ನೀವೇನಾದ್ರು ಜೀವನದಲ್ಲಿ ಅತಿಯಾಗಿ ಸಾಲವನ್ನು ಮಾಡಿ ಅದನ್ನು ತೀರಿಸದೇ ಕಂಗಾಲಾಗಿದ್ದೀರಾ .. ಹಾಗಾದ್ರೆ ಸಾಲ ಬಾಧೆಗಳು ತೊಲಗಲು ನಿಮ್ಮ ಮನೆಯ ಈ ಒಂದು ಮೂಲೆಯಲ್ಲಿ ಈ ವಸ್ತು ಇಟ್ಟು ಆಮೇಲೆ ಚಮತ್ಕಾರ ನೋಡಿ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಎಲ್ಲರು ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಲವನ್ನು ಮಾಡಿರುತ್ತಾರೆ ಹಾಗೆಯೆ ಸಾಲವನ್ನು ಬೇರೆಯವರಿಗೆ ಕೊಟ್ಟಿರುತ್ತಾರೆ .ಹೀಗೆ ಕೊಟ್ಟಿರುವ ಸಾಲ ಹಲವು ಬಾರಿ ವಾಪಸ್ಸು ಬಂದಿರುವುದಿಲ್ಲ .ಹಾಗೆಯೆ ತೆಗೆದುಕೊಂಡಿರುವ ಸಾಲವನ್ನು ತೀರಿಸಲು ಕೂಡ ಕೆಲವೊಂದು ಬಾರಿ ಆಗುವುದಿಲ್ಲ . ಹಾಗಾಗಿ ಈ ರೀತಿಯ ಸಾಲ ಭಾದೆಗಳು ನಿಮ್ಮನ್ನು ಬಿಟ್ಟು ಹೋಗಬೇಕೆಂದ್ರೆ ,ನಿಮ್ಮ ಮನೆಯಲ್ಲಿಯೇ ಕೆಲವೊಂದು ಪರಿಹಾರವನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ .

ಯಾವ ರೀತಿಯ ಪರಿಹಾರವನ್ನು ನೀವು ಮಾಡಬೇಕು ಅದನ್ನು ಯಾವಾಗ ಮಾಡಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣಮನುಷ್ಯ ಅಂದ ಮೇಲೆ ಅವನ ಜೀವನದಲ್ಲಿ ಕಷ್ಟಗಳು ಸಾಮಾನ್ಯ ಆದರೆ ಇತ್ತೀಚಿನ ದಿನಗಳಲ್ಲಿ ಹೇಗೆ ಆಗಿದೆ ಎಂದರೆ ಯಾವುದೇ ಒಂದು ಸಂದರ್ಭವನ್ನು ಹಣವನ್ನು ನೀಡಿ ಪರಿಹರಿಸಿಕೊಳ್ಳಬಹುದು ಅನ್ನೋ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಯಾವತ್ತಿಗೂ ಕೂಡ ಈ ಹಣದಿಂದ ಸಂಬಂಧಗಳ ಪ್ರೀತಿಯನ್ನು ಮತ್ತು ಮನುಷ್ಯನ ಪ್ರಾಣವನ್ನು ಮತ್ತು ಹೋದ ಸಮಯವನ್ನು ಮತ್ತೆ ತರುವುದಕ್ಕೆ ಸಾಧ್ಯ ಇಲ್ಲ.

ಆದರೂ ಕೂಡ ಮನುಷ್ಯನ ಜೀವನದಲ್ಲಿ ಅತ್ಯಗತ್ಯವಾಗಿರುವುದು ಈ ಹಣವೆ. ಈ ಹಣದ ಸಮಸ್ಯೆಗಳು ಜೀವನದಲ್ಲಿ ಉಂಟಾದಾಗ ನೆಮ್ಮದಿ ಕ್ರಮೇಣವಾಗಿ ನಮ್ಮಿಂದ ದೂರ ಹೋಗುತ್ತದೆ.ಹೌದು ಹಣ ಅಂದರೆ ಹಾಗೆ ಈ ಹಣ ನಮ್ಮ ಜೀವನದಲ್ಲಿ ಇದ್ದರೆ ಎಲ್ಲ ಸುಖ ಶಾಂತಿ ನೆಮ್ಮದಿ ಇರುತ್ತದೆ ಅಂತ ಕೆಲವರು ಅಂದುಕೊಂಡಿರುತ್ತಾರೆ ಆದರೆ ಈ ಹಣ ಇಲ್ಲವಾದರೆ ಒಂದೊಂದೆ ಸಮಸ್ಯೆಗಳು ಜೀವನದಲ್ಲಿ ಉಂಟಾಗುತ್ತದೆ. ಹಣ ಇಲ್ಲವಾದರೆ ಸಾಲಬಾಧೆ ಹೆಚ್ಚುತ್ತದೆ ಈ ಸಾಲ ಬಾಧೆ ಹೆಚ್ಚಿದ್ದರೆ ಜೀವನದಲ್ಲಿ ಮನುಷ್ಯ ಒಂದೊಂದೇ ಎಲ್ಲವನ್ನೂ ಕೂಡ ಕಳೆದುಕೊಳ್ತಾರೆ

ಕೊನೆಗೆ ಈ ಸಾಲ ಬಾಧೆಯಿಂದ ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಯೋಚನೆ ಮಾಡಿ ತನ್ನ ಆರೋಗ್ಯವನ್ನು ಕೂಡ ಕಳೆದುಕೊಳ್ತಾನೆ.ಹೀಗೆ ಮನುಷ್ಯನ ಜೀವನದಲ್ಲಿ ಸಾಲಬಾಧೆ ಹೆಚ್ಚಾಗಿ ಕಾಡ್ತಾ ಇದೆ ಅಂದರೆ ಅವನು ತನ್ನ ಮನೆಯಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಈ ಒಂದು ಪರಿಹಾರ ತುಂಬಾ ಸುಲಭ ಪರಿಹಾರ ಆಗಿರುತ್ತದೆ. ಈ ಒಂದು ವಸ್ತುವನ್ನು ಮನೆಯ ಮೂಲೆ ಮೂಲೆಯಲ್ಲಿಯೂ ಕೂಡ ಮನೆಯ ಒಡತಿ ಇಡಬೇಕು ಹೌದು

ಆ ಒಂದು ವಸ್ತು ಯಾವುದು ಅಂದರೆ ಉಪ್ಪು ಲಕ್ಷ್ಮೀದೇವಿಗೆ ಉಪ್ಪು ಬಹಳ ಪ್ರಿಯವಾದದ್ದು.ಸಮುದ್ರದಲ್ಲಿಯೇ ಉಪ್ಪು ಹುಟ್ಟಿದ್ದು ಲಕ್ಷ್ಮೀದೇವಿಯು ಕೂಡ ಸಮುದ್ರದಲ್ಲಿಯೇ ಜನಿಸಿದ್ದು ಈ ಕಾರಣದಿಂದಾಗಿ ಉಪ್ಪನ್ನು ಮನೆಯ ಮೂಲೆ ಮೂಲೆಯಲ್ಲಿಯೂ ಇಡಬೇಕು ಹೇಗೆ ಎಂದರೆ ಉಪ್ಪನ್ನು ತೆಗೆದು ಕೊಂಡು ಪಟ್ಟಣ ಕಟ್ಟಬೇಕು ನಂತರ ಇದನ್ನು ಮನೆಯ ನಾಲ್ಕು ಮೂಲೆಯಲ್ಲಿ ಇರಿಸಬೇಕು ರಾತ್ರಿ ಸಮಯದಲ್ಲಿ ಈ ಒಂದು ಕೆಲಸವನ್ನು ಮನೆಯ ಒಡತಿ ಮಾಡಬೇಕು.

ನಂತರ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಮನೆಯನ್ನು ಸ್ವಚ್ಛ ಪಡಿಸುವಾಗ ಈ ಉಪ್ಪುಗಳನ್ನು ಕೂಡ ತೆಗೆದು ಹಾಕಬೇಕು. ನಂತರ ಮನೆಯಲ್ಲಿ ತುಪ್ಪದ ದೀಪ ಅಥವಾ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಬೇಕು ಯಾವುದೇ ಕಾರಣಕ್ಕೂ ಹರಳೆಣ್ಣೆ ಅನ್ನು ಬಳಸಿ ದೀಪವನ್ನು ಮನೆಯಲ್ಲಿ ಉರಿಸಬಾರದು.ಹೀಗೆ ಪ್ರತಿದಿನ ಮಾಡಬೇಕು ಈ ಒಂದು ಪರಿಹಾರದಿಂದ ಮನೆಯಲ್ಲಿರುವ ಋಣ ಬಾಧೆ ದೂರವಾಗುತ್ತದೆ ಅಷ್ಟೇ ಅಲ್ಲದೆ ಮನೆಯಲ್ಲಿ ಮನೆಯನ್ನು ಒರೆಸುವಾಗ ಮನೆ ಒರೆಸುವ ನೀರಿಗೆ ಉಪ್ಪನ್ನು ಬೆರೆಸಿ ಮನೆಯನ್ನು ವರಿಸಬೇಕು.

ಹೀಗೆ ಮಾಡುವುದರಿಂದ ಕೂಡ ಮನೆಯಲ್ಲಿ ಸಾಲಬಾದೆ ಕ್ರಮೇಣವಾಗಿ ದೂರವಾಗುತ್ತದೆ. ಋಣಾತ್ಮಕ ಶಕ್ತಿ ಹೊರ ಹೋಗಿ ಮನೆಯಲ್ಲಿ ಒಂದು ಸಕಾರಾತ್ಮಕ ಭಾವನೆ ವಾತಾವರಣ ಉಂಟಾಗುತ್ತದೆ.ಪರಿಹಾರ ಮಾಡಿದರೆ ಸಾಲದು ಸಾಲವನ್ನು ತೀರಿಸುವುದಕ್ಕೆ ಅಷ್ಟೇ ಕಷ್ಟ ಪಡಬೇಕು ಆದರೆ ನಾವು ಕಷ್ಟಪಟ್ಟರೂ ಕೂಡ ಸಾಲದ ಬಾಧೆ ದೂರ ಆಗುತ್ತಿಲ್ಲ ಅನ್ನೋದು ಈ ಪರಿಹಾರವನ್ನು ಮಾಡಿಕೊಳ್ಳಿ ಜೊತೆಗೆ ಕಷ್ಟಪಟ್ಟು ಹಣವನ್ನು ಸಂಪಾದಿಸಿ. ಹಣವಿಲ್ಲದವನನ್ನು ಇಂದಿನ ಸಮಾಜ ದುರ್ಬಲನು ಅನ್ನೊ ಒಂದು ದೃಷ್ಟಿಯಲ್ಲಿ ಕಾಣುತ್ತೆ. ಆದ ಕಾರಣ ಕಷ್ಟ ಪಟ್ಟು ಹಣವನ್ನು ದುಡಿಯಿರಿ ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published.