ನೀವು ಪ್ರತಿನಿತ್ಯ ಎನರ್ಜಿಟಿಕ್ ಆಗಿ ಇರಬೇಕೆಂದರೆ ನೀರನ್ನು ಹೀಗೆ ಕುಡಿಯಿರಿ ಎಷ್ಟು ಉಪಯೋಗವಾಗುತ್ತದೆ ನೀವೇ ನೋಡಿ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಆರೋಗ್ಯದ ಬಗ್ಗೆ ಹೇಗೆ ಕಾಳಜಿವಹಿಸಬೇಕು ಮತ್ತು ಪ್ರತಿನಿತ್ಯ ನೀವು ಹೇಗೆ ಇರಬೇಕು ಎಂದು ಹೇಳಿಕೊಡುತ್ತೇನೆ. ಬೆಳಗಾದರೆ ನಾವು ದಿನದ ಎಲ್ಲಾ ಚಟುವಟಿಕೆಗಳನ್ನು ಮಾಡಬೇಕು ಅದಕ್ಕೆ ನಮಗೆ ಮೊದಲು ಆರೋಗ್ಯ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಈ ಆರೋಗ್ಯ ಎನ್ನುವುದು ಆಹಾರದ ರೂಪದಲ್ಲಿ ನೀರಿನ ರೂಪದಲ್ಲಿ ಸಿಗುತ್ತದೆ ಅದರಲ್ಲೂ ಮನುಷ್ಯರಿಗೆ ನೀರಿನ ಅವಶ್ಯಕತೆ ತುಂಬಾ ಇದೆ ಒಂದು ದಿನ ಊಟ ಇರದೇ ಇರಬಹುದು ಆದರೆ ನೀರು ಇರದೇ ಒಂದು ದಿನ ಕೂಡ ಇರಲಾಗದು.
ನೀರಿಗೆ ತುಂಬಾ ವಿಶೇಷತೆ ಇದೆ ಇದು ಹೇಗೆ ಎಲ್ಲ ವಸ್ತುಗಳನ್ನು ಸ್ವಚ್ಛ ಮಾಡುತ್ತದೆಯೋ ಹಾಗೆಯೇ ನಮ್ಮ ದೇಹವನ್ನು ಸ್ವಚ್ಛ ಮಾಡುವ ಗುಣವನ್ನು ಹೊಂದಿದೆ. ನೀರಿನಲ್ಲಿರುವ ಲವಣಾಂಶಗಳು ನಮ್ಮ ದೇಹಕ್ಕೆ ಅತಿ ಮುಖ್ಯವಾಗಿವೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ನೀರು ಬೇಕು ಆದರೆ ಈಗಿನ ಕಾಲದಲ್ಲಿ ನೀರನ್ನು ತುಂಬಾ ಅನಾವಶ್ಯವಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ನಮಗೆ ಕುಡಿಯಲು ನೀರು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ನೀರನ್ನು ನಿಮಗೆ ಅವಶ್ಯಕತೆ ಇದ್ದಾಗ ಮಾತ್ರ ಉಪಯೋಗಿಸಿ. ನೀರು ನಮಗೆ ನೈಸರ್ಗಿಕವಾಗಿ ಸಿಗುವಂತದ್ದು ಆದರೆ ಇದನ್ನು ನಾವು ಕಳೆದುಕೊಂಡರೆ ಮತ್ತೆ ನಾವು ಸೃಷ್ಟಿ ಮಾಡಲು ಆಗುವುದಿಲ್ಲ. ಸ್ನೇಹಿತರೆ ನೀರನ್ನು ಪ್ರತಿನಿತ್ಯ ನಾವು ಮೂರು ಲೀಟರ್ ಆದರೂ ಕುಡಿಯಬೇಕು ಇದು ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುತ್ತದೆ.
ಹಾಗಾದರೆ ಯಾವಾಗ ನೀರನ್ನು ಕುಡಿಯಬೇಕು ಎಂದು ಈ ಮಾಹಿತಿಯಲ್ಲಿ ನೀವೇ ನೋಡಿ. ಪ್ರತಿನಿತ್ಯ ನೀವು ಮಲಗುವಾಗ ಬ್ರಷ್ ಮಾಡುವ ಅಭ್ಯಾಸವನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು ಕೆಲವೊಬ್ಬರು ಈ ರೀತಿಯಾಗಿ ಮಾಡುವುದಿಲ್ಲ ಆದರೆ ಊಟವಾದ ಮೇಲೆ ಬ್ರಷ್ ಮಾಡಿದರೆ ನಮ್ಮಲ್ ಬಾಯಲ್ಲಿ ಯಾವುದೇ ಕೆಟ್ಟ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವುದಿಲ್ಲ. ರಾತ್ರಿ ನಮ್ಮ ಬಾಯಲ್ಲಿ ಸಲೈವಾ ಹೆಚ್ಚಾಗಿರುತ್ತದೆ ಹಾಗಾಗಿ ನೀವು ಊಟ ಮಾಡಿದ ನಂತರ ಬ್ರಷ್ ಮಾಡಿ ಮಲಗಿದರೆ ಬೆಳಗ್ಗೆ ನೀವು ಬ್ರಷ್ ಮಾಡದೇ ಮೊದಲು ನಿಮ್ಮ ದಿನನಿತ್ಯ ಕರ್ಮವನ್ನು ಮುಗಿಸಿ ಒಂದು ಗ್ಲಾಸ್ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯುತ್ತ ಬರಬೇಕು ಹೀಗೆ ಮಾಡುವುದರಿಂದ ನಿಮಗೆ ರಾತ್ರಿ ಬಾಯಿಯಲ್ಲಿದ್ದ ಜೊಲ್ಲು ಅಥವಾ ಸಲೈವಾ ನೀರಿನೊಂದಿಗೆ ನಮ್ಮ ದೇಹಕ್ಕೆ ಸೇರಿ ತುಂಬಾ ಆರೋಗ್ಯ ನಮಗೆ ಸಿಗುವಂತೆ ಮಾಡುತ್ತದೆ.
ನೀವು ಬ್ರಷ್ ಮಾಡದೇ ಮಲಗಿದರೆ ಈ ಜೊಲ್ಲಿನಲ್ಲಿ ಬ್ಯಾಕ್ಟೀರಿಯಾಗಳು ಮಿಕ್ಸಾಗಿ ಬೆಳಗ್ಗೆ ಅಷ್ಟೊತ್ತಿಗೆ ಬಾಯಿ ವಾಸನೆಯಿಂದ ಕೂಡಿರುತ್ತದೆ ಹಾಗಾಗಿ ರಾತ್ರಿ ಮಲಗುವಾಗ ತಪ್ಪದೇ ಮಲಗಿ ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ನೀರನ್ನು ಕುಡಿದರೆ ತುಂಬಾ ಆರೋಗ್ಯ ನಿಮಗೆ ಸಿಗುತ್ತದೆ ಈ ರೀತಿಯಾಗಿ ಇಪ್ಪತ್ತು ದಿನ ಮಾಡಿ ಇದು ನಿಮಗೆ ಅಭ್ಯಾಸ ಆಗಿ ಹೋಗಿ ಬಿಡುತ್ತದೆ. ಪ್ರತಿನಿತ್ಯ ಬೆಳಗ್ಗೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕೂಡ ನೀವು ಕಡಿಮೆ ಮಾಡಿಕೊಳ್ಳಬಹುದು ಹಾಗೆ ನಿಮಗೆ ಗ್ಯಾಸ್ ಹಾಗೂ ಅಸಿಡಿಟಿಯ ತೊಂದರೆ ಇರುವುದಿಲ್ಲ.
ಸ್ನೇಹಿತರೇ ಈಗ ಕೊರೋನ ಒಮಿಕ್ರೋನ್ ಅಂತಹ ಎಲ್ಲಾ ರೋಗಗಳು ತುಂಬಾ ಅಪಾಯಕಾರಿಯಾಗಿವೆ ಇದಕ್ಕೂ ಕೂಡ ಬಿಸಿನೀರು ತುಂಬಾ ಒಳ್ಳೆಯದು ಹಾಗಾಗಿ ಪ್ರತಿನಿತ್ಯ ನೀವು ಒಂದು ಗ್ಲಾಸ್ ಬಿಸಿ ನೀರನ್ನು ಕುಡಿಯಬೇಕು ಇದರಿಂದಾಗಿ ನಿಮ್ಮ ದೇಹದಲ್ಲಿ ಇಮೂನಿಟಿ ಪವರ್ ಹೆಚ್ಚಾಗುತ್ತದೆ ಹಾಗೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಸ್ನೇಹಿತರೆ ಆರೋಗ್ಯ ಚೆನ್ನಾಗಿದ್ದರೆ ನಾವು ಎಷ್ಟು ಬೇಕಾದರೂ ದುಡಿದು ಗಳಿಸಬಹುದು ಆದರೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ ನೀರಿನಂತಹ ಎಲ್ಲ ಪ್ರಾಕೃತಿಕ ಅಂಶಗಳನ್ನು ನೀವು ಚೆನ್ನಾಗಿ ಸೇವಿಸಿದರೆ ನಿಮಗೆ ಬರುವುದಿಲ್ಲ. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೆಲ್ಲಾ ತಿಳಿಸಿ ಧನ್ಯವಾದಗಳು.