ಕಿವಿಯ ತೂತು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆಯೇ ಅದನ್ನು ಹೀಗೆ ಮಾಡಿದ್ರೆ ಸಾಕು ತಕ್ಷಣ ಕಿವಿಯ ತೂತು ಚಿಕ್ಕದಾಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗಾಗಿ ಕೆಲವೊಂದು ವಿಚಾರಗಳನ್ನು ನಮ್ಮ ಹಿರಿಯರು ತಿಳಿಸಿ ಹೇಳಿದ್ದಾರೆ ಈ ಕೆಲವೊಂದು ವಿಚಾರಗಳನ್ನು ಹೆಣ್ಣುಮಕ್ಕಳು ನೆನಪಿನಲ್ಲಿ ಇಟ್ಟುಕೊಂಡು ಆ ಪದ್ದತಿಯನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ,ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರ ಮೊರೆ ಹೋಗಿ ನಮ್ಮ ಹೆಣ್ಣುಮಕ್ಕಳು ಅದೆಷ್ಟೋ ಪದ್ಧತಿಯನ್ನು ಮರೆತೇ ಬಿಟ್ಟಿದ್ದಾರೆ, ಇನ್ನು ಕೆಲವರು ಪಾಶ್ಚಾತ್ಯರ ಸಂಪ್ರದಾಯಕ್ಕೆ ಮೊರೆ ಹೋಗದೆ ಇದ್ದರೂ ನಮ್ಮ ಸಂಪ್ರದಾಯದಲ್ಲಿ ಕೆಲವೊಂದು ತಪ್ಪುಗಳನ್ನು ಕಂಡು ಹಿಡಿದು ಪದ್ಧತಿಗಳನ್ನು ಪಾಲಿಸುವುದೇ ಇಲ್ಲ.

ಹೆಣ್ಣು ಮಕ್ಕಳು ಕಿವಿಯನ್ನು ಚುಚ್ಚಿಕೊಳ್ಳುವುದು ನಮ್ಮ ಸಂಪ್ರದಾಯದ ಒಂದು ವಿಚಾರವಾಗಿದೆ ಈ ಒಂದು ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಾರೆ ಆದರೆ ಫ್ಯಾಷನ್ ಟ್ರೆಂಡ್ ಅಂತೆಲ್ಲ ಮನಸೋತು ಕೆಲವರು ಫ್ಯಾಷನ್ ಟ್ರೆಂಡ್ ಎಂದು ಪಾಶ್ಚಾತ್ಯರ ರೀತಿ ಅಲಂಕರ ಮಾಡಿಕೊಳ್ಳಲು ಮುಂದಾಗ್ತಾರೆ.ದೇವರು ಕೊಟ್ಟದ್ದೇ ಒಂದು ರೂಪ ಮಾನವ ಮಾಡಿಕೊಳ್ಳುವುದೇ ಒಂದು ರೂಪ ಅನ್ನೋ ರೀತಿ ಈ ಪಾಶ್ಚಾತ್ಯರ ರೀತಿ ಅಲಂಕಾರ ಮಾಡಿಕೊಳ್ಳಲು ಹೋಗಿ ತಮ್ಮ ಅಂದವನ್ನು ಹಾಳು ಮಾಡಿಕೊಳ್ಳುತ್ರಾರೆ.

ನಾನು ಏನನ್ನು ತಿಳಿಸಲು ನಿಮಗೆ ಇಚ್ಛಿಸುತ್ತಿದ್ದೇನೆ ಎಂದರೆ ಕೆಲವರು ಪಾಶ್ಚಾತ್ಯರಂತೆ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಮೋಜು ಮಸ್ತಿಯನ್ನು ಮಾಡ್ತಾ ಇರ್ತಾರೆ ಅದರಲ್ಲಿಯೂ ಕಿವಿಗಳ ವಿಚಾರಕ್ಕೆ ಬಂದರೆ ಉದ್ದನೆಯ ಧಾರಣೆಯ ಕಿವಿ ಓಲೆಗಳನ್ನು ಹಾಕಿಕೊಂಡು ಈ ಕಿವಿಯ ತೂತು ದೊಡ್ಡದಾಗಿರುತ್ತದೆ.ಹಾಗಾದರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಈ ಕಿವಿಗಳ ಒಲೆಗಳನ್ನು ಹಾಕಿ ಹಾಕಿ ಕಿವಿಯ ತೂತ ದೊಡ್ಡದಾಗಿದ್ದರೆ ಅಂದ್ರೆ ಕಿವಿ ಚರ್ಚಿಸಿದಾಗ ಈ ಕಿವಿ ಓಲೆಗಳನ್ನು ಹಾಕಿ ಕೊಳ್ಳಲೆಂದು ಇರುವ ತೂತ ದೊಡ್ಡದಾಗಿದ್ದರೆ ಅದನ್ನು ಹೇಗೆ ಕೆಲವೊಂದು ಹ್ಯಾಕ್ ಮುಖಾಂತರ ಸಣ್ಣದಾಗಿ ಮಾಡಿಕೊಂಡು,

ಮತ್ತೊಮ್ಮೆ ನಾವು ಉದ್ದನೆಯ ಒಲೆಗಳನ್ನು ಭಾರದ ಒಲೆಗಳನ್ನು ಹಾಕಿಕೊಳ್ಳುವುದು ಎಂಬುದನ್ನು ನಾನು ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇನೆ, ಇದು ಅತ್ಯಂತ ಸುಲಭವಾದ ಒಂದು ಟಿಪ್ ಆಗಿದೆ.ಈ ಸುಲಭವಾದ ಟಿಪ್ ಗಾಗಿ ಬೇಕಾಗಿರುವಂತಹದ್ದು ಬಂದು ಹ್ಯಾಂಡಿ ಪ್ಲಾಸ್ಟರ್ ಹೌದು ಈ ಹ್ಯಾಂಡಿ ಪ್ಲಾಸ್ಟರ್ ಸಾಮಾನ್ಯವಾಗಿ ಎಲ್ಲ ಅಂಗಡಿಗಳಲ್ಲಿಯೂ ಮತ್ತು ಮೆಡಿಕಲ್ ಶಾಪ್ ಗಳಲ್ಲಿಯೂ ಕೂಡ ದೊರೆಯುತ್ತದೆ.

ಇದನ್ನು ನೀವು ಮನೆಗೆ ತಂದಿಟ್ಟುಕೊಳ್ಳಿ ನಂತರ ನೀವು ಯಾವಾಗ ಆಚೆ ಹೋಗುವಾಗ ಅಲಂಕಾರ ಮಾಡಿಕೊಳ್ಳುತ್ತೀರೋ ಆಗ ಉದ್ದನೆಯ ಒಲೆಗಳನ್ನು ಹಾಕಬೇಕು ಅಂದಾಗ ಅಥವಾ ಕಿವಿಯ ಹಾಲೆ ದೊಡ್ಡದಾಗಿದೆ ಅಂದರೆ, ಈ ಹ್ಯಾಂಡಿ ಪ್ಲಾಸ್ಟರ್ ನ ಸಹಾಯದಿಂದ ಅದರೊಳಗೆ ಇರುವಂತಹ ಗಮ್ ಅನ್ನು ಮಾತ್ರ ಈ ಹ್ಯಾಂಡಿ ಪ್ಲಾಸ್ಟರ್ ನಿಂದ ಕತ್ತರಿಸಿ ಇಟ್ಟುಕೊಳ್ಳಬೇಕು.ನಂತರ ಈ ಹ್ಯಾಂಡಿ ಪ್ಲಾಸ್ಟರ್ ನಲ್ಲಿ ಇರುವ ಗಮ್ ಅನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಂಡು ಕಿವಿಯ ಹಳೆಯ ಮುಂಭಾಗದಲ್ಲಿ ಯಾದರೂ ಇದನ್ನು ಅಂಟಿಸಿಕೊಳ್ಳಬಹುದು ಅಥವಾ ಹಿಂಭಾಗದಲ್ಲಿ ಬೇಕಾದರೂ ಈ ಒಂದು ಹ್ಯಾಂಡಿ ಪ್ಲಾಸ್ಟರ್ನ ಗಮ್ ಅನ್ನ ಅಂಟಿಸಿಕೊಳ್ಳಬಹುದು.

ಇದಿಷ್ಟು ಮಾಡಿದ ಬಳಿಕ ನೀವು ಹಾಕಿಕೊಳ್ಳ ಬೇಕಾಗಿರುವಂತಹ ಕಿವಿ ಓಲೆಯನ್ನು ಇದೀಗ ಧರಿಸಿಕೊಳ್ಳಬಹುದು ಇದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಕಿವಿಯ ತೂತು ಇನ್ನಷ್ಟು ಅಗಲ ಕೂಡ ಆಗುವುದಿಲ್ಲ.ನೀವು ಕೂಡ ನಿಮ್ಮ ಕಿವಿಗಳಿಗೆ ಉದ್ದನೆಯ ಅಥವಾ ಭಾರತೀಯ ಕಿವಿ ಓಲೆಗಳನ್ನು ಧರಿಸಿ ಕೊಳ್ಳುತ್ತಿದ್ದರೆ ಈ ಕಿವಿಗಳ ತೂತ ಅಗಲ ಆಗಬಾರದು ಅಂದರೆ, ಈ ಹ್ಯಾಂಡಿ ಪ್ಲಾಸ್ಟರ್ನ ಪ್ರಯೋಜನವನ್ನು ಪಡೆದುಕೊಳ್ಳಿ ಇದರಿಂದ ಕಿವಿಯ ಆಲೆ ದೊಡ್ಡದಾಗುವುದಿಲ್ಲ.

Leave a Reply

Your email address will not be published.