ಪ್ರಪಂಚದಲ್ಲಿ ಅತೀ ದುಬಾರಿಯಾದ ಮುತ್ತು ಇದೆ ನೋಡಿ ಅಷ್ಟಕ್ಕೂ ಇದರ ಬೆಲೆ ಎಷ್ಟು ಅಂತ ನಿಮಗೆ ಗೊತ್ತಾದ್ರೆ ನಿಮಗೆ ತಲೆ ತಿರುಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪ್ರಪಂಚದಲ್ಲಿ ಅತಿ ದೊಡ್ಡ ಮುತ್ತು ಇದಾಗಿದೆ ಇದರ ಬೆಲೆ ಎಷ್ಟು ತಿಳಿದರೆ ನೀವು ಶಾಕ್ ಆಗುತ್ತೀರಾ ಈ ಒಂದು ಮುತ್ತಿನ ಕಥೆಯನ್ನು ನೀವು ಓದಿ.
ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಒಂದು ಮುತ್ತಿನ ಕಥೆ ಹೇಳುತ್ತೇನೆ ಇದು ಹೇಗೆ ಇದೆ ಎಷ್ಟು ಗಾತ್ರ ಹೊಂದಿದೆ ಮತ್ತು ಇದರ ಬೆಲೆ ಎಷ್ಟು ಎಂದು ನೋಡಿ. ಮುತ್ತು ಹವಳ ರತ್ನ ಬಂಗಾರ ಇವೆಲ್ಲಾ ಎಲ್ಲರಿಗೂ ತುಂಬಾ ಇಷ್ಟ ಇವುಗಳು ಸಿಗುವುದು ಸಮುದ್ರದಲ್ಲಿ ಹಾಗಾದರೆ ಈ ಮುತ್ತು ಹೇಗೆ ಸಿಕ್ಕಿತು ಎಂದು ತಿಳಿಯೋಣ.

ಮುತ್ತಿನಸರ ಎಂದರೆ ಎಲ್ಲರೂ ತುಂಬಾ ಇಷ್ಟ ಪಡುವ ವಸ್ತುವಾಗಿದೆ ಇದನ್ನು ಹಾಕಿಕೊಂಡರೆ ಮಹಿಳೆಯರು ತುಂಬಾ ಲಕ್ಷಣವಾಗಿ ಕಾಣಿಸುತ್ತಾರೆ ಕೆಲವೊಬ್ಬರು ಮುತ್ತಿನ ಸರ ಇಲ್ಲದೆ ಯಾವುದೇ ಶುಭಕಾರ್ಯವನ್ನು ಮಾಡುವುದಿಲ್ಲ ಸೀರೆಗೆ ತಕ್ಕ ಮುತ್ತಿನ ಹಾರವನ್ನು ಮಾಡಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಮುತ್ತುಗಳು ಒಂದು ನೆಲ್ಲಿಕಾಯಿಯ ಗಾತ್ರದಷ್ಟು ಇರಬಹುದು ಆದರೆ ಈ ಮುತ್ತು 2 ಅಡಿ ಇದೆ. ಈಗಿನ ಮಧ್ಯಕಾಲದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಅಷ್ಟೇ ಅಲ್ಲದೆ ಪ್ರಪಂಚದಲ್ಲಿ ಅತಿ ದೊಡ್ಡದಾದ ಮುತ್ತು ಇದಾಗಿದೆ.

ಈ ಮುತ್ತು ಹೇಗೆ ಸಿಕ್ಕಿತು ಎಂದರೆ ಒಬ್ಬ ಮೀನುಗಾರ ಮೀನನ್ನು ಹಿಡಿಯಲು ಸಮುದ್ರಕ್ಕೆ ಹೋಗಿರುತ್ತಾನೆ ಆಗ ಮೀನು ಹಿಡಿಯಲು ದೋಣಿಯನ್ನು ನಿಲ್ಲಿಸಲು ಲಂಗರನ್ನು ನೀರಿಗೆ ಹಾಕುತ್ತಾನೆ ಅದನ್ನು ಸ್ವಲ್ಪ ಸಮಯದ ಬಳಿಕ ಎತ್ತಲು ಪ್ರಯತ್ನಿಸುತ್ತಾನೆ ಆದರೆ ಅದು ಎಳೆದುಕೊಳ್ಳುವಾಗ ತುಂಬಾ ಭಾರವೆನಿಸುತ್ತದೆ. ತುಂಬಾ ಪ್ರಯತ್ನಪಟ್ಟು ಅವನ ಶಕ್ತಿಮೀರಿ ಅದನ್ನು ಮೇಲೆ ಎತ್ತಿದಾಗ ಅದರೊಳಗೆ ದೊಡ್ಡಗಾತ್ರದ ಮುತ್ತಿನ ಚಿಪ್ಪು ಇರುತ್ತದೆ. ಇಂತಹ ಮುತ್ತನ್ನು ಅವನು ತನ್ನ ಜೀವನದಲ್ಲಿ ನೋಡಿರುವುದಿಲ್ಲ ಹಾಗೂ ಅವನಿಗೆ ಅದರೊಳಗೆ ಮುತ್ತು ಇದೆ ಎಂಬ ಅರಿವು ಕೂಡ ಇರಲಿಲ್ಲ ಇದು ಯಾವುದೋ ಒಂದು ಸಮುದ್ರದ ಒಳಗೆ ಇರುವ ಜೀವರಾಶಿ ಎಂದು ಸಂದೇಹ ಪಟ್ಟನು. ಒಂದು ದಿನ ಮುತ್ತಿನ ಚಿಪ್ಪನ್ನು ಒಡೆದನು.

ಆಗ ಅದರಲ್ಲಿ ಪಳಪಳನೆ ಹೊಳೆಯುವ ಒಂದು ಮುತ್ತು ಇತ್ತು ಆಗ ಅವನು ದಿನಾ ರಾತ್ರಿ ಮಲಗುವಾಗ ಅದನ್ನು ಹತ್ತಿರದಲ್ಲೇ ಇಟ್ಟುಕೊಂಡು ಮಲಗುತ್ತಿದ್ದನು ಬೆಳಗ್ಗೆ ಎದ್ದ ತಕ್ಷಣ ಆ ಮುತ್ತನ್ನು ನೋಡುತ್ತಿದ್ದನು ಹೀಗೆ ಹತ್ತು ವರ್ಷ ಕಳೆದು ಹೋಯಿತು. ಒಂದು ದಿನ ಅವನ ಮನೆಗೆ ಅಚಾನಕವಾಗಿ ಬೆಂಕಿ ಹತ್ತಿತ್ತು ಆಗವನು ಮನೆಯಲ್ಲಿರುವ ತುಂಬಾ ಬೆಲೆಬಾಳುವ ವಸ್ತುಗಳನ್ನು ಹೊರ ತರುತ್ತಿದ್ದನು ಆಗ ಅವನು ಈ ಮುತ್ತನ್ನು ಕೊಡ ಹೊರಗೆ ತಂದನು. ಆಗ ಅಲ್ಲಿರುವ ಜನರಿಗೆ ಈ ಮುತ್ತಿನ ಬಗ್ಗೆ ತಿಳಿಯಿತು ಅಲ್ಲಿನ ಸ್ಥಳೀಯ ಅಧಿಕಾರಿಗಳು ಅದನ್ನು ನೋಡಿ ಇದು ಪ್ರಪಂಚದಲ್ಲಿ ಅತಿ ದೊಡ್ಡದಾದ ಮುತ್ತು ಎಂದು ಗುರುತಿಸಿದರು.ಆಗ ಅವನಿಗೆ ತಿಳಿಯಿತು ಇದು ಕೋಟಿ ಬಾಳುವ ಮುತ್ತು ಎಂದು.

ಬೆಳಕು ಹರಿಯುವಷ್ಟರಲ್ಲಿ ಮೀನುಗಾರ ಕೋಟ್ಯಾಧಿಪತಿ ಆಗಿದ್ದ. ಪ್ರಪಂಚದಲ್ಲಿರುವ ಅತಿದೊಡ್ಡ ಮುತ್ತು ಇದು 12 ಅಂಗಳುಗಳ ಅಗಲ 26 ಅಂಗುಲಗಳಷ್ಟು ಉದ್ದವಾಗಿದೆ. ಅಂದರೆ ಇದು ಒಂದು ಟಿವಿ ಅಷ್ಟು ದೊಡ್ಡದಾಗಿ ಇರಬಹುದು. ಇದರ ಭಾರ ಸರಾಸರಿಯಾಗಿ 35 ಕೆಜಿ ಎಷ್ಟು ಇದೆ. ಫಿಲಿಫೈನ್ಸ್ ಅಲ್ಲಿ ಇದು ಒಬ್ಬ ಮೀನುಗಾರನಿಗೆ ಸಿಕ್ಕಿದೆ ಈಗ ಇದರ ಬೆಲೆ 600ಕೋಟಿ ಅಷ್ಟು ಇದೆ ಎಂದು ಹೇಳುತ್ತಾರೆ. ಫಿಲಿಪ್ಪೈನ್ಸ್ ನಲ್ಲಿ ಫಲವಾನ್ ಎಂಬ ಒಂದು ದ್ವೀಪವಿದೆ ಆ ದ್ವೀಪದಲ್ಲಿ ಈ ಮುತ್ತು ಸಿಕ್ಕಿದೆ. ಪ್ರವಾಸಕ್ಕೆ ಬಂದವರಿಗೆಲ್ಲ ಇದನ್ನು ವೀಕ್ಷಿಸಲು ಅಲ್ಲಿಯೇ ಇಡಬೇಕು ಎಂಬ ಆದೇಶ ಇದೆ.

ಈ ಮುತ್ತು ಸಿಗುವ ಮುಂಚೆ ಪರ್ಲ್ ಆಫ್ ಅಲ್ಲಾ ಎಂಬ ಮುತ್ತು ಪ್ರಪಂಚದಲ್ಲೇ ಅತೀ ದೊಡ್ಡದಾದ ಮುತ್ತಾಗಿತ್ತು. ಈ ಮುತ್ತು ಕೂಡ 1914 ರಲ್ಲಿ ಇದೇ ದ್ವೀಪದಲ್ಲಿ ಸಿಕ್ಕಿತ್ತಂತೆ. ಈ ಮುತ್ತಿನ ತೂಕ 6.4 ಕೆಜಿ ಹಾಗೂ ಇದರ ಬೆಲೆ 200 ಕೋಟಿಗಿಂತಲೂ ಹೆಚ್ಚು. ಈ ಮುತ್ತು ಅಮೆರಿಕಾದ ನ್ಯೂಯಾರ್ಕ್ನಲ್ಲಿ ಒಂದು ಮ್ಯೂಸಿಯಂನಲ್ಲಿ ಇದೆ. ನಿಮಗೆ ಗೊತ್ತೇ ಒಂದು ಚಿಕ್ಕದಾದ ಮುತ್ತು ತಯಾರಾಗಲು ಎರಡು ಮೂರು ವರ್ಷಗಳು ಬೇಕಾಗುತ್ತದೆ ಹಾಗೆ 10000 ಮುತ್ತಿನ ಚಿಪ್ಪುಗಳಲ್ಲಿ ಒಂದು ಮುತ್ತು ಇರುತ್ತದೆ. ಈ ಮುತ್ತುಗಳು ನಮಗೆ ಅಮೂಲ್ಯವಾಗಿವೆ. ಸ್ನೇಹಿತರೆ ಹಾಗಾದರೆ ಈ ಮುತ್ತಿನ ಕಥೆ ನಿಮಗೆ ಇಷ್ಟವಾಗಿದೆ ಎಂದು ನಾನು ತಿಳಿಯುತ್ತೇನೆ.

Leave a Reply

Your email address will not be published.