ಸಾಮಾನ್ಯವಾಗಿ ನಾವು ಎಷ್ಟೊಂದು ರೀತಿಯಾದಂಥ ಪಕ್ಷಿಗಳನ್ನು ಪ್ರತಿನಿತ್ಯ ನಮ್ಮ ಸುತ್ತಮುತ್ತ ನೋಡಿರುತ್ತೇವೆ ಆದರೆ ಯಾವ ಪಕ್ಷಿ ನಮಗೆ ಯಾವ ರೀತಿಯಾದಂತ ಸಂದೇಶ ಕೊಡುತ್ತದೆ ಎಂಬ ಸಣ್ಣ ಅರಿವು ಕೂಡ ನಮಗಿರುವುದಿಲ್ಲ ಅದರಲ್ಲೂ ಕೂಡ ಮುಖ್ಯವಾಗಿ ಕಾಗೆಯನ್ನು ಎಲ್ಲರೂ ಕೂಡ ಅಪಶಕುನ ಎನ್ನುವರು ಆದರೆ ಕಾಗೆಯು ನಮ್ಮ ಕಣ್ಣ ಮುಂದೆ ಬಂದರೆ ಯಾವುದೋ ಅಪಶಕುನ ಯಾವುದು ಶುಭ ಶಕುನ ಎಂಬ ಸಂಕೇತವನ್ನು ತಿಳಿಸಿಕೊಡುವ ಪ್ರಯತ್ನವನ್ನೂ ಮಾಡುತ್ತದೆ.
ಕಾಗೆ ಕಣ್ಣ ಮುಂದೆ ಬಂದ ತಕ್ಷಣ ಅದು ಅಪಶಕುನ ಎಂದು ಅರ್ಥವಲ್ಲ ಅದು ಶುಭ ಶಕುನವೊ ಆಗಿರಬಹುದು ಆದರೆ ಅದನ್ನು ತಿಳಿದುಕೊಳ್ಳುವ ಅರಿವು ನಮಗಿರಬೇಕು ಅಷ್ಟೇ. ಈಗ ಕೆಲವೊಂದು ಮಾಹಿತಿಯನ್ನು ನೀಡುತ್ತೇವೆ ಆ ಸಂದರ್ಭದಲ್ಲಿ ನೀವು ಕಾಗೆ ಎನ್ನೇನಾದರೂ ನೋಡಿದರೆ ಯಾವ ಅರ್ಥ ಬರುತ್ತದೆ ಎಂಬ ವಿಷಯವನ್ನು ತಿಳಿಸಿ ಕೊಡುವ ಒಂದು ಸಣ್ಣ ಪ್ರಯತ್ನ ಮುಂದಿದೆ.ಸಾಮಾನ್ಯವಾಗಿ ನೀವು ಮನೆಯಿಂದ ಹೊರಗೆ ಹೊರಟಂತಹ ಸಂದರ್ಭದಲ್ಲಿ ಕಾಗೆ ಏನಾದರೂ ನೀರನ್ನು ಕುಡಿಯುತ್ತಿದ್ದರೆ ಖಂಡಿತವಾಗಿಯೂ ನಿಮಗೆ ಧನ ಲಾಭ ಎಂಬುದು ಆಗುತ್ತದೆ
ಕಾಗೆ ಎಂದರೆ ಶನಿದೇವನ ವಾಹನ. ಕಾಗೆಗೆ ತೊಂದರೆ ಕೊಟ್ಟರೆ, ಅಂಥವರಿಗೆ ಶನಿದೇವ ತೊಂದರೆ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ, ಕಾಗೆಯ ಬಗ್ಗೆ ಹಲವು ಶಕುನಗಳಿದೆ. ಒಂದೊಂದು ಶಕುನವೂ ಒಂದೊಂದು ಅರ್ಥವನ್ನು ನೀಡುತ್ತದೆ. ಹಾಗಾದ್ರೆ ಕಾಗೆ ಶಕುನದ ಬಗ್ಗೆ ತಿಳಿಯೋಣ ಬನ್ನಿ..ಮನೆಯ ಮುಂದೆ ನಿಂತು ಕಾಗೆ ಕೂಗಿದರೆ ಮನೆಗೆ ನೆಂಟರು ಬರುತ್ತಾರೆಂದರ್ಥ. ಅಲ್ಲದೇ ತಾವು ವಾಸವಾಗಿರುವ ಮನೆಯ ಮೇಲೆ ನಿಂತು ಕಾಗೆ ಕೂಗಿದರೆ, ಸಾವಿನ ಸುದ್ದಿ ಕೇಳುತ್ತೇವೆಂದು ಅರ್ಥ. ಈಶಾನ್ಯ, ಆಗ್ನೇಯ, ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕಾಗೆ ಕೂಗಿದರೆ ಒಳ್ಳೆಯ ಸುದ್ದಿ ಕೇಳುತ್ತೇವೆ,
ಅದೃಷ್ಟ ಖುಲಾಯಿಸುತ್ತದೆ ಎನ್ನಲಾಗಿದೆ.ಇನ್ನು ಈ ಶನಿದೇವನ ವಾಹನಕ್ಕೆ ಪೂಜೆ ಕೂಡ ಮಾಡಲಾಗುತ್ತದೆ. ನೇಪಾಳಿಯರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾಗೆಗೆ ನೈವೇದ್ಯವಿಟ್ಟು ಪೂಜೆ ಮಾಡುತ್ತಾರೆ. ಅಲ್ಲದೇ ಪೂರ್ವಜರ ಶ್ರಾದ್ಧ ಮಾಡಿದಾಗ ಅವರಿಗಾಗಿ ಮಾಡಿದ ನೈವೇದ್ಯವನ್ನು ಕಾಗೆಗೆ ಇಡಲಾಗುತ್ತದೆ. ಕಾಗೆ ಬಂದು ಅದನ್ನು ಸೇವಿಸಿದರೆ ಪೂರ್ವಜರು ತೃಪ್ತರಾಗಿದ್ದಾರೆಂದರ್ಥ.ಇನ್ನು ಕಾಗೆ ಮನುಷ್ಯನನ್ನು ಮುಟ್ಟಿದರೆ, ತಲೆಗೆ ಕುಟುಕಿದರೆ ಅದನ್ನ ಮೈಲಿಗೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಹೆಣ್ಣು ಮಕ್ಕಳ ತಲೆಗೆ ಕಾಗೆ ಕುಟುಕಿದರೆ, ಆಕೆಯ ಗಂಡನಿಗೆ ಯಾವುದೇ ಸಮಸ್ಯೆ ಕಾಡಲಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಕಾಗೆ ಮನುಷ್ಯನನ್ನು ಮುಟ್ಟಬಾರದು ಎನ್ನಲಾಗುತ್ತದೆ.
ಮತ್ತು ಕಾಗೆಯು ನಿಮ್ಮ ಮನೆಯಂಗಳದಲ್ಲಿ ನೆಲವನ್ನ ಕೆರೆಯುತ್ತಿದ್ದರೆ ಅಥವಾ ನೆಲವನ್ನ ಕುಟುಕುತ್ತಿದ್ದಾರೆ ನಿಮ್ಮ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಯೆಗಳೆಲ್ಲ ದೂರಾಗುತ್ತದೆ ಎಂದು ಖಂಡಿತವಾಗಿಯೂ ನೀವು ತಿಳಿದುಕೊಳ್ಳಬಹುದು.ಮತ್ತು ಕಾಗೆ ಬೆಳಗ್ಗಿನ ಸಮಯ ಅಂದರೆ ನೀವು ಎದ್ದು ಮನೆಯಿಂದ ಹೊರಗೆ ಬಂದಂತಹ ಸಂದರ್ಭದಲ್ಲಿ ನಿಮ್ಮ ಕಾಲ ಬಳಿಯೇನಾದರೂ ಸ್ಪರ್ಶಿಸಿದರೆ ಖಂಡಿತವಾಗಿಯೂ ನಿಮಗೆ ಧನಲಾಭ ಆಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಮತ್ತೊಂದು ವಿಷಯವೆಂದರೆ ನೀವು ಎಲ್ಲಾದರೂ ಹೋಗುವಂಥ ಸಂದರ್ಭದಲ್ಲಿ ಕಾಗೆಯು ದಾರದ ಮೇಲೆ ಕುಳಿತುಕೊಂಡಿದ್ದರೆ ನಿಮ್ಮ ಮನಸ್ಸಿನಲ್ಲಿ ನೀವು ಯಾವುದೇ ರೀತಿಯ ಗೊಂದಲದಲ್ಲಿ ಇದ್ದರೂ ಕೂಡ ಗೊಂದಲಕ್ಕೆ ಪರಿಹಾರವಾಗಿ ಕಾಗೆ ಕಾಣಿಸಿಕೊಳ್ಳುತ್ತದೆ.
ಮತ್ತೊಂದು ವಿಷಯವೆಂದರೆ ಸೂರ್ಯೋದಯದ ಕಾಲದಲ್ಲಿ ಕಾಗೆ ನಿಮ್ಮ ಮನೆ ಮುಂದೆ ಬಂದು ಏನಾದರೂ ಹೇಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಯಶಸ್ಸು ಹೆಚ್ಚಾಗುತ್ತದೆ ಎಂಬ ಅರ್ಥ ಮತ್ತು ಕಾಗೆಯು ಬಟ್ಟೆಯನ್ನು ಕಚ್ಚಿಕೊಂಡು ಹೊಗುವುದನ್ನ ನೀವೇನಾದರೂ ಗಮನಿಸಿದರೆ ಅದು ಶುಭಶಕುನದ ಸಂಕೇತ ಮತ್ತು ನೀವು ಎಲ್ಲಾದರೂ ಹೊರಗಡೆ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಬಲಭಾಗದಿಂದ ಕಾಗೆ ಹೋದರೆ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ ಎಂಬ ಅರ್ಥ ಮಧ್ಯಾಹ್ನಕ್ಕಿಂತ ಮುಂಚೆ ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ಭಾಗದಲ್ಲಿ ಕಾಗೆ ಬಂದು ಸುಮಧುರವಾದ ಧ್ವನಿಯಲ್ಲಿ ಕೂಗಿದರೆ ನಿಮ್ಮ ಮನೆಯಲ್ಲಿ ಸ್ತ್ರೀಯಿಂದ ಒಳ್ಳೆಯದಾಗುತ್ತದೆ.
ಸ್ತ್ರೀಯು ತನ್ನ ತಲೆಯ ಮೇಲೆ ನೀರನ್ನು ತೆಗೆದುಕೊಂಡು ಹೋಗುವಾಗ ಕಾಗೆ ಬಂದು ನೀರನ್ನು ಕುಡಿದರೆ ಅದು ಶುಭ ಸಂಕೇತ. ಕಾಗೆ ಏನಾದರೂ ನಿಮ್ಮ ಮನೆಯ ಕಡೆಗೆ ಹಸಿಯಾದ ಮಣ್ಣು ಅಥವಾ ಹಣ್ಣನ್ನು ತೆಗೆದುಕೊಂಡು ಬಂದರೆ ಅಚಾನಕ್ಕಾಗಿ ಧನ ಲಾಭ ಆಗುವ ಸಾಧ್ಯತೆಯಿದೆ.ವೈಶಾಖ ದಿನಗಳಲ್ಲಿ ಕಾಗೆ ಹಸಿರು ಮರದ ಮೇಲೆ ಗೂಡು ಕಟ್ಟಿದರೆ ಮಳೆ ಬರುತ್ತದೆ ಎಂಬ ಅರ್ಥವಿದೆ ನೀವು ದಾರಿಯಲ್ಲಿ ಹೋಗುವಾಗ ಎರಡು ಕಾಗೆಗಳು ಒಂದು ಕಾಗೆಗೆ ಮತ್ತೊಂದು ಕಾಗೆಯ ಕೊಕ್ಕಿನಲ್ಲಿ ಊಟವನ್ನ ತಿನ್ನಿಸುತ್ತಿದ್ದರೆ ನಿಮಗೆ ಶುಭವಾಗಲಿದೆ ಎಂದು .
ಮತ್ತು ಕಾಗೆ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮನೆಯ ಒಳಕ್ಕೆ ಬಂದಿತು ಎಂದರೆ ಖಂಡಿತವಾಗಿ ನಿಮ್ಮ ಮನೆಗೆ ಯಾರಾದರೂ ಅತಿಥಿ ಬರುತ್ತಾರೆ ಎಂಬ ಅರ್ಥ ಮತ್ತೊಂದು ವಿಶೇಷವಾದ ಮಾಹಿತಿಯೆಂದರೆ ನಿಮಗೆ ಎಲ್ಲಾದರೂ ಕಾಗೆ ಕಂಡರೆ ಒಂದು ತುತ್ತು ಅನ್ನ ಅಥವಾ ರೊಟ್ಟಿ ಹಾಕಿ ಆಗ ಖಂಡಿತವಾಗಿಯೂ ನಿಮಗೆ ಧನಲಾಭವಾಗುತ್ತದೆ ಯಾವಾಗಲೂ ಕಾಗೆಗೆ ನಾವು ಅಪಶಕುನ ಎನ್ನುತ್ತೇವೆ ಆದರೆ ಕಾಗೆ ಯಾವ ರೀತಿ ನಮಗೆ ಕಾಣಿಸಿಕೊಳ್ಳುತ್ತದೆ ಎಂಬುದರ ಮೇಲೆ ಅಪಶಕುನ ಶುಭಶಕುನ ನಿರ್ಧಾರವಾಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ