ನಿಮಗೇನಾದ್ರು ಯಾರಾದ್ರೂ ಮಾಟ ಮಂತ್ರ ಮಾಡಿದ್ದಾರೆ ಎನ್ನುವ ಅನುಮಾನ ನಿಮ್ಮಲ್ಲಿದ್ದರೆ ಈ ರೀತಿಯಾಗಿ ಮಾಡಿ ಪರಿಶೀಲಿಸಿಕೊಳ್ಳಿ ನಂತರ ಸುಖ ಜೀವನ ನಡೆಸಿ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಲವರ ಮನೆಯಲ್ಲಿ ಅಂದ್ರೆ ಕೆಲವರಿಗೆ ಶತ್ರುಗಳು ಹೆಚ್ಚಾಗಿ ಇರುತ್ತಾರೆ ಹಾಗೆಯೆ ಅವರು ಏನೇ ಮಾಡಿದರೂ ಕೂಡ ಅವರನ್ನು ನೋಡಿ ಕೆಲವೊಬ್ಬರು ಸಹಿಸಿಕೊಳ್ಳುವುದಿಲ್ಲ ಹಾಗಾಗಿ ಅವರ ಏಳಿಗೆಯನ್ನು ಸಹಿಸದ ಕೆಲವರು ಮಾಟ ಮಂತ್ರದ ಮೊರೆ ಹೋಗುತ್ತಾರೆ. ಹೌದು ಈ ರೀತಿ ಮಾಟ ಮಂತ್ರ ಮಾಡಿಸಿದರೆ ಕೆಲವರಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಹೀಗೆ ನಿಮಗೂ ಕೂಡ ನಮಗೆ ಯಾರಾದರೂ ಮಾಟ ಮಾಡಿಸಿದ್ದರಾ ಎನ್ನುವ ಅನುಮಾನ ನಿಮ್ಮ ಮನಸಲ್ಲಿ ಇದ್ದರೆ ಈ ರೀತಿ ಯಾಗಿ ಪರಿಶೀಲನೆ ಮಾಡಿಕೊಳ್ಳಿ ಅದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಮನೆಯಲ್ಲಿ ಮಾಟ ಮಂತ್ರದ ಪ್ರಯೋಗ ಆಗಿದೆ ಅನ್ನೋ ಒಂದು ಸಂಶಯ ನಿಮ್ಮನ್ನು ಕಾಡುತ್ತಾ ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಎಲ್ಲ ವಿಚಾರಗಳಲ್ಲಿಯೂ ಕೂಡ ಯಾವುದಾದರೂ ಏರುಪೇರುಗಳು ತೊಂದರೆಗಳೇ ಎದುರಾಗುತ್ತಿದೆ ಅನ್ನುವುದಾದರೆ. ಇದಕ್ಕೆಲ್ಲ ಕಾರಣ ಯಾವುದೋ ಕೆಟ್ಟ ಶಕ್ತಿ ಅಂತ ನಿಮ್ಮಲ್ಲಿ ಭಾವನೆ ಉಂಟಾಗಿದ್ದರೆ, ಅದಕ್ಕೆ ನೀವು ಪರಿಹಾರಗಳನ್ನು ಮಾಡಿಕೊಳ್ಳಲು ಮುಂದಾಗಿ. ಹೌದು ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಆಗುತ್ತಿದ್ದರೆ ಮನೆಯಲ್ಲಿ ಬರಿ ಕಿರಿಕಿರಿಗಳು ಉಂಟಾಗುತ್ತಿರುತ್ತದೆ ನಾವು ಒಂದು ಮಾಡುವುದಕ್ಕೆ ಹೋದರೆ ಆ ಒಂದು ಕೆಲಸ ನಮಗೆ ಬರೀ ತೊಂದರೆಗಳನ್ನೇ ಉಂಟುಮಾಡಿರುತ್ತದೆ,

ಅಥವಾ ಕಷ್ಟದಲ್ಲಿ ಸಿಲುಕಿ ಹಾಕಿರುತ್ತದೆ. ಆದ ಕಾರಣ ಒಂದು ಕೆಟ್ಟ ಶಕ್ತಿಯ ಪ್ರಭಾವದಿಂದ ಪರಿಹಾರವನ್ನು ಪಡೆದುಕೊಳ್ಳಬೇಕು ಅಂದರೆ, ನಿಮ್ಮ ಮನೆಯಲ್ಲಿ ಈ ಒಂದು ಚಿಕ್ಕ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬನ್ನಿ.ಹೌದು ಎಂತಹ ಕೆಟ್ಟ ಶಕ್ತಿಯೆ ಆಗಿರಲಿ ಆ ಒಂದು ಶಕ್ತಿಯನ್ನು ಅಟ್ಟಹಾಸ ಮಾಡಬೇಕೆಂದರೆ ನೀವು ಮನೆಯಲ್ಲಿ ಒಂದು ಪರಿಹಾರವನ್ನು ಮಾಡಲೇಬೇಕು. ಅದೇನೆಂದರೆ ತುಳಸಿ ಗಿಡ ಹೌದು ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೊ ಅಂಥವರ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಯಾರ ಮನೆಯ ಅಂಗಳದಲ್ಲಿ ತುಳಸಿಗಿಡ ಇರುತ್ತದೆಯೋ ಅಂಥವರ ಮನೆಯ ವಾತಾವರಣ ಶುದ್ಧವಾಗಿರುತ್ತದೆ ಅಂಥವರ ಮನೆಯಲ್ಲಿ ಯಾವುದೇ ಕೆಟ್ಟ ಶಕ್ತಿಯ ಪ್ರಭಾವ ಇರುವುದಿಲ್ಲ.

ಆದ ಕಾರಣ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇಲ್ಲವಾದಲ್ಲಿ ತಪ್ಪದೇ ಮೊದಲು ನಿಮ್ಮ ಮನೆಯ ಅಂಗಳದಲ್ಲಿ ಒಂದು ತುಳಸಿ ಗಿಡವನ್ನು ನೆಡಿ ಹಾಗೆ ನಿಮ್ಮ ಮನೆಯ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅಂದರೆ ಈ ತುಳಸಿ ಗಿಡ ನಿಮಗೆ ಸೂಚನೆಯನ್ನು ನೀಡುತ್ತಾ ಇರುತ್ತದೆ ಹೇಗೆ ಅಂದರೆ, ನಿಮ್ಮ ಮನೆಯ ಅಂಗಳದಲ್ಲಿರುವ ಈ ತುಳಸಿ ಗಿಡ ಒಣಗಿ ಒಣಗಿ ಹೋಗುತ್ತಲೇ ಇರುತ್ತದೆ. ಒಂದೆರಡು ಬಾರಿ ಒಣಗಿ ಹೋದರೆ ಅದು ಪರವಾಗಿಲ್ಲ ಆದರೆ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಎಷ್ಟು ಬಾರಿ ಬೆಳೆಸುತ್ತಿದ್ದರೂ ಅದು ಒಣಗಿ ಹೋಗುತ್ತಿದೆ ಎಂದರೆ ನಿಮ್ಮ ಮನೆಗೆ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಎಂಬುದರ ಸೂಚನೆ ಇದಾಗಿರುತ್ತದೆ.

ತುಳಸಿ ಗಿಡ ಆಗಾಗ ಒಣಗಿ ಹೋಗುತ್ತಿದೆ ಅಂತ ನೀವು ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದನ್ನು ನಿರ್ಲಕ್ಷಿಸಬೇಡಿ. ತುಳಸಿ ಗಿಡ ಎಷ್ಟು ಬಾರಿ ಒಣಗಿ ಹೋಗುತ್ತದೆಯೊ ಅಷ್ಟು ಬಾರಿ ನೀವು ಹೊಸ ಗಿಡವನ್ನು ನೆಡುತ್ತಲೆ ಇರಿ. ಆಗ ನಿಮ್ಮ ಮನೆಯಲ್ಲಿ ಆ ಒಂದು ಕೆಟ್ಟ ಶಕ್ತಿಯ ಪ್ರಭಾವವು ಏನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.ಇನ್ನು ಪ್ರತಿ ದಿನ ಸಂಜೆಯ ಸಮಯದಲ್ಲಿ ತುಳಸಿ ಗಿಡದ ಮುಂದೆ ತುಪ್ಪದ ದೀಪ ಹಚ್ಚುವುದನ್ನು ಮರೆಯದಿರಿ ಬೆಳಗ್ಗೆ ಮತ್ತು ಸಂಜೆ ಸ್ವಲ್ಪವಾದರೂ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಕೂಡ ಮರೆಯದಿರಿ

ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಆಗಿರುವ ತುಳಸಿ ಗಿಡವನ್ನು ಮನೆಯಲ್ಲಿ ಹೇಗೆ ದೇವರ ಫೋಟೋಗೆ ಪೂಜೆ ಮಾಡ್ತಿರೋ. ಅದೇ ರೀತಿಯಲ್ಲಿ ತುಳಸಿ ಗಿಡಕ್ಕೆ ಕೂಡ ನೀವು ಪೂಜೆ ಮಾಡಬೇಕು ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಯಾವಾಗಲೂ ಸದಾಕಾಲ ಇರುತ್ತದೆ.ಈ ರೀತಿ ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಮಾಟ ಮಂತ್ರ ಪ್ರಭಾವವಾಗಿದೆ ಅನ್ನೋ ಒಂದು ಸೂಚನೆ ತುಳಸಿ ಗಿಡದ ಮುಖಾಂತರ ನಿಮಗೆ ತಿಳಿಯುತ್ತದೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.