ನೀವೇನಾದ್ರು ಮನೆಯ ಮುಂದೆ ಈ ರೀತಿ ಮಾಡಿದ್ರೆ ಖಂಡಿತಾ ನೀವು ಬಡವರಾಗ್ತೀರಾ .ಯಾವುದೇ ಕಾರಣಕ್ಕೂ ಮನೆಯ ಮುಂದೆ ಹೀಗೆ ಮಾಡಬೇಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ. ನಿಮಗೆ ತಿಳಿದಿರುವ ಹಾಗೆ ಎಲ್ಲರ ಮನೆಯಲ್ಲಿ ಕೂಡ ಮುಖ್ಯದ್ವಾರ ಎನ್ನುವುದು ಇದ್ದೇ ಇರುತ್ತದೆ. ಮುಖ್ಯದ್ವಾರದಲ್ಲಿ ನಾವು ಯಾವ ಯಾವ ಕೆಲಸಗಳನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಎಂಬುದನ್ನು ಯಾವಾಗಲೂ ನಾವು ತಿಳಿದುಕೊಂಡಿರಬೇಕು.ಯಾಕೆಂದರೆ ಮುಖ್ಯದ್ವಾರ ಯಾವಾಗಲೂ ಲಕ್ಷ್ಮಿ ಕಾಲಿಡುವ ಜಾಗ. ಯಾವಾಗಲೂ ಮುಖ್ಯದ್ವಾರ ಶುಚಿ ಹಾಗಿದ್ದರೆ ಲಕ್ಷ್ಮಿ ನಿಮ್ಮಮನೆಯ ಆ ಮುಖ್ಯದ್ವಾರದಿಂದ ಬಲಗಾಲಿಟ್ಟು ಬರುತ್ತಾಳೆ.ಹೀಗಾಗಿ ನೀವು ಮುಖ್ಯದ್ವಾರದ ಬಾಗಿಲನ್ನು ಅಂದರೆ ಹೊಸ್ತಿಲನ್ನು ಶುಚಿಯಾಗಿಟ್ಟುಕೊಳ್ಳುವುದು ಒಳ್ಳೆಯದು.

ತುಂಬಾ ಜನರು ಮನೆಯ ಬಾಗಿಲ ಹೊಸ್ತಿಲಿಗೆ ಮಾಡುವ ಕೆಲಸದಿಂದ ಬಡವರಾಗುತ್ತಾರೆ.ಅವರ ಮನೆಗೆ ದಾರಿದ್ರ ಅನ್ನುವುದು ಹುಡುಕಿಕೊಂಡು ಬರುತ್ತದೆ. ಹೌದು ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ಯಾವ ಯಾವ ತಪ್ಪುಗಳನ್ನು ಮಾಡಿದರೆ ಅಂದರೆ ಮನೆಯ ಬಾಗಿಲಿನ ಮುಂದೆ ಯಾವ ಯಾವ ತಪ್ಪುಗಳನ್ನು ಮಾಡಿದರೆ ಬಡವರಾಗುತ್ತಾರೆ ಮತ್ತು ಬರುತ್ತದೆ ಎಂದು ತಿಳಿಸಿಕೊಡುತ್ತೇನೆ.ಈ ರೀತಿಯಾದಂತಹ ತಪ್ಪುಗಳನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನುವುದು ಇರುವುದಿಲ್ಲ ಹಾಗೂ ಹಣಕಾಸಿನ ಮೇಲೆ ತುಂಬಾನೇ ತೊಂದರೆ ಉಂಟಾಗುತ್ತದೆ.

ಹಾಗೂ ನೀವು ಎಷ್ಟು ದುಡಿದರೂ ಕೂಡ ಸಂಪಾದನೆ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ.ಅದಕ್ಕೆ ಕಾರಣ ಯಾವುದೆಂದರೆ ನಿಮ್ಮ ನಿಮ್ಮ ಮನೆಯ ಬಾಗಿಲ ಮುಂದೆ ಮಾಡುವಂತಹ ತಪ್ಪುಗಳಿಂದ ಈ ರೀತಿಯಾಗಿ ಉಂಟಾಗುತ್ತದೆ.ಸ್ನೇಹಿತರೆ ಬಾಗಿಲು ಮುಂದೆ ನಾವು ಏನು ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಹೇಗೆ ಮಾಡಿದರೆ ನಮಗೆ ಅದೃಷ್ಟ ಒಲಿದು ಬರುತ್ತದೆ ಎನ್ನುವುದನ್ನು ಈ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.ಮನೆಯ ಮುಖ್ಯದ್ವಾರದ ಬಾಗಿಲಿನ ಬಳಿ ಮಾಡುವ ಸಣ್ಣಪುಟ್ಟ ತಪ್ಪುಗಳಿಂದ  ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ.ಬಾಗಿಲ ಬಳಿ ಮಾಡುವಂತಹ ತಪ್ಪು ಸಾಮಾನ್ಯ ತಪ್ಪಲ್ಲ ಇದು ತುಂಬಾ ದೊಡ್ಡ ಶಿಕ್ಷೆ ಅಂತಾನೆ ಹೇಳಬಹುದು.

ಸ್ನೇಹಿತರೆ ನೀವು ಬಾಗಿಲಿನ ಬಳಿ ಈ ರೀತಿಯಾದಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತೇ ಆ ತಪ್ಪುಗಳನ್ನು ಬಿಟ್ಟು ಬಿಡಿ ಅವುಗಳು ಯಾವುವೆಂದರೆ. ಬಾಗಿಲಿನ ಬಳಿ ನಿಂತುಕೊಂಡು ಅಂದರೆ ಹೊಸ್ತಿಲಿನ ಮೇಲೆ ನಿಂತುಕೊಂಡು ಬೇರೆಯವರ ಜೊತೆ ಮಾತನಾಡುತ್ತಾ ನಿಲ್ಲುವುದು.ಹೀಗೆ ಮಾತನಾಡುತ್ತಾ ನಿಲ್ಲುವುದರಿಂದ ಅಂದರೆ ಹೊಸ್ತಿಲನ ಮೇಲೆ ಮಾತನಾಡುತ್ತಾ ನಿಲ್ಲುವುದರಿಂದ ನಿಮಗೆ ಹಣಕಾಸಿನ ತೊಂದರೆ ಹಾಗೂ ದರಿದ್ರತನ ಬಂದು ನಿಮ್ಮ ಮನೆಯಲ್ಲಿ ನೆಲೆಯೂರುತ್ತದೆ.ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಹೊಸ್ತಿಲಿನ ಮೇಲೆ ನಿಂತುಕೊಂಡು ಅಕ್ಕಪಕ್ಕದವರ ಜೊತೆಗೆ ಮಾತನಾಡಬಾರದು. ಆ ರೀತಿಯಾಗಿ ನೀವು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ.

ನೀವು ಬಾಗಿಲಿನ ಮುಂದೆ ಮಾಡುತ್ತಿರುವ ಇನ್ನೊಂದು ತಪ್ಪು ಯಾವುದೆಂದರೆ ಹೊಸ್ತಿಲಿನ ಮೇಲೆ ನಿಂತುಕೊಂಡು ಹಣವನ್ನು ತೆಗೆದುಕೊಳ್ಳುವುದು ಅಥವಾ ಕೊಡುವುದು.ಈ ಸ್ನೇಹಿತರೆ ಹೊಸ್ತಿಲಿನ ಮೇಲೆ ನಿಂತುಕೊಂಡು ಹಣವನ್ನು ತೆಗೆದುಕೊಳ್ಳುವುದು ಮತ್ತು ಕೊಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಹೊರಟುಹೋಗುತ್ತಾಳೆ ಹಾಗೂ ನಿಮ್ಮ ಮನೆಯಲ್ಲಿ ದರಿದ್ರ ಅನ್ನುವುದು ಬರುತ್ತದೆ.ಈ ರೀತಿಯಾಗಿ ಮಾಡುವುದರಿಂದ ಹಣಕಾಸಿನ ವಿಷಯದಲ್ಲಿ ನಿಮ್ಮನ್ನು ಕೆಳಮಟ್ಟಕ್ಕೆ ಹೋಗುವಂತೆ ಮಾಡುತ್ತದೆ.ನೀವು ಮಾಡುವ ಇನ್ನೊಂದು ತಪ್ಪು ಅಂದರೆ ಮುಖ್ಯವಾದ ತಪ್ಪು ಏನೆಂದರೆ ಬೆಳಗ್ಗೆ ಎದ್ದ ತಕ್ಷಣ ಅಂದರೆ ನೀವೇ ಮೊದಲು ಎದ್ದಾಗ ಯಾವುದೇ ಕಾರಣಕ್ಕೂ ಮುಖ್ಯದ್ವಾರದಿಂದ ಹೊರಗಡೆ ಹೋಗಬಾರದು.

ಹಾಗೆ ಹೋದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಹೊರಟುಹೋಗುತ್ತಾಳೆ.ನೀವು ಎದ್ದ ತಕ್ಷಣ ಮನೆಯಿಂದ ಹೊರಟು ಹೋಗುವುದಕ್ಕಿಂತ ಮುಂಚೆ ಬಾಗಿಲನ್ನು ತೊಳೆದು ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಹಾಗೂ ರಂಗೋಲಿಯನ್ನು ಹಾಕಿದ ನಂತರ ಹೊರಗಡೆ ಹೋಗಬೇಕು.ಆ ಕೆಲಸವನ್ನು ಮನೆಯಲ್ಲಿರುವ ಯಜಮಾನಿ ಅಥವಾ ಮಹಿಳೆಯರು ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುವುದಿಲ್ಲ.ನೀವು ಪೂಜೆ ಮಾಡುವ ವಾರದಲ್ಲಿ ವಾರದ ದಿನ ಗೋಮೂತ್ರವನ್ನು ತೆಗೆದುಕೊಂಡು ಮುಖ್ಯವಾದ ಅಂತಹ ಕೊಠಡಿಗಳಿಗೆ ಚಿಮುಕಿಸಬೇಕು.

ಪೂಜೆ ಮಾಡೋಕಿಂತ ಮೊದಲೇ ಚಿಮುಕಿಸಿ ಇಡಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.ಅಮಾವಾಸೆ ಅಮಾವಾಸೆ ಮತ್ತು ಹುಣ್ಣಿಮೆಯ ಸಂದರ್ಭದಲ್ಲಿ ಬೆಳಗ್ಗೆ ಎದ್ದ ತಕ್ಷಣ ಒಂದು ನಿಂಬೆಹಣ್ಣಿನ ತೆಗೆದುಕೊಂಡು ಅದನ್ನು ಸೀಳು ಮಾಡಿ ಬಾಗಿಲಲ್ಲಿ ಅಂದರ ಹೊಸ್ತಿಲ ಮೇಲೆ ಮುಖ್ಯದ್ವಾರದಲ್ಲಿ ಇಡಬೇಕು.ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ ಸ್ನೇಹಿತರೆ. ಮೇಲೆ ಹೇಳಿದಂತಹ ತಪ್ಪುಗಳನ್ನು ನೀವು ಬಾಗಿಲ ಮುಂದೆ ಮಾಡುತ್ತಿದ್ದಾರೆ ದಯವಿಟ್ಟು ಇಂದೇ ಅದನ್ನು ಬಿಟ್ಟು ಬಿಡಿ.ಹಾಗೆಯೇ ನಾವು ಮೇಲೆ ಹೇಳಿದಂತಹ ಕೆಲವೊಂದು ಪೂಜೆಗಳನ್ನು ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.