ನೀವು ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದೀರಾ ಹಾಗಾದ್ರೆ ನಿಮ್ಮ ಸ್ವಭಾವ ಹೀಗೆ ಇರುತ್ತೆ ಅದನ್ನು ಯಾರು ಬದಲಿಸಲು ಸಾಧ್ಯವಿಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ರೋಹಿಣಿ ನಕ್ಷತ್ರದವರ ಗುಣ ಸ್ವಭಾವ ಹಾಗೂ ಇವರ ಲೈಫ್ ಸ್ಟೈಲ್ ಹೇಗೆ ಇರುತ್ತದೆ ಎಂದು ನೋಡಿ.ಹಾಯ್ ಸ್ನೇಹಿತರೆ ನೀವು ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದರೆ ಈ ಒಂದು ಗುಣ ಸ್ವಭಾವ ನಿಮ್ಮಲ್ಲಿ ಇದೆ ಎಂದು ತಿಳಿದುಕೊಳ್ಳಿ ನಿಮ್ಮ ಕುಟುಂಬದವರಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ರೋಹಿಣಿ ನಕ್ಷತ್ರದವರು ಆಗಿದ್ದರೆ ಈ ಮಾಹಿತಿಯನ್ನು ತಿಳಿಸಿ.ಈ ನಕ್ಷತ್ರವನ್ನು ಧಾರ್ಮಿಕ ಗ್ರಂಥಗಳಲ್ಲಿ ಪ್ರಮುಖ ನಕ್ಷತ್ರವೆಂದು ಪರಿಗಣಿಸಲಾಗಿದೆ. ಶ್ರೀಕೃಷ್ಣನು ಈ ನಕ್ಷತ್ರದಲ್ಲಿ ಜನಿಸಿದನು ಎಂದು ಪುರಾಣಗಳು ಹೇಳುತ್ತವೆ.

ರೋಹಿಣಿ ಎಂದರೆ ಕೆಂಪು.ರೋಹಿಣಿ ನಕ್ಷತ್ರದವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ ಇವರು ಬಯಸಿದ್ದೆಲ್ಲ ಸಿಗುವಂತೆ ಆಶೀರ್ವಾದ ಇರುತ್ತದೆ.ಈ ನಕ್ಷತ್ರದಲ್ಲಿ ಜನಿಸಿದವರ ರಾಶಿಯು ವೃಷಭವಾಗಿರುತ್ತದೆ. ಈ ರಾಶಿಯವರನ್ನು ಶುಕ್ರನು ಆಳುತ್ತಿರುತ್ತಾನೆ. ಜೊತೆಗೆ ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರನಾಗಿರುತ್ತಾನೆ.ಈ ನಕ್ಷತ್ರವು ನಾಲ್ಕು ಪಾದಗಳನ್ನು ಹೊಂದಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಸುಖ ದುಃಖಗಳನ್ನು ಸಮಾನವಾಗಿ ಅನುಭವಿಸುತ್ತಾರೆ
ಒಟ್ಟು ನಕ್ಷತ್ರಗಳಲ್ಲಿ ನಾಲ್ಕನೆಯ ನಕ್ಷತ್ರ ರೋಹಿಣಿ ನಕ್ಷತ್ರವಾಗಿದೆ.

ಈ ನಕ್ಷತ್ರದ ಅಧಿಪತಿ ದೇವರು ಚಂದ್ರ ದೇವನಾಗಿದ್ದಾನೆ. ಚಂದ್ರ ಗ್ರಹಣದ ಪ್ರಭಾವದಿಂದ ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾರೆ ಮತ್ತು ರೊಮ್ಯಾಂಟಿಕ್ ಆಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರದ್ದು ಚಂಚಲ ಸ್ವಭಾವವಾಗಿರುತ್ತದೆ. ಹಾಗಾಗಿ ಯಾವುದೇ ವಿಷಯಗಳನ್ನು ನಿರ್ಧಾರ ಮಾಡಿದರೂ ಅದಕ್ಕೆ ಬದ್ಧರಾಗಿರುವುದಿಲ್ಲ. ಜೀವನದಲ್ಲಿ ಎಲ್ಲ ಸುಖ ಸಮೃದ್ಧಿಗಳನ್ನು ಪಡೆಯಲು ಬಯಸುತ್ತಾರೆ. ವಿರುದ್ಧ ಲಿಂಗಿಗಳ ಬಗ್ಗೆ ವಿಶೇಷ ಆಕರ್ಷಣೆ ಇವರಿಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಯಾವಾಗಲೂ ಬೇರೆಯವರ ತಪ್ಪುಗಳನ್ನು ಕಂಡುಹಿಡಿಯುತ್ತಿರುತ್ತಾರೆ.

ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸಲು ಯಾವುದೇ ಅವಕಾಶ ಸಿಕ್ಕರೂ ಅದನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಲಾಗುತ್ತದೆ.ಈ ನಕ್ಷತ್ರದವರು ತೆಳ್ಳಗಿನ ದೇಹಾಕೃತಿ ಹೊಂದಿರುತ್ತಾರೆ. ಹಾಗಾಗಿ ಸಣ್ಣ ಹವಾಮಾನ ಬದಲಾವಣೆಯಾದರೂ ಇವರ ಆರೋಗ್ಯ ಹದಗೆಡುತ್ತದೆ. ಜನ್ಮಕುಂಡಲಿಯನ್ನು ನೋಡಿದರೆ ಈ ನಕ್ಷತ್ರದಲ್ಲಿ ಜನಿಸಿದವರು ಮೃದು ಸ್ವಭಾವದವರಾಗಿರುತ್ತಾರೆ. ಸೌಂದರ್ಯಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ.ಚಂದ್ರನು ರೋಹಿಣಿ ನಕ್ಷತ್ರದ ಅಧಿಪತಿ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದವರು ಮುಖ್ಯವಾಗಿ ಮಹಿಳೆಯರೊಂದಿಗೆ ಬೇಗನೆ ಬೆರೆಯುತ್ತಾರೆ. ಸಭ್ಯರಾಗಿರಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ಕೆಲಸದಲ್ಲಿ ತಮ್ಮನ್ನು ಶಿಸ್ತುಬದ್ಧವಾಗಿರಿಸಿಕೊಳ್ಳುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರ ಕುಟುಂಬವು ಶಾಂತಿಯುತವಾಗಿರುತ್ತದೆ. ಅವರು ಐಷಾರಾಮಿ ಜೀವನ ನಡೆಸುತ್ತಾರೆ ಹಾಗೂ ಜನಪ್ರಿಯರೂ ಆಗಿರುತ್ತಾರೆ.ತಂದೆಗೆ ಹೋಲಿಸಿದರೆ ಅವರು ತಾಯಿಗೆ ಹೆಚ್ಚು ಆಪ್ತರಾಗಿದ್ದು, ಎಲ್ಲವನ್ನೂ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ವಿವಾಹವಾದ ನಂತರ ಪತಿ ಏನೇ ಹೇಳಿದರೂ ಅದಕ್ಕೆ ಸರಿ ಎನ್ನುವ ಸ್ವಭಾವದವರೂ ಕೂಡ ಹೌದು.ಜ್ಯೋತಿಷ್ಯ ಗ್ರಂಥಗಳ ಪ್ರಕಾರ ಈ ನಕ್ಷತ್ರದಲ್ಲಿ ಜನಿಸಿದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಜೀವಶಾಸ್ತ್ರ, ವಿಜ್ಞಾನ, ಔಷಧ, ಕಲೆ, ಸಂಗೀತ, ಮನೋರಂಜನೆ, ಸೌಂದರ್ಯ, ಸೌಂದರ್ಯ ವರ್ಧಕ, ಕೃಷಿ, ತೋಟಗಾರಿಕೆ, ಆಹಾರ ತಂತ್ರಜ್ಞಾನ, ಲೈಂಗಿಕ ಚಿಕಿತ್ಸೆ, ಹರಳುಗಳು, ಇಂಟೀರಿಯರ್ ಡೆಕೋರೇಷನ್, ಟ್ರಾನ್ಸ್ಪೋರ್ಟ್, ಪ್ರವಾಸ, ವಾಹನ, ಎಣ್ಣೆ ಮತ್ತು ಪೆಟ್ರೋಲಿಯಂ, ಜವಳಿ, ಹಡಗು, ಪ್ಯಾಕೇಜ್ ಮತ್ತು ದ್ರವ ಪದಾರ್ಥಗಳ ಮಾರಾಟದಲ್ಲಿ ಪ್ರಗತಿ ಕಾಣುತ್ತಾರೆ.

ಇನ್ನು ಇವರ ಆರೋಗ್ಯದ ವಿಷಯಕ್ಕೆ ಬಂದರೆ ಇವರು ತುಂಬಾ ವ್ಯಾಯಾಮವನ್ನು ಮಾಡಬೇಕು ಊಟಕ್ಕೆ ತಕ್ಕಂತೆ ವ್ಯಾಯಮ ಮಾಡುವುದರಿಂದ ಇವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಇವರ ದಾಂಪತ್ಯ ಜೀವನದಲ್ಲಿ ತುಂಬಾ ಕಲಹಗಳು ಇರುತ್ತವೆ ಇದರಿಂದಾಗಿ ಇವರ ಜೀವನದಲ್ಲಿ ನೆಮ್ಮದಿ ಸ್ವಲ್ಪ ಕಡಿಮೆ ಇರುತ್ತದೆ ಸಂದೇಹವನ್ನು ಪಟ್ಟು ದಾಂಪತ್ಯ ಮುರಿದುಹೋಗುವ ಸಾಧ್ಯತೆ ಇರುತ್ತದೆ ತುಂಬಾ ಸಂದೇಹವನ್ನು ಪಡಬಾರದು ಇದಕ್ಕಾಗಿ ನೀವು ಮಾಡಬೇಕಾಗಿರುವುದು ಏನೆಂದರೆ

ವೃದ್ಧರಿಗೆ ಬಡವರಿಗೆ ಊಟವನ್ನು ನೀಡುವುದು ಅನಾಥಾಶ್ರಮಕ್ಕೆ ಹೋಗಿ ಊಟವನ್ನು ದಾನ ಕೊಡಬೇಕು ಹೀಗೆ ಮಾಡುವುದರಿಂದ ನಿಮಗೆ ಪರಿಹಾರ ಸಿಗುವುದು. ದೇವಿ ಪಾರ್ವತಿಯನ್ನು ಆರಾಧಿಸುವುದರಿಂದ ನಿಮಗೆ ತುಂಬಾ ಒಳ್ಳೆಯ ಆಶೀರ್ವಾದ ಸಿಗುತ್ತದೆ ಬನಶಂಕರಿದೇವಿ ಯಾವುದಾದರೂ ಹೆಣ್ಣು ದೇವಿಯ ಪೂಜೆಯನ್ನು ಪ್ರತಿನಿತ್ಯ ಮಾಡಬೇಕು. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಎಲ್ಲರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.