ಎದೆಯಲ್ಲಿ ಅತಿಯಾದ ಕಫ ಕಟ್ಟಿದೆಯೇ ಹಾಗಾದ್ರೆ ಎದೆಯಲ್ಲಿರುವ ಕಫ ತಕ್ಷಣ ಹೊರಗೆ ಹೋಗಬೇಕೆಂದರೆ ಇದನ್ನು ಒಂದೇ ಚಮಚ ಹೀಗೆ ತೆಗೆದುಕೊಂಡು ನೋಡಿ ಸಾಕು …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ಸಾಮಾನ್ಯವಾಗಿ ಎಲ್ಲರ ಆರೋಗ್ಯದಲ್ಲಿಯೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರುಗಳು ಆಗುತ್ತಿರುತ್ತವೆ .ಹಾಗಾಗಿ ನಾವು ಮನೆಯಲ್ಲೇ ಇರವಂತ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆ ಮದ್ದುಗಳನ್ನು ಮಾಡಿಕೊಳ್ಳಬೇಕಾಗತ್ತೆ ಹಾಗಾಗಿ ,ಕೆಮ್ಮು ಮತ್ತು ಕಫ ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತ ಒಂದು ಸಾಮಾನ್ಯವಾದ ಸಮಸ್ಯೆ  ಹಾಗಾಗಿ ,ಮನೆಯಲ್ಲೇ ಇರುವ ಪದಾರ್ಥಗಳನ್ನು ಉಪಯೋಗಿಸಿ ನಿಮ್ಮ ಎದೆಯಲ್ಲಿ ಇರುವ ಕಫವನ್ನು ಸಲೀಸಾಗಿ ಹೊರಗೆ ತೆಗೆಯಬಹುದು

ಹಾಗಾದ್ರೆ ಆ ಒಂದು ಮನೆ ಮದ್ದು ಯಾವುದು ಯಾವ ರೀತಿ ಅದನ್ನು ತಯಾರಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.ಕೆಮ್ಮು ಕಫ ಇಂತಹ ಸಮಸ್ಯೆಗೆ ನೀವು ಮಾತ್ರೆಯನ್ನು ತೆಗೆದುಕೊಳ್ಳದೆ ಬೇಡ ಅಥವಾ ಯಾವುದೋ ಸಿರಪ್ ಅನ್ನು ತೆಗೆದುಕೊಳ್ಳುವುದು ಅವಶ್ಯಕತೆಯೇ ಇಲ್ಲ ಯಾಕೆ ಅಂತೀರಾ ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಈ ಒಂದು ಪರಿಹಾರವನ್ನು ನೀವು ಮಾಡಿದರೆ ಸಾಕು ಎದೆಯಲ್ಲಿ ಕಟ್ಟಿರುವಂತಹ ಕಫ ಕರಗುತ್ತದೆ ಒಂದೊಳ್ಳೆ ಅನುಭವ ನಿಮಗೆ ಆಗುತ್ತದೆ ಮತ್ತು ಇದನ್ನು ನೀವು ಮಕ್ಕಳಿಗೂ ಕೂಡ ಮಾಡಬಹುದು

ಮಕ್ಕಳಲ್ಲಿ ಅದರ ಚಿಕ್ಕಮಕ್ಕಳಿಗೆ ಅಂತೂ ಎದೆಯಲ್ಲಿ ಕಫ ಆಗಾಗ ಕಟ್ಟುತ್ತಲೇ ಇರುತ್ತದೆ ಆಗ ನಾವು ಯಾವುದೋ ಸಿರಪ್ ಅನ್ನ ನೀಡುವುದಕ್ಕಿಂತ ಒಳ್ಳೆಯ ಪರಿಹಾರವನ್ನು ಅದರಲ್ಲಿಯೂ ಮನೆಯಲ್ಲಿಯೆ ಮಾಡಿದ ಮನೆ ಮದ್ದನ್ನು ನೀಡಿದರೆ. ಮಕ್ಕಳು ವಾಂತಿಯ ಮುಖಾಂತರ ಕಫವನ್ನೆಲ್ಲಾ ವಾಂತಿ ಮಾಡಿಕೊಳ್ಳುತ್ತಾರೆ.ಈ ಒಂದು ಮನೆ ಮದ್ದನ್ನು ಮಕ್ಕಳಿಗೆ ಹೇಗೆ ನೀಡೋದು ಮತ್ತು ದೊಡ್ಡವರು ಹೇಗೆ ತೆಗೆದುಕೊಳ್ಳಬೇಕು ಅಂತ ತಿಳಿಸಿಕೊಡುತ್ತೇವೆ. ಈ ಒಂದು ವಿಧಾನದಲ್ಲಿ ನೀವು ಮನೆ ಮದ್ದನ್ನು ಮಾಡಿ ಸೇವಿಸಿದರೆ ಕೇವಲ ಎರಡು ಮೂರು ದಿನಗಳಲ್ಲಿಯೆ ಉತ್ತಮವಾದ ಫಲಿತಾಂಶವನ್ನು ನೀವು ಕಾಣಬಹುದು.

ಮೊದಲಿಗೆ ಈರುಳ್ಳಿಯನ್ನು ತೆಗೆದುಕೊಳ್ಳಿ ಇದನ್ನ ಒಂದು ಕುಟ್ಟಾಣಿ ಸಹಾಯದಿಂದ ಈ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಅಂದರೆ, ನೀವು ಒಂದು ಮೀಡಿಯಂ ಗಾತ್ರದ ಈರುಳ್ಳಿಯಲ್ಲಿ ಅರ್ಧ ಈರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ರಸವನ್ನು ತೆಗೆದುಕೊಳ್ಳಿ. ಅಂದರೆ ಜಜ್ಜಿದ ನಂತರ ಒಂದು ಬಟ್ಟೆಯ ಮೇಲೆ ಹಾಕಿ ಬಟ್ಟೆಯ ಸಹಾಯದಿಂದ ಈರುಳ್ಳಿ ರಸವನ್ನು ಒಂದು ಬಟ್ಟಲಿಗೆ ಶೋಧಿಸಿಕೊಳ್ಳಿ.ನಂತರ ನಿಮ್ಮ ಬೆರಳಿನಲ್ಲಿ ಅರ್ಧದಷ್ಟು ಶುಂಠಿ ತೆಗೆದುಕೊಂಡು ಅದನ್ನು ಕೂಡ ಸಿಪ್ಪೆಯನ್ನು ತೆಗೆದು ಜಜ್ಜಿಕೊಂಡು ಒಂದು ಬಟ್ಟೆಯ ಮೇಲೆ ಹಾಕಿ ರಸವನ್ನು ಬೇರ್ಪಡಿಸಿ ಕೊಳ್ಳಿ

ಇದನ್ನು ಈರುಳ್ಳಿ ರಸದೊಂದಿಗೆ ಮಿಶ್ರ ಮಾಡಬೇಡಿ ಯಾಕೆ ಅಂದರೆ ನೀವು ಮಕ್ಕಳಿಗೆ ನೀಡುವ ಹಾಗಿದ್ದರೆ ಈ ಶುಂಠಿಯಲ್ಲಿ ಸುಣ್ಣದ ಅಂಶ ಇರುತ್ತದೆ ಆದ ಕಾರಣ ಬೇರೆ ಬಟ್ಟಲಿಗೆ ಈ ಶುಂಠಿಯನ್ನು ಶೋಧಿಸಿ ಇಟ್ಟುಕೊಂಡಿರಿ ಸ್ವಲ್ಪ ಸಮಯ ಆದ ಮೇಲೆ ಶುಂಠಿಯ ರಸ ಮೇಲೆ ತೇಲುತ್ತದೆ. ಅದರ ಕೆಳಗೆ ಬಿಳಿಯ ರಸ ಇರುತ್ತದೆ ಅದು ಸುಣ್ಣದ ಅಂಶ ಆಗಿರುತ್ತದೆ. ಇದನ್ನು ಮಕ್ಕಳಿಗೆ ನೀಡಬಾರದು ದೊಡ್ಡವರಾದರೆ ಪರವಾಗಿಲ್ಲ ಸೇವಿಸಬಹುದು.

ಇದೀಗ ನಾಲ್ಕೈದು ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಕೂಡ ಜಜ್ಜಿ ರಸವನ್ನು ತೆಗೆದುಕೊಳ್ಳಿ. ಎರಡು ಮೂರು ಹನಿ ಆದರೂ ಪರವಾಗಿಲ್ಲ ಈರುಳ್ಳಿ ರಸದೊಂದಿಗೆ ಈ ತುಳಸಿ ರಸವನ್ನು ಬೆಳೆಸಿಕೊಳ್ಳಿ. ನಂತರ ಇದಕ್ಕೆ ಕಾಲು ಚಮಚ ಮೆಣಸಿನ ಪುಡಿ ಚಿಟಕಿ ಅರಿಶಿಣವನ್ನು ಬೆರೆಸಿ. ಕೊನೆಗೆ ಶುಂಠಿಯ ರಸವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಮಕ್ಕಳಿಗೆ ಆದರೆ ಮೆಣಸಿನ ಪುಡಿಯನ್ನು ಹಾಕುವ ಅವಶ್ಯಕತೆ ಇರುವುದಿಲ್ಲ. ಮಕ್ಕಳಿಗೆ ಮೆಣಸಿನ ಪುಡಿಯನ್ನು ನೀಡಬೇಡಿ ತುಂಬಾ ಘಾಟ ಆಗುತ್ತದೆ. ಇದೀಗ ಈ ರಸವನ್ನು ದೊಡ್ಡವರಾದರೆ ಒಂದು ಚಮಚ ತೆಗೆದುಕೊಳ್ಳಿ ಚಿಕ್ಕ ಮಕ್ಕಳಿಗಾದರೆ ಕಾಲು ಚಮಚ ನೀಡಿ ಸಾಕು. ಈ ರೀತಿ ಮಕ್ಕಳಿಗೆ ನೀಡಿದಾಗ ಮಕ್ಕಳು ವಾಂತಿಯ ಮುಖಾಂತರ ಕಫವನ್ನು ಆಚೆ ಹಾಕ್ತಾರೆ.

ಮಕ್ಕಳು ವಾಂತಿ ಮಾಡದೆ ಇದ್ದಲ್ಲಿ ನಿಮ್ಮ ಬೆರಳನ್ನು ಹಾಕಿ ಮಕ್ಕಳಿಗೆ ವಾಂತಿ ಮಾಡಿಸಿ ಆಗ ಕಫವೆಲ್ಲ ಗಂಟಲಿನಿಂದ ಆಚೆ ಬರುತ್ತದೆ. ತಲೆ ಹಿಡಿದಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ದೊಡ್ಡವರಾದರೆ ಕಫ ವಾಂತಿಯಾಗುತ್ತದೆ ಅಥವಾ ಬೇದಿಯ ಮುಖಾಂತರ ಆಚೆ ಹೋಗುತ್ತದೆ ಕೆಮ್ಮು ನಿವಾರಣೆಯಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published.