ನೀವೇನಾದ್ರು ಇದನ್ನು ಹೀಗೆ ಮಾಡಿಕೊಂಡು ಕುಡಿದ್ರೆ ಸಾಕು ಮೂಲವ್ಯಾಧಿ ಹೇಳಲು ಹೆಸರಿಲ್ಲದೇ ಹೋಗುತ್ತೆ ಜನ್ಮದಲ್ಲಿ ಮತ್ತೆ ಬರಲ್ಲ..!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಈ ಒಂದು ಸಮಸ್ಯೆ ಕಾಡುತ್ತದೆ .ನಮ್ಮ ಆಹಾರ ಪದ್ಧತಿಗಳಲ್ಲಿನ ವ್ಯತ್ಯಾಸದಿಂದ ಈ ರೀತಿಯ ಸಮಸ್ಯೆ ಎದುರಾಗುತ್ತೆ ಎಂದು ಹೇಳಬಹುದು .ಹಾಗಾಗಿ ಮನೆಯಲ್ಲೇ ಇರುವ ಕೆಲವು ಪದಾರ್ಥ ಗಳಿಂದ  ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹದು ಹಾಗಾದ್ರೆ ಯಾವ ರೀತಿ ಮನೆಮದ್ದುಗಳನ್ನು ಇದಕ್ಕೆ ಉಪಯೋಗಿಸಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂಣವಾಗಿ ತಿಳಿಸಿಕೊಡುತ್ತೇನೆ .ಇತ್ತೀಚಿನ ದಿನಗಳಲ್ಲಿ ಅಂತೂ ಮೂಲವ್ಯಾಧಿಯಿಂದ ಎಷ್ಟೆಲ್ಲಾ ಬಾಧೆಯನ್ನು ಪಡ್ತಾ ಇದ್ದಾರೆ ನಮ್ಮ ಜನ ಈ ಮೂಲವ್ಯಾಧಿ ಸಮಸ್ಯೆಗೆ ಆಪರೇಷನ್ ಅಂತೆಲ್ಲಾ ಜನ ಪರಿಹಾರವನ್ನು ಹುಡುಕಿ ಕೊಂಡು ಹೋಗ್ತಾ ಇದ್ದಾರೆ

ಆದರೆ ಒಂದಂತೂ ಸತ್ಯ ಇದಕ್ಕಾಗಿ ನೀವು ಎಷ್ಟೇ ಚಿಕಿತ್ಸೆಯನ್ನು ಪಡೆದುಕೊಂಡರು ಈ ಮೂಲವ್ಯಾಧಿ ಅನ್ನೋ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಆಗುವುದಿಲ್ಲ ನೀವು ಇದಕ್ಕಾಗಿ ಉತ್ತಮವಾದ ಮನೆ ಮದ್ದುಗಳನ್ನು ಬಳಸಿ ಇದರಿಂದ ನಿಮಗೆ ಆಗುವ ಲಾಭಗಳು ಅಪಾರವಾದದ್ದು ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ಈ ಮೂಲವ್ಯಾಧಿ ಸಮಸ್ಯೆಗೆ ಕಾರಣವೇನು,ಈ ಮೂಲವ್ಯಾಧಿ ಸಮಸ್ಯೆ ಬಗೆ ಹೇಗೆ ಪರಿಹಾರ ಮಾಡಿಕೊಳ್ಳುವುದು ಇದಕ್ಕಾಗಿ ಯಾವ ಮನೆಮದ್ದು ಉತ್ತಮ ಅನ್ನೋದನ್ನ ತಿಳಿಯೋಣ ಸಂಪೂರ್ಣ ಮಾಹಿತಿಯನ್ನ ತಿಳಿಯಿರಿ ಈ ಮೂಲವ್ಯಾಧಿ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಿ ಎಷ್ಟೋ ಜನರಿಗೆ ಮೂಲವ್ಯಾಧಿ ಸಮಸ್ಯೆಯ ಲಕ್ಷಣಗಳು ತಿಳಿದಿರುವುದಿಲ್ಲ.

ಹಾಗೆ ಈ ಮೂಲವ್ಯಾಧಿ ಸಮಸ್ಯೆ ಬಂದರೆ ಅಷ್ಟಾಗಿ ಜನರಿಗೆ ಅದು ಮೂಲವ್ಯಾಧಿ ಅಂತ ಅರ್ಥ ಕೂಡ ಆಗಿರುವುದೆ ಇಲ್ಲ. ಆದ ಕಾರಣ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಈ ಮೂಲವ್ಯಾಧಿ ಸಮಸ್ಯೆ ಸಂಪೂರ್ಣವಾಗಿ ಗುಣಮುಖವಾಗುವಂತಹ ಒಂದು ಮನೆ ಮದ್ದಿನ ತಿಳಿಸಿಕೊಡುತ್ತೇನೆ.ನಿಮಗೂ ಕೂಡ ಈ ಮೂಲವಾದ ಸಮಸ್ಯೆ ಕಾಡುತ್ತಾ ಇದ್ದಲ್ಲಿ ಈ ದಿನ ತಿಳಿಸುವಂತಹ ಈ ಎರಡೂ ಪರಿಹಾರಗಳಲ್ಲಿ ಯಾವುದಾದರೂ 1ಪರಿಹಾರವನ್ನು ನೀವು ಪಾಲಿಸಿಕೊಂಡು ಬನ್ನಿ ನಿಮ್ಮ ದೇಹ ಪ್ರಕೃತಿಗೆ ಯಾವ ಪರಿಹಾರ ಹಿಡಿಸುತ್ತದೆ ಆ ಪರಿಹಾರವನ್ನು ಪಾಲಿಸಿ ಸಾಕು.

ಇದರಿಂದ ನಿಮಗೆ ಮೂಲವ್ಯಾಧಿ ಸಮಸ್ಯೆಯ ಬುಡದಿಂದ ಪರಿಹರವಾಗುತ್ತದೆ ಮತ್ತು ಮೂಲವ್ಯಾಧಿ ಸಮಸ್ಯೆ ಬರಬಾರದು ಅಂದರೂ ಕೂಡ ನೀವು ವಾರದಲ್ಲಿ ಒಮ್ಮೆಯಾದರೂ ಈ ಪರಿಹಾರವನ್ನು ಮಾಡಿಕೊಳ್ಳಬಹುದು ಅಥವಾ ಮೂಲವ್ಯಾಧಿ ಸಮಸ್ಯೆ ಬರದೆ ಇರುವುದಕ್ಕೂ ಕೂಡ ಸಾಕಷ್ಟು ಮುಂಜಾಗ್ರತೆ ಕ್ರಮಗಳು ಇವೆ ಅದನ್ನ ಕೂಡ ನೀವು ಪಾಲಿಸಬಹುದು ಇದರಿಂದ ಜೀವನದಲ್ಲಿ ನಿಮಗೆ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.ಮೊದಲನೆಯ ಪರಿಹಾರ ಈ ಪರಿಹಾರಕ್ಕಾಗಿ ಬೇಕಾಗಿರುವುದು ಈರುಳ್ಳಿ ರಸ ಮತ್ತು ಕಲ್ಲುಸಕ್ಕರೆ ನೀವು ಸಕ್ಕರೆಯನ್ನು ತೆಗೆದುಕೊಳ್ಳಬಾರದು ಕಲ್ಲುಸಕ್ಕರೆ ಯನ್ನೇ ತೆಗೆದುಕೊಳ್ಳಿ ಕೆಂಪು ಅಥವಾ ಬಿಳಿ ಬಣ್ಣದ ಕಲ್ಲು ಸಕ್ಕರೆ ಅನ್ನು ತೆಗೆದುಕೊಳ್ಳಿ. ಮೊದಲಿಗೆ ಈರುಳ್ಳಿ ಅನ್ನು ರುಬ್ಬಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ

ನಂತರ ಈ ರಸಕ್ಕೆ ಕಲ್ಲುಸಕ್ಕರೆ ಪುಡಿ ಮಾಡಿ ಈ ಕಲ್ಲು ಸಕ್ಕರೆಯನ್ನು ಈರುಳ್ಳಿ ರಸದೊಂದಿಗೆ ಮಿಶ್ರಣ ಮಾಡಿ ಇದನ್ನು ಪ್ರತಿದಿನ ಸೇವಿಸುತ್ತ ಬನ್ನಿ ನೀವು ಈ ಪರಿಹಾರಮಾಡಿಕೊಳ್ಳುತ್ತಾ ಬರುವುದರಿಂದ ಕ್ರಮೇಣವಾಗಿ ಮೂಲವ್ಯಾಧಿಯು ಬುಡದಿಂದ ಪರಿಹಾರ ಆಗುತ್ತದೆ.ಎರಡನೆಯ ಪರಿಹಾರ ಈ ಪರಿಹಾರಕ್ಕಾಗಿ ಬೇಕಾಗಿರುವುದು ನಿಂಬೆ ಹಣ್ಣಿನ ರಸ ಮತ್ತು ಹಸು ಅಥವಾ ಎಮ್ಮೆಯ ಹಾಲು. ಹೌದು ನೀವು ಈ ಪರಿಹಾರಕ್ಕಾಗಿ ಪ್ಯಾಕೆಟ್ ಹಾಲನ್ನು ಬಳಸುವಂತಿಲ್ಲ ಹಸು ಅಥವಾ ಎಮ್ಮೆಯ ಹಾಲನ್ನು ಬಳಸಬೇಕು. 1ಲೋಟ ಬೆಚ್ಚಗಿನ ಹಾಲಿಗೆ ಸಕ್ಕರೆಯನ್ನು ಬೆರೆಸಬಾರದು

ಇದಕ್ಕೆ 1ಚಮಚ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಬೇಕು ಈ ಹಾಲನ್ನು ನೀವು ತಕ್ಷಣವೇ ಕುಡಿಯಬೇಕು ಹೌದು ಹಾಲಿಗೆ ನಿಂಬೆಹಣ್ಣಿನ ರಸವನ್ನು ಗಮನಿಸಿದಾಗ ಇದು ಮೊಸರಿನ ರೀತಿ ಆಗುತ್ತದೆ. ಆಗ ನೀವು ತಕ್ಷಣವೇ ಈ ಹಾಲನ್ನು ಕುಡಿಯುವುದರಿಂದ ನಿಮಗೆ ಮೂಲವ್ಯಾಧಿ ಅನ್ನುವ ಸಮಸ್ಯೆ ಬೇಗನೇ ಪರಿಹಾರ ಆಗುತ್ತದೆ ಈ ಎರಡೂ ಪರಿಹಾರದಲ್ಲಿ ಯಾವುದಾದರೂ 1ಪರಿಹಾರವನ್ನು ನೀವು ಮಾಡಿಕೊಳ್ಳಿ ಮೂಲವ್ಯಾಧಿ ಸಮಸ್ಯೆ ಪರಿಹಾರ ಮಾಡಿಕೊಳ್ಳಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *