ಅಪ್ಪಿ ತಪ್ಪಿಯೂ ನೀವು ನಿಮ್ಮ ಮನೆಯ ದೇವರಕೋಣೆಯಲ್ಲಿ ಈ ಮೂರ್ತಿಗಳನ್ನು ಜೊತೆಗೆ ಇಡಬೇಡಿ … ಹಾಗೇನಾದ್ರೂ ಇಟ್ಟರೆ ನೀವು ಪೂಜೆ ಮಾಡಿದ ಫಲ ನಿಮಗೆ ಸಿಗುವುದಿಲ್ಲ ಹಾಗೆಯೇ ಈ ರೀತಿಯ ತೊಂದರೆಗಳು ನಿಮ್ಮ ಜೀವೆನದಲ್ಲಿ ಉಂಟಾಗುತ್ತವೆ ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವರ ಕೋಣೆಯಲ್ಲಿ ಅಪ್ಪಿತಪ್ಪಿಯೂ ಕೂಡ ಈ ಎರಡು ಮೂರ್ತಿಗಳನ್ನು ಜೊತೆಯಲ್ಲಿ ಇಡಬೇಡಿ.ಹಾಯ್ ಸ್ನೇಹಿತರೆ ಈ ಮಾಹಿತಿಯಲ್ಲಿ ದೇವರಕೋಣೆಯ ಸಂಪೂರ್ಣ ವಿವರವನ್ನು ತಿಳಿದುಕೊಳ್ಳುತ್ತೀರಿ. ಹಾಗಾದರೆ ದೇವರಕೋಣೆಯಲ್ಲಿ ಏನು ಇರಬೇಕು ಹಾಗೂ ಹೇಗೆ ಇಡಬೇಕು ಎಂಬುದನ್ನು ನೋಡಿ ತಿಳಿದುಕೊಳ್ಳಿ. ಮನೆಯಲ್ಲಿ ಮುಖ್ಯವಾಗಿ ದೇವರ ಮನೆ ತುಂಬಾ ಪವಿತ್ರವಾದದ್ದು ಹಿಂದಿನ ಕಾಲದಲ್ಲಿ ದೇವರ ಕೋಣೆಯನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಚಿಕ್ಕ ಚಿಕ್ಕದಾಗಿ ದೇವರ ಕೋಣೆಯನ್ನು ಕಟ್ಟಿಸುತ್ತಾರೆ ಕೆಲವೊಬ್ಬರು ದೇವರನ್ನು ಒಂದು ಕಟ್ಟಿಗೆಯ ಟೇಬಲ್ ಮೇಲೆ ಇಟ್ಟು ಕೂಡ ಪೂಜಿಸುತ್ತಾರೆ ಇದು ಎಲ್ಲಾ ಅವರವರಿಗೆ ಸಂಬಂಧಪಟ್ಟಿದ್ದು.

ವಾಸ್ತು ಪ್ರಕಾರದ ಪ್ರಕಾರ ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು. ದಿನನಿತ್ಯವೂ ನಾವು ದೇವರ ಕೋಣೆಯನ್ನು ಸ್ವಚ್ಛ ಮಾಡಿ ದೇವರನ್ನು ಪೂಜಿಸಿದರೆ ಮನಸ್ಸಿಗೆ ಅದೇನೋ ಶಾಂತಿ ಸಿಗುತ್ತದೆ ಹಾಗೆಯೇ ನಮ್ಮ ಜೀವನದಲ್ಲಿ ನೆಮ್ಮದಿ ಆರೋಗ್ಯ ಎಂಬುದು ವೃದ್ಧಿಸುತ್ತದೆ. ಹಾಗೆಯೇ ನಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಒಂದು ವೇಳೆ ದೇವರಕೋಣೆ ತಪ್ಪು ದಿಕ್ಕಿನಲ್ಲಿ ಇದ್ದರೆ ನಾವು ನೋವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಶಾಸ್ತ್ರದ ಪ್ರಕಾರ ಕೆಲವು ದೇವರುಗಳನ್ನು ಅಥವಾ ದೇವರ ಮೂರ್ತಿಗಳನ್ನು ಜೊತೆಯಲ್ಲಿ ಇಡಬಾರದು. ಜೊತೆಯಲ್ಲಿ ಇಟ್ಟರೆ ಇವುಗಳ ನಕಾರಾತ್ಮಕ ಪ್ರಭಾವ ನಮ್ಮ ಮೇಲೆ ಬೀಳುತ್ತದೆ.

ಆದ್ರೆ ಸ್ನೇಹಿತರೆ ನಮ್ಮ ಮನೆಯಲ್ಲಿರುವ ದೇವರಕೋಣೆಯ ಮಹತ್ವವನ್ನು ನಾನು ಈ ಮಾಹಿತಿಯಲ್ಲಿ ತಿಳಿಸುತ್ತೇನೆ. ಮೊದಲನೆಯದಾಗಿ ನಮ್ಮ ಮನೆಯ ದೇವರ ಕೋಣೆ ಪವಿತ್ರ ಸ್ಥಳವಾಗಿರುತ್ತದೆ ಹಾಗೆಯೇ ದೇವರ ಕೋಣೆಯಲ್ಲಿ ದೇವರ ಫೋಟೋಗಳನ್ನು ಮಾತ್ರ ಇಡಬೇಕು ಪಕ್ಕದಲ್ಲಿ ಸಾಧು-ಸಂತರ ಅಥವಾ ಮನೆಯಲ್ಲಿ ನಿಮಗೆ ಪ್ರಿಯವಾದವರು ಸತ್ತರೆ ಅವರ ಫೋಟೋವನ್ನು ಕೂಡ ದೇವರ ಹತ್ತಿರ ಇಡಬಾರದು. ಹೀಗೆ ಮಾಡುವುದು ದೇವರಿಗೆ ಅವಮಾನಿಸಿದಂತೆ ಆಗುತ್ತದೆ ಕೆಲವರು ಸಾಧುಸಂತರನ್ನು ದೇವರೆಂದು ಪರಿಗಣಿಸಿ ಅವರಿಗೆ ವಿಶೇಷ ಸ್ಥಾನವನ್ನು ಕೊಟ್ಟು ಅವರ ಚಿತ್ರವನ್ನು ದೇವರ ಕೊನೆಯಲ್ಲಿ ಇಡುತ್ತಾರೆ ಈ ರೀತಿಯಾಗಿ ಮಾಡಬಾರದು. ವಾಸ್ತುಶಾಸ್ತ್ರದಲ್ಲಿ ಹೀಗೆ ಮಾಡುವುದು ಅಶುಭ ಎಂದು ಹೇಳುತ್ತಾರೆ.

ಎರಡನೆಯದಾಗಿ ಯಾವುದೇ ದೇವಾನುದೇವತೆಗಳು ಫೋಟೋ ಇದ್ದರೆ ಅಥವಾ ಮೂರ್ತಿಗಳಿದ್ದರೆ ಒಂದಕ್ಕಿಂತ ಹೆಚ್ಚಾಗಿ ಇನ್ನೊಂದನ್ನು ಇಟ್ಟುಕೊಳ್ಳಬಾರದು ಒಂದರ ಮುಂದೆ ಅದೇ ತರವಾದ ಇನ್ನೊಂದು ಮೂರ್ತಿಯನ್ನು ಕೂಡ ಇಡಬಾರದು. ಹಾಗೆಯೇ ಇನ್ನೊಂದು ವಿಷಯವೇನೆಂದರೆ ಯಾವಾಗಲೂ ದೇವರುಗಳ ಫೋಟೋ ಅಥವಾ ಮೂರ್ತಿಗಳು ಕುಳಿತುಕೊಂಡಿರುವ ಹಾಗೆ ಇರಬೇಕು ನಿಲ್ಲುವ ಮೂರ್ತಿಗಳು ಅಥವಾ ಫೋಟೋಗಳು ಇರಬಾರದು ಏಕೆಂದರೆ ದೇವರುಗಳು ಮನೆಯಲ್ಲಿ ಇರುವುದಿಲ್ಲ ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಬಹುದು. ಇನ್ನೊಂದು ಮಹತ್ವಪೂರ್ಣವಾದ ವಿಷಯವೇನೆಂದರೆ ದೇವರ ಜಗಲಿ ಎತ್ತರವಾಗಿರಬೇಕು ಅದರ ಸುತ್ತ ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಯಾವುದೇ ಕಾರಣಕ್ಕೂ ಗಲೀಜನ್ನು ಮಾಡಬಾರದು. ಯಾವುದೇ ಬೇಡವಾದ ವಸ್ತುಗಳನ್ನು ದೇವರಕೋಣೆಯಲ್ಲಿ ಇಡಬಾರದು. ಹಾಗಾದರೆ ಈಗ ಜಗಲಿಯಲ್ಲಿ ಅಂದರೆ ದೇವರು ಇರುವ ಸ್ಥಳದಲ್ಲಿ ಯಾವ ಯಾವ ಮೂರ್ತಿಗಳನ್ನು ಜೋಡಿ ಎಲ್ಲಿ ಇಡಬೇಕು ಎಂಬುದನ್ನು ತಿಳಿಯೋಣ. ಸಾಮಾನ್ಯವಾಗಿ ಭಗವಾನ್ ಶ್ರೀಕೃಷ್ಣನು ಎಲ್ಲರಿಗೂ ಪ್ರಿಯವಾಗಿದ್ದಾರೆ ಹಾಗಾಗಿ ಮನೆಯ ಮುಖ್ಯ ದ್ವಾರದ ಮೇಲೆ ಶ್ರೀಕೃಷ್ಣನ ಮೂರ್ತಿಯನ್ನು ಇಡುವುದು ಒಳ್ಳೆಯದು. ಹಾಗೆಯೇ ದೇವರಕೋಣೆಯಲ್ಲಿ ಗಣೇಶನ ಹತ್ತಿರ ಮಹಾಲಕ್ಷ್ಮಿಯ ಮೂರ್ತಿಯನ್ನು ಇಡುವುದು ಕೂಡ ತುಂಬಾ ಶುಭವಾದದ್ದು.

ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ಹಾಗೆಯೇ ಮಹಾಲಕ್ಷ್ಮಿಯನ್ನು ಸರಿಯಾಗಿ ಬಳಸಿಕೊಳ್ಳುವ ಶಕ್ತಿ ಹಾಗೂ ಬುದ್ಧಿಯನ್ನು ವಿಘ್ನೇಶ್ವರನು ನಿಮಗೆ ದಯಪಾಲಿಸುವನು. ಹಾಗೆಯೇ ಲಕ್ಷ್ಮಿ ದೇವಿಯ ಮೂರ್ತಿಯ ಜೊತೆಗೆ ಭಗವಾನ್ ವಿಷ್ಣು ದೇವನ ಮೂರ್ತಿಯನ್ನು ಕೂಡ ಜೊತೆಗೆ ಇಟ್ಟರೆ ಲಕ್ಷ್ಮೀನಾರಾಯಣನ ಪೂಜೆಯನ್ನು ಜೊತೆಗೆ ಮಾಡಬಹುದು. ಇದು ಕೂಡ ಶುಭವಾದದ್ದು. ಈ ರೀತಿಯಾಗಿ ಪೂಜೆ ಮಾಡುವುದರಿಂದ ನಿಮ್ಮ ದಾಂಪತ್ಯದಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ. ಹಾಗೆ ದಾಂಪತ್ಯದಲ್ಲಿ ವಿರಸಗಳು ಜಗಳಗಳು ಕಡಿಮೆಯಾಗುತ್ತವೆ.

ಹಾಗೆ ಭಗವಂತ ಶ್ರೀ ಕೃಷ್ಣನ ಜೊತೆಗೆ ರಾಧೆಯು ಇರುವಂತಹ ಮೂರ್ತಿಯನ್ನು ನೀವು ಪೂಜಿಸಿದರೆ ತುಂಬಾ ಒಳ್ಳೆಯದು ಬರೀ ಶ್ರೀಕೃಷ್ಣನ ಮೂರ್ತಿಯನ್ನು ಪೂಜಿಸಬಾರದು ಜೊತೆಗೆ ರಾಧೆಯ ಮೂರ್ತಿಯು ಕೂಡ ಇರಬೇಕು. ರಾಧಾ ಮೂರ್ತಿಯು ಇರದಿದ್ದರೆ ಗೋಮಾತೆಯ ಮೂರ್ತಿಯನ್ನು ಕೃಷ್ಣನ ಮೂರ್ತಿಯ ಜೊತೆಯಲ್ಲಿಟ್ಟು ಪೂಜಿಸಬೇಕು. ಇನ್ನು ಶಿವನಮೂರ್ತಿ ಏನಾದರೂ ಜಗಲಿ ಮೇಲೆ ಇದ್ದರೆ ಜೊತೆಗೆ ಬ್ರಹ್ಮ ವಿಷ್ಣು ಮೂರ್ತಿಗಳನ್ನು ಇಟ್ಟು ಪೂಜಿಸಬೇಕು. ಹೀಗೆ ಮಾಡುವುದರಿಂದ ಬ್ರಹ್ಮ ವಿಷ್ಣು ಮಹೇಶ್ವರರ ಸಂಪೂರ್ಣ ಆಶೀರ್ವಾದವೂ ನಿಮಗೆ ಸಿಗುವುದು.

ಹಾಗೆಯೇ ನಿಮ್ಮ ಮನೆಯಲ್ಲಿ ಆಂಜನೇಯಸ್ವಾಮಿಯ ಮೂರ್ತಿ ಅಥವಾ ಫೋಟೋವನ್ನು ಇಟ್ಟುಕೊಳ್ಳಬೇಕು ನಿಮ್ಮ ಮನೆಯ ಎಲ್ಲಾ ಸಂಕಟಗಳನ್ನು ಹಾಗೂ ಶನಿಯನ್ನು ಕಳೆಯುವವನು ಹಾಗೆಯೇ ಆಂಜನೇಯ ಸ್ವಾಮಿಯ ಜೊತೆಗೆ ಶ್ರೀರಾಮನು ಇರುವ ಫೋಟೋ ಅಥವಾ ಮೂರ್ತಿಯನ್ನು ಜೊತೆಗೆ ಇಡಬೇಕು. ರಾಮನ ಜೊತೆಗೆ ಲಕ್ಷ್ಮಣ ಹಾಗೂ ಸೀತೆ ಇರುವ ಮೂರ್ತಿಯನ್ನು ಕೂಡ ಆಂಜನೇಯನ ಜೊತೆಗೆ ಇಡಬಹುದು. ಆಂಜನೇಯನು ಶ್ರೀರಾಮನ ಪರಮ ಭಕ್ತ. ಹಾಗೆಯೇ ಮನೆಯಲ್ಲಿ ಶಿವನು ಜೊತೆಗೆ ಬಾರದಿರುವ ಫೋಟೋ ಇದ್ದರೆ ಮದುವೆಯಾದ ದಂಪತಿಗಳಿಗೆ ತುಂಬಾ ಒಳ್ಳೆಯದಾಗುತ್ತದೆ ಜೊತೆಗೆ ಪಾರ್ವತಿಯ ಕೈಯಲ್ಲಿ ಗಣೇಶ ಇರುವ ಚಿತ್ರವು ಕೂಡ ಇರಬೇಕು ಹೀಗೆ ಆಗುವುದರಿಂದ ನಿಮ್ಮ ಮನೆಯಲ್ಲಿ ಸಂತಾನದ ಸಮಸ್ಯೆಯೂ ಇರುವುದಿಲ್ಲ.

ಆದರೆ ಸ್ನೇಹಿತರೆ ಮನೆಯ ದೇವರ ಕೋಣೆಯಲ್ಲಿ ಶನಿದೇವನ ಹಾಗೂ ಕಾಲಭೈರವನ ಹಾಗೂ ಮಹಾಕಾಳಿ ಮತ್ತು ನಟರಾಜನ ಮೂರ್ತಿಯನ್ನು ದೇವರಕೋಣೆಯಲ್ಲಿ ಇರಬಾರದು. ಇನ್ನೇನಾದರೂ ನಿಮ್ಮ ಮನೆಯಲ್ಲಿ ಶಿವಲಿಂಗನ ಮೂರ್ತಿಯಿದ್ದರೆ ತುಳಸಿ ಎಲೆಗಳನ್ನು ಇಟ್ಟು ಪೂಜೆ ಮಾಡಬಾರದು ಹೀಗೆ ಮಾಡಿದರೆ ಅದು ತಪ್ಪಾಗುತ್ತದೆ ಹಾಗಾದರೆ ಸ್ನೇಹಿತರೇ ದೇವರಕೋಣೆಯ ಮಹತ್ವದ ವಿಷಯಗಳು ಈ ಮಾಹಿತಿಯಲ್ಲಿ ನಿಮಗೆ ತಿಳಿದಿದೆ ಎಂದು ನಾನು ಅಂದುಕೊಳ್ಳುತ್ತೇನೆ ಧನ್ಯವಾದಗಳು.

Leave a Reply

Your email address will not be published.