ನೀವೇನಾದ್ರು ತಾಮ್ರದ ತಟ್ಟೆಯಲ್ಲಿ ಈ 69 ಎಲೆಗಳನ್ನು ಇತ್ತು ನಂತರ ಈ ಒಂದು ಮಂತ್ರವನ್ನು ಹೇಳಿದರೆ ಸಾಕು..ಅದೃಷ್ಟ ಮತ್ತು ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಬೇಕಾದ್ರೆ ಒಂದ್ ಸಾರಿ ಮಾಡಿ ನೋಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಅದ್ಭುತವಾದ ಎಲೆಗಳನ್ನು ತೆಗೆದುಕೊಂಡು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಲಕ್ಷ್ಮೀದೇವಿ ಅನುಗ್ರಹವನ್ನು ಪಡೆದುಕೊಳ್ಳಬಹುದು.ಸ್ನೇಹಿತರೆ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ತೊಂದರೆಯಲ್ಲಿದ್ದರೆ ಈ ಒಂದು ಪರಿಹಾರವನ್ನು ಮಾಡಿಕೊಂಡು ನಿಮ್ಮ ಮನೆಗೆ ಲಕ್ಷ್ಮೀದೇವಿಯ ಪೂರ್ಣ ಅನುಗ್ರಹವನ್ನು ಪಡೆದುಕೊಳ್ಳಿ. ಈಗಿನ ಕಾಲದಲ್ಲಿ ದುಡ್ಡೆ ಮುಖ್ಯವಾಗಿ ಹೋಗಿದೆ ದುಡ್ಡಿಲ್ಲ ಎಂದರೆ ಜೀವನವೇ ನಡೆಯುವುದಿಲ್ಲ. ಮನೆಗೆ ಏನೇ ಬೇಕಾದರೂ ಮಕ್ಕಳಿಗೆ ಓದಿಸಲು ಮನೆತನ ನಡೆಸಲು ಮೊದಲು ದುಡ್ಡು ಅಂದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು ಆದಾಗ ಮಾತ್ರ ನಾವು ಜೀವನದಲ್ಲಿ ನೆಮ್ಮದಿ ಪಡೆದುಕೊಳ್ಳಬಹುದು

ಹಾಗಾದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಈ ಪರಿಹಾರದಿಂದ ಲಾಭವನ್ನು ಪಡೆದುಕೊಳ್ಳಬಹುದು ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿ ಇರುವ ಸಂದರ್ಭದಲ್ಲಿ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗದೇ ಹೋದರೆ ಇನ್ನು ಮನೆಯ ಆರ್ಥಿಕ ಪರಿಸ್ಥಿತಿ ಕಷ್ಟವಾಗುತ್ತದೆ. ಹಾಗಾದ್ರೆ ಈ ಪೂಜೆಯನ್ನು ಮಾಡೋದು ಹೇಗೆ ಮತ್ತು ಈ ಪೂಜೆಗೆ ಬೇಕಾಗಿರುವ ಸಾಮಗ್ರಿಗಳು ಯಾವುವು ಎಂದು ತಿಳಿಯೋಣ ಈ ಪೂಜೆಯನ್ನು ಮಾಡಿದನಂತರ ನಿಮಗೆ ಲಾಭವಾಗುತ್ತದೆ ಮತ್ತು ನೆಮ್ಮದಿ ಸಿಗುತ್ತದೆ.

ಈ ಪೂಜೆಗೆ ಒಂದು ದೊಡ್ಡ ತಟ್ಟೆ ಅಥವಾ ದೊಡ್ಡ ಬಾಳೆಎಲೆ ಬೇಕು ಹಾಗೆ 69 ಮಾವಿನ ಎಲೆಗಳು ಬೇಕು ಬಿಳಿ ಎಕ್ಕದ ಹೂಗಳು ವಿಘ್ನೇಶ್ವರನ ಪೂಜೆಗೆ ಬೇಕು. ಹಾಗಾದರೆ ಈ ಮಾವಿನ ಎಲೆಗಳ ಬಗ್ಗೆ ಮೊದಲು ತಿಳಿದುಕೊಳ್ಳೋಣ ಮಾವಿನ ಗಿಡ ಇದ್ದವರ ಮನೆಯಲ್ಲಿ ಲಕ್ಷ್ಮೀದೇವಿಯು ಅವರಿಗೆ ಕುಬೇರರಾಗುವಂತೆ ಆಶೀರ್ವದಿಸುತ್ತಾಳೆ. ಮಾವಿನ ಮರ ತುಂಬಾ ವಿಶೇಷವಾಗಿದೆ ಪುರಾತನ ಕಾಲದಲ್ಲಿ ಮಾವಿನ ಮರದ ಕೆಳಗಡೆ ಬಂಗಾರ ಗಳನ್ನು ಇಡುತ್ತಿದ್ದರು ಏಕೆಂದರೆ ಮಾವಿನ ಮರದ ಹತ್ತಿರ ಭೂಮಿ ಜರಿಯುವುದಿಲ್ಲ ಬಿಗಿಯಾಗಿರುತ್ತದೆ.

ಹಾಗೆಯೇ ಈ ಮಾವಿನ ಎಲೆಗಳು ಕೊಳೆಯುವುದಿಲ್ಲ ಬದಲಾಗಿ ಬಿದ್ದ ಎಲೆಗಳನ್ನು ಬೆಂಕಿಹಾಕಿ ಸುಡುತ್ತಾರೆ. ಈ ಪೂಜೆಗೆ 69 ಮಾವಿನ ಎಲೆಗಳು ಬೇಕು ಇವುಗಳನ್ನು ಸಮನಾಗಿ 23 23 23 ಗಳಂತೆ ತೆಗೆದುಕೊಂಡು ಪೂಜೆ ಮಾಡಬೇಕು ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಗಳಿಗೆ ತುಂಬಾ ಮಹತ್ವವಿದೆ. 69 ರಲ್ಲಿ 6 ಉಲ್ಟಾ ಮಾಡಿದರೆ 9 ಆಗುತ್ತದೆ ಹಾಗೆ 9 ಉಲ್ಟಾ ಮಾಡಿದರೆ 6 ಆಗುತ್ತದೆ. 23 ಸಂಖ್ಯೆಯಲ್ಲಿ ಎರಡು ಮತ್ತು ಮೂರನ್ನು ಕೂಡಿಸಿದರೆ ಐದು ಆಗುತ್ತದೆ ಈ 5 ಎನ್ನುವ ಸಂಖ್ಯೆ ತುಂಬಾ ಶುಭವಾದದ್ದು ನೋಡಿ ಸ್ನೇಹಿತರೆ ಯಾವುದೇ ಮಂಗಳ ಕಾರ್ಯದಲ್ಲಿ ಐದು ಮುತ್ತೈದೆಯರಿಗೆ ಒಂದತ್ತು ಮಾಡಿಸುತ್ತಾರೆ

ಅಂದರೆ 5 ಎನ್ನುವ ಸಂಖ್ಯೆ ಶ್ರೇಷ್ಠವಾದದ್ದು. ಈ ಪೂಜೆಯನ್ನು ಶುಕ್ರವಾರ ಸಂಜೆ ಅಥವಾ ಬೆಳಿಗ್ಗೆ ಕೂಡ ಮಾಡಬಹುದು. ಒಂದು ತಾಮ್ರದ ತಟ್ಟೆಯಲ್ಲಿ ಅಥವಾ ಬಾಳೆ ಎಲೆಯಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ಅದರ ಸುತ್ತ 23 ಮಾವಿನ ಎಲೆಗಳನ್ನು ಸರಿಯಾಗಿ ಜೋಡಿಸಿ ಮಾವಿನ ಎಲೆಯ ತೊಟ್ಟು ಗಣೇಶನ ವಿಗ್ರಹಕ್ಕೆ ಮುಟ್ಟುವಂತೆ ಇಡಬೇಕು ಹಾಗೆ ಮೂರು ಸುತ್ತು ಅವುಗಳನ್ನು ಹೊಂದಿಸಬೇಕು. ಬಿಳಿ ಎಕ್ಕೆಯ ಹೂಗಳನ್ನು ಗಣೇಶನಿಗೆ ಸಮರ್ಪಿಸಿ ಪೂಜೆ ಮಾಡಬೇಕು ಪೂಜೆ ಮಾಡುವಾಗ ಈ ಮಂತ್ರವನ್ನು ಜಪಿಸಬೇಕು ಮೊದಲನೆಯದಾಗಿ ಗಣೇಶನಿಗೆ “ಓಂ ಶ್ರೀ0 ಹೀ೦ ಕ್ಲೀ0 ಗೌ೦ ಗಣಪತಿ ವರ ವರದ ಸರ್ವಜನ ಮೇ ವಶ ಮಾನಯ ಸ್ವಾಹ” ಎಂದು ಜಪಿಸಬೇಕು.

ಹೀಗೆ ಪೂಜೆ ಮಾಡಿ ನಂತರ ಇದನ್ನು ಒಂದು ಜಾಗದಲ್ಲಿ ಇರಿಸಬೇಕು ಎಲೆಗಳು ಒಣಗಿದ ಮೇಲೆ ನೀವು ಪ್ರತಿದಿನ ಧೂಪವನ್ನು ಹಾಕುವಾಗ ಅಂದರೆ ಸಾಂಬ್ರಾಣಿಯನ್ನು ಹಾಕುವಾಗ ಎಲೆಗಳನ್ನು ಪುಡಿಮಾಡಿಟ್ಟುಕೊಂಡು ದಿನಾಲು ಸ್ವಲ್ಪ ಸ್ವಲ್ಪ ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿ ಸುಧಾರಿಸಿ ನಿಮಗೆ ಒಳ್ಳೆಯ ಲಾಭ ಮತ್ತು ನೆಮ್ಮದಿ ಸಿಗುತ್ತದೆ ಈ ಮಾವಿನ ಎಲೆಗಳು ನಿಮಗೆ ತುಂಬಾ ಏಳಿಗೆಯನ್ನು ತರುತ್ತದೆ ಲಕ್ಷ್ಮೀದೇವಿಯ ಪೂರ್ಣಾನುಗ್ರಹ ನಿಮಗೆ ದೊರೆಯುತ್ತದೆ. ಈ ಪೂಜೆಯನ್ನು ಮಾಡಲು ಅತಿ ಖರ್ಚು ಏನು ಇಲ್ಲ.

ಮನೆಯಲ್ಲಿ ನೀವು ಯಾರ ಸಹಾಯವಿಲ್ಲದೆ ಈ ಪೂಜೆಯನ್ನು ಮಾಡಬಹುದು ಲಕ್ಷ್ಮೀದೇವಿ ನಿಮಗೆ ಆಶೀರ್ವದಿಸಿದರೆ ನಿಮ್ಮ ಮನೆಯ ಕಷ್ಟಗಳೆಲ್ಲ ಪರಿಹಾರವಾಗುತ್ತವೆ ಒಂದೇ ಒಂದು ಬಾರಿ ಈ ಪೂಜೆಯನ್ನು ಮಾಡಿ ನೀವು ತುಂಬಾ ಲಾಭವನ್ನು ಪಡೆದುಕೊಳ್ಳಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.