ನಿಮ್ಮ ಕಣ್ಣುಗಳು ಏನಾದ್ರು ಪದೇ ಪದೇ ಹೊಡೆದುಕೊಳ್ಳುತ್ತವೆಯೇ ಹಾಗಾದ್ರೆ ಹಾಗೆ ಕಣ್ಣುಗಳು ಹೊಡೆದುಕೊಂಡರೆ ಒಳ್ಳೆಯದ್ದ ಅಥವಾ ಕೆಟ್ಟದ್ದಾ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಣ್ಣು ಹೊಡೆದುಕೊಳ್ಳುವುದು ಶುಭವೋ ಅಶುಭವೋ ಎಂದು ತಿಳಿಯಿರಿ ಹಾಗೂ ಇದಕ್ಕೆ ಮಾಡುವ ಪರಿಹಾರಗಳೇನು ಏಕೆ ಈ ಕಣ್ಣುಗಳು ಹೊಡೆದುಕೊಳ್ಳುತ್ತವೆ ಎಂದು ಈ ಮಾಹಿತಿ ಓದಿ ತಿಳಿದುಕೊಳ್ಳಿರಿ.ಹಾಯ್ ಸ್ನೇಹಿತರೆ ಕಣ್ಣು ನಮಗೆ ಅಂಗಗಳಲ್ಲಿ ಪ್ರಮುಖವಾದ ಅಂಗ. ಕಣ್ಣುಗಳು ಇರದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ನೀವೇ ಒಂದು ಸಲ ಊಹಿಸಿಕೊಳ್ಳಿ. ಕತ್ತಲಿನಲ್ಲಿ ನಾವು ಹೇಗೆ ಇರುವುದು ಕಷ್ಟವೋ ಹಾಗೆ ಕಣ್ಣು ಇರದಿದ್ದರೆ ಜೀವನವೇ ಕಷ್ಟ. ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮ ಮುಂದಿನ ಭವಿಷ್ಯದ ಮುನ್ಸೂಚನೆಗಳಾಗಿರುತ್ತವೆ. ಪ್ರಕೃತಿಯ ಸೌಂದರ್ಯವನ್ನು ಸವೆಯಲು ನಮಗೆ ಕಣ್ಣುಗಳ ಅವಶ್ಯಕತೆ ತುಂಬಾ ಇದೆ.

ಕಣ್ಣುಗಳನ್ನು ನೋಡಿ ಮನುಷ್ಯನ ಗುಣಲಕ್ಷಣಗಳನ್ನು ಸಹ ತಿಳಿದುಕೊಳ್ಳಬಹುದು. ಕೆಲವೊಂದು ಸಲ ನಮ್ಮ ಕಣ್ಣುಗಳು ಹೊಡೆದುಕೊಳ್ಳುತ್ತವೆ. ನಮ್ಮ ದೇಹದ ಪ್ರತಿಯೊಂದು ಅಂಗಗಳು ಒಂದೊಂದು ಸಲ ಹೊಡೆದುಕೊಳ್ಳುತ್ತವೆ. ಆದರೆ ಕಣ್ಣುಗಳು ಹದಿನೈದು ದಿನದವರೆಗೂ ಹೊಡೆದುಕೊಳ್ಳುತ್ತಿದ್ದರೆ ಇದನ್ನು ನೀವು ನೆಗ್ಲೆಕ್ಟ್ ಮಾಡಬಾರದು. ಕೆಲವೊಮ್ಮೆ ಪೋಷಕಾಂಶಗಳ ಕೊರತೆಯಿಂದ ವಿಟಮಿನ್ ಗಳ ಕೊರತೆಯಿಂದ ಕಣ್ಣುಗಳು ಹೊಡೆಯಲು ಪ್ರಾರಂಭವಾಗುತ್ತವೆ ಇದು ಅಂಥ ದೊಡ್ಡ ಕಾಯಿಲೆ ಅಲ್ಲ ಆದರೆ ಇದನ್ನು ನೆಗ್ಲೆಟ್ ಮಾಡಬಾರದು ಹತ್ತಿರ ಇರುವ ವೈದ್ಯರನ್ನು ಸಂಪರ್ಕಿಸಿ ಒಂದು ಸಲ ಇದರ ಬಗ್ಗೆ ಚರ್ಚಿಸಿ ಏಕೆ ಹೀಗೆ ಆಗಿರಬಹುದು ಎಂದು ತಿಳಿದುಕೊಳ್ಳಿ.

ವೈದ್ಯಕೀಯವಾಗಿ ನೋಡಿದರೆ ಇವುಗಳ ಸಮಸ್ಯೆ ವಿಟಮಿನ್ಗಳ ಕೊರತೆಯಿಂದ ಆಗಿರುತ್ತವೆ. ದೇಹದ ಎಲ್ಲ ಕ್ರಿಯೆಗಳಿಗೂ ಒಂದೊಂದು ಅರ್ಥವಿರುತ್ತದೆ. ಕೆಲವೊಮ್ಮೆ ಕಣ್ಣಿನ ಸುತ್ತ ಕಪ್ಪಾಗಿರುತ್ತದೆ ಅದು ಕೂಡ ನಮ್ಮ ದೇಹದಲ್ಲಿ ಇರುವ ವಿಟಮಿನ್ಗಳ ಕೊರತೆಯಿಂದ ಆಗಿರುತ್ತದೆ. ಕೆಲವೊಮ್ಮೆ ನಮ್ಮ ಜೀವನ ಅಂದರೆ ಲೈಫ್ ಸ್ಟೈಲ್ ನಲ್ಲಿ ಏನಾದರೂ ಬದಲಾವಣೆ ಇದ್ದಾಗ ಈ ಕಣ್ಣುಗಳು ಹೊಡೆಯಲು ಆರಂಭಿಸುತ್ತವೆ. ಎಲ್ಲರ ಕಣ್ಣುಗಳು ಕೂಡ ಒಂದೊಂದು ಸಲ ಹೊಡೆದುಕೊಳ್ಳುತ್ತವೆ. ಕಣ್ಣಿನ ರೆಪ್ಪೆಗಳು ಪದೇ ಪದೇ ಹೊಡೆಯುತ್ತಿದ್ದಾಗ ತುಂಬಾ ಕಷ್ಟವಾಗುತ್ತದೆ. ಹಾಗಾದರೆ ಕಣ್ಣುಗಳು ಏಕೆ ಹೊಡೆದುಕೊಳ್ಳುತ್ತೇವೆ ಎಂದು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ.

ಧಾರ್ಮಿಕವಾಗಿ ನೋಡಿದರೆ ಹೆಣ್ಣು ಮಕ್ಕಳಿಗೆ ಬಲಗಣ್ಣು ಹೊಡೆದುಕೊಂಡರೆ ಮುಂದೆ ಅವರಿಗೆ ಕೆಟ್ಟದ್ದಾಗಿರುತ್ತದೆ ಎಂದು ಮುನ್ಸೂಚನೆ ಆದರೆ ಗಂಡುಮಕ್ಕಳಿಗೆ ಎಡಗಣ್ಣು ಹೊಡೆದುಕೊಂಡರೆ ಕೆಟ್ಟದ್ದು ಆಗುತ್ತದೆ. ಹೌದು ಸ್ನೇಹಿತರೆ ಹೆಣ್ಣುಮಕ್ಕಳಿಗೆ ಬಲಗಣ್ಣು ಹೊಡೆದುಕೊಂಡರೆ ಅಶುಭಫಲ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಇರುತ್ತದೆ ಹಾಗೆ ಅವರು ಮಾಡುವ ಕೆಲಸದಲ್ಲಿ ಯಾವುದೇ ಯಶಸ್ಸು ಇರುವುದಿಲ್ಲ. ಎಡಗಣ್ಣು ಹೊಡೆದು ಕೊಂಡರೆ ಮನೆಯಲ್ಲಿ ಶುಭವಾಗುತ್ತದೆ ಮುಂದೆ ಇರುವ ದಿನಗಳಲ್ಲಿ ಅವರಿಗೆಲ್ಲಾ ಶುಭ ಸೂಚನೆಗಳು ಇರುತ್ತವೆ. ಆದರೆ ಗಂಡು ಮಕ್ಕಳಿಗೆ ಬಲಗಣ್ಣು ಹೊಡೆದುಕೊಂಡರೆ ಅವರ ಆಸೆ ಕನಸುಗಳು ಈಡೇರುತ್ತವೆ. ಎಡಗಣ್ಣು ಹೊಡೆದುಕೊಂಡರೆ ಇವರಿಗೆ ಅಶುಭ ಆಗಿರುತ್ತದೆ.

ಶುಭಫಲಗಳು ಯಾವವು ಎಂದರೆ ಮನೆಯಲ್ಲಿ ಶುಭದ ಕಾರ್ಯಕ್ರಮಗಳು ನಡೆಯುತ್ತವೆ ಮತ್ತು ಮನೆಯಲ್ಲಿ ನೆಮ್ಮದಿ ಆರೋಗ್ಯ ಸಂತೋಷ ಇರುತ್ತದೆ. ಅಶುಭ ಫಲಗಳು ಎಂದರೆ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿರುತ್ತದೆ ಮತ್ತು ಮನೆಯಲ್ಲಿ ಏನೇ ಕೆಲಸವನ್ನು ಮಾಡಿದರು ಲಾಭ ಎನ್ನುವುದು ಇರುವುದಿಲ್ಲ. ಹಾಗಾದರೆ ಇಂತಹ ಎಲ್ಲಾ ಅಶುಭ ಫಲಗಳಿಗೆ ಪರಿಹಾರ ಏನೆಂಬುದು ನಿಮಗೆ ನಾನು ತಿಳಿಸುತ್ತೇನೆ. ಹೆಣ್ಣುಮಕ್ಕಳಿಗೆ ಬಲಗಣ್ಣು ಹೊಡೆದುಕೊಂಡರೆ ಉಪ್ಪಿನಿಂದ ನಿವಾಳಿಸಿ ನೀರಿನಲ್ಲಿ ಉಪ್ಪನ್ನು ಹಾಕಿ ಇದರಿಂದ ಮುಂದೆ ನಿಮಗೆ ಆಗುವ ತೊಂದರೆಗಳು ಕಡಿಮೆಯಾಗುತ್ತವೆ.

ಈ ಒಂದು ಪರಿಹಾರದಿಂದ ನೀವು ಮುಂದಿನ ಎಲ್ಲಾ ಅಶುಭ ಫಲಗಳಿಂದ ಮುಕ್ತರಾಗುತ್ತೀರಿ. ಅದೇ ಗಂಡು ಮಕ್ಕಳಿಗೆ ಎಡಗಣ್ಣು ಹೊಡೆದು ಕೊಂಡರೆ ಜೇಬಿನಲ್ಲಿರುವ ನಾಣ್ಯವನ್ನು ನಿವಾಳಸಿಕೊಂಡು ಅದನ್ನು ಬೇರೆಯವರಿಗೆ ಹಸಿದವರಿಗೆ ಕೊಡಿ ಅಥವಾ ಒಂದು ಬಿಳಿ ಬಟ್ಟೆಯನ್ನು ದಲಿತರಿಗೆ ದಾನ ಕೊಡಿ. ಹೀಗೆ ಮಾಡುವುದರಿಂದ ಗಂಡು ಮಕ್ಕಳಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕಣ್ಣು ಹೊಡೆದುಕೊಳ್ಳುವ ಸ್ಥಳದಲ್ಲಿ ಒಂದು ಹತ್ತಿಯ ಉಂಡೆ ಮಾಡಿ ಅದರ ಹತ್ತಿರ ಇಟ್ಟುಕೊಳ್ಳಿ ಅಂದರೆ ಕಣ್ಣಿನ ರೆಪ್ಪೆಯಲ್ಲಿ ಇಟ್ಟುಕೊಳ್ಳಿ ಆಗ ನಿಮಗೆ ಕಣ್ಣು ಹೊಡೆದುಕೊಳ್ಳುವುದು ಕಡಿಮೆಯಾಗಬಹುದು.

ಕಣ್ಣುಗಳನ್ನು ಆಗಾಗ ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಕಣ್ಣಿಗೆ ಕ್ಯಾರೆಟ್ ಹಾಗೂ ಇನ್ನೂ ಮುಂತಾದ ತರಕಾರಿಗಳು ತುಂಬಾ ಅವಶ್ಯಕವಾಗಿರುತ್ತದೆ ಇಂತಹ ಎಲ್ಲಾ ವಿಟಮಿನ್ ತಿನ್ನುವುದರಿಂದ ಕಣ್ಣು ಹೊಡೆದುಕೊಳ್ಳುವುದು ಕಡಿಮೆಯಾಗುತ್ತವೆ. ಕಣ್ಣುಗಳು ಪದೇಪದೇ ಹೊಡೆದುಕೊಂಡರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.