ಲಿ ನೋಡಿ ನೀವು ತಿಂದಂತಹ ಪ್ಲೇಟ್ ಅನ್ನು ಯಾವ ರೀತಿ ಸ್ವಚ್ಛ ಪಡಿಸುತ್ತಾರೆ ಅಂತ.
ಅದಲ್ಲದೆ ಪಾನಿಪುರಿಯನ್ನು ಅದರಲ್ಲೂ ಪೂರಿಯನ್ನು ಮಾಡುವಂತಹ ವಿಧಾನವನ್ನು ನೀವೇನಾದರೂ ತಿಳಿದುಕೊಂಡರೆ ನಿಜವಾಗಲೂ ನಿಮಗೆ ಇನ್ನು ಮೇಲೆ ತಿನ್ನಲು ಸ್ವಲ್ಪ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಬರಬಹುದು. ಆದರೂ ಕೂಡ ಈ ವಿಚಾರ ಸತ್ಯ. ಪೂರಿಯನ್ನು ಮಾಡಲು ಅವರು ತಮ್ಮ ಕಾಲುಗಳನ್ನು ಬಳಕೆ ಮಾಡುತ್ತಾರೆ ತಮ್ಮ ಕಾಲುಗಳನ್ನು ಬಳಕೆ ಮಾಡಿಕೊಂಡು ಹಿಟ್ಟನ್ನು ಹಾಕಿ ಕಚ ಪಚ ಎಂದು ತುಳಿಯುತ್ತಾರೆ. ಅದಲ್ಲದೆ ಈ ರೀತಿಯಾದಂತಹ ಕೆಲಸವನ್ನು ಮಾಡುತ್ತಿರುವ ಅಂತಹ ಸಂದರ್ಭದಲ್ಲಿ ಕೆಲವೊಬ್ಬರು ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ತಾಣದಲ್ಲಿ ಹಾಕಿರುವಂತಹ ಒಂದು ನಿರ್ದೇಶನಗಳು ಕೂಡ ನಮ್ಮ ಮೊಬೈಲ್ಗಳಲ್ಲಿ ಹರಿದಾಡ್ತಿವೆ. ಕೆಳಗೆ ಕೊಟ್ಟಿರುವಂತಹ ಫೋಟೋಗಳನ್ನು ನೋಡಿದರೆ ನಿಜವಾಗಲು ನೀವು ಇವತ್ತಿನಿಂದ ಪಾನಿಪುರಿ ತಿನ್ನಲು ಹಿಂದೆ ಮುಂದೆ ನೋಡಬಹುದು.
ಇವತ್ತು ನಾಯಿ ಕೊಡೆಗಳ ರೀತಿ ಪಾನಿಪೂರಿ ಸ್ಟಾಲ್ಗಳು, ಗೋಬಿ ಮಂಚೂರಿ ಸ್ಟಾಲ್ಗಳು ತಲೆ ಎತ್ತಿವೆ. ದಾರಿಲೀ ಹೋಗುತ್ತಿದ್ದರೆ ಘಮ ಘಮ ಅನ್ನೋ ವಾಸನೆ ಮೂಗಿಗೆ ರಪ್ ಅಂತಾ ಹೊಡೆಯುತ್ತದೆ. ಇವುಗಳ ನಡುವೆ ಗೋಲ್ಗಪ್ಪಾ ಮಾರೋರ ಹಾವಳಿ ಬೇರೆ ಹೆಚ್ಚಾಗಿದೆ.ರುಚಿಯಾಗಿರುವ ಅಂತಹ ಪದಾರ್ಥ ರುಚಿಯಾಗಿದೆ ಅಂತ ಮಣ್ಣನ ತಿನ್ನುವುದಕ್ಕೆ ಆಗುವುದಿಲ್ಲ, ನಾವು ತಿನ್ನುವಂತ ಆಹಾರ ರುಚಿಯಾಗಿ ಇಲ್ಲದಿದ್ದರೂ ಕೂಡ ಸೂಚಿಯಾಗಿ ಇರುವುದು ತುಂಬಾ ಅಗತ್ಯ, ಆದ್ದರಿಂದ ನೀವು ಪಾನಿಪುರಿಯನ್ನು ತಿನ್ನುವುದು ಒಳ್ಳೆಯದು ಅಲ್ಲ ಅಂತ ನಾನು ಹೇಳುತ್ತಿಲ್ಲ ಅದನ್ನು ನೀವು ಮನೆಯಲ್ಲೇ ಕೂಡ ತಯಾರಿ ಮಾಡಿಕೊಂಡು ತಿನ್ನಬಹುದು ಇದಕ್ಕೆ ಹಲವಾರು ತರನಾದ ವಿಡಿಯೋಗಳು ನಿಮಗೆ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ನಿಮಗೆ ದೊರಕುತ್ತವೆ.
ಯಾವುದೇ ಕಾರಣಕ್ಕೂ ಕೊಳಕು ಬರುವಂತಹ ಇಂತಹ ಪಾನಿ ಪುರಿ ಇದನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯದು ಆಗುವುದಿಲ್ಲ. ನಾವು ಇದರ ಬಗ್ಗೆ ಹೇಳಬೇಕು ಅನಿಸಿದೆ ಅದರಿಂದ ನಾವು ನಿಮಗೆ ಹೇಳಿದ್ದೇವೆ ಇನ್ ಮೇಲೆ ನಿಮಗೆ ಬಿಟ್ಟಿದ್ದು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ