ಪ್ರೀತಿಸಿದ ಹುಡುಗನನ್ನು ಹುಡುಗಿ ಬೇಡ ಎಂದು ರಿಜೆಕ್ಟ್ ಮಾಡಿದ್ದಳು.ಆದರೆ ಹತ್ತು ವರ್ಷದ ನಂತರ ಅವನು ಮತ್ತೆ ಎದುರಿಗೆ ಸಿಕ್ಕಾಗ ಆಕೆಯ ಜೀವನದಲ್ಲಿ ಏನಾಗಿತ್ತು ಗೊತ್ತ …ಹೀಗೆ ನಿಮ್ಮ ಜೀವನದಲ್ಲೂ ಕೂಡ ಆಗಿರಬಹುದು …!!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ಪ್ರೀತಿ ಕುರುಡು ಹಾಗೂ ಪ್ರೀತಿಯೆನ್ನುವುದು ಮಾಯೆ ಈ ಪ್ರೀತಿ ಅನ್ನುವುದು ಯಾರನ್ನು ಬಿಟ್ಟಿಲ್ಲ ಹೇಳಿ ,ಎಲ್ಲರಿಗೂ ಕೂಡ ಅವರ ಜೀವನದಲ್ಲಿ ಒಂದು ಭಾರಿಯಾದರೂ ಕೂಡ ಒಬ್ಬರ ಮೇಲೆ ಪ್ರೀತಿಯೆನ್ನುವುದು ಹುಟ್ಟಿರುತ್ತದೆ. ಆದರೆ ಕೆಲವರು ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ ಆದರೆ ಇನ್ನು ಕೆಲವರು ಹೇಳದೆ ಮುಚ್ಚಿಡುತ್ತಾರೆ.ಹೌದು ಸ್ನೇಹಿತರೆ ಕೆಲವೊಬ್ಬರು ಚಿಕ್ಕನಿಂದಲೂ ಕೂಡ ಒಬ್ಬರನ್ನು ಇಷ್ಟಪಟ್ಟರೆ ಮುಗಿಯಿತು ಅವರನ್ನು ಮದುವೆಯಾಗುವವರೆಗೂ ಕೂಡ ಅವರಿಗೆ ಜೀವನ ಸಂಪೂರ್ಣವಾಗುವುದಿಲ್ಲ .ಆದರೆ ಇನ್ನು ಕೆಲವರಿಗೆ ಪ್ರೀತಿ ಎನ್ನುವುದು ಒಂದು ರೀತಿಯಾದಂತಹ ವ್ಯವಹಾರವಾಗಿ ಬಿಟ್ಟಿದೆ ಇಂದು ಒಬ್ಬರನ್ನು ಪ್ರೀತಿಸಿದರೆ ನಾಳೆ ಇನ್ನೊಬ್ಬರನ್ನು ಪ್ರೀತಿಸಿ ಮೋಸ ಹೋಗುತ್ತಾರೆ.

ಈ ರೀತಿಯಾಗಿ ಪ್ರೀತಿಯ ಬಲೆಯಲ್ಲಿ ಬಿದ್ದು ಮೋಸವನ್ನು ಮಾಡುವ ಹಾಗೂ ಮೋಸವನ್ನು ಹೋಗುವ ಹುಡುಗ-ಹುಡುಗಿಯರನ್ನು ನಾವು ಸಾಕಷ್ಟು ಕಡೆ ನಮ್ಮ ಸುತ್ತಮುತ್ತಲ ನೋಡುತ್ತಲೇ ಇರುತ್ತೇವೆ ಹೌದು ಸ್ನೇಹಿತರೆ ಪ್ರೀತಿ ಎನ್ನುವುದೇ ಹಾಗೆ ಈ ಪ್ರೀತಿ ಎನ್ನುವುದು ಯಾವಾಗ ಯಾರ ಮೇಲಾದರೂ ಕೂಡ ಹುಟ್ಟಬಹುದು. ಪ್ರೀತಿಗೆ ಆಸ್ತಿ ಅಂತಸ್ತು ಎನ್ನುವುದು ಇರುವುದಿಲ್ಲ. ಅಂದಚೆಂದವನ್ನು ಕೂಡ ನೋಡುವುದಿಲ್ಲ ಎಂದು ಹೇಳಲಾಗುತ್ತದೆ .ಹೌದು ಸ್ನೇಹಿತರೆ ಇಂದಿನ ಆಧುನಿಕ ಯುಗದಲ್ಲಿ ಪ್ರೀತಿ-ಪ್ರೇಮ ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳ ಶಾಲೆಯಲ್ಲಿ ಓದುವಾಗಲೇ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಕ್ಕಿ ಬಿದ್ದಿರತ್ತಾರೆ ಹಾಗೆಯೇ ಕೆಲವರು ಹುಡುಗ-ಹುಡುಗಿಯರು ಒಬ್ಬರನ್ನು ಪ್ರೀತಿಸಿ ಇನ್ನೊಬ್ಬರ ಜೊತೆ ಓಡಾಡುತ್ತಿರುತ್ತಾರೆ.

ಹಾಗೆಯೇ ಒಬ್ಬರನ್ನು ಪ್ರೀತಿಸಿ ಇನ್ನೊಬ್ಬರ ಜೊತೆ ಮದುವೆಯಾಗತ್ತಾರೆ ಆದರೆ ಎಲ್ಲರೂ ಕೂಡ ಒಂದೇ ರೀತಿಯಾಗಿರುವುದಿಲ್ಲ. ಹಾಗೆಯೇ  ಎಲ್ಲರ ಚಿಂತನೆಯ ಕೂಡ ಒಂದೇ ರೀತಿಯಾಗಿರುವುದಿಲ್ಲ ಹಾಗಾಗಿಯೇ ಒಬ್ಬರ ಮನಸ್ಸಿನ ಮೇಲೆ ಭಾವನೆಗಳು ನಿಂತಿರುತ್ತವೆ .ನೀವು ಅಂದುಕೊಂಡಿರಬಹುದು ಪ್ರೀತಿಯ ಬಗ್ಗೆ ಇವರ್ಯಾಕೆ ಇಷ್ಟೊಂದು ವಿಸ್ತಾರವಾಗಿ ಹೇಳುತ್ತಿದ್ದಾರೆ ಎಂದು ,ಆದರೆ ಅದಕ್ಕೊಂದು ಕಾರಣ ಇದೆ ಸ್ನೇಹಿತರೆ .ಅದೇನೆಂದರೆ ಒಂದು ಹುಡುಗಿಯು  ಪ್ರೀತಿಸಿದ ಹುಡುಗನನ್ನು ಒಂದೇ ಒಂದು ಕಾರಣಕ್ಕಾಗಿ ಅವನನ್ನು ನನಗೆ ನೀನು ಇಷ್ಟವಿಲ್ಲ ಎಂದು ತಕ್ಷಣವೇ ಹೇಳಿಬಿಡುತ್ತಾಳೆ .ಆದರೆ ಅವಳ ಜೀವನದಲ್ಲಿ ಅಂದರೆ ಹತ್ತು ವರ್ಷದ ನಂತರ ಅವನು ಸಿಕ್ಕಾಗ ಅಲ್ಲಿ ಆಗಿದ್ದೇ ಬೇರೆ .

ಹೌದು ಸ್ನೇಹಿತರೆ ಒಂದು ಹತ್ತು ವರ್ಷದ ನಂತರ ಆಕೆಗೆ ಅವನು ಸಿಕ್ಕಾಗ ಅಲ್ಲಿ ಆಗಿದ್ದಾದರೂ ಏನು ಎನ್ನುವ ಮಾಹಿತಿಯನ್ನು ನಾನು ನಿಮಗೆ ಒಂದು ಲೇಖನದಲ್ಲಿ ಸಂಪೂರ್ಣವಾದ ವಿವರವನ್ನು ನೀಡುತ್ತೇನೆ. ನಾವು ಎಂದು ಹೇಳುವಂತಹ ಹೀಗೊಂದು ಘಟನೆಯ ಎಲ್ಲರಿಗೂ ಕೂಡ ಜೀವನದಲ್ಲಿ ಮಾದರಿಯಾಗಬಹುದು ಎಂದು ಭಾವಿಸುತ್ತೇನೆ. ಸುಂದರ್ ಎನ್ನುವ ಹುಡುಗ ಶೃತಿಯನ್ನು ಬಹಳಷ್ಟು ವರ್ಷಗಳಿಂದ ತುಂಬಾನೇ ಪ್ರೀತಿಸುತ್ತಿರುತ್ತಾನೆ .ಈ ಒಂದು ಪ್ರೀತಿಯನ್ನು ಆತನ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು ಅಂದುಕೊಂಡು ಅವನು ಶ್ರುತಿ ಎನ್ನುವ ಹುಡುಗಿಯ ಹತ್ತಿರ ಹೋಗಿ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳುತ್ತಾನೆ .

ಆದರೆ ಶ್ರುತಿ ಇವನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳುವುದಿಲ್ಲ ಅದರ ಜೊತೆಗೆ ಅವನಿಗೆ ಚುಚ್ಚು ಮಾತುಗಳನ್ನು ಆಡುತ್ತಾರೆ. ಅಂದರೆ ನಿನಗೆ ಯಾವ ಕೆಲಸವಿದೆ ಹಾಗೆಯೇ ಎಷ್ಟು ಸಂಬಳ ಬರುತ್ತೆ .ನಾನು ದಿನಕ್ಕೆ ಖರ್ಚು ಮಾಡುವ ಹಣ ಎಷ್ಟು ಎಂದು ನಿನಗೆ ಗೊತ್ತಾದರೆ ನನ್ನನ್ನು ಕನಸಿನಲ್ಲಿಯೂ ಕೂಡ ನೀನು ನೆನೆಸಿ ಕೊಳ್ಳುವುದಿಲ್ಲ ಎಂದು ಜಂಬದ ಮಾತನ್ನು ಆಡುತ್ತಾಳೆ . ತಕ್ಷಣವೇ ಅವನು ಅವಳ ಮಾತುಗಳನ್ನು ಕೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.

ನಂತರ ಅಂದರೆ ಹತ್ತು ವರ್ಷಗಳ ನಂತರ ಅವರಿಬ್ಬರು ಒಂದು  ಮಾರ್ಕೆಟ್ ನಲ್ಲಿ ಭೇಟಿಯಾಗುತ್ತಾರೆ ಆದರೆ ಶ್ರುತಿ ಎನ್ನುವ ಹುಡುಗಿಗೆ ಮದುವೆಯಾಗಿ ಮಕ್ಕಳು  ಇರುತ್ತವೆ. ಆಗ ಸುಂದರ್ ಎನ್ನುವ ಹುಡುಗನನ್ನು ಕಂಡ ತಕ್ಷಣವೇ ಅವಳು ಅವನನ್ನು ನೋಡುತ್ತಾ , ನನಗೆ ಈಗ ಮದುವೆಯಾಗಿದೆ ನನ್ನ ಗಂಡನಿಗೆ ತಿಂಗಳಿಗೆ ಎರಡು ಲಕ್ಷ ಸಂಬಳ ನನಗೆ ಯಾವ ರೀತಿಯ ಗಂಡ ಬೇಕು ಎಂದು ಅಂದುಕೊಂಡಿದ್ದೇನೂ , ಅದೇ ರೀತಿ  ಇರುವ ಗಂಡ ಸಿಕ್ಕಿದ್ದಾನೆ ಎಂದು ಅವನ ಬಳಿ ಹೇಳುತ್ತಾಳೆ .ಇವರಿಬ್ಬರು ಮಾತನಾಡುವಾಗ ಆಕೆಯ ಗಂಡ ಮಧ್ಯದಲ್ಲಿ ಬಂದುಬಿಡುತ್ತಾನೆ.

ಹೀಗೆ ಮಧ್ಯದಲ್ಲಿ ಬಂದು ಆಕೆಯ ಗಂಡ ಅಂದರೆ ಶೃತಿಯ ಗಂಡ ಸರ್ ನೀವಿಲ್ಲಿ ಎಂದು ಸುಂದರ್  ಎನ್ನುವ ಹುಡುಗನನ್ನು ಮಾತನಾಡಿಸುತ್ತಾನೆ ನಂತರ ಶ್ರುತಿ ತನ್ನ ಗಂಡನನ್ನು ನಿಮಗೆ ಇವನು ಮೊದಲೇ  ಗೊತ್ತೇ ಎಂದು ಕೇಳಿದಾಗ, ಆಕೆಯ ಗಂಡ, ಇವರು ನಮ್ಮ ಕಂಪನಿಯ ಬಾಸ್ 3000 ಕೋಟಿ ಒಡೆಯ ಎಂದು ಹೇಳುತ್ತಾನೆ. ಹಾಗಾಗಿ ಸ್ನೇಹಿತರೆ ನಾವು ಒಬ್ಬ ವ್ಯಕ್ತಿಯ ಬಗ್ಗೆ ಯಾವಾಗಲೂ ಕೀಳಾಗಿ ಮಾತನಾಡಬಾರದು .ಕಾಲಚಕ್ರ ಎನ್ನುವುದು ತಿರುಗುತ್ತಲೇ ಇರುತ್ತದೆ .ಇಂದು ಶ್ರೀಮಂತನಾಗಿ ಇದ್ದವನು ನಾಳೆ ಭಿಕ್ಷುಕ ಕೂಡ ಆಗಬಹುದು ಹಾಗೆಯೇ ಭಿಕ್ಷುಕನು ಕೂಡ ಎಲ್ಲರನ್ನೂ ಅಳುವ ಹಾಗೆ ಬೆಳೆಯಬಹುದು ಹಾಗಾಗಿ ಯಾರನ್ನೂ ಕೂಡ ಯಾವ ಸಂದರ್ಭದಲ್ಲಿಯೂ  ಅಲ್ಲಗಳೆಯಬಾರದು ಎನ್ನುವುದಕ್ಕೆ ಒಂದು ಘಟನೆಯೇ ಸಾಕ್ಷಿ ಸ್ನೇಹಿತರೆ.

Leave a Reply

Your email address will not be published.