ಇವತ್ತಿನ ಕಾಲ ಅದೆಷ್ಟು ಅಲ್ವಾ ಸ್ನೇಹಿತರೇ ಹೌದು ಇವತ್ತಿನ ದಿವಸ ಮದುವೆ ವಿಚಾರಕ್ಕೆ ಬಂದರೆ ಹೆಚ್ಚಿನ ಜನರು ಪ್ರೀತಿಸಿ ಮದುವೆ ಆಗುವುದಕ್ಕೆ ಇಷ್ಟ ಪಡುತ್ತಾರೆ ಯಾಕೆ ಅಂದರೆ ಪ್ರೀತಿಸಿ ಮದುವೆಯಾದರೆ ಗಂಡ ಹೆಂಡತಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ ಎಂಬ ಕಾರಣದಿಂದಾಗಿ ಆದರೆ ಹಿಂದಿನ ಕಾಲದಲ್ಲಿ ಹಾಗೆ ಇರುತ್ತ ಇರಲಿಲ್ಲ ಅರೆಂಜ್ ಮ್ಯಾರೇಜ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು ಇನ್ನು ಮದುವೆಯಾದ ನಂತರ ಹೆಣ್ಣು ತನ್ನ ತವರಿನವರನ್ನು ಬಿಟ್ಟು ಗಂಡನ ಮನೆಗೆ ಸೇರುತ್ತಾಳೆ ಮತ್ತು ಆ ಮನೆಯಲ್ಲಿ ಪರಿಚಯವೆ ಇಲ್ಲದಿರುವ ಜನರ ಬಳಿ ಹೊಂದುಕೊಂಡು ಹೋಗುವ ಪ್ರಯತ್ನ ಮಾಡುತ್ತಾ ಇರುತ್ತಾಳೆ ಅಂದಿನ ಕಾಲದಲ್ಲಿ ಹೆಣ್ಣು ಗಂಡನ ಮನೆಗೆ ಹೋದ ನಂತರ ಆಕೆಯ ಎಲ್ಲಾ ಆಸೆಗಳನ್ನು ಬದಿಗಿಟ್ಟು ಗಂಡನ ಮನೆಯ ಕೆಲಸ ಮಾಡಿಕೊಂಡು ಇರಬೇಕಾಗುತ್ತಿತ್ತು
ಆದರೆ ಇವತ್ತಿನ ದಿವಸ ಹಾಗಿಲ್ಲ ಗಂಡನ ಮನೆಗೆ ಹೋದ ನಂತರವೂ ಸಹ ಹೆಣ್ಣು ಮಕ್ಕಳು ಸಾಧನೆ ಮಾಡುವ ಉತ್ಸಾಹದಲ್ಲಿ ಇರುತ್ತಾರೆ ತಮ್ಮ ಕನಸನ್ನ ನನಸು ಮಾಡಿಕೊಳ್ಳಬೇಕು ಎಂಬ ನಿರ್ಧಾರದಲ್ಲಿ ಇರುತ್ತಾರೆ.ಹೌದು ನಾವು ಇತ್ತೀಚಿನ ದಿನಗಳಲ್ಲಿ ನೋಡುತ್ತಾ ಇದ್ದರೆ ಹೆಣ್ಣುಮಕ್ಕಳು ಮದುವೆಗಿಂತ ಮುಂಚೆ ಚೆನ್ನಾಗಿ ಓದಿಕೊಂಡು ಕೆಲಸ ಮಾಡುತ್ತಾ ಇದ್ದರೆ ಮದುವೆಯಾದ ನಂತರವೂ ಸಹ ಆಕೆಗೆ ಕೆಲಸ ಮಾಡುವಂತಹ ಸ್ವಾತಂತ್ರ್ಯವನ್ನ ಇದೀಗ ಗಂಡನ ಮನೆಯವರು ನೀಡುತ್ತಾ ಇದ್ದಾರೆ. ಇನ್ನೂ ಮದುವೆಯಾದ ಬಳಿಕ ಕೆಲಸ ಮಾಡುವುದು ಬೇಡ ಅಂತ ವಿರೋಧಿಸಿದರು ಹೆಣ್ಣು ಅದನ್ನೆಲ್ಲಾ ತಲೆಗೆ ಹಾಕಿಕೊಳ್ಳದೆ ತಾನು ಕೆಲಸ ಮಾಡಲೇಬೇಕು ಎಂದು ನಿರ್ಧರಿಸಿ ತನ್ನ ಕನಸಿನ ಹಾದಿಯ ನನಸಾಗಿಸಿಕೊಳ್ಳಲು ಮುಂದಾಗುತ್ತಾಳೆ.
ಇವತ್ತಿನ ಮಾಹಿತಿ ಎಲ್ಲಿಯೂ ಸಹ ಅಂಥದ್ದೇ 1ಘಟನೆಯ ಬಗ್ಗೆ ತಿಳಿಸಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಇಲ್ಲೊಂದು ದಂಪತಿಗಳ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇನ್ನು ಮದುವೆಯ ನಂತರ ಇತ್ತೀಚಿನ ದಿನದ ಟ್ರೆಂಡ್ ಅಂದರೆ ಅದು ಹನಿಮೂನ್ ಗೆ ಹೋಗುವುದು. ಆದರೆ ಈ ಪತಿ ತನ್ನ ಹೆಂಡತಿಗೆ ಓದಲು ಹೇಳಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ ಅಂದರೆ ಅದು ಬೇರೆಲ್ಲೂ ಅಲ್ಲ ಅಂಬೇಡ್ಕರ್ ಅವರು ಜನಿಸಿದಂತಹ ಸತಾರ ಜಿಲ್ಲೆಯ ವಾಠಾರ್ನಲ್ಲಿ. ಸ್ನೇಹಿತರೇ ಸುರೇಶ್ ಎಂಬ ವ್ಯಕ್ತಿಗೆ ಚಿಕ್ಕಂದಿನಿಂದಲೂ ತನ್ನ ಹುಟ್ಟೂರಿನಲ್ಲಿ ಹಾಲು ಮಾರಿಕೊಂಡು ಹಣವನ್ನು ಕೂಡಿಟ್ಟುಕೊಂಡು ತುಂಬಾ ಪ್ರಯತ್ನಪಟ್ಟು MPSCಯನ್ನು ಪರೀಕ್ಷೆ ಎರಡನೇ ಅಟ್ಟೆಂಪ್ಟ್ನಲ್ಲಿ ಪಾಸಾದನು.
ನಂತರ ತನ್ನ ಹುಟ್ಟೂರಿಗೋಸ್ಕರ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಸೇರಿಕೊಂಡು ಪಂಚಾಯಿತಿಯ ಸರ್ಪಂಚ್ ಕೂಡ ಆದನು. ಅನಂತರ ಊರಿನ ಪ್ರತಿ ಮನೆಗೂ ಶೌಚಾಲಯ ವ್ಯವಸ್ಥೆ ರಸ್ತೆ ಸುಧಾರಣೆಯಿಂದ ಹಿಡಿದು ಎಲ್ಲ ಸಾರ್ವಜನಿಕ ಕೆಲಸಗಳನ್ನು ಮಾಡಿ ತನ್ನ ಹುಟ್ಟೂರನ್ನು ಸ್ವಚ್ಛವಾಗಿರಲು ಪ್ರಯತ್ನ ಮಾಡಿದುನು. ಈ ನಡುವೆ ಕಲ್ಯಾಣಿ ಎಂಬಾಕೆಯ ಕೈಹಿಡಿದು ಸಂಸಾರಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಹನುಮನ್ಗೆ ಹೋಗುವುದನ್ನು ನಿರಾಕರಿಸಿ ತನ್ನ ಹೆಂಡತಿಗೆ ಒಂದು ಸ್ವತಂತ್ರ ರೂಮ್ ನಿರ್ಮಿಸಿ ಕೋಣೆಯ ತುಂಬ ಪುಸ್ತಕವನ್ನು ಇಟ್ಟು ಓದಲು ಹೇಳುತ್ತಾನೆ. ಅಲ್ಲದೆ ತಾನು ಕಲಿತಂತಹ ವಿದ್ಯೆಯನ್ನು ಕೂಡ ಆಕೆಯ ತಲೆಗೆ ತುಂಬಿ ಜನರಲ್ಲಿ ಎಕ್ಸ್ಪರ್ಟ್ ಆಗುವಂತೆ ಮಾಡುತ್ತಾನೆ.
ಹೀಗೆ ಕಷ್ಟಪಟ್ಟು ಓದಿದ ಕಲ್ಯಾಣಿ ಎರಡು ವರ್ಷದಲ್ಲಿ MPSC ಪರೀಕ್ಷೆಯಲ್ಲಿ ಉತ್ತೀರ್ಣೇ ಆಗುತ್ತಾಳೆ. ಅನಂತರ PSI ಆಗಿ ಮುಂಬೈನಲ್ಲಿ ಕೆಲಸ ಆರಂಭಿಸಿದ ಹೆಂಡತಿಗೆ ಸ್ವತಹ ಗಂಡನೆ ಎದ್ದು ನಿಂತು ಸಲ್ಯೂಟ್ ಹೊಡೆದು ಗೌರವ ಸಲ್ಲಿಸುತ್ತಾನೆ. ಹೌದು ಈ ಪತಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಅಲ್ವಾ ಸ್ನೇಹಿತರೆ ನಿಜಕ್ಕೂ ಹೆಂಡತಿಗೆ ಎಷ್ಟು ಸಪೋರ್ಟಿವ್ ಆಗಿ ಇರುವ ಪತಿ ಸಿಗಬೇಕೆಂದರೆ ಆ ಹೆಣ್ಣು ಮಗು ಬಹಳ ಅದೃಷ್ಟ ಮಾಡಿರಬೇಕು. ಈ ಘಟನೆ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.