ನೀವೇನಾದ್ರು ಈ ಒಂದು ಚಿಕ್ಕ ಉಪಾಯ ಮಾಡಿದರೆ ಸಾಕು ಮನೆಯ ಹಿತ್ತಲಲ್ಲಿ ಇರುವ ಜಾಗದಲ್ಲಿ ರಾಶಿ ರಾಶಿ ತೆಂಗಿನಕಾಯಿ ಬೆಳೆಯಬಹುದು …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯ ಮುಂದೆ ಯಾವುದಾದರೂ ಮರವೊಂದಿದ್ದರೆ ಎಷ್ಟು ಚಂದ ಅಲ್ವಾ ಹೌದು ಮನೆಯ ಸುತ್ತಮುತ್ತ ಬೆಳೆಸಬಹುದಾದ ಸಹ ಕೆಲ ಗಿಡ ಮರಗಳಿವೆ ಅದನ್ನ ಬೆಳೆಸಿಕೊಂಡರೆ ನಮ್ಮ ಆರ್ಥಿಕ ಪರಿಸ್ಥಿತಿಗೂ ಉತ್ತಮವಾಗುತ್ತದೆ ಜೊತೆಗೆ ಕೆಲವೊಂದು ಉಪಯೋಗಗಳು ಕೂಡ ಕೆಲವೊಂದು ಮರಗಳನ್ನು ಬೆಳೆಸುವುದರಿಂದ ಆಗುವುದರ ಜೊತೆಗೆ ಮನೆಗೆ ಸಕಾರಾತ್ಮಕ ಶಕ್ತಿಯು ಕೂಡ ಉಂಟಾಗುತ್ತದೆ. ಹೌದು ನಾವು ಮಾತನಾಡುತ್ತಿರುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವಂತಹ ವೃಕ್ಷದ ಕುರಿತು ಅವರು ಕಲ್ಪವೃಕ್ಷದ ಕುರಿತು ಮಾತನಾಡುತ್ತಿದ್ದೇವೆ ಕಲ್ಪವೃಕ್ಷದ ಪ್ರಯೋಜನಗಳ ಬಗ್ಗೆ ಹೇಳುವುದೇ ಬೇಡ ಇದು ಸಾಮಾನ್ಯ ಜನರಿಗೂ ಕೂಡ ತಿಳಿದಿರುತ್ತದೆ.

ಹೌದು ನಮ್ಮ ಸಂಪ್ರದಾಯದಲ್ಲಿ ಹಾಗೂ ಹಳ್ಳಿ ಕಡೆಯಲ್ಲಿಯೂ ಇವತ್ತಿಗೂ ಕಲ್ಪವೃಕ್ಷಕ್ಕೆ ಪೂಜೆ ಮಾಡುವುದುಂಟು ಕಲ್ಪವೃಕ್ಷದಿಂದ ಎಷ್ಟೊಂದು ಪ್ರಯೋಜನಗಳಿವೆ ಇದರ ಗರಿ ಪ್ರಯೋಜನಗಳು ಅಪಾರ ಮತ್ತು ತೆಂಗಿನಕಾಯಿ ಎಳನೀರು ಇವೆಲ್ಲವೂ ಬಹುಪ್ರಯೋಜನಕಾರಿ. ಅಷ್ಟೇ ಅಲ್ಲ ಈ ಮರದ ತೊಗಟೆಗಳು ಕೂಡ ಸೌದೆಯಾಗಿ ಗೊಬ್ಬರವಾಗಿ ಪ್ರಯೋಜನಕಾರಿಯಾಗಿರುತ್ತದೆ. ಇಷ್ಟೆಲ್ಲ ಪ್ರಯೋಜನಗಳಿರುವ ಕಲ್ಪವೃಕ್ಷವನ್ನು ಮನೆಯ ಸುತ್ತಮುತ್ತ ಬೆಳೆಸಿಕೊಳ್ಳುವುದರಿಂದ ಅಥವಾ ಮನೆಯ ಹಿತ್ತಲಿನಲ್ಲಿ ಜಾಗ ಇದ್ದರೆ ನೀವು ಬೆಳೆಸಿಕೊಳ್ಳಬಹುದು.

ಆದರೆ ಈ ಕಲ್ಪವೃಕ್ಷವನ್ನು ನೀವು ಮನೆಯ ಸುತ್ತಮುತ್ತ ಅಥವಾ ಮನೆ ಹಿತ್ತಲಿನಲ್ಲಿ ಬೆಳೆಸಬೇಕೆಂದರೆ ಉತ್ತಮ ಗುಣಮಟ್ಟದ ಉತ್ತಮ ಫಲ ನೀಡುವ ತೆಂಗಿನ ಬೀಜವನ್ನು ತಂದು ನಾಟಿ ಮಾಡಬೇಕಿರುತ್ತದೆ. ಅಷ್ಟೇ ಅಲ್ಲ ಉತ್ತಮ ಗುಣಮಟ್ಟದ ಬೀಜವನ್ನು ನಾಟಿ ಮಾಡಿದರೆ ಸಾಲದು ಇದಕ್ಕೂ ಕೂಡ ವಾರಕ್ಕೊಮ್ಮೆ ನೀರು ಹಾಯಿಸಬೇಕು ಅಷ್ಟೇ ಅಲ್ಲ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹೌದು ನೀರನ ಸುಮ್ಮನೆ ಹಾಕುವುದಲ್ಲ ನೀರು ಬುಡದಲ್ಲಿ ನಿಲ್ಲಬಾರದು ಹರಿದು ಭೂಮಿಗೆ ಸೇರಬೇಕು ಆ ರೀತಿ ತೆಂಗಿನ ಮರದ ಸುತ್ತ ವ್ಯವಸ್ಥೆ ಮಾಡಬೇಕು.

ಇಷ್ಟೆಲ್ಲಾ ಮಾಡುವುದರ ಜೊತೆಗೆ ಮತ್ತೊಂದು ಮಾಹಿತಿಯನ್ನ ಮತ್ತಷ್ಟು ಉತ್ತಮ ವಿಚಾರಗಳನ್ನು ಈ ಕಲ್ಪವೃಕ್ಷ ಕುರಿತು ತಿಳಿಯಬೇಕು ಹೆಚ್ಚು ಇಳುವರಿ ಬರಬೇಕೆಂದರೆ ಹೆಚ್ಚು ಕಾಯಿ ಫಲ ನೀಡಬೇಕೆಂದರೆ ಇದಕ್ಕಾಗಿ ನೀವು ಕೆಲವೊಂದು ಕೆಲಸಗಳನ್ನು ಮಾಡಲೇ ಬೇಕಿರುತ್ತದೆ.ಹೌದು ತೆಂಗಿನಕಾಯಿಯ ಬೀಜವನ್ನು ತಂದು ನಾಟಿ ಮಾಡ್ತೀರಾ ಇದು ತಕ್ಷಣಕ್ಕೆ ಕಾಯಿ ಫಲ ನೀಡೋದಿಲ್ಲ ಸ್ವಲ್ಪ ದಿವಸಗಳ ಬಳಿಕ ಅಂದರೆ ಒಂದೆರಡು ವರ್ಷ ಕಳೆಯಬೇಕು ಬಳಿಕ ಕಾಯಿ ಫಲ ನೀಡುತ್ತದೆ ಆದರೆ ತೆಂಗಿನ ಸಸಿ ಬೆಳೆಯುವಾಗ ಇದಕ್ಕೆ ನೀವು ಗೊಬ್ಬರವನ್ನು ನೀಡುತ್ತಾರೆ ಬೇಕು ವಾರಕ್ಕೊಮ್ಮೆ ನೀರು ಹಾಕುತ್ತಾ ಇರಬೇಕು

ಇದರ ಜೊತೆಗೆ ತೆಂಗಿನ ಸಸಿ ಬೆಳೆದು ನಿಂತಾಗ ಇದು 3 ವರ್ಷದ ಗಿಡ ಆಗಿದ್ದರೆ ಮೂರರಿಂದ ನಾಲ್ಕು ಅಡಿ ಗುಂಡಿಯನ್ನು ಮಾಡಿ ಮಣ್ಣನ್ನು ಸಡಲಿಸಿ ಮತ್ತೆ ಮಣ್ಣನ್ನು ಮುಚ್ಚಬೇಕು. ಈ ರೀತಿ ಮಾಡುವುದರಿಂದ ಏನಾಗುತ್ತದೆಯೆಂದರೆ ಗಾಳಿ ಬೆಳಕು ನೀರು ಚೆನ್ನಾಗಿ ಬೇರಿಗೆ ಸಿಗುವುದರಿಂದ ತೆಂಗಿನ ಮರ ಚೆನ್ನಾಗಿ ಬೆಳೆಯುತ್ತದೆ ಫಲ ಕೂಡ ಚೆನ್ನಾಗಿ ಸಿಗುತ್ತದೆ.ಹೌದು ಈ ರೀತಿ ಆಗಾಗ ಮಣ್ಣನ್ನು ಸಡಿಲಿಸುತ್ತಿರಬೇಕು ಎಷ್ಟು ತಿಂಗಳಿಗೊಮ್ಮೆ ಅಂದರೆ, ತಿಂಗಳಿಗೊಮ್ಮೆ ಮಾಡಿದರೂ ಉತ್ತಮ ಇಲ್ಲವಾದಲ್ಲಿ 2ತಿಂಗಳಿಗೊಮ್ಮೆ ಮಾಡಬಹುದು ಆದರೆ ವಾರಕ್ಕೊಮ್ಮೆ ನೀರನ್ನು ಹಾಕುವುದನ್ನು ಮರೆಯಬಾರದು

ಹಾಗೆ ಗೊಬ್ಬರವನ್ನು ಮರದ ಬುಡಕ್ಕೆ ಹಾಕುತ್ತಾ ಇರಬೇಕು. ಈ ರೀತಿ ಮಾಡುವುದರಿಂದ ತೆಂಗಿನ ಫಲ ಚೆನ್ನಾಗಿ ನೀಡುತ್ತದೆ ಇದರ ಜತೆಗೆ ಮಣ್ಣನ್ನು ಸಡಿಲ ಮಾಡುವಾಗ ಇದಕ್ಕೆ ಅಡುಗೆಗೆ ಬಳಸುವ ಉಪ್ಪನ್ನು ಹಾಕ್ತಾರೆ. ಇದರಿಂದ ತೇವಾಂಶ ಮಣ್ಣಿನಲ್ಲಿ ಚೆನ್ನಾಗಿ ಉಳಿಯುತ್ತದೆ ಎಂಬ ಕಾರಣಕ್ಕೆ ಈ ಪರಿಹಾರವನ್ನು ಪಾಲಿಸುತ್ತಾರೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.