ನೀವೇನಾದ್ರು ಕೇವಲ ಒಂದೇ 1 ರೂಪಾಯಿಯ ಈ ಒಂದು ವಸ್ತುವನ್ನು ಖರೀದಿಸಿ ಮನೆಗೆ ತಂದು ಈ ರೀತಿ ಪೂಜೆಯನ್ನು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವಾಗ್ಲೂ ಕೂಡ ದುಡ್ಡಿನ ಸಮಸ್ಯೆ ಬರಲ್ಲ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಧನ ತ್ರಯೋದಶಿ ದಿನದಂದು ಹೀಗೆ ಮಾಡಿದರೆ ಮಹಾಲಕ್ಷ್ಮಿಯು ನಿಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ ನಿಮಗೆ ಯಾವುದೇ ಹಣಕಾಸಿನ ತೊಂದರೆ ಬರುವುದಿಲ್ಲ.ಹಾಯ್ ಸ್ನೇಹಿತರೆ ಧನ ತ್ರಯೋದಶಿ ಯಾವಾಗ ಬರುತ್ತದೆ ಎಂದು ಯೋಚಿಸುತ್ತಿದ್ದೀರಾ ದೀಪಾವಳಿಯ 2 ದಿನಗಳ ಹಿಂದೆ ಧನತ್ರಯೋದಶಿ ಇರುತ್ತದೆ ಈ ದಿನವು ಅತ್ಯಂತ ವಿಶೇಷವಾದ ದಿನವಾಗಿದೆ ಮಹಾಲಕ್ಷ್ಮಿಯು ನಮ್ಮ ಮನೆಗೆ ಬರುವ ದಿನವಾಗಿದೆ. ಹಬ್ಬ ಎಂದರೆ ನಮಗೆಲ್ಲಾ ಎಷ್ಟು ಖುಷಿ ಸಂತೋಷ ಇರುತ್ತದೆ ಅದರಲ್ಲೂ ದಸರಾ ದೀಪಾವಳಿ ಎಲ್ಲರಿಗೂ ತುಂಬಾ ಇಷ್ಟವಾದ ಹಬ್ಬಗಳು.

ದೀಪಾವಳಿ ಹಬ್ಬದಲ್ಲಿ ನಾವು ಮನೆಯಲ್ಲ ಸ್ವಚ್ಛಮಾಡಿ ಲಕ್ಷ್ಮಿ ದೇವಿಯ ಪೂಜೆ ಮಾಡಿ ಮನೆಗೆ ಹೂಗಳನ್ನು ಹಾಕಿ ಶೃಂಗರಿಸಿ ದೀಪಗಳನ್ನು ಅಂಟಿಸಿ ಸಡಗರ-ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತೇವೆ. ದೀಪಾವಳಿಯ ಹಿಂದಿನ ಎರಡು ದಿನಗಳಲ್ಲಿ ಧನತ್ರಯೋದಶಿ ಇರುತ್ತದೆ. ಈ ಹಬ್ಬವು ಮಹಾಲಕ್ಷ್ಮಿಗೆ ವಿಶೇಷವಾದ ದಿನ. ವಿಷ್ಣು ದೇವನು ಮಹಾಲಕ್ಷ್ಮಿಗೆ ಒಂದು ಶಿಕ್ಷೆಯನ್ನು ಕೊಟ್ಟಿರುತ್ತಾನೆ ಅದು ಏನೆಂದರೆ ಎಂಟು ವರ್ಷ ಲಕ್ಷ್ಮಿ ದೇವಿಗೆ ಒಬ್ಬ ರೈತನ ಮನೆಯಲ್ಲಿ ಇರಲು ಹೇಳಿರುತ್ತಾನೆ ಆಗ ಲಕ್ಷ್ಮೀದೇವಿಯು ರೈತನ ಮನೆಗೆ ಹೋಗುತ್ತಾಳೆ ರೈತನು ಲಕ್ಷ್ಮಿ ಇರುವ ಎಂಟು ವರ್ಷಗಳ ಕಾಲ ಸಮೃದ್ಧಿಯಾಗಿ ಬೆಳೆದು ಲಾಭವನ್ನು ಪಡೆಯುತ್ತಾನೆ

ಎಂಟು ವರ್ಷದ ನಂತರ ವಿಷ್ಣು ದೇವರು ಲಕ್ಷ್ಮಿಗೆ ಬರ ಹೇಳುತ್ತಾನೆ ಅಮ್ಮ ಮಹಾಲಕ್ಷ್ಮಿ ನೀನು ನಮ್ಮ ಮನೆಯಿಂದ ಹೋಗಬೇಡ ಎಂದು ಕೇಳುತ್ತಾನೆ ಆಗ ಲಕ್ಷ್ಮೀದೇವಿಯು ನಾಳೆ ಧನತ್ರಯೋದಶಿ ಇದೆ ಈ ದಿನದಂದು ನೀನು ಮನೆಯನ್ನು ಸ್ವಚ್ಛ ಮಾಡಿ ಲಕ್ಷ್ಮಿ ದೇವಿಯ ಪೂಜೆ ಮಾಡಿ ದೀಪವನ್ನು ಅಂಟಿಸಿ ನನ್ನನ್ನು ಆಹ್ವಾನಿಸಿದರೆ ಖಂಡಿತವಾಗಿಯೂ ನಾನು ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳುತ್ತಾಳೆ ಅದಕ್ಕಾಗಿಯೇ ಪ್ರತಿ ದೀಪಾವಳಿಯ ಧನತ್ರಯೋದಶಿ ದಿನದಂದು ನಾವು ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.

ಈ ದಿನದಂದು ಧನ್ವಂತರಿ ದೇವಿಗೆ ಕೊತ್ತಂಬರಿ ಸೊಪ್ಪನ್ನು ಇಟ್ಟು ಪೂಜೆಯನ್ನು ಮಾಡಬೇಕು ಹಾಗೆಯೇ ಧನತ್ರಯೋದಶಿ ದಿನ ದೇವರಿಗೆ ಅಂದರೆ ಮಹಾಲಕ್ಷ್ಮಿಗೆ ಸಕ್ಕರೆಯಿಂದ ಮಾಡಿರುವ ಬತ್ತಾಸು ನೈವೇದ್ಯ ಮಾಡಬೇಕು ಮಹಾಲಕ್ಷ್ಮಿಗೆ ಪ್ರಿಯವಾದ ಸಿಹಿತಿಂಡಿ ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯ ಕೃಪೆ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ. ಪ್ರತಿ ಧನತ್ರಯೋದಶಿ ದಿನದಂದು ದೀಪವನ್ನು ಮನೆಯ ದಕ್ಷಿಣ ದಿಕ್ಕಿಗೆ ಉರಿಯುವ ಹಾಗೆ ದೀಪ ಅಂಟಿಸಬೇಕು ಹಾಗೆ ಅದನ್ನು ತಿರುಗಿ ನೋಡದೆ ಮನೆಯೊಳಗೆ ಹೋಗಬೇಕು ಹೀಗೆ ಮಾಡುವುದರಿಂದ ಅಕಾಲ ಮರಣ ನಿಮಗೆ ಬರುವುದಿಲ್ಲ ಯಮನ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.

ಧನತ್ರಯೋದಶಿ ದಿನದಂದು ನೀವು ಮನೆಗೆ ಕುಂಕುಮವನ್ನು ಖರೀದಿಸಿದರೆ ತುಂಬಾ ಒಳ್ಳೆಯದು ಹಾಗೆಯೇ ಈ ಕುಂಕುಮವನ್ನು ಲಕ್ಷ್ಮಿ ದೇವಿಗೆ ಹಚ್ಚಬೇಕು ಮನೆಯಿಂದ ಹೊರಗೆ ಹೋಗುವಾಗ ಈ ಕುಂಕುಮವನ್ನು ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ನೀವು ಮಾಡುವ ಕೆಲಸದಲ್ಲಿ ಲಾಭ ಸಿಗುತ್ತದೆ. ಹಾಗೆ ಈ ದಿನದಂದು ಮನೆಗೆ ಕಸಬರಿಗೆಯನ್ನು ಕೊಂಡುಕೊಳ್ಳಬೇಕು ಇದು ಕೂಡ ಒಳ್ಳೆಯದು. ಲಕ್ಷ್ಮೀದೇವಿಯ ಪಾದದ ಚಿಹ್ನೆಯಿರುವ ಮೂರ್ತಿಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಇದನ್ನು ಮನೆಯ ಮುಖ್ಯದ್ವಾರಕ್ಕೆ ಹಾಕಿ ಪ್ರತಿನಿತ್ಯ ಪೂಜೆ ಮಾಡಬೇಕು ಹಾಗೆ ಇದನ್ನು ಯಾರ ಪಾದಸ್ಪರ್ಶ ತಾಕದಂತೆ ನೋಡಿಕೊಳ್ಳಬೇಕು.

ಧನತ್ರಯೋದಶಿ ದಿನ ನೀವು ದೀಪದ ಅಂಗಡಿಗೆ ಹೋಗಿ ಮೊದಲು ನೋಡಿದ ಒಂದು ದೀಪವನ್ನು 11 ರೂಪಾಯಿ ಕೊಟ್ಟು ನೀವು ಆ ದೀಪವನ್ನು ಖರೀದಿಸಿ ದಕ್ಷಿಣ ದಿಕ್ಕಿನ ಕಡೆಗೆ ಮುಖ ಮಾಡಿ ಉರಿಸಿದರೆ ಮನೆಯಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಸದಾ ಇರುತ್ತದೆ. ಈ ದಿನದಂದು ಮನೆಯನ್ನು ಸ್ವಚ್ಛ ಮಾಡಿ ಲಕ್ಷ್ಮಿ ದೇವಿಯನ್ನು ಪೂಜೆ ಮಾಡಿ ದೇವರಲ್ಲಿ ಹೀಗೆ ಪ್ರಾರ್ಥಿಸಬೇಕು ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿರುವ ಎಲ್ಲರನ್ನೂ ಸುಖವಾಗಿ ಆರೋಗ್ಯದಿಂದ ಇರಿಸು ನೀನು ನಮ್ಮ ಮನೆಯಲ್ಲಿ ಸದಾ ನೆಲೆಸು ಎಂದು ಪ್ರಾರ್ಥಿಸಬೇಕು.

ಲಕ್ಷ್ಮೀದೇವಿಯೂ ಒಂದು ಸಲ ನಿಮಗೆ ಆಶೀರ್ವದಿಸಿದರೆ ನೀವು ಸದಾ ಜೀವನದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲದೆ ಇರಬಹುದು ಪ್ರತಿವರ್ಷ ದೀಪಾವಳಿ ಹಾಗೂ ಧನತ್ರಯೋದಶಿ ದಿನದಂದು ನೀವು ಈ ರೀತಿಯಾಗಿ ಮಾಡುತ್ತಾ ಹೋದರೆ ತುಂಬಾ ಲಾಭವನ್ನು ಕಾಣುತ್ತೀರಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಧನತ್ರಯೋದಶಿ ದಿನ ದೀಪವನ್ನು ಅಂಟಿಸಿ ಲಕ್ಷ್ಮಿದೇವಿಯನ್ನು ಆಹ್ವಾನ ಮಾಡಿಕೊಳ್ಳಿ.

ಈ ಮಾಹಿತಿಯನ್ನು ಓದಿದ ಮೇಲೆ ನೀವು ನಿಮ್ಮ ಕುಟುಂಬದವರಿಗೆ ಧನತ್ರಯೋದಶಿ ಬಗ್ಗೆ ತಿಳಿಸಿ ಹಾಗೆ ಅವರಿಗೂ ಕೂಡ ದೀಪಾವಳಿಯನ್ನು ಚೆನ್ನಾಗಿ ಮಾಡಲು ತಿಳಿಸಿ. ಮಹಾಲಕ್ಷ್ಮಿಯು ನಿಮಗೆ ಕುಬೇರರಾಗುವಂತೆ ಆಶೀರ್ವದಿಸಲಿ ಎಂದು ನಾನು ಕೂಡ ಆಶಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.