ನೀವೇನಾದ್ರು ಇಂತಹ ದಿನಗಳನ್ನು ನೋಡಿಕೊಂಡು ಮದುವೆ ಮತ್ತು ನಿಶ್ಚಿತಾರ್ಥಗಳನ್ನು ಮಾಡಿಕೊಂಡರೆ ನಿಮ್ಮ ದಾಂಪತ್ಯ ಜೀವನ ನೀವು ಅಂದುಕೊಂಡಕ್ಕಿಂತ ಸುಖಮಯವಾಗಿರತ್ತೆ ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮದುವೆ ನಿಶ್ಚಿತಾರ್ಥಗಳನ್ನು ವಾರದ ದಿನಗಳಲ್ಲಿ ಆದರೆ ನಿಮ್ಮ ದಾಂಪತ್ಯ ಜೀವನ ತುಂಬಾ ಸುಖಿ ಹೋಗಿರುತ್ತದೆ ಹಾಗೆಯೇ ನೀವು ಜೀವನದಲ್ಲಿ ತುಂಬಾ ಖುಷಿಯಾಗಿರುತ್ತೀರಾ.ಸ್ನೇಹಿತರೆ ಮದುವೆ ಎಂಬುದು ದೇವರು ಹೊಸೆಯುವ ಹೊಸಹೊಸ ಬಂಧಗಳ ಸಂಬಂಧ. ಸಂಬಂಧಗಳಲ್ಲಿ ಹೊಸ ಹೊಸ ಮುಖಗಳು ಹಾಗೆಯೇ ಹೊಸ ಮನಸ್ಸುಗಳು ಬೆರೆಯುತ್ತವೆ. ಮದುವೆಯ ಈ ಬಂಧ ಅನುರಾಗದ ಅನುಬಂಧ. ಬರೀ ತಾಳಿ ಕಟ್ಟುವುದರಿಂದ ಮದುವೆಯೆಂಬುದು ಆಗುವುದಿಲ್ಲ. ಮದುವೆಯಾಗಬೇಕೆಂದರೆ ಎರಡು ಮನಸ್ಸುಗಳ ಸಂಪೂರ್ಣ ಒಪ್ಪಿಗೆ ಇರಬೇಕು ಹಾಗೆ ಎರಡು ಸಂಬಂಧಗಳಲ್ಲಿ ಸಂಪೂರ್ಣ ಒಪ್ಪಿಗೆ ಇರಬೇಕು.

ಹೆಣ್ಣುಮಗಳನ್ನು ಮದುವೆ ಮಾಡಿ ಕೊಡುವ ತಂದೆ ತಾಯಿಯರ ಮನದಲ್ಲಿ ಎಷ್ಟು ನೋವಿರುತ್ತದೆ ಅಷ್ಟೇ ಖುಷಿ ಇರುತ್ತದೆ. ಎಲ್ಲ ತಂದೆ-ತಾಯಿಯರು ಮಕ್ಕಳ ಮದುವೆ ಮಾಡುವುದು ತಮ್ಮ ದೊಡ್ಡ ಜವಾಬ್ದಾರಿ ಎಂದು ತಿಳಿದಿರುತ್ತಾರೆ. ಹೀಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಒಂದು ಮದುವೆಯನ್ನು ಮಾಡಲು ನಿರ್ಧರಿಸುತ್ತಾರೆ. ಮದುವೆ ಮಾಡಲು ಕೇವಲ ಮನುಷ್ಯರು ಬೇಕಾಗುವುದಿಲ್ಲ ಜೊತೆಗೆ ಸಮಯ ಶುಭವಾರಗಳು ಕೂಡ ಬೇಕಾಗುತ್ತವೆ. ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗಬೇಕು ಎಂದು ನಾವು ಆಸೆಯನ್ನು ಇಟ್ಟಿರುತ್ತೇವೆ

ಆದರೆ ಕೆಟ್ಟ ದಿನಗಳಲ್ಲಿ ಕೆಟ್ಟ ನಕ್ಷತ್ರಗಳಲ್ಲಿ ಅಥವಾ ಕೆಟ್ಟ ವಾರಗಳಲ್ಲಿ ನಾವು ಇಂತಹ ಕಾರ್ಯಗಳನ್ನು ಮಾಡಿದರೆ ತುಂಬಾ ಅಪಾಯಕಾರಿಯಾದದ್ದು. ನವಜೋಡಿಗಳಿಗೆ ಪೂರ್ತಿಯಾಗಿ ದೇವರ ಆಶೀರ್ವಾದ ಮತ್ತು ಎಲ್ಲರ ಆಶೀರ್ವಾದ ಸಿಗಬೇಕಾದರೆ ಒಂದು ಒಳ್ಳೆಯ ದಿನ ಬೇಕು ಹಾಗೆಯೇ ಒಳ್ಳೆಯ ನಕ್ಷತ್ರಗಳು ತಿಥಿಗಳು ಕೂಡಿಬರಬೇಕು. ಅದಕ್ಕಾಗಿಯೇ ದೊಡ್ಡವರು ಹೇಳಿರಬಹುದು ಕಂಕಣ ಭಾಗ್ಯ ಕೂಡಿ ಬಂದರೆ ಮದುವೆಯ ಮಾತು ದೂರವೇನಿಲ್ಲ ಎಂದು. ಹಾಗಾದರೆ ಮದುವೆಯನ್ನು ಯಾವ ದಿನದಂದು ಮಾಡಬೇಕು ಹಾಗೆ ಯಾವ ನಕ್ಷತ್ರದಲ್ಲಿ ಮಾಡಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ.

ವಾರದ ಎಲ್ಲಾ ದಿನಗಳು ಒಳ್ಳೆಯದಾಗಿರುತ್ತದೆ ಆದರೆ ಕೆಲವೊಂದು ದಿನಗಳು ತುಂಬಾ ಶುಭ ಲಾಭಗಳಿಂದ ಕೂಡಿರುತ್ತವೆ. ಮದುವೆಯ ಮೊದಲು ಎಂಗೇಜ್ಮೆಂಟ್ ಅನ್ನು ಮಾಡಲು ತುಂಬಾ ಜನರು ಒಳ್ಳೆಯ ದಿನಗಳನ್ನು ನೋಡುವುದಿಲ್ಲ ಅವರವರಿಗೆ ಅನುಕೂಲವಾದ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಈ ಕಾರ್ಯಕ್ರಮವು ಕೂಡ ನವಜೋಡಿಗಳಿಗೆ ಪ್ರಥಮವಾಗಿ ಕಾರ್ಯಕ್ರಮವಾಗಿರುತ್ತದೆ ಹಾಗಾದರೆ ಎಂಗೇಜ್ಮೆಂಟ್ ಮಾಡಿಕೊಳ್ಳಲು ಯಾವ ದಿನಗಳು ಎಂದು ನೀವು ಈ ಮಾಹಿತಿಯಲ್ಲಿ ತಿಳಿದುಕೊಳ್ಳಿ.

ಭಾನುವಾರ ಸೋಮವಾರ ಬುಧವಾರ ಮತ್ತು ಗುರುವಾರ ಹಾಗೂ ಶನಿವಾರ ಈ ಎಲ್ಲಾ ದಿನಗಳು ಎಂಗೇಜ್ಮೆಂಟ್ ಮಾಡಿಕೊಳ್ಳಲು ಪ್ರಶಸ್ತವಾದ ದಿನಗಳು. ಈ ದಿನಗಳಲ್ಲಿ ನೀವು ಎಂಗೇಜ್ಮೆಂಟ್ ಆದರೆ ತುಂಬಾ ವಿಶೇಷವಾದ ಶುಭ ಲಾಭಗಳನ್ನು ಪಡೆಯುತ್ತೀರಾ ಹಾಗೆ ನಿಮ್ಮ ದಾಂಪತ್ಯ ಜೀವನ ತುಂಬಾ ಸುಖಿ ಹಾಗೂ ಖುಷಿಯಿಂದ ಇರುತ್ತದೆ. ಮಂಗಳವಾರ ಹಾಗೂ ಶುಕ್ರವಾರ ಎಂಗೇಜ್ಮೆಂಟ್ ಮಾಡಿಕೊಳ್ಳಬಾರದು. ತಿಥಿಗಳಲ್ಲಿ ಪಂಚಮಿ ಸಪ್ತಮಿ ಹಾಗೂ ದಶಮಿ ತಿಥಿಗಳಲ್ಲಿ ಎಂಗೇಜ್ಮೆಂಟ್ ಆದರೆ ತುಂಬಾ ಒಳ್ಳೆಯದು ಹಾಗೆಯೇ ಏಕಾದಶಿ ತ್ರಯೋದಶಿ ಹಾಗೂ ಪೌರ್ಣಮಿ ತಿಥಿಯಂದು ಎಂಗೇಜ್ಮೆಂಟ್ ಮಾಡಿಕೊಂಡರೆ ಅತ್ಯದ್ಭುತ ಫಲಗಳನ್ನು ನೀವು ನೋಡುತ್ತೀರಾ.

ನಕ್ಷತ್ರಗಳಲ್ಲಿ ನೋಡುವುದಾದರೆ ಪುಷ್ಯಮಿ ನಕ್ಷತ್ರ ಹಸ್ತ ನಕ್ಷತ್ರ ಪುನರ್ವಸು ನಕ್ಷತ್ರ ಸ್ವಾತಿ ನಕ್ಷತ್ರ ಅನುರಾಧ ನಕ್ಷತ್ರ ಹಾಗೂ ಚಿತ್ತ ನಕ್ಷತ್ರ ಹಾಗೂ ಧನಿಷ್ಠ ನಕ್ಷತ್ರಗಳಲ್ಲಿ ಎಂಗೇಜ್ಮೆಂಟ್ ಆಗುವುದರಿಂದ ತುಂಬಾ ಶುಭಫಲಗಳನ್ನು ನೀವು ನೋಡುತ್ತೀರಾ. ಕನಿಷ್ಠ ಒಳ್ಳೆಯ ದಿನಗಳನ್ನು ನೋಡಿ ಎಂಗೇಜ್ಮೆಂಟ್ ಆಗುವುದು ತುಂಬಾನೇ ಒಳ್ಳೆಯದು. ಹಾಗಾದರೆ ಮದುವೆಯಾಗಲು ಯಾವ ದಿನಗಳು ಶ್ರೇಷ್ಠ ಎಂದು ಹೇಳುತ್ತೇನೆ ಬುಧವಾರ ಗುರುವಾರ ಶುಕ್ರವಾರ ಮದುವೆಯಾಗಲು ತುಂಬಾ ಒಳ್ಳೆಯ ದಿನಗಳು ಉಳಿದ ದಿನಗಳಲ್ಲಿ ಮದುವೆಯಾದರೆ ಸಾಕಷ್ಟು ನೆಮ್ಮದಿಯೂ ನಿಮಗೆ ಇರುವುದಿಲ್ಲ ಬದಲಾಗಿ ಅರ್ಧ ನೋವು ಅರ್ಧ ಖುಷಿಯೂ ನಿಮಗೆ ಇರುತ್ತದೆ.

ಜೇಷ್ಠ ಮಾಸದಲ್ಲಿ ನೀವು ಮದುವೆಯಾದರೆ ನಿಮ್ಮ ದಾಂಪತ್ಯ ಜೀವನ ತುಂಬಾ ಖುಷಿಯಾಗಿರುತ್ತದೆ ಹಾಗೆಯೇ ನೆಮ್ಮದಿಯಿಂದ ಇರುತ್ತದೆ. ರೇವತಿ ನಕ್ಷತ್ರ ತುಂಬಾ ಒಳ್ಳೆಯ ನಕ್ಷತ್ರ ಎಂಗೇಜ್ಮೆಂಟ್ ಆಗಲು ಯಾವ ನಕ್ಷತ್ರಗಳು ತುಂಬಾ ಒಳ್ಳೆಯವೋ ಅವೆಲ್ಲಾ ನಕ್ಷತ್ರ ತಿಥಿಗಳು ಮದುವೆಗಳಿಗೂ ಕೂಡ ತುಂಬಾ ಒಳ್ಳೆಯದು. ಕಾರ್ತಿಕ ಮಾಸ ಹಾಗೂ ಮಾರ್ಗಶಿರ ಮಾಸದಲ್ಲಿ ನೀವೇನಾದರೂ ದಾಂಪತ್ಯ ಜೀವನವನ್ನು ಶುರುಮಾಡಿದರೆ ನಿಮ್ಮ ಜೀವನ ಸಾಮಾನ್ಯವಾಗಿ ಮಾತ್ರ ಇರುತ್ತದೆ. ಹಾಗಾದರೆ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನೀವು ತುಂಬಾ ವಿಶೇಷವಾದ ದಿನಗಳು ನಕ್ಷತ್ರಗಳು ತಿಥಿಗಳು ಯಾವವು ಎಂಬುದನ್ನು ತಿಳಿದಿರುತ್ತೀರಿ. ಇಂತಹ ಒಳ್ಳೆಯ ದಿನಗಳಲ್ಲಿ ಮದುವೆಯಾಗಿ ನೀವು ನಿಮ್ಮ ಜೀವನವನ್ನು ನೆಮ್ಮದಿ ಇಂದ ಹಾಗೂ ಖುಷಿಯಿಂದ ನಡೆಸಿ ಧನ್ಯವಾದಗಳು.

Leave a Reply

Your email address will not be published.