ನೀವೇನಾದ್ರು ಚಳಿಗಾಲದಲ್ಲಿ ಇದನ್ನು ಮೂರೇ ಮೂರು ದಿನ ತಿಂದರೆ ಸಾಕು ಸೊಂಟ ಗಟ್ಟಿಯಾಗುತ್ತದೆ ಕೈ ಕಾಲು ಸಂದು ನೋವುಗಳು ಕಡಿಮೆಯಾಗುತ್ತದೆ 100 ವರ್ಷ ಆದರೂ ಕಬ್ಬಿಣದ ಕಡಲೆಯ ಹಾಗೆ ನೀವು ಇರ್ತೀರ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಚಳಿಗಾಲದಲ್ಲಿ ಇದನ್ನು ತಿಂದರೆ ಸೊಂಟ ಗಟ್ಟಿಯಾಗುತ್ತದೆ ಕೈ ಕಾಲು ಸಂದು ನೋವುಗಳು ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ನಿಶಕ್ತಿ ಹಾಗೂ ನಿದ್ರಾಹೀನತೆ ಸಮಸ್ಯೆಗಳು ಕೂಡ ದೂರ ಆಗುತ್ತವೆ.ಹಾಯ್ ಫ್ರೆಂಡ್ಸ್ ನಾನು ಇವತ್ತು ನಿಮಗೆ ತುಂಬಾ ಎನರ್ಜಿಟಿಕ್ ಆದ ಒಂದು ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಇದನ್ನು ನೀವು ಮಾಡಿದರೆ ತುಂಬಾ ಆರೋಗ್ಯವಾಗಿ ಇರುತ್ತೀರಾ. ಮನೆಯಲ್ಲಿ ನೀವು ಇದನ್ನು ತಯಾರಿಸಿಕೊಳ್ಳಬಹುದು ಹಾಗೆ ಆರೋಗ್ಯವಾಗಿ ಇರಬಹುದು ರುಚಿಕರವಾದ ಈ ಪಾಯಸವನ್ನು ನೀವು ತಿಂದರೆ ತುಂಬಾ ಶಕ್ತಿಯಿಂದ ಇರುತ್ತೀರಾ. ಹಾಗಾದರೆ ಈ ಪಾಯಸ ಯಾವುದು ಅದನ್ನು ಹೇಗೆ ಮಾಡುವುದು ಮತ್ತು ಇದಕ್ಕೆ ಬೇಕಾದ ಪದಾರ್ಥಗಳು ಯಾವುವು ಎಂಬುದನ್ನು ನಿಮಗೆ ತಿಳಿಸುತ್ತೇನೆ.

ಎನರ್ಜಿಟಿಕ್ ಪಾಯಸವನ್ನು ತಯಾರಿಸಲು ತುಂಬಾ ಸಮಯ ಬೇಕಾಗಿಲ್ಲ ಹಾಗೆಯೇ ಯಾವಾಗ ಬೇಕಾದರೂ ಇದನ್ನು ಮಾಡಿಕೊಂಡು ಕುಡಿಯಬಹುದು. ಹಾಗಾದರೆ ಇದು ಯಾವ ಪಾಯಸ ವೆಂದರೆ ಅವಳಿ ಬೀಜದ ಪಾಯಸ. ಅವಳಿ ಬೀಜವು ಎಲ್ಲಾ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತದೆ. ಆನ್ಲೈನ್ ನಲ್ಲಿ ಕೂಡ ಅವಳಿ ಬೀಜವನ್ನು ಕೊಂಡುಕೊಳ್ಳಬಹುದು. ಅವಳಿ ಬೀಜವನ್ನು ಇಂಗ್ಲಿಷ್ನಲ್ಲಿ Garden cress ಎಂದು ಕರೆಯುತ್ತಾರೆ. ಹಾಗಾದರೆ ಮೊದಲು ಈ ಪಾಯಸಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಎಂಬುದನ್ನು ನೋಡೋಣ. ಮಖಾನ ಸೀಡ್ಸ್ ಬೇಕಾಗುತ್ತದೆ ಇದು ಕೂಡ ಒಂದು ಎನರ್ಜಿಟಿಕ್ ಪದಾರ್ಥ ಹಾಗೂ ತುಂಬಾ ಪ್ರೋಟೀನ್ ಯುಕ್ತವಾದದ್ದು. ಈ ಸೀಡ್ಸ್ ಗಳು ಆಯುರ್ವೇದಿಕ್ ಅಂಗಡಿಗಳಲ್ಲಿ ಹಾಗೂ ಆನ್ಲೈನ್ ಗಳಲ್ಲೂ ಕೊಡ ಸಿಗುತ್ತದೆ.

ಹಾಗೆಯೇ ಬಾದಾಮಿ ಬೇಕು. ಬಾದಾಮಿಯು ಎಲ್ಲರಿಗೂ ತಿಳಿದೇ ಇದೆ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಇದರಲ್ಲಿ ತುಂಬಾ ಪ್ರೋಟೀನ್ ಇರುತ್ತದೆ. ಹಾಗೆ ಗೋಡಂಬಿ ತೆಗೆದುಕೊಳ್ಳಬೇಕು. ಒಣಕೊಬ್ಬರಿಯನ್ನು ಕೂಡ ತೆಗೆದುಕೊಳ್ಳಬೇಕು ಕೊಬ್ಬರಿಯಲ್ಲಿ ತುಂಬಾ ಶಕ್ತಿ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಂತರ ಖರ್ಜೂರವನ್ನು ತೆಗೆದುಕೊಳ್ಳಬೇಕು ಉತ್ತತ್ತಿಯನ್ನು ಹಾಕಿದರೂ ನಡೆಯುತ್ತೆ. ಈಗ ಒಂದು ಪಾತ್ರೆಯಲ್ಲಿ ಮಖಾನ ಬಾದಾಮಿ ಗೋಡಂಬಿ ಹಾಗೂ ಕೊಬ್ಬರಿಯನ್ನು ಬಿಸಿ ಮಾಡಿಕೊಳ್ಳಬೇಕು ನಂತರ ಇದನ್ನು ಚೆನ್ನಾಗಿ ಆರಿದ ಮೇಲೆ ಮಿಕ್ಸಿ ಮಾಡಿಕೊಳ್ಳಬೇಕು ಚೆನ್ನಾಗಿ ಪುಡಿ ಮಾಡಿಕೊಂಡು ಇದನ್ನು ರೆಡಿ ಮಾಡಿಕೊಳ್ಳಬೇಕು.

ಅವಳಿ ಬೀಜವನ್ನು ರಾತ್ರಿ ಒಂದು ಸ್ಪೂನ್ ನಷ್ಟು ನೆನೆಹಾಕಬೇಕು ನೀವು ಇದನ್ನು ನೆನಪು ಹಾರಿದರೆ ಪಾಯಸ ಮಾಡುವ ದಿನ ಎರಡು ತಾಸಿನ ಹಿಂದೆ ನೆನೆಹಾಕಬೇಕು ಕನಿಷ್ಠ ಎರಡು ತಾಸು ಇವು ನೆನೆಯಬೇಕು. ಈಗ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಸ್ವಲ್ಪ ಕಾದಮೇಲೆ ನೆನೆದ ಅವಳಿ ಬೀಜವನ್ನು ಹಾಕಬೇಕು. ಇವೆರಡೂ ಸ್ವಲ್ಪ ಕುದಿದ ಮೇಲೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು ಹಾಗೆ ಖರ್ಜೂರವನ್ನು ಚಿಕ್ಕ ಚಿಕ್ಕದಾಗಿ ಪೀಸ್ ಮಾಡಿ ಪಾಯಸದಲ್ಲಿ ಹಾಕಬೇಕು. ಪಾಯಸಕ್ಕೆ ಬೇಕಾದರೆ ನೀವು ಸ್ವಲ್ಪ ಬೆಲ್ಲವನ್ನು ಅಥವಾ ಕಲ್ಲು ಸಕ್ಕರೆಯನ್ನು ಹಾಕಿಕೊಳ್ಳಬೇಕು. ಹೀಗೆ ಮಾಡಿದರೆ ಅವಳಿ ಬೀಜದ ಪಾಯ್ಸ ರೆಡಿಯಾಗುತ್ತದೆ. ಈ ಪಾಯಸವನ್ನು ಗರ್ಭಿಣಿಯರು ಕೂಡ ಕುಡಿಯಬಹುದು ಇದನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ

ಹಾಗೂ ನೀವೇನಾದರೂ ನಿಶಕ್ತಿಯಾಗಿದ್ದರೆ ಅಂದರೆ ವೀಕ್ ಆಗಿದ್ದರೆ ಇದನ್ನು ಸೇವಿಸಬೇಕು. ಈ ಪಾಯಸ ದಿಂದ ಚರ್ಮದ ಸಮಸ್ಯೆಗಳು ಹೋಗುತ್ತದೆ. ಮಹಿಳೆಯರು ಪ್ರಸವವನ್ನು ಹೊಂದಿದಾಗ ಇದನ್ನು ಕುಡಿಯಬೇಕು. ಅವಳಿ ಬೀಜದ ಪಾಯಸ ಕೈ ಕಾಲು ನೋವು ಸೊಂಟ ನೋವನ್ನು ನಿವಾರಿಸುತ್ತದೆ. ಡ್ರೈ ಫ್ರೂಟ್ಸ್ ಹಾಕಿ ಮಾಡಿರುವುದರಿಂದ ಇದರಲ್ಲಿ ತುಂಬಾ ಶಕ್ತಿ ಇರುತ್ತದೆ ನಿಮ್ಮ ರೋಗನಿರೋಧಕ ಶಕ್ತಿಯು ಕೂಡ ಹೆಚ್ಚುತ್ತದೆ. ಚಿಕ್ಕಮಕ್ಕಳಿಗೆ ಈ ಪಾಯಸವನ್ನು ಮಾಡಿ ಕುಡಿಸಬಹುದು. ಈ ಪಾಯಸದಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇದನ್ನು ಬೆಳಗ್ಗೆ ಟೀ ಕುಡಿಯುವ ಬದಲು ಕುಡಿಯಬಹುದು. ಈ ಪಾಯಸವು ಸ್ಲಿಮ್ ಆಗಲು ಸಹಕರಿಸುತ್ತದೆ ಅಂದರೆ ನೀವು ಇದನ್ನು ಸೇವಿಸಿದರೆ ತೆಳ್ಳ ಆಗುತ್ತೀರಾ.

ನಿಮ್ಮ ದೇಹದ ಬೊಜ್ಜು ಕರಗುತ್ತದೆ. ಹಾಗಾದರೆ ಸ್ನೇಹಿತರೇ ನೀವು ಈ ಪಾಯಸವನ್ನು ಮಾಡಿ ಕುಡಿಯಿರಿ ರಾತ್ರಿ ಊಟ ಬಿಡುವವರು ಈ ಪಾಯಸವನ್ನು ಮಾಡಿಕೊಂಡು ಕುಡಿದರೆ ನಿದ್ರೆ ಬರುತ್ತದೆ ಹಾಗೆ ನಿಮಗೆ ಶಕ್ತಿಯು ಇರುತ್ತದೆ. ಈ ಎನರ್ಜಿಟಿಕ್ ಅವಳಿ ಬೀಜಗಳಲ್ಲಿ ಐರನ್ ಕಂಟೆಂಟ್ ಅಂದರೆ ಕಬ್ಬಿಣ ಅಂಶ ಇರುವುದರಿಂದ ದೇಹಕ್ಕೆ ತುಂಬಾ ಶಕ್ತಿ ಕೊಡುತ್ತದೆ ಇದನ್ನು ಯಾರಾದರೂ ಕೂಡ ಸೇವಿಸಬಹುದು. ಇದರಿಂದ ನೀವು ತುಂಬಾ ಲಾಭವನ್ನು ಪಡೆದುಕೊಳ್ಳುವಿರಿ ನೀವು ನಿಮ್ಮ ಮನೆಯಲ್ಲಿ ಈ ಪಾಯಸವನ್ನು ತಯಾರು ಮಾಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೂ ಹೇಳಿ ಪಾಯಸವನ್ನು ಮಾಡಿಸಿ ಧನ್ಯವಾದಗಳು.

Leave a Reply

Your email address will not be published.