ನೀವು ಶನಿವಾರ ಹುಟ್ಟಿದ್ದೀರಾ ಹಾಗಾದ್ರೆ ನಿಮ್ಮನ್ನು ಮೀರಿಸೋರು ಯಾರು ಇಲ್ಲ ಬಿಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶನಿವಾರ ಹುಟ್ಟಿದವರು ಯಾವ ರೀತಿಯಾಗಿ ಇರುತ್ತಾರೆ ಹಾಗೆ ಇವರ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ.ಸ್ನೇಹಿತರೆ ನೀವು ಶನಿವಾರ ಜನಿಸಿದ್ದರೆ ನಾನು ಹೇಳಿದಂತೆ ನೀವು ಕೂಡ ಇರುವಿರಾ ಎಂದು ನೋಡಿಕೊಳ್ಳಿ ಹಾಗೆ ಯಾರು ಶನಿವಾರ ಜನಿಸಿರುತ್ತಾರೆ ಅವರಿಗೆ ಈ ವಿಷಯವನ್ನು ತಿಳಿಸಿ. ಸ್ನೇಹಿತರೆ ವಾರದಲ್ಲಿ ಇರುವುದು ಏಳು ದಿನಗಳು ಏಳು ದಿನಗಳಿಗೂ ಒಂದೊಂದು ದೇವರ ವಿಶೇಷತೆ ಇದೆ ಹಾಗೆ ಶನಿವಾರಕ್ಕೆ ಆಂಜನೇಯ ಸ್ವಾಮಿಯ ವಿಶೇಷವಾದ ದಿನ ಎಂದು ಹೇಳುತ್ತಾರೆ. ಶನಿವಾರ ಹುಟ್ಟಿದವರು ಹೇಗೆ ಇರುತ್ತಾರೆ ಮತ್ತು ಅವರು ಏನನ್ನು ಇಷ್ಟಪಡುತ್ತಾರೆ ಮತ್ತು ಅವರ ಜೀವನದಲ್ಲಿ ಹೇಗೆ ಇರುತ್ತಾರೆ ಎಂದು ಈ ಮಾಹಿತಿಯಲ್ಲಿ ನೋಡೋಣ.

ಸ್ನೇಹಿತರೆ ನಾವು ಹುಟ್ಟುವ ದಿನಾಂಕ, ನಕ್ಷತ್ರ, ರಾಶಿ ಹಾಗೂ ದಿನ ಎಲ್ಲವೂ ನಮ್ಮ ಸ್ವಭಾವವನ್ನು ತಿಳಿಸುತ್ತದೆ. ಅದಕ್ಕಾಗಿ ಎಲ್ಲರೂ ತಾವು ಹುಟ್ಟಿದ ದಿನವನ್ನು ಹಾಗೂ ನಕ್ಷತ್ರಗಳನ್ನು ಮತ್ತು ದಿನಾಂಕವನ್ನು ತುಂಬಾ ಚೆನ್ನಾಗಿ ನೆನಪಿಟ್ಟುಕೊಂಡು ಇರುತ್ತಾರೆ. ಸ್ನೇಹಿತರೇ ಯಾರು ಯಾವ ದಿನ ಹುಟ್ಟಿದ್ದಾರೆ ಎಂದು ನಮಗೆ ತಿಳಿದರೆ ಹಾಗೂ ಯಾವ ದಿನಾಂಕದಂದು ಮತ್ತು ಸಮಯದಂದು ಹುಟ್ಟಿದ್ದಾರೆ ಎಂದು ತಿಳಿದರೆ ಅವರ ಪೂರ್ತಿಯಾದ ಸ್ವಭಾವ ಹಾಗೂ ಜೀವನದಲ್ಲಿ ಅವರ ಪಾತ್ರ ಏನು ಎಂದು ಪೂರ್ತಿಯಾಗಿ ಹೇಳಬಹುದು ಅಂತಹ ಶಕ್ತಿ ಇರುತ್ತದೆ.

ಸ್ನೇಹಿತರೆ ನೀವು ಶನಿವಾರದಂದು ಹುಟ್ಟಿದ್ದರೆ ಕೆಂಪು ಅಥವಾ ಕಪ್ಪು ಬಣ್ಣವನ್ನು ಇಷ್ಟಪಡುತ್ತೀರಾ. ಹೌದು ಶನಿವಾರ ಹುಟ್ಟಿದವರು ಕಪ್ಪು ಬಟ್ಟೆಯನ್ನು ಧರಿಸಲು ಹಾಗೂ ಕೆಂಪು ಬಟ್ಟೆಯನ್ನು ಧರಿಸಲು ಇಷ್ಟಪಡುತ್ತಾರೆ ಇವರಿಗೆ ಏನೇ ತೆಗೆದುಕೊಂಡರು ಇವೆರಡು ಬಣ್ಣಗಳು ತುಂಬಾ ಆಕರ್ಷಣೆ ಆಗಿರುತ್ತವೆ. ಇವರ ಲಕ್ಕಿ ನಂಬರ್ ಯಾವುದು ಎಂದರೆ 3, 6 ಹಾಗೂ 9. ಇವರಿಗೆ ಶನಿವಾರ ಮತ್ತು ಮಂಗಳವಾರ ತುಂಬಾ ಅದೃಷ್ಟವನ್ನು ತರುತ್ತದೆ ಶನಿವಾರದಂದು ಇವರಿಗೆ ಲಾಭವು ಹೆಚ್ಚಾಗಿರುತ್ತದೆ. ಇನ್ನು ಇವರ ಪ್ರೀತಿಯ ವಿಷಯಕ್ಕೆ ಬಂದರೆ ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ ಆದರೆ ಮನಸ್ಸಿನಲ್ಲಿ ಹೆಂಡತಿಯ ಮೇಲೆ ತಾಯಿಯ ಮೇಲೆ ತುಂಬಾ ಪ್ರೀತಿಯನ್ನು ಇಟ್ಟಿರುತ್ತಾರೆ.

ವೈವಾಹಿಕ ಜೀವನದಲ್ಲಿ ಇವರು ಚೆನ್ನಾಗಿ ಇರುತ್ತಾರೆ ಆದರೆ ಇವರಿಗೆ ಕೋಪ ತುಂಬಾ ಇರುವುದರಿಂದ ಕೆಲವೊಮ್ಮೆ ಸಣ್ಣ ಸಣ್ಣ ಗಲಾಟೆಗಳು ನಡೆಯುತ್ತಿರುತ್ತವೆ. ಆದರೆ ಇವರು ಯಾರಿಗೂ ಮೋಸ ಮಾಡುವುದಿಲ್ಲ ತಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳುವುದಕ್ಕೆ ಎಲ್ಲವನ್ನು ಮರೆತು ಬಾಳುತ್ತಾರೆ. ಸ್ನೇಹಿತರೆ ಶನಿವಾರ ಜನಿಸಿದವರ ಜೀವನ ತುಂಬಾ ಏರುಪೇರುಗಳಿಂದ ಕೂಡಿರುತ್ತದೆ ಇವರು ತುಂಬಾ ಕಷ್ಟವನ್ನು ಪಡುತ್ತಾರೆ ಹಾಗೆ ಕೊನೆಯಲ್ಲಿ ಇವರಿಗೆ ವಿಜಯ ಸಿಕ್ಕೆ ಸಿಗುತ್ತದೆ. ಇನ್ನು ಇವರ ಡ್ರೆಸ್ ಗಳ ವಿಷಯಕ್ಕೆ ಬಂದರೆ ತುಂಬಾ ಸ್ಟೈಲಿಶ್ ಆಗಿ ಇರಲು ಇಷ್ಟಪಡುತ್ತಾರೆ ಹೊಸಬಟ್ಟೆಗಳನ್ನು ಹಾಕಿಕೊಳ್ಳಲು ತುಂಬಾ ಆಸಕ್ತಿದಾಯಕರಾಗಿರುತ್ತಾರೆ.

ಇವರು ಶಿಕ್ಷಣದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ ಆದರೆ ಇವರಿಗೆ ಕಷ್ಟಗಳು ಶಿಕ್ಷಣದ ವಯಸ್ಸಿನಲ್ಲಿ ತುಂಬಾ ಬರುತ್ತದೆ. ಇವರನ್ನು ಯಾರೇ ನೋಡಿದರು ಬೇಗ ಆಕರ್ಷಿಸುವಂತೆ ಆಗುತ್ತದೆ ಏಕೆಂದರೆ ಇವರ ಕಣ್ಣಿನಲ್ಲಿ ಶಕ್ತಿ ಇರುತ್ತದೆ. ಇವರು ಸೇವಕರಾಗಿರಲು ಇಷ್ಟಪಡುತ್ತಾರೆ ಹಾಗೆ ಸಹಾಯ ಮಾಡುವ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ ಬಡವರನ್ನು ಕಂಡರೆ ಕನಿಕರ ತೋರಿಸುತ್ತಾರೆ. ಇನ್ನು ಇವರ ಸ್ನೇಹಿತರ ವಿಷಯಕ್ಕೆ ಬಂದರೆ ಇವರಿಗೆ ಹೆಚ್ಚಾಗಿ ಸ್ನೇಹಿತರು ಇರುವುದಿಲ್ಲ ಆದರೆ ಇರುವ ಸ್ನೇಹಿತರು ತುಂಬಾ ಇವರಿಗೆ ಸಹಾಯವನ್ನು ಮಾಡುತ್ತಾರೆ.

ಶನಿವಾರ ಹುಟ್ಟಿದವರಿಗೆ ಶ್ರೀ ಆಂಜನೇಯನ ಸಂಪೂರ್ಣ ಆಶೀರ್ವಾದ ಇರುತ್ತದೆ ಹಾಗೆ ಅವರು ಆಂಜನೇಯನ ಭಕ್ತರಾಗಿರುತ್ತಾರೆ. ಇವರಿಗೆ ಕೋಪ ತುಂಬಾ ಬರುತ್ತದೆ ಹಾಗೆ ಪ್ರಾಯಶ್ಚಿತ್ತವನ್ನು ಕೂಡ ಬೇಗ ಪಡುತ್ತಾರೆ. ಇವರು ಎಲ್ಲಾ ಕೆಲಸಗಳಲ್ಲೂ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ ಯಾವುದೇ ಕೆಲಸವನ್ನು ಕೊಟ್ಟರು ಸಂಪೂರ್ಣವಾಗಿ ಶ್ರದ್ಧೆಯಿಂದ ಮಾಡುತ್ತಾರೆ ಹಾಗೆ ಇವರು ತುಂಬಾ ಇಂಟ್ರೆಸ್ಟ್ ಕೆಲಸ ಮಾಡುವುದರಲ್ಲಿ ತೋರಿಸುತ್ತಾರೆ. ಹಾಗಾಗಿ ಎಲ್ಲಾ ಕೆಲಸಗಳಲ್ಲಿ ಸಫಲತೆಯನ್ನು ಕಾಣುತ್ತಾರೆ. ಜೀವನದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಶನಿವಾರ ಹುಟ್ಟಿದವರಲ್ಲಿ ಹೆಚ್ಚಾಗಿರುತ್ತದೆ.

ಇವರು ತುಂಬಾ ಹಸನ್ಮುಖಿಯಾಗಿ ಇರುತ್ತಾರೆ ಹಾಗೆಯೇ ಇವರಿಗೆ ಯಾರನ್ನು ಹೇಗೆ ಒಲಿಸಿಕೊಳ್ಳಬಹುದು ಹೇಗೆ ಎಂದು ಗೊತ್ತಿರುತ್ತದೆ ಹಾಗಾಗಿ ಇವರು ಕೂಡ ಬೇಗ ಆಕರ್ಷಿತರಾಗಿ ಕೆಲಸವನ್ನು ಮುಗಿಸಿಕೊಳ್ಳುತ್ತಾರೆ. ಸ್ನೇಹಿತರೆ ಹಾಗಾದರೆ ನಿಮಗೂ ಈ ರೀತಿಯಾದ ಅನುಭವ ಇದೆಯೇ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *