ಜಾಸ್ತಿ ಮಾತು ಆಡಿದರೆ ಕಷ್ಟ ತಪ್ಪಿದ್ದಲ್ಲ ಅಂತಾರಲ್ಲ ಅದು ಯಾಕೆ ಗೊತ್ತ . ಇದೇ ಕಾರಣಕ್ಕೆ ಹೇಳೋದು ಮೌನ ಬಂಗಾರ ಅಂತ ಇದರ ಬಗ್ಗೆ ಬುದ್ಧನ ಮಾತುಗಳನ್ನು ನೀವು ಒಮ್ಮೆ ಕೇಳಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ತುಂಬಾ ಮಾತನಾಡುವುದು ತುಂಬಾ ಅಪಾಯಕಾರಿ ನಿಮಗೆ ಗೊತ್ತಾದರೆ ತುಂಬಾ ಒಳ್ಳೆಯದು.ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಗಾದೆಯಿದೆ. ಮಾತಿನ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ ಮಾತನಾಡುವುದು ಹೇಗೆ ಅವಶ್ಯವೋ ಅಷ್ಟೇ ಮಾತನಾಡದ ಸಂದರ್ಭಗಳಲ್ಲಿ ಮೌನವಾಗಿರುವುದು ಅಷ್ಟೇ ಅವಶ್ಯವಾಗಿರುತ್ತದೆ. ಮಾತುಗಳ ಬಗ್ಗೆ ಸಾವಿರಾರು ಜನರು ಸಾವಿರ ಅನಿಸಿಕೆಗಳನ್ನು ಹೇಳಿದ್ದಾರೆ. ಮಾತನಾಡುವಾಗ ಒಂದು ಸಲ ಯೋಚಿಸಬೇಕು ನಮ್ಮ ಮಾತು ಬೇರೆಯವರಿಗೆ ನೋವು ಕೊಡಬಾರದು ಬದಲಾಗಿ ಖುಷಿಯನ್ನು ಕೊಡಬೇಕು ಅಂತಹ ಮಾತಿಗೆ ಬೆಲೆ ಕಟ್ಟಲಾಗದ ಮಾನ್ಯತೆ ಇರುತ್ತದೆ,

ಆದರೆ ಕೆಲವೊಬ್ಬರು ಮಾತಿನಲ್ಲಿ ಹಿಡಿತವಿಲ್ಲದೆ ಮಾತನಾಡುತ್ತಿರುತ್ತಾರೆ ಅಂತವರಿಗೆ ತಾವೇ ಜಾಣರು ಎಂಬ ಅಹಂಕಾರ ಇರುತ್ತದೆ ಆದರೆ ಅವರ ಮಾತಿನಿಂದ ಇನ್ನೊಬ್ಬರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಆದರೆ ಇನ್ನೂ ಕೆಲವೊಬ್ಬರು ತಿಳಿದರು ಇಂತಹ ತಪ್ಪುಗಳನ್ನು ಮಾಡುತ್ತಾರೆ. ಈ ಭೂಮಿಯಲ್ಲಿ ಅನೇಕ ರೀತಿಯ ವಿಚಿತ್ರ ಗುಣವುಳ್ಳ ಮನುಷ್ಯರಿದ್ದಾರೆ ಒಬ್ಬೊಬ್ಬರ ವಿಚಾರ,ಗುಣ ಸ್ವಭಾವ ಎಲ್ಲವೂ ವಿಭಿನ್ನವಾಗಿರುತ್ತದೆ ಹಾಗಾಗಿ ಒಬ್ಬರು ಮಾತನಾಡುವುದು ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ.

ಮೌನ ಮಾತಿಗಿಂತ ಹೆಚ್ಚು ಗೌರವವನ್ನು ಪ್ರದರ್ಶಿಸುತ್ತದೆ.ಏಕೆಂದರೆ ಕೆಲವು ಸಂದರ್ಭಗಳಲ್ಲಿ ಇತರರೊಂದಿಗೆ ಮಾತನಾಡಿದರೆ ನಮ್ಮ ಗೌರವ ಅವರಲ್ಲಿ ಕಡಿಮೆಯಾಗಬಹುದು ಹಾಗಾಗಿ ಮೌನವಾಗಿರುವುದೇ ಉತ್ತಮ ಹಾಗೆಂದು ಮಾತನಾಡುವುದು ತಪ್ಪಲ್ಲ ಆದರೆ ಮಾತನಾಡುವ ಸಂದರ್ಭವಿರಬೇಕು ಎಲ್ಲಿ,ಹೇಗೆ ,ಎಷ್ಟು ಮಾತನಾಡಬೇಕು ಎಂಬ ಅರಿವಿರಬೇಕು. ಒಟ್ಟಾರೆ ಹೇಳಬೇಕೆಂದರೆ ಬೇಡವಾದ ಮಾತುಗಳನ್ನು ಆಡುವುದಕ್ಕಿಂತ ಸುಮ್ಮನಿರುವುದು ತುಂಬಾ ಒಳ್ಳೆಯದು. ಅದಕ್ಕೆ ದೊಡ್ಡವರು ಹೇಳಿರುವುದು ಮಾತು ಬೆಳ್ಳಿ ಮೌನ ಬಂಗಾರ.

ಕೆಲವೊಂದು ಸಲ ನಿಮ್ಮ ಮೌನವೇ ನಿಮಗೆ ನೆಮ್ಮದಿ ತಂದುಕೊಡುತ್ತದೆ. ಮಾತು ಸಾವಿರ ಸಮಸ್ಯೆಗಳನ್ನು ತಂದರೆ ಮೌನ ಸಾವಿರ ಉತ್ತರಗಳನ್ನು ನೀಡುತ್ತದೆ. ಎದುರಾಳಿಯನ್ನು ಮಾತಿನಿಂದ ಗೆಲ್ಲುವುದಕ್ಕಿಂತ ಮೌನದಿಂದ ಗೆಲ್ಲುವುದು ಉತ್ತಮ. ಅದಕ್ಕೆ ಹೇಳುವುದು ವೇದಗಳು ಸುಳ್ಳಾದರೂ ಗಾದೆ ಸುಳ್ಳಾಗದು ಇಂತಹ ಒಳ್ಳೆಯ ಗಾದೆಗಳು ಅನುಭವದಿಂದ ಬಂದಿರುತ್ತವೆ ಯಾವ ವಿಶ್ವವಿದ್ಯಾಲಯದಲ್ಲೂ ಸಹ ಈ ಅನುಭವಗಳು ಸಿಗುವುದಿಲ್ಲ ಬದಲಾಗಿ ಸಿಗುವುದು ಕಷ್ಟ , ನೋವು ಇರುವ ಜೀವನದಲ್ಲಿ. ಹಾಗೆಯೇ ಮಾತು ಮುತ್ತಿನಂತಿರಬೇಕು ಎನ್ನುತ್ತಾರೆ ಅಂದರೆ ಮಾತಿನಲ್ಲಿ ಅರ್ಥವಿರಬೇಕು ಮಾತಿನಿಂದ ಎಲ್ಲರಿಗೂ ಖುಷಿ ಇರಬೇಕು ಇರಬೇಕು ಅಂತ ಮಾತುಗಳನ್ನಾಡಬೇಕು.

ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬುದು ಎಷ್ಟು ಸತ್ಯ ನೋಡಿ ಸ್ನೇಹಿತರೆ ಒಂದು ಸಲ ಮಾತನಾಡಿದರೆ ಅದನ್ನು ಎಂದಿಗೂ ಹಿಂದೆ ಪಡೆಯಲಾಗುವುದಿಲ್ಲ. ಆದರೆ ಎಲ್ಲರೂ ಮಾತನಾಡಿ ಕೊನೆಗೆ ಕ್ಷಮೆಯನ್ನು ಕೇಳುತ್ತಾರೆ ಈ ಒಂದು sorry ಎನ್ನುವ ಪದ ಮಾತನಾಡಿದ್ದನ್ನು ಹಿಂದೆ ಪಡೆಯುವುದಿಲ್ಲ ಒಮ್ಮೆ ಆಡಿದ ಮಾತು ಎಂದಿಗೂ ಮನಸ್ಸಿನಲ್ಲಿ ಇರುತ್ತದೆ. ಅದಕ್ಕಾಗಿ ಮೊದಲೇ ಯೋಚಿಸಿ ಮಾತನಾಡಬೇಕು. ಗೌತಮ ಬುದ್ಧನ ಕಥೆಯನ್ನು ಕೇಳಿ ಏನೆಂದರೆ ಗೌತಮ ಬುದ್ಧನ ಹತ್ತಿರ ಒಬ್ಬ ಮಹಿಳೆ ಹೋಗಿ ತನ್ನ ಮಗಳು ತುಂಬಾ ಮಾತನಾಡುತ್ತಾಳೆ ಎಲ್ಲರ ಜೊತೆ ಜಗಳವಾಡುತ್ತಾಳೆ ಎಂದು ಹೇಳಿದಾಗ ಗೌತಮ ಬುದ್ಧನ ಮಗಳನ್ನು ಕರೆದುಕೊಂಡು ಬಳಿ ಬಾ ಎಂದು ಆ ಮಹಿಳೆಗೆ ಹೇಳಿದರು.

ಮರುದಿನ ಆ ಮಹಿಳೆ ಮಗಳನ್ನು ಕರೆತಂದಳು ಆಗ ಗೌತಮ ಬುದ್ಧನು ಅವಳ ಮಗಳಿಗೆ ನಿನ್ನ ಧ್ವನಿ ತುಂಬಾ ಚೆನ್ನಾಗಿದೆ ಎಂದು ಹೇಳಿದರು ಆಗ ಅವಳು ತುಂಬಾ ಖುಷಿಯಿಂದ ಹೌದು ಸ್ವಾಮಿಗಳೇ ನಾನು ಮಾತನಾಡುವುದು ಎಲ್ಲರಿಗೂ ಇಷ್ಟ ಆದರೆ ನನ್ನ ತಾಯಿಯ ನನಗೆ ಮಾತನಾಡಬೇಡ ಜಗಳ ಮಾಡಬೇಡ ಎಂದು ಹೇಳುತ್ತಾರೆ ಆದರೆ ನಾನು ಮಾತನಾಡುವುದರಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಇಷ್ಟಪಡುತ್ತಾರೆ ಎಂದು ಹೇಳುತ್ತಾಳೆ. ಅವಳ ತಪ್ಪು ತಿಳುವಳಿಕೆಯನ್ನು ತೋರಿಸಲು ಗೌತಮ ಬುದ್ಧರು ಒಂದು ಕೆಲಸವನ್ನು ನೀಡುತ್ತಾರೆ. ಅದೇನೆಂದರೆ ಮಗು ಬುಟ್ಟಿಯಲ್ಲಿ ಪಕ್ಷಿಗಳ ರೆಕ್ಕೆಗಳಿವೆ ಅವುಗಳನ್ನು ಎಲ್ಲರ ಮನೆಗೂ ಒಂದೊಂದಾಗಿ ಕೊಟ್ಟು ಬರಲು ಹೇಳುತ್ತಾರೆ. ಅದೇ ರೀತಿಯಾಗಿ ಅವಳು ಎಲ್ಲರ ಮನೆಗೂ ಅದನ್ನು ತಲುಪಿಸುತ್ತಾಳೆ.

ಖುಷಿಯಿಂದ ಗೌತಮ ಬುದ್ಧ ಬಳಿಬಂದು ಸ್ವಾಮಿಗಳೇ ನೀವು ಹೇಳಿದ ಕೆಲಸವನ್ನು ಎಷ್ಟು ಬೇಗ ಮಾಡಿದೆ ಎಂದು ಹೇಳುತ್ತಾಳೆ. ನಂತರ ಗುರುಗಳು ಹಾಗಾದರೆ ಅವುಗಳನ್ನು ಈಗ ಮರಳಿ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಆಗ ಅವಳು ಎಲ್ಲರ ಮನೆ ಹತ್ತಿರ ಹೋಗಿ ಅದನ್ನು ಕೇಳಿದರೆ ಎಲ್ಲರ ಮನೆಯಲ್ಲೂ ಸಿಗುವುದಿಲ್ಲ ಬದಲಾಗಿ ಸ್ವಲ್ಪ ಸಿಗುತ್ತವೆ. ಅವಳು ತುಂಬಾ ಬೇಜಾರಾಗಿ ಸ್ವಾಮಿಗಳ ಹತ್ತಿರ ಬರುತ್ತಾಳೆ. ಗೌತಮ ಬುದ್ಧರ ಹತ್ತಿರ ನಾನು ಹೆಚ್ಚಾಗಿ ಅವುಗಳನ್ನು ಸಂಗ್ರಹಿಸುವುದು ಆಗಲಿಲ್ಲ ಗುರುಗಳೇ ಎಂದು ಹೇಳುತ್ತಾಳೆ.

ಆಗ ಗೌತಮ ಬುದ್ಧರು ಮಹಿಳೆಗೆ ಹೇಳುತ್ತಾರೆ ಮಾತು ಕೂಡ ಇದೇ ರೀತಿ ತಾಯಿ ಮಾತನಾಡುವಾಗ ಬೇಗ ಮಾತನಾಡಿ ಮುಗಿಸುತ್ತೇವೆ ನಾಲಿಗೆಗೆ ಹಿಡಿತವಿಲ್ಲದೆ ಮಾತನಾಡುತ್ತೇವೆ ಆದರೆ ಅವರಿಂದ ಗೌರವವನ್ನು ಹೆಚ್ಚು ಸಂಪಾದಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ. ಆಗ ಮಹಿಳೆಗೆ ತಾನು ದಿನ ಜಗಳವಾಡುವುದು ಅತಿ ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ಅರ್ಥವಾಗುತ್ತದೆ. ಹೌದು ಸ್ನೇಹಿತರೆ ಮಾತಿನಿಂದಲೇ ಎಲ್ಲದಕ್ಕೂ ಪರಿಹಾರ ಇರುವುದಿಲ್ಲ ಹಾಗಂತ ಮಾತನಾಡದ ಪರಿಸ್ಥಿತಿಯಲ್ಲಿ ಮಾತನಾಡದೆ ಇದ್ದರೆ ದೊಡ್ಡ ಅಪರಾಧವಾದಂತೆ ಆಗುತ್ತದೆ. ಮಾತನಾಡುವಾಗ ಎಚ್ಚರವಿರಲಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.