ಯಾವುದೇ ಕಾರಣಕ್ಕೂ ನೀವು ನಿಮ್ಮ ಮಲಗುವ ಕೋಣೆಗೆ ಗೋಡೆಗೆ ಈ ಬಣ್ಣವನ್ನು ಬಳಸಬಾರದು ಹಾಗೇನಾದ್ರೂ ಬಳಸಿದ್ರೆ ಒಳ್ಳೆಯದಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬೆಡ್ ರೂಮಿಗೆ ಯಾವ ಬಣ್ಣ ಬಳಸಿದರೆ ಒಳ್ಳೆಯದು ಹಾಗೂ ಯಾವ ಬಣ್ಣಗಳನ್ನು ಬಳಸಬಾರದು ಎಂದು ಈ ಮಾಹಿತಿ ನೋಡಿ ತಿಳಿದುಕೊಳ್ಳಿ.ಹಾಯ್ ಫ್ರೆಂಡ್ಸ್ ನಾವು ಇರುವುದು ಪ್ರಕೃತಿಯಲ್ಲಿ ಪ್ರಕೃತಿ ತುಂಬಿರುವುದು ಪ್ರಾಣಿ ಪಕ್ಷಿ ಗಿಡ ಮರಗಳಿಂದ ಹಾಗೂ ಮನುಷ್ಯರುಗಳಿಂದ ಈ ಎಲ್ಲಾ ಜೀವರಾಶಿಗಳಿಗೂ ಒಂದೊಂದು ಬಣ್ಣಗಳು ಇದೆ. ಬಣ್ಣ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಬಣ್ಣಗಳನ್ನು ನೋಡುತ್ತಿದ್ದರೆ ಹೃದಯದಲ್ಲಿ ಖುಷಿ ಸಂತೋಷ ತುಂಬಿರುತ್ತದೆ ನಮ್ಮ ಲೋಕದಲ್ಲಿ ತುಂಬಾ ಬಣ್ಣಗಳು ಇವೆ. ಬಣ್ಣಗಳಲ್ಲಿ ಏಳು ಬಣ್ಣಗಳು ಮಾತ್ರ ಇವೆ ಆದರೆ ಏಳು ಬಣ್ಣಗಳಿಂದ ನೂರಾರು ಬಣ್ಣಗಳು ಆಗುತ್ತವೆ.

ಬಣ್ಣಗಳು ನಮ್ಮ ಬದುಕನ್ನೇ ಬದಲಾಯಿಸುತ್ತವೆ ಎಂದು ಹೇಳಿದರೆ ತಪ್ಪಾಗಲಾರದು. ಬಣ್ಣಗಳು ನಮ್ಮ ಮೇಲೆ ನಕಾರಾತ್ಮಕ ಹಾಗೂ ಸಕಾರಾತ್ಮಕ ಭಾವನೆಗಳನ್ನು ಪ್ರಭಾವಗಳನ್ನು ಬೀರುತ್ತವೆ. ಒಬ್ಬೊಬ್ಬರಿಗೆ ಒಂದು ತರಹದ ಬಣ್ಣ ಇಷ್ಟ. ಒಬ್ಬರಿಗೆ ಬಿಳಿ ಒಬ್ಬರಿಗೆ ಹಸಿರು ಒಬ್ಬರಿಗೆ ಕೆಂಪು ಹೀಗೆ ತುಂಬಾ ಬಣ್ಣಗಳು ಅವರವರಿಗೆ ಇಷ್ಟವಾಗಿರುತ್ತವೆ. ಆಗ ಅವರು ಅದೇ ಬಣ್ಣದ ವಸ್ತುಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತಾರೆ. ಏಳು ಬಣ್ಣಗಳು ಯಾವವು ಎಂಬುದು ನಿಮಗೆ ತಿಳಿದೇ ಇದೆ ಕಪ್ಪು ,ಬಿಳಿ,ಹಸಿರು, ಹಳದಿ, ಕೆಂಪು, ನೀಲಿ, ಹಾಗೂ ಕೇಸರಿ. ಬಣ್ಣಗಳು ಕೂಡ ನಮ್ಮ ಸ್ವಭಾವ ಹಾಗೂ ನಮ್ಮ ಭವಿಷ್ಯದ ಮೇಲೆ ಪ್ರಭಾವವನ್ನು ಬೀರುತ್ತವೆ.

ಬಣ್ಣಗಳು ಕೂಡ ನಮ್ಮ ಜೀವನವನ್ನು ಹಾಗೂ ಅದೃಷ್ಟವನ್ನು ಬದಲಾಯಿಸುತ್ತವೆ ಎಂದು ಹೇಳಿದರೆ ತಪ್ಪಲ್ಲ. ಹಲವಾರು ಬಣ್ಣಗಳನ್ನು ನೋಡಿದಾಗ ನಿಮಗೆ ಇಷ್ಟವಾಗುವ ಬಣ್ಣಗಳನ್ನು ನಿಮ್ಮ ಮನೆಗೆ ರೂಮಿಗೆ ಹಚ್ಚ ಬೇಕು ಎಂಬ ಆಸೆ ಇರುತ್ತದೆ. ಮನೆಯನ್ನು ಕಟ್ಟಿದರೆ ಆ ಮನೆ ಪೂರ್ತಿಯಾಗದು ಆದರೆ ಅದಕ್ಕೆ ಬಣ್ಣವನ್ನು ಹಚ್ಚಿದ ಮೇಲೆ ತುಂಬಾ ಲಕ್ಷಣವಾಗಿ ಕಾಣುತ್ತದೆ ನಮ್ಮ ಮನೆ ಬಣ್ಣ ಬಣ್ಣಗಳಿಂದ ತುಂಬಿಕೊಂಡರೆ ಮನೆಯಲ್ಲಿ ಇರಲು ತುಂಬಾ ನೆಮ್ಮದಿ ಇರುತ್ತದೆ ಹಾಗೂ ಖುಷಿ ಇರುತ್ತದೆ. ಯಾರಾದರೂ ತಮ್ಮ ಮನೆಗೆ ಹೊಸ ಬಣ್ಣವನ್ನು ಹಚ್ಚಿದಾಗ ನಾವು ಕೂಡ ಇದೇ ತರಹದ ಬಣ್ಣವನ್ನು ನಮ್ಮ ಮನೆಗೆ ಹಚ್ಚಬೇಕು ಎಂದು ಅಂದುಕೊಳ್ಳುತ್ತೇವೆ

ಆದರೆ ಯಾವ ಬಣ್ಣ ರೂಮಿಗೆ ಹಚ್ಚಬೇಕು ಹಾಗೂ ಯಾವ ಬಣ್ಣವನ್ನು ಹಚ್ಚಬಾರದು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಒಬ್ಬೊಬ್ಬರು ತಮಗೆ ಇಷ್ಟ ಅಂತ ಇಡೀ ಮನೆಗೆ ಒಂದೇ ಬಣ್ಣವನ್ನು ಹಚ್ಚುತ್ತಾರೆ ಅಂದರೆ ಅವರಿಗೆ ಕೆಂಪು ಬಣ್ಣ ಇಷ್ಟ ಆಗಿದ್ದರೆ ಮನೆಗೆ ಪೂರ್ತಿಯಾಗಿ ಕೆಂಪು ಬಣ್ಣವನ್ನು ಹಚ್ಚುತ್ತಾರೆ ಆದರೆ ಈ ರೀತಿಯಾಗಿ ಮಾಡಿದರೆ ಮನೆಯೂ ತುಂಬಾ ಚೆನ್ನಾಗಿ ಕಾಣುವುದಿಲ್ಲ. ಉದಾಹರಣೆಗೆ ಹೇಳಬೇಕೆಂದರೆ ಅಡುಗೆಯಲ್ಲಿ ನಾವು ಖಾರವನ್ನು ಹಾಕಿ ಉಪ್ಪನ್ನು ಹಾಕದಿದ್ದರೆ ಅಡುಗೆಯ ರುಚಿಯಾಗಿರುವುದಿಲ್ಲ.

ನಾವು ಮಾಡಿರುವ ಅಡುಗೆ ನಮಗೆ ಇಷ್ಟವಾಗುವುದಿಲ್ಲ. ಅದೇ ರೀತಿ ಆಗಿ ಒಂದೇ ಬಣ್ಣವನ್ನು ಇಡೀ ಮನೆಗೆ ಪೂರ್ತಿ ಹಚ್ಚಿದರೆ ಸುಂದರವಾಗಿ ಕಾಣುವುದಿಲ್ಲ. ಇಡೀ ಮನೆಗೆ ಒಂದೇ ಬಣ್ಣವನ್ನು ಹಚ್ಚಿದರೆ ಆ ಬಣ್ಣದ ಪ್ರಭಾವವು ನಮಗೆ ಬೀಳಬಹುದು ಅದರಿಂದ ನಕಾರಾತ್ಮಕ ಪ್ರಭಾವಗಳು ನಮ್ಮ ಮೇಲೆ ಬೀಳಬಹುದು. ಮನೆಗೆ ಆದಷ್ಟು ತುಂಬಾ ಲೈಟ್ ಆಗಿರುವ ಬಣ್ಣಗಳನ್ನು ಹಚ್ಚಬೇಕು ಏಕೆಂದರೆ ಇವುಗಳು ಕೂಡ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಅತಿಯಾಗಿ ಡಾರ್ಕ್ ಬಣ್ಣಗಳನ್ನು ಬಳಸುವುದರಿಂದ ನಮ್ಮ ಮೇಲೆ ನಕಾರಾತ್ಮಕ ಪ್ರಭಾವಗಳು ಬೀಳಬಹುದು.

ಹಾಗೆಯೇ ಇನ್ನೊಂದು ವಿಷಯವೇನೆಂದರೆ ಎಲ್ಲಾ ಗ್ರಹಗಳಿಗೂ ಅದರದೇ ಆದ ಒಂದೊಂದು ಬಣ್ಣದ ವಿಶೇಷವಿದೆ. ಕೆಲವೊಂದು ಸಲ ನಾವು ಹಚ್ಚಿರುವ ಬಣ್ಣ ಕೆಲವೊಂದು ಗ್ರಹಗಳಿಗೆ ಇಷ್ಟ ವಾಗಿರುವುದಿಲ್ಲ. ನಮ್ಮ ಮೇಲೆ ಯಾವ ಗ್ರಹವು ಇರುತ್ತದೆಯೋ ಆಗ ಆ ಗ್ರಹಗಳಿಂದ ಹಾಗೂ ನಮ್ಮ ಮನೆಯ ಬಣ್ಣದಿಂದ ನಮ್ಮ ಮೇಲೆ ಪ್ರಭಾವ ಬೀಳಬಹುದು. ಅದಕ್ಕಾಗಿ ನಾವು ಸ್ವಲ್ಪ ಲೈಟ್ ಆಗಿರುವ ಬಣ್ಣವನ್ನು ಉಪಯೋಗಿಸಿದರೆ ಒಳ್ಳೆಯದು. ಆದರೆ ದಿನದ ಹೆಚ್ಚು ಸಮಯದಲ್ಲಿ ವಾಸಿಸುವ ಬೆಡ್ ರೂಮಿಗೆ ಯಾವ ಬಣ್ಣ ಹಚ್ಚಿದರೆ ಒಳ್ಳೆಯದು ಎಂದು ತಿಳಿಯೋಣ ನಿಮ್ಮ ಬೆಡ್ ರೂಂ ಏನಾದರೂ ನೈರುತ್ಯ ದಿಕ್ಕಿನಲ್ಲಿದ್ದರೆ ನೀವು ರೂಮಿಗೆ ಕಂದು ಅಥವಾ ಲೈಟಾಗಿ ಕೆಂಪಾಗಿರುವ ಬಣ್ಣವನ್ನು ಹಚ್ಚಬೇಕು.

ಇಂತಹ ರೂಂಗಳಲ್ಲಿ ಹೆಚ್ಚಾಗಿ ಮನೆಯ ಮುಖ್ಯಸ್ಥರು ವ್ಯವಹಾರ ಮಾಡುವವರು ಇದ್ದರೆ ಅವರಿಗೆ ಲಾಭವಾಗುತ್ತದೆ ಹಾಗೂ ನಿಂತಿರುವ ಎಲ್ಲಾ ಕೆಲಸಗಳು ಮುಂದುವರೆಯುತ್ತವೆ. ಇನ್ನೇನಾದರೂ ಆಗ್ನೇಯ ದಿಕ್ಕಿನಲ್ಲಿ ದಂಪತಿಗಳು ವಾಸವಾಗಿದ್ದರೆ ಅಲ್ಲಿ ನಿಮ್ಮ ವಿರಸಗಳು ಹೆಚ್ಚಿದ್ದರೆ ಅಂದರೆ ನೀವು ತುಂಬಾ ಜಗಳವಾಡುತ್ತಿದ್ದರೆ ಆ ರೂಮಿಗೆ ಗಿಳಿ ಹಸಿರು ಬಣ್ಣವನ್ನು ಹಚ್ಚಬೇಕು. ಗಂಡ ಹೆಂಡತಿಯ ಜಗಳ ನಡೆಯಲು ಕೆಲವೊಂದು ಸಲ ಆ ರೂಮಿನ ಬಣ್ಣವು ಸಹ ಕಾರಣವಾಗಿರುತ್ತೆ. ಹಾಗಾಗಿ ಗಿಳಿ ಹಸಿರು ಬಣ್ಣವನ್ನು ಹಚ್ಚಬೇಕು. ಇದರಿಂದ ನೀವು ಮನೆಯಲ್ಲಿ ಶಾಂತವಾಗಿ ನೆಮ್ಮದಿಯಿಂದ ಇರಬಹುದು ಹಾಗೂ ನಿಮ್ಮ ಮನೆಯ ವಾತಾವರಣ ತಿಳಿಯಾಗಿರುತ್ತದೆ.

ಇಂತಹ ರೂಂಗಳಿಗೆ ನೀಲಿ ಪಿಂಕ್ ಹಾಗೂ ಗ್ರೇ ಬಣ್ಣಗಳನ್ನು ಬಳಸಬಾರದು. ವಾಸ್ತು ಪ್ರಕಾರವಾಗಿ ಈಶಾನ್ಯದಲ್ಲಿ ಬೆಡ್ ರೂಮ್ ಇರಬಾರದು ಆದರೆ ಕೆಲವೊಮ್ಮೆ ಜಾಗದ ಕೊರತೆಯಿಂದ ನೀವೇನಾದರೂ ಈ ದಿಕ್ಕಿನಲ್ಲಿ ರೂಮ್ ಮಾಡಿಕೊಂಡಿದ್ದರೆ ನೀವು ನಿಂಬೆಹಣ್ಣಿನ ಅಂದರೆ ಹಳದಿ ಬಣ್ಣವನ್ನು ಆ ಕೋಣೆಗೆ ಹಚ್ಚಬೇಕು. ಆದರೆ ಈ ದಿಕ್ಕಿನಲ್ಲಿ ಮಲಗುವುದು ಒಳ್ಳೆಯದಲ್ಲ ಈ ಬಣ್ಣವನ್ನು ಹಚ್ಚುವುದರಿಂದ ಸ್ವಲ್ಪ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು. ವಾಯುವ್ಯ ದಿಕ್ಕಿನಲ್ಲಿ ಬೆಡ್ರೂಮ್ ಇದ್ದರೆ ಇದು ದಂಪತಿಗಳಿಗೆ ಒಳ್ಳೆಯದಲ್ಲ ಇದು ವಿದ್ಯಾಭ್ಯಾಸಕ್ಕೆ ಬಳಸುವ ರೂಮ್ ಆಗಿದ್ದರೆ ಒಳ್ಳೆಯದು. ಈ ದಿಕ್ಕಿನಲ್ಲಿರುವ ರೂಂಗೆ ಶಾಂತವಾದ ಬಿಳಿಬಣ್ಣವನ್ನು ಹಚ್ಚಬಹುದು. ಹಾಗೆ ಈ ರೀತಿಯಾಗಿ ಮಾಡುವುದರಿಂದ ನೀವು ನೆಮ್ಮದಿಯಾಗಿ ಇರಬಹುದು ಬಿಳಿಬಣ್ಣದ ಯಾವುದೇ ವಸ್ತುಗಳನ್ನು ನೀವು ಈ ರೂಮಿನಲ್ಲಿ ಇಟ್ಟುಕೊಳ್ಳಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published.