ಚಿನ್ನವನ್ನು ಯಾವಾಗಾದ್ರೂ ನೀವು ಕಳೆದುಕೊಂಡಿದ್ದೀರಾ ಹಾಗಾದ್ರೆ ಬಂಗಾರವನ್ನು ಕಳೆದುಕೊಂಡ ಸ್ವಲ್ಪ ದಿನದಲ್ಲಿಯೇ ಈ ರೀತಿ ಘಟನೆ ನಿಮ್ಮ ಮನೆಯಲ್ಲಿ ನಡೆಯುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಬಂಗಾರ ಕಳೆದುಹೋದರೆ ಮೂರು ತಿಂಗಳಲ್ಲಿ ಈ ಘಟನೆ ನಡೆದೇ ನಡೆಯುತ್ತೆ ಹಾಗಾದರೆ ಇದು ಶುಭವೋ ಅಶುಭವೋ ಎಂದು ಈಗಲೇ ತಿಳಿಯಿರಿ.
ಹಾಯ್ ಸ್ನೇಹಿತರೆ ಬಂಗಾರ ಎಂದ ತಕ್ಷಣ ಎಲ್ಲರಿಗೂ ತುಂಬಾ ಆಸೆ ಇರುತ್ತದೆ ನಾನು ಕೂಡ ಬಂಗಾರ ತೆಗೆದುಕೊಳ್ಳಬೇಕು ಕಿವಿ ಓಲೆ ಮಾಡಿಸಬೇಕು ನೆಕ್ಲೆಸ್ ಮಾಡಿಸಿಕೊಳ್ಳಬೇಕು ಮಾಂಗಲ್ಯ ಮಾಡಿಸಿಕೊಳ್ಳಬೇಕು ಉಂಗುರ ಮಾಡಿಸಿಕೊಳ್ಳಬೇಕು ಹೀಗೆ ಹೆಣ್ಣುಮಕ್ಕಳು ಒಂದರ ಮೇಲೆ ಒಂದು ಬಂಗಾರದ ಆಸೆಗಳನ್ನು ಇಟ್ಟುಕೊಂಡು ಇರುತ್ತಾರೆ. ಬಂಗಾರ ಕೇವಲ ಸ್ತ್ರೀಯರಿಗೆ ಮಾತ್ರ ಸೀಮಿತವಲ್ಲ. ಪುರುಷರು ಕೂಡ ಬಂಗಾರವನ್ನು ಧರಿಸುತ್ತಾರೆ ಉದಾಹರಣೆಗೆ ಕೊರಳಿಗೆ ಚೈನ್ ಕೈಗೆ ಉಂಗುರ ಹಾಗೂ ಬ್ರಾಸ್ಲೈಟ್ ಹಾಕಿಕೊಳ್ಳುತ್ತಾರೆ ಆದರೆ ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಅತಿಯಾದ ಆಸೆ ಇರುತ್ತದೆ.

ಆದರೆ ಈಗ ಬಂಗಾರ ಮಾಡಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ ಏಕೆಂದರೆ ಬಂಗಾರದ ಬೆಲೆ ಗಗನವನ್ನು ಮುಟ್ಟಿದೆ ಅಂದರೆ ತುಂಬಾ ಬೆಲೆ ಹೆಚ್ಚಾಗಿದೆ ಆದರೂ ಕೊಳ್ಳುವರು ಕೊಂಡುಕೊಳ್ಳುತ್ತಾರೆ. ಹೆಣ್ಣು ಮಕ್ಕಳ ಮದುವೆ ಮಾಡಿ ಕೊಡಬೇಕೆಂದರೆ ಸಾಲ ಮಾಡಿ ಆದರೂ ಕೂಡ ಬಂಗಾರ ತಂದುಕೊಡುತ್ತಾರೆ. ಸ್ತ್ರೀಯರಿಗೆ ಬಂಗಾರ ಕೊಡುವುದು ಆಗಿನ ಕಾಲದಿಂದಲೂ ಬಂದಂತಹ ಪದ್ಧತಿಯಾಗಿದೆ ಹಾಗಾಗಿ ಮದುವೆಯ ಸಮಾರಂಭದಲ್ಲಿ ಮೊದಲು ಬಂಗಾರವನ್ನು ತಂದು ಶಾಸ್ತ್ರ ಮಾಡುತ್ತಾರೆ. ಸ್ನೇಹಿತರೆ ಬಂಗಾರವನ್ನು ಹಾಕಿಕೊಂಡ ಸ್ತ್ರೀಯ ಲಕ್ಷಣ ತುಂಬಾ ಚೆನ್ನಾಗಿರುತ್ತದೆ ಬೊಂಬೆಯಂತೆ ಅವಳು ಸೀರೆಯನ್ನು ಉಟ್ಟು ಬಂಗಾರವನ್ನು ಹಾಕಿದರೆ ಎಲ್ಲರೂ ಅವಳನ್ನು ನೋಡಿ ಬೆರಗಾಗುತ್ತಾರೆ.

ಸ್ನೇಹಿತರೆ ಬಂಗಾರ ಹಾಕಿಕೊಳ್ಳುವುದು ವೈಜ್ಞಾನಿಕವಾಗಿಯೂ ಒಂದು ಕಾರಣವಿದೆ. ಹೆಣ್ಣುಮಕ್ಕಳು ಕಿವಿಗೆ ಓಲೆ ಧರಿಸುವುದು ಏಕೆಂದರೆ ಕಿವಿಯ ನರ ಗರ್ಭಕೋಶಕ್ಕೆ ಹೋಗಿರುತ್ತದೆ ಇದರಿಂದಾಗಿ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಕೈಗೆ ಬಳೆಗಳನ್ನು ಕೂಡ ಹಾಕುವುದು ರಕ್ತ ಸಂಚಾರ ಚೆನ್ನಾಗಿರಲಿ ಎಂದು ಹಾಗೆ ಉಂಗುರವನ್ನು ಉಂಗುರದ ಬೆರಳಿಗೆ ಹಾಕುತ್ತಾರೆ ಏಕೆಂದರೆ ಇದು ಕೂಡ ಹೃದಯಕ್ಕೆ ಸಂಬಂಧ ಇರುತ್ತದೆ ಹಾಗಾಗಿ ಮದುವೆಯಲ್ಲಿ ಗಂಡು-ಹೆಣ್ಣಿಗೆ ಉಂಗುರವನ್ನು ಬದಲಾಯಿಸುತ್ತಾರೆ ಇದರಿಂದ ಹೃದಯದಲ್ಲಿ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ. ಸ್ನೇಹಿತರೆ ಮೂಗುತಿಯನ್ನು ಹಾಕಲು ಕೂಡ ಒಂದು ಕಾರಣವಿದೆ ಹೆಣ್ಣುಮಗಳು ಕೋಪ ಕಡಿಮೆಯಾಗಬೇಕು ಹಾಗೆ ತಾಳ್ಮೆ ಹೆಚ್ಚಾಗಬೇಕು ಎಂದು ಮೂಗುತಿಯನ್ನು ಹಾಕುತ್ತಾರೆ.

ಕಾಲಿನ ಬೆರಳಿಗೆ ಕಾಲುಂಗುರಗಳನ್ನು ಹಾಕಲು ಕೂಡ ಒಂದು ಕಾರಣ ಇದೆ ನಮ್ಮ ಎಲ್ಲಾ ಜಗಳಗಳು ಅಸಮಾಧಾನಗಳು ಅದರಿಂದ ಭೂಮಿಯನ್ನು ಸ್ಪರ್ಶಿಸುತ್ತವೆ ಹಾಗಾಗಿ ಹೆಣ್ಣಿನಲ್ಲಿ ತಾಳ್ಮೆ ಹೆಚ್ಚುತ್ತದೆ. ಹಾಗಾದರೆ ಸ್ನೇಹಿತರೆ ಬಂಗಾರವನ್ನು ನಾವು ಕಳೆದುಕೊಂಡರೆ ಏನಾಗುತ್ತದೆಂದು ಈಗ ನೋಡೋಣ. ಹೆಣ್ಣು ಮಗಳು ಎಲ್ಲಿಗಾದರೂ ಹೋದಾಗ ಬಂಗಾರವನ್ನು ಕಳೆದುಕೊಂಡರೆ ಗುರು ಗ್ರಹ ದೋಷ ಇದೆ ಮತ್ತು ಹೆಚ್ಚಾಗುತ್ತದೆ ಎಂದು ನಂಬಿಕೆ ಇದೆ ಹಾಗೆ ಸ್ತ್ರೀಯು ಮಾಂಗಲ್ಯವನ್ನು ಕಳೆದುಕೊಂಡರೆ ಸದ್ಯದಲ್ಲೇ ಗಂಡನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎಂದು ತಿಳಿಯಬೇಕು ಹಾಗೆ ಹೆಣ್ಣುಮಕ್ಕಳ ಬಂಗಾರದ ಬಳೆಗಳು ಕಳೆದರೆ ಸದ್ಯದಲ್ಲಿ ಮನೆಯಲ್ಲಿ ಅವಮಾನವಾಗುತ್ತದೆ ಎಂದು ಅರ್ಥ.

ಒಟ್ಟಿನಲ್ಲಿ ಬಂಗಾರ ಕಳೆದುಕೊಂಡರೆ ಗಂಡನ ಆರೋಗ್ಯಕ್ಕೆ ಹಾನಿಕಾರಕ ಎಂದು ನಂಬಲಾಗಿದೆ. ಸ್ನೇಹಿತರೆ ಬಂಗಾರವನ್ನು ಕಳೆದುಕೊಳ್ಳುವುದು ದೊಡ್ಡದಲ್ಲ ಆದರೆ ಅದರ ಹಿಂದಿನ ಸಿಹಿ ಹಾಗೂ ಕಹಿ ನೆನಪುಗಳು ಹೆಣ್ಣುಮಕ್ಕಳನ್ನು ಸಾಯುವವರೆಗೆ ಕಾಡುತ್ತವೆ. ತವರುಮನೆಯಿಂದ ತಂದ ಬಂಗಾರದ ಬೆಲೆ ಅವರಿಗೆ ಮಾತ್ರ ತಿಳಿದಿರುತ್ತದೆ. ಗಂಡನಾದರೂ ಕೊಡಿಸಿದ ಬಂಗಾರ ಕಳೆದರು ಕೂಡ ತುಂಬಾ ಮನಸ್ಸಿನಲ್ಲಿ ಬೇಜಾರು ಇರುತ್ತದೆ. ಕೆಲವೊಂದು ಸಲ ನಾವು ಕೂಡಿಟ್ಟ ಮಾಡಿಸಿಕೊಂಡ ಬಂಗಾರ ನಮ್ಮ ಮನೆಯ ವ್ಯವಹಾರಗಳಿಗೆ ಕೂಡ ಸಹಾಯ ಆಗುತ್ತದೆ ಹಾಗಾಗಿ ಇಂದು ಎಲ್ಲಾ ಯೋಚನೆಗಳು ಒಂದೊಂದಾಗೆ ಕಾಡುತ್ತವೆ. ಒಟ್ಟಿನಲ್ಲಿ ನಾವು ಬಂಗಾರ ಕಳೆದುಕೊಳ್ಳುವುದು ತುಂಬಾ ಅಪಶಕುನ ಹಾಗೂ ಅಶುಭ ಎಂದು ಹೇಳಲಾಗುತ್ತದೆ.

ಇನ್ನು ಬಂಗಾರ ಯಾರದೇ ಆಗಿರಲಿ ನಿಮಗೆ ಗೊತ್ತಿದ್ದರೆ ಅಥವಾ ಸಿಕ್ಕರೆ ಯಾರಿಗೆ ತಲುಪಬೇಕು ಅವರಿಗೆ ತಲುಪಿಸಿಬಿಡಿ ಇದರಿಂದ ನಿಮಗೆ ಒಳ್ಳೆಯದು ಅವರಿಗೂ ಒಳ್ಳೆಯದು ಬಂಗಾರ ಸಿಗುವುದು ಕೂಡ ಮುಂದಿನ ಅಶುಭಕ್ಕೆ ಕಾರಣ ಎಂದು ಹೇಳುತ್ತಾರೆ. ಆದರೆ ಬೆಳ್ಳಿ ಸಿಗುವುದು ತುಂಬಾ ಒಳ್ಳೆಯದು ಹಾಗೆ ಅದಾಗೆ ಸಿಗಬೇಕು. ಬಂಗಾರ ತುಂಬಾ ದೊಡ್ಡದಾದ ಬೆಲೆಯನ್ನು ಹೊಂದಿದೆ ಹಾಗಾಗಿ ಇದನ್ನು ನೀವು ಹುಷಾರಾಗ್ ಇಟ್ಟುಕೊಳ್ಳಬೇಕು ನಿಮ್ಮ ಬೇಜವಾಬ್ದಾರಿಯಿಂದ ಬಂಗಾರವನ್ನು ಕಳೆದುಕೊಂಡು ಜೀವನದಲ್ಲಿ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು.

Leave a Reply

Your email address will not be published.