ಸಿಟಿ ಲೈಫ್ ಸಾಕಪ್ಪ ಸಾಕು ಹಳ್ಳಿಯಲ್ಲಿಯೇ ಹೋಗಿ ಜೀವನ ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದೀರಾ ಹಾಗಾದ್ರೆ ಶೂನ್ಯ ಬಂಡವಾಳದಲ್ಲಿ ಈ ಉದ್ಯಮ ವನ್ನು ಶುರು ಮಾಡಿ ಸಾಕು ನಿಮ್ಮ ಆದಾಯ ದಿನದಿಂದ ದಿನಕ್ಕೆ ಹೆಚ್ಚಾಗತ್ತೆ…!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಹಳ್ಳಿಯಲ್ಲಿ ತೀರಾ ಹಾಗೆ ಹಳ್ಳಿಯಲ್ಲಿ ಯಾವ ಕೆಲಸ ಮಾಡಬೇಕು ಅಂತ ನಿಮಗೆ ತಿಳಿಯುತಿಲ್ಲವಾ ಹಾಗಾದರೆ ಇಂದಿನ ಮಾಹಿತಿಯಲ್ಲಿ ನಾವು ಹಳ್ಳಿಯಲ್ಲಿದ್ದರೂ ಸಹ ಯಾವ ಬ್ಯುಸಿನೆಸ್ ಮಾಡಿ ಹೆಚ್ಚು ಹಣ ಗಳಿಸಬಹುದು ಎಂಬ ಮಾಹಿತಿಯನ್ನು ನೀಡಿದರೆ ನೀವು ರೈತರು ಆಗಿದ್ದರೂ ಸಹ ಇಂತಹ ಬಿಸಿನೆಸ್ ಗಳನ್ನು ಮಾಡಿಕೊಳ್ಳಬಹುದು ಹಾಗೂ ಹಣವನ್ನು ಸಹ ಬೆಳೆಸಬಹುದು ಹೆಚ್ಚಿನ ರೈತರಿಗೆ ತಿಳಿಯದೇ ಇರುವ ಮಾಹಿತಿ ಏನು ಅಂದರೆ ಅವರು ತಮ್ಮ ಹೊಲದಲ್ಲಿ ಆಗಲಿ ಜಮೀನಿನಲ್ಲಿ ಆಗಲೇ ಒಂದೊಂದು ಬೆಳೆಯನ್ನು ಮಾತ್ರ ಬೆಳೆದಿರುತ್ತಾರೆ ಇದರಿಂದ ಅವರಿಗೆ ನಷ್ಟವಾಗುವುದೇ ಹೆಚ್ಚು.

ಆದ್ದರಿಂದ ರೈತರು ತಿಳಿಯಬೇಕಾದ ವಿಚಾರವೇನು ಅಂದರೆ ಮಿಶ್ರ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯೂ ಕೂಡ ಉತ್ತಮವಾಗಿರುತ್ತದೆ, ಹಾಗೂ ಲಾಭವೂ ಕೂಡ ಮಾಡಿಕೊಳ್ಳಬಹುದುಹಾಗದರೆ ಹಳ್ಳಿಯಲ್ಲಿಯೇ ರೈತರುಗಳು ಮಾಡಿಕೊಳ್ಳಬಹುದಾದ ಕೆಲವೊಂದು ವ್ಯವಹಾರಗಳ ಬಗ್ಗೆ ತಿಳಿಸಿಕೊಡುತ್ತೇವೆ. ಇದನ್ನು ಹೆಣ್ಣುಮಕ್ಕಳು ಸಹ ಮಾಡಬಹುದು ಹೆಚ್ಚು ಇನ್ವೆಸ್ಟ್ಮೆಂಟ್ ಅಗತ್ಯಇರುವುದಿಲ್ಲ ಚಿಕ್ಕದಾಗಿಯೂ ಸಹ ಇಂತಹ ಬಿಸಿನೆಸ್ ಮಾಡಿದರೆ ಖಂಡಿತವಾಗಿಯೂ ಲಾಭ ಪಡೆಯಬಹುದು ಹೆಚ್ಚುಹಣಗಳಿಸಬಹುದು.

ತರಕಾರಿ ವ್ಯಾಪಾರ ,ತಮಗೆ ಸ್ವಲ್ಪ ಜಮೀನು ಇದ್ದರೂ ಸಹ ಅದರಲ್ಲಿ ಬೇರೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಒಂದಿಷ್ಟು ತರಕಾರಿಗಳನ್ನು ಕೂಡ ಬೆಳೆಯುವುದರಿಂದ ಖ ಡಿತವಾಗಿಯೂ ಸ್ವಲ್ಪ ಹಣವನ್ನು ಗಳಿಸಬಹುದು ಹಾಗೂ ತರಕಾರಿ ಬೆಳೆಯುವುದರಿಂದ ನಷ್ಟವೇನೂ ಇಲ್ಲ.ಆದರೆ ತರಕಾರಿ ಬೆಳೆಯುವ ವಿಧಾನವನ್ನು ತಿಳಿದು ಹಾಗೂ ಯಾವ ಬೆಳೆಗೆ ಹೆಚ್ಚು ಬೆಲೆಇರುತ್ತದೆ ಅಂತಹ ತರಕಾರಿ ಬೆಳೆಯುವುದರಿಂದ ಅಥವಾ ಸೊಪ್ಪು ಬೆಳೆಯುವುದರಿಂದ ಲಾಭವನ್ನು ಪಡೆದುಕೊಳ್ಳಬಹುದು.

ಅಡಿಕೆ ವ್ಯಾಪಾರ,ಅಡಿಕೆ ಗಿಡ ಹಾಕಿ ಐದಾರು ವರುಷಗಳ ನಂತರ ಒಳ್ಳೆಯ ಲಾಭ ಪಡೆಯಬಹುದು ಅಡಿಕೆ ವ್ಯಾಪಾರ ಮಾಡುವುದರಿಂದ ನಷ್ಟವೇನೂ ಇಲ್ಲ ಅಂಗಡಿಗಳಲ್ಲಿಯೇ ನಾ ನೂರು ರೂಪಾಯಿಗಳವರೆಗೂ ಒಂದು ಕೆಜಿ ಅಡಿಕೆಗೆ ಬೆಲೆ ಸಿಗುತ್ತದೆ ಆದ್ದರಿಂದ ಅಡಿಕೆ ವ್ಯಾಪಾರ ಮಾಡುವುದರಿಂದ ಕೂಡ ನಷ್ಟವೇನೂ ಇಲ್ಲ. ಅಡಿಕೆ ಬೆಳೆ ಮಾಡುವುದರ ಜೊತೆಗೆ ಕೆಲವೊಂದು ಮಿಶ್ರ ಬೆಳೆಯನ್ನು ಕೂಡ ಬೆಳೆಯಬಹುದು.ವಿಳ್ಳೆದೆಲೆ ಬಿಸಿನೆಸ್ ಸಾಮಾನ್ಯವಾಗಿ ಪೂಜೆಗಳಲ್ಲಿ ಶುಭಸಮಾರಂಭಗಳಲ್ಲಿ ಪ್ರತಿ ದಿವಸ ವಿಳ್ಳೆದೆಲೆಯನ್ನು ಬಳಕೆ ಮಾಡುತ್ತಾರೆ

ಇನ್ನೂ ಕೆಲವರು ವಿಳ್ಳೆದೆಲೆಯನ್ನು ಸೇವಿಸುತ್ತಾರೆ ಕೂಡ ಆದ್ದರಿಂದ ವಿಳ್ಯದೆಲೆ ಬಳಕೆ ಹೆಚ್ಚಾಗಿ ಇರುವ ಕಾರಣ ಅಡಿಕೆ ಬೆಳೆಯುವವರು ಸಹ ಅಥವಾ ತಮ್ಮ ತೋಟದಲ್ಲಿ ಬೇರೆ ಯಾವ ಮರಗಳಿದ್ದರೂ ಸಹ ವೀಳ್ಯೆದೆಲೆ ಬಳ್ಳಿಯನ್ನೂ ಬೆಳೆಸಬಹುದು. ಇದರಿಂದ ಲಾಭ ಕೂಡ ಪಡೆಯಬಹುದು.ರೇಶಿಮೆ ವ್ಯಾಪಾರ ಹಾಗೂ ಜೇನು ಸಾಕಾಣಿಕೆ ಈ 2ವ್ಯಾಪಾರ ಮಾಡುವುದಕ್ಕೆ ಸ್ವಲ್ಪ ಇನ್ವೆಸ್ಟ್ಮೆಂಟ್ ಅಗತ್ಯ ಇರುತ್ತದೆ ಆದರೆ ಖಂಡಿತವಾಗಿಯೂ ಸ್ವಲ್ಪ ಪರಿಶ್ರಮ ವಹಿಸಿದ್ದರು ಸಹ ಈ ಎರಡೂ ವಿಧದ ಬಿಸ್ನೆಸ್ ನಲ್ಲಿ ಹೆಚ್ಚು ಹಣವನ್ನು ಗಳಿಸಬಹುದು.

ಆದರೆ ಇವ್ಯಾಪಾರ ಮಾಡುವುದಕ್ಕಿಂತ ಮೊದಲು ಈ ಎರಡೂ ಬಿಸಿನೆಸ್ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ತಿಳಿದು ನಂತರ ಮಿಸಸ್ ಮಾಡಿದರೆ ಖಂಡಿತವಾಗಿಯೂ ಹೆಚ್ಚು ಲಾಭ ದೊರೆಯುತ್ತದೆ.ಕುರಿ ಅಥವಾ ಮೇಕೆ ಸಾಕಾಣಿಕೆ ಮತ್ತು ನಾಟಿ ಕೋಳಿ ಸಾಕಾಣಿಕೆ ಈ ವ್ಯಾಪಾರ ಮಾಡುವುದರಿಂದ ರೈತರು ಖಂಡಿತವಾಗಿಯೂ ಲಾಭವನ್ನು ಪಡೆದುಕೊಳ್ಳಬಹುದು ಕೋಳಿಮೊಟ್ಟೆ ಸಹ ಹೆಚ್ಚಿನ ಬೆಲೆಯಲ್ಲಿ ಮಾರಾಟ ಆಗುತ್ತದೆ ಆದ್ದರಿಂದ ರೈತರುಗಳಿಗೆ ಇಂತಹ ಬಿಸಿನೆಸ್ ಮಾಡುವುದು ಹೆಚ್ಚು ಕಷ್ಟ ಅನಿಸುವುದಿಲ್ಲ ತಮಗೆ ಇರುವ ಜಾಗದಲ್ಲಿಯೆ ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡಬಹುದು.

ಮೊದಲಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕುರಿ ಹಾಗೂ ಮೇಕೆ ಸಾಕಾಣಿಕೆ ಅಥವಾ ಕೋಳಿ ಸಾಕಾಣಿಕೆ ಮಾಡುವುದರಿಂದ ಹಂತಹಂತವಾಗಿ ಲಾಭ ಪಡೆಯಬಹುದು.ನರ್ಸರಿ ಇರುವ ಸ್ವಲ್ಪ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಿ ಕೆಲವೊಂದು ಗಿಡಗಳನ್ನು ಅಂದರೆ, ಅಡಿಕೆ ಗಿಡ ತೆಂಗು ಗಿಡ ಕೆಲವೊಂದು ಹಣ್ಣಿನ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವುದರಿಂದ ಕೂಡ ರೈತರು ಒಳ್ಳೆಯ ಲಾಭ ಪಡೆಯಬಹುದು.ಹೈನುಗಾರಿಕೆ ಹಲವು ತಳಿಯ ಹಸುಗಳನ್ನು ಸಾಕಿಕೊಂಡು ಹಾಲು ಹಾಗೂ ತುಪ್ಪವನ್ನು ಮಾರಾಟ ಮಾಡುವುದರಿಂದ ಕೂಡ ರೈತರುಗಳು ಹೆಚ್ಚು ಲಾಭ ಪಡೆಯಬಹುದು. ಈಗಾಗಲೇ ಹೆಚ್ಚಿನ ರೈತರು ಹೈನುಗಾರಿಕೆಯಿಂದ ಹೆಚ್ಚು ಲಾಭವನ್ನು ಸಹ ಪಡೆದುಕೊಂಡಿದ್ದಾರೆ, ಹಾಲು ಹಾಗೂ ಬೆಣ್ಣೆ ತುಪ್ಪ ಮಾರಾಟದಿಂದ ಹೆಚ್ಚು ಲಾಭವನ್ನು ಸಹ ಪಡೆಯಬಹುದು.

Leave a Reply

Your email address will not be published.