ಅತಿಯಾದ ಜಾತಕದ ದೋಷದಿಂದ ನೊಂದು ಬೆಂದಿದ್ದೀರಾ .. ಹಾಗಾದ್ರೆ ಈ ಜಾತಕ ದೋಷದಿಂದ ಮುಕ್ತಿ ಪಡೆಯಲು ಗಾಜಿನ ಬಾಟಲಿ ನಲ್ಲಿ ಇವುಗಳನ್ನು ನಾಣ್ಯಗಳ ಜೊತೆ ಅದರಲ್ಲಿ ಹಾಕಿಡಿ ಸುಂದರ ಜೀವನ ನಿಮ್ಮದಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ನಿಮ್ಮ ಜಾತಕ ದೋಷಗಳಿಂದ ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಈ ಗಾಜಿನ ಡಬ್ಬಿಯ ಪರಿಹಾರವನ್ನು ಮಾಡಿ ಇದು ತುಂಬಾ ಸರಳವಾದ ಪರಿಹಾರ ಹಾಗೂ ನಿಮಗೆ ತುಂಬಾ ಉಪಯುಕ್ತವಾಗಿದೆ.ಹಾಯ್ ಸ್ನೇಹಿತರೆ ಜೀವನದಲ್ಲಿ ನಾವು ಏನಾದರೂ ಸಾಧನೆ ಮಾಡಲು ಮೊದಲು ನಮಗೆ ಆರೋಗ್ಯ ಬೇಕು ನಂತರ ನಮಗೆ ಹಣದ ಅವಶ್ಯಕತೆ ಯಾವಾಗಲೂ ಇರುತ್ತದೆ ಹಾಗಾಗಿ ಹಣ ಬೇಕು ಇವೆರಡು ಇದ್ದರೂ ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದರೆ ಏನನ್ನು ಮಾಡಲಾಗದು. ಎಲ್ಲವೂ ಸರಿ ಇದೆ ಎನ್ನುವಷ್ಟರಲ್ಲಿ ಏನಾದರೂ ಒಂದು ಸಮಸ್ಯೆ ಉದ್ಭವವಾಗುತ್ತದೆ. ವ್ಯಾಪಾರದಲ್ಲಿ ನಷ್ಟ ಆಗಿರುತ್ತದೆ ಹಾಗೂ ವಿದ್ಯಾಭ್ಯಾಸದಲ್ಲಿ ತೊಂದರೆ ಮನೆಯಲ್ಲಿ ಕಿರಿಕಿರಿ ಹೀಗೆ ಸಾಲುಸಾಲಾಗಿ ಮನೆಯಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿರುತ್ತವೆ

ಇವುಗಳು ನಮ್ಮ ಗ್ರಹಗತಿಗಳ ಮೇಲೆ ಬಂದಿರುತ್ತವೆ. ಅಂದರೆ ನಮ್ಮ ಜೀವನದಲ್ಲಿ ತೊಂದರೆಗಳು ಉಂಟಾಗುವುದು ಗ್ರಹಗಳಿಂದ ಅದಕ್ಕಾಗಿಯೇ ಮೊದಲು ನಾವು ಜನಿಸಿದ ಮೇಲೆ ಎಲ್ಲರೂ ದಿನಾಂಕ ವಾರ ಸಮಯ ನಕ್ಷತ್ರ ಗ್ರಹ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಸ್ನೇಹಿತರೆ ಎಲ್ಲಾ ಗ್ರಹಗಳ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ ಇದಕ್ಕೆ ನಾವು ಹುಟ್ಟಿದ ಸ್ಥಳ ದಿನಾಂಕ ವಾರ ಇದ್ದರೆ ಸಾಕು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಖಂಡಿತವಾಗಿಯೂ ಇರುತ್ತದೆ. ಒಂದೊಂದು ಸಲ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿರುತ್ತವೆ ಆಗ ಮನೆಯಲ್ಲಿ ಏನಾದರೂ ಸಮಸ್ಯೆ ಬಂದುಬಿಡಬಹುದು ಹಾಗೆ ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿ ಸಂತೋಷದಿಂದ ಇರುತ್ತೇವೆ ತಕ್ಷಣ ಒಂದು ದುಃಖದ ಸಂಗತಿ ನಡೆಯಬಹುದು ಇವುಗಳೆಲ್ಲ ನಡೆಯುವುದು ನಮಗೆ ತಿಳಿದಿರುವುದಿಲ್ಲ

ನಾವು ನಮ್ಮ ಜೀವನವನ್ನು ಖುಷಿಯಿಂದ ಸಾಗಿಸಬೇಕು ಎಂದು ಕೊಂಡಿರುತ್ತೇವೆ ಇದ್ದಕ್ಕಿದ್ದ ಹಾಗೆ ಜೀವನ ನಮ್ಮ ವಿರುದ್ಧವಾಗಿ ಸಾಗುತ್ತದೆ ಆಗ ನೀವು ಧೈರ್ಯಗೆಡದೆ ಈ ಒಂದು ಪರಿಹಾರವನ್ನು ಮಾಡಬೇಕು. ಜಾತಕ ದೋಷದಿಂದ ಕೆಲವೊಬ್ಬರಿಗೆ ಮದುವೆ ಲೇಟಾಗಬಹುದು ಇನ್ನು ಕೆಲವೊಬ್ಬರಿಗೆ ಸಂತಾನ ಲೇಟಾಗಬಹುದು ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಹಾಗೂ ನವಗ್ರಹಗಳ ದೋಷದ ಪರಿಹಾರಕ್ಕೆ ಈ ಒಂದು ಪರಿಹಾರವನ್ನು ನೀವು ಮನೆಯಲ್ಲೇ ಮಾಡಿ. ಸ್ನೇಹಿತರೆ ಈ ಒಂದು ಪರಿಹಾರ ಮಾಡಲು ನಿಮಗೆ ನವಧಾನ್ಯಗಳು ಬೇಕು. ಒಂದು ಉದ್ದನೆಯ ಗಾಜಿನ ಡಬ್ಬಿಯನ್ನು ತೆಗೆದುಕೊಳ್ಳಿ ಇದಕ್ಕೆ ನವಧಾನ್ಯಗಳನ್ನು ಅಂದರೆ ಗೋಧಿ ಬತ್ತ ಕೆಂಪುತೊಗರಿ ಹೆಸರುಕಾಳು ಕಡಲೆಕಾಳು ಬಿಳಿ ಅವರೇಕಾಳು ಎಳ್ಳು ಹಾಗೂ ಹುರಳಿಕಾಳು ಇಷ್ಟು ನವಧಾನ್ಯಗಳನ್ನು 50 ಗ್ರಾಂ ನಂತೆ ತೆಗೆದುಕೊಂಡು ಬರಬೇಕು

ನಂತರ 5ರೂಪಾಯಿಯ ಹತ್ತು ಕಾಯಿನ್ ಗಳನ್ನು ತೆಗೆದುಕೊಳ್ಳಬೇಕು ಒಂದು ರೂಪಾಯಿಯ ಒಂದು ಕಾಯಿನ್ ತೆಗೆದುಕೊಳ್ಳಬೇಕು. ಸಂಖ್ಯಾಶಾಸ್ತ್ರದ ಪ್ರಕಾರ 50 ಗ್ರಾಂ ಎಂದರೆ 9 ಧಾನ್ಯಗಳಿಗೆ 450 ಆಗುತ್ತದೆ ನಂತರ 50 ರೂಪಾಯಿ ಮತ್ತು ಒಂದು ರೂಪಾಯಿ ಸೇರಿದರೆ 51 ಆಗುತ್ತದೆ 51 ಮತ್ತು 45 ಕೂಡಿಸಿದರೆ 96 ಸಿಗುತ್ತದೆ 96 ಎನ್ನುವುದು ಒಳ್ಳೆಯ ಸಂಖ್ಯೆಯಾಗಿದೆ. ಈ ಸಂಖ್ಯೆ ನಿಮಗೆ ನವಗ್ರಹಗಳಿಂದ ದೋಷ ನಿವಾರಣೆ ಆಗಲು ಸಹಾಯ ಮಾಡುತ್ತದೆ. ನಂತರ ಮೊದಲು ಗಣೇಶನನ್ನು ಆರಾಧನೆ ಮಾಡಿ ಗಣೇಶ ಮಂತ್ರವನ್ನು ಪಠಿಸಬೇಕು ಅದು ಹೀಗಿದೆ ಓಂ ಶ್ರೀಂ ರೀಮ್ ಕ್ಲೀಂ ಗೌಂ ಗಂ ಗಣಪತಿ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ನಿಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಸಲ ಪಠಿಸಬೇಕು

ನಂತರ ಗಾಜಿನ ಬಾಟಲಿಯಲ್ಲಿ ಒಂದೊಂದೇ ಕಾಳುಗಳನ್ನು ಹಾಕುತ್ತಾ ಹೋಗಬೇಕು ಹಾಕುವಾಗ ಈ ಒಂದು ಮಂತ್ರವನ್ನು ಹೇಳಬೇಕು ಇದು ನವಗ್ರಹ ಮಂತ್ರವಾಗಿದೆ ಆದಿತ್ಯಾಯ ಸೋಮಾಯ ಮಂಗಳಾಯ ಬುದಾಯಚ ಗುರು ಶುಕ್ರ ಶನಿ ಭಚ್ಚ ರಾಹುವೇ ಕೇತುವೇ ನಮಹ ಎಂದು ಹೇಳಬೇಕು ಒಂದೊಂದು ವಾರದ ಹೆಸರನ್ನು ಹೇಳುತ್ತಾ ಒಂದೊಂದು ಧಾನ್ಯಗಳನ್ನು ಅಂದರೆ ನವಧಾನ್ಯಗಳನ್ನು ಹಾಕಬೇಕು. ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಗಾಜಿನ ಡಬ್ಬಿಯಲ್ಲಿ ಒಂದೊಂದೇ ಕಾಳುಗಳು ಸ್ಟೆಪ್ ವೈಸ್ ಕಾಣುತ್ತಿರಬೇಕು.

ಮನೆಯಲ್ಲಿ ಕೂಡ ನೀವು ಎಲ್ಲರಿಗೆ ಕಾಣುವ ಹಾಗೆ ಇದನ್ನು ಇಡಬೇಕು ಈ ರೀತಿಯಾಗಿ ಈ ಪರಿಹಾರವನ್ನು ಮಾಡಿಕೊಂಡರೆ ಮನೆಯಲ್ಲಿರುವ ಎಲ್ಲಾ ದೋಷಗಳು ದೂರವಾಗುತ್ತವೆ. ಈ ಕಾಳುಗಳನ್ನು ನಲವತ್ತೆಂಟು ದಿನಗಳ ಆದಮೇಲೆ ಚೇಂಜ್ ಮಾಡಬಹುದು ಅಥವಾ 24 ನೇ ದಿನ ತೆಗೆಯಬಹುದು. ಇದು ನೋಡಲು ಸುಂದರವಾಗಿ ಕಾಣುತ್ತದೆ ಹಾಗೆ ನಿಮಗೆ ಒಳ್ಳೆಯ ಪರಿಹಾರವನ್ನು ನೀಡುತ್ತದೆ ಯಾವ ಗ್ರಹಗಳು ನಿಮ್ಮ ಮೇಲೆ ಅಥವಾ ನಿಮ್ಮ ಮನೆಯ ಮೇಲೆ ವಕ್ರದೃಷ್ಟಿ ಬೀರುವುದಿಲ್ಲ. ಹಾಗಾದರೆ ಸ್ನೇಹಿತರೆ ಈ ಪರಿಹಾರ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.