ಪ್ರತೀ ವರ್ಷ ಸುಧಾಮೂರ್ತಿ ಅಮ್ಮನವರು ತಮ್ಮ ಹುಟ್ಟಿದ ಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತಾರೆ ಗೊತ್ತ …ಇವರನ್ನು ನೋಡಿ ಕಲಿಯೋದು ಬಹಳಷ್ಟು ಇದೆ ಕಣ್ರೀ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರಗಳು ಪ್ರಿಯ ಓದುಗರೆ ಕನ್ನಡ ಜನತೆಗೆ ಇವರೆಲ್ಲರ ಬಹಳ ಅಚ್ಚುಮೆಚ್ಚು ಇವರು ಮಾಡುವ ಸಹಾಯ ಮಾಡಿದ ಸಹಾಯ ಯಾರ ಬಳಿಯೂ ಹೇಳಿಕೊಳ್ಳದೆ ಸರಳತೆಯಲ್ಲಿ ಸರಳರಾಗಿ ಜೀವನ ನಡೆಸುತ್ತಿರುವ ಇವರು ನಮ್ಮ ಕರುನಾಡ ಅಮ್ಮ ಅಂತಾನೇ ಕರೆಸಿಕೊಂಡಿದ್ದಾರೆ ಹೌದು ಕಷ್ಟ ಎಂದರೆ ಮೊದಲು ಮುಂದಿರುವ ಇವರು ಇಲ್ಲಿಯವರೆಗೂ ಸಾಕಷ್ಟು ಜನರಿಗೆ ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ. ಹೌದು ಈಗಾಗಲೇ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ತಿಳಿದಿರಬಹುದು

ಅವರೆ ಸುಧಾಮೂರ್ತಿ ಸುಧಾಮೂರ್ತಿ ಅವರ ಕನ್ನಡ ಜನತೆಗೆ ಅಚ್ಚು ಮೆಚ್ಚಿನ ಅಮ್ಮ ಇವರು ಸಮಾಜಕ್ಕೆ ಮಾದರಿ ಇವರ ಬಗ್ಗೆ ಹೇಳುತ್ತಾ ಹೋದರೆ ಬಹಳಷ್ಟು ಇವೆ ಇವರನ್ನು ಹೊಗಳಲು ಮಾತುಗಳು ಕೂಡ ಸಿಗೋದಿಲ್ಲ. ಯಾಕೆ ಅಂತೀರಾ ಹೌದು ಸುಧಾಮೂರ್ತಿ ಅಮ್ಮನವರು ಕರುನಾಡಲ್ಲಿ ಏನೆ ಕಷ್ಟ ಇದ್ದರೂ, ಕಷ್ಟದ ಪರಿಸ್ಥಿತಿ ಇದ್ದರೂ ದೊಡ್ಡ ದೊಡ್ಡ ಅಧಿಕಾರಿಗಳು ಸಹಾಯಕ್ಕೆ ಬರ್ತಾರೊ ಇಲ್ವೋ ಖಂಡಿತವಾಗಿಯೂ ಬಡಮಕ್ಕಳು ನಿರ್ಗತಿಕರಿಗಾಗಿ ಕಷ್ಟದಲ್ಲಿರುವವರಿಗಾಗಿ ಅನಾಥರಿಗಾಗಿ ಸುಧಾಮೂರ್ತಿಯವರು ಸದಾ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ.

ಇದೀಗ ತಮ್ಮ ಜನುಮದಿನವನ್ನ ಸುಧಾಮೂರ್ತಿ ಅಮ್ಮನವರು ಯಾವ ರೀತಿ ಆಚರಣೆ ಮಾಡಿಕೊಂಡಿದ್ದಾರೆ ಅಂತ ತಿಳಿದರೆ ನೀವು ಕೂಡ ಇವರಿಗೆ ಇವರ ಈ ಗುಣಕ್ಕೆ ಕೈ ಎತ್ತಿ ಮುಗಿಯೋಣ ಹೌದು ಸಾಮಾನ್ಯವಾಗಿ ಜನ್ಮದಿನ ಅಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿಶೇಷವಾದ ದಿನವಾಗಿರುತ್ತದೆ ಈ ದಿನವನ್ನು ಎಷ್ಟೇ ಕಷ್ಟ ಇದ್ದವರು ಕೂಡ ತಮಗೆ ಇಷ್ಟ ಇರುವಂತೆ ಆಚರಣೆ ಮಾಡಿಕೊಳ್ತಾರಾ ಹಾಗೆ ಸುಧಾಮೂರ್ತಿ ಅಮ್ಮನವರು ಕೂಡ ತಮಗೆ ಮನಸ್ಸಿಗೆ ಸಂತಸವಾಗುವಂತೆ ತಮಗೆ ಇಷ್ಟ ಆಗುವಂತೆ ತಮ್ಮ ಜನುಮದಿನವನ್ನ ಆಚರಣೆ ಮಾಡಿಕೊಂಡಿದ್ದಾರೆ ಸ್ನೇಹಿತರೆ.

ದೊಡ್ಡ ದೊಡ್ಡ ಮಂದಿ ತಮ್ಮ ಜನುಮದಿನವನ್ನ ತಮ್ಮ ಕುಟುಂಬದವರ ಜೊತೆ ಅಥವಾ ತಮ್ಮ ಆತ್ಮೀಯರ ಜೊತೆ ಕೇಕ್ ಕಟ್ ಮಾಡುವ ಮೂಲಕ ಅಥವಾ ಇನ್ನೂ ಬೇರೆ ಬೇರೆ ರೀತಿಯಲ್ಲಿ ಆಚರಣೆ ಮಾಡಿ ಮಾಡಿಕೊಳ್ಳುತ್ತಾರೆ ಇನ್ನೂ ಕೆಲವರಂತೂ ತಮ್ಮ ಪ್ರತಿಷ್ಠೆಯನ್ನು ತೋರಿಸಿಕೊಳ್ಳಬೇಕು ಅಂತಾನೆ ಬರ್ತಡೆಯನ್ನು ಕೂಡ ಜೋರಾಗಿ ಆಚರಣೆ ಮಾಡಿ ಕೊಡ್ತಾರೆ ಆದರೆ ಮೂರ್ತಿ ಅಮ್ಮನವರು ಯಾರಿಗೂ ಗೊತ್ತಿಲ್ಲದಿರುವ ಹಾಗೆಯೇ ತಮ್ಮ ಜನ್ಮದಿನವನ್ನ ಆಚರಣೆ ಮಾಡಿಕೊಂಡಿರುವುದು ಹೇಗೆ

ಅಂದರೆ ಬಡವರಿಗೆ ನಿರ್ಗತಿಕರಿಗೆ ಮತ್ತು ಅನಾಥ ಮಕ್ಕಳಿಗೆ ತಮ್ಮ ಕಂಪನಿಯ ಶೇರ್ ನಲ್ಲಿ ಸುಮಾರು 50 ಪ್ರತಿಶತದಷ್ಟು ಹಣವನ್ನು ಬಡವರ ಸಹಾಯಕ್ಕಾಗಿ ಮೀಸಲಿಡುವ ಮೂಲಕ ತಮ್ಮ ಜನ್ಮದಿನದಂದು ಬಡಮಕ್ಕಳಿಗೆ ಅನಾಥ ಮಕ್ಕಳಿಗೆ ಬಟ್ಟೆ ಬರೆಯನ್ನು ಊಟವನ್ನು ನೀಡುವ ಮೂಲಕ ಮತ್ತು ಅವರ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ತಾವು ವಹಿಸಿಕೊಳ್ಳುವ ಮೂಲಕ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ ಸುಧಾಮೂರ್ತಿ ಅವರು.

ಈ ದಿನದಂದು ಎಷ್ಟೋ ಜನರು ಇನ್ನೂ ದೊಡ್ಡ ದೊಡ್ಡ ಮಂದಿ ಸೆಲೆಬ್ರಿಟಿಗಳು ಲಕ್ಷ ಲಕ್ಷ ಖರ್ಚು ಮಾಡಿ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ತಾರೆ. ಆದರೆ ಸರಳವಾಗಿ ಯಾರಿಗೂ ತಿಳಿಯದಿರುವ ಹಾಗೆ ಸುಧಾಮೂರ್ತಿ ಅಮ್ಮನವರು ಮಾಡಿರುವ ಈ ಕೆಲಸಕ್ಕೆ ನಿಜಕ್ಕೂ ಕೈಯೆತ್ತಿ ಮುಗಿಯಲೇಬೇಕು. ಹಾಗಾದರೆ ಸುಧಾಮೂರ್ತಿ ಅಮ್ಮನವರ ಹಾಗೆ ನೀವೂ ಕೂಡ ನಿಮ್ಮ ಜನ್ಮದಿನವನ್ನ ಆಚರಣೆ ಮಾಡಿಕೊಳ್ಳಬೇಕೋ ಅಂದಲ್ಲಿ ನಿಮಗೂ ಕೂಡ ಹೀಗೆ ಅನಿಸಿದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ

ಮತ್ತು ಜನ್ಮದಿನದಂದು ದೊಡ್ಡ ದೊಡ್ಡ ಕೆಲಸ ಮಾಡುವುದು ಬೇಡ ನಮ್ಮ ಕೈಲಾದ ಸಹಾಯವನ್ನ ಒಬ್ಬರಿಗೆ ಇಬ್ಬರಿಗೆ ಮಾಡಿದರೆ ಅದು ದೊಡ್ಡ ಕೆಲಸವೇ ದೊಡ್ಡ ಸಾಧನೆಯೆ. ಯಾಕೆ ಅಂದರೆ ನಾವು ಮಾಡುವ ಚಿಕ್ಕ ಚಿಕ್ಕ ಕೆಲಸಗಳನ್ನು ಮನಸ್ಫೂರ್ತಿಯಾಗಿ ಮಾಡಿದರೆ ಅದು ನಮಗೆ ಸಾಧನೆಯಂತೆ ಪರಿಣಮಿಸುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.