ನೀವೇನಾದ್ರು ಬಾಳೆಹಣ್ಣಿನಲ್ಲಿ ಈ ಒಂದು ವಸ್ತುವನ್ನು ಬೆರೆಸಿಕೊಂಡು ಮುಖಕ್ಕೆ ಹಚ್ಚಿದರೆ ಸಾಕು ನಿಮ್ಮ ಮುಖ ಎಷ್ಟೇ ಕಪ್ಪಾಗಿ ಇದ್ದರೂ ಕೂಡ ಒಂದೇ ವಾರದಲ್ಲಿ ಬೆಳ್ಳಗಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಬಾಳೆಹಣ್ಣಿನಲ್ಲಿ ಇದನ್ನು ಬೆರೆಸಿ ಹಚ್ಚಿದರೆ ನಿಮ್ಮ ಮುಖದ ಕಲೆಗಳು ಮಾಯವಾಗುವವು ಮತ್ತು ನೀವು ಕಾಂತಿಯುತವಾಗಿ ಕಾಣುತ್ತೀರಿ.ಸ್ನೇಹಿತರೆ ಯಾರಿಗೆ ತಾನೇ ಸೌಂದರ್ಯ ಬೇಡ ಹೇಳಿ.ಎಲ್ಲರಿಗೂ ತಾವು ಚೆನ್ನಾಗಿ ಕಾಣಬೇಕು ಬೆಳ್ಳಗಾಗ ಬೇಕು ಎಂದು ಆಸೆ ಇದ್ದೇ ಇರುತ್ತದೆ. ಚೆನ್ನಾಗಿ ಕಾಣಲು ಎಂತೆಂತಹ ಆಪರೇಷನ್ಗಳನ್ನು ಕೂಡ ಈಗ ಮಾಡಿಸಿಕೊಳ್ಳುತ್ತಾರೆ. ಸುಂದರವಾಗಿ ಕಾಣಲು ತುಂಬಾ ಖರ್ಚನ್ನು ಸಹ ಮಾಡುತ್ತಾರೆ. ಆದರೆ ಕೆಲವೊಂದು ಸಲ ಇಂತಹ ಪ್ರಯತ್ನಗಳು ವಿಫಲವಾಗುತ್ತದೆ. ಕೆಲವೊಬ್ಬರು ನೋಡಲು ತುಂಬಾ ಚೆನ್ನಾಗಿ ಇರುತ್ತಾರೆ ಮುಖ ಲಕ್ಷಣವಾಗಿರುತ್ತದೆ ಆದರೆ ಅವರಿಗೆ ಕಪ್ಪಾದ ಮೊಡವೆಗಳು ಮುಖವನ್ನು ಕಪ್ಪು ಮಾಡುತ್ತವೆ.

ಈಗಿನ ಜೀವನಶೈಲಿಯಿಂದ ಎಲ್ಲರ ಮುಖದಲ್ಲೂ ಮೊಡವೆಗಳು ಹೆಚ್ಚುತ್ತಿವೆ ಅದರಲ್ಲೂ ಹುಡುಗಿಯರಿಗೆ ಮೊಡವೆಗಳ ಕಾಟ ಹೆಚ್ಚಾಗಿ ಇರುತ್ತದೆ. ಮುಖದಲ್ಲಿ ಮೊಡವೆಗಳಿದ್ದರೆ ಕಾಲೇಜಿಗೆ ಹೋಗಲು ಮದುವೆ-ಮುಂಜಿ ಗಳಿಗೆ ಹೋಗಲು ಎಲ್ಲಿಗಾದರೂ ಹೊರಡಲು ತುಂಬಾ ಮುಜುಗರ ಉಂಟಾಗುತ್ತದೆ. ಬೇರೆಯವರು ಎಷ್ಟು ಚೆಂದ ಇರುತ್ತಾರೆ ನನಗೆ ಮೊಡವೆಗಳ ಕಾಟ ಅನಿಸುತ್ತದೆ ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಕ್ರೀಮ್ಗಳನ್ನು ಬಳಸಿದರು ಮೊಡವೆಗಳು ಹೋಗುವುದಿಲ್ಲ ಎಂದು ನೀವು ಜಿಗುಪ್ಸೆಯಿಂದ ಇದ್ದರೆ ಇದನ್ನು ಓದಿ.

ನಿಮ್ಮ ಮುಖದಲ್ಲಿರುವ ಎಲ್ಲ ಮೊಡವೆಗಳು ಬೇಗನೆ ಹೋಗುತ್ತವೆ ಹಾಗೂ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಈ ಒಂದು ಮಾಹಿತಿ ನ್ಯಾಚುರಲ್ ಆಗಿರುವಂಥದ್ದು ಮೊಡವೆಗಳು ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡು ಮಕ್ಕಳಿಗೂ ಇರುತ್ತವೆ.ಇಬ್ಬರೂ ಸಹ ಈ ಒಂದು ಬಾಳೆಹಣ್ಣಿನ ಫೇಸ್ ಪ್ಯಾಕ್ ಮನೆಯಲ್ಲೇ ಮಾಡಬಹುದು.ಯಾವುದೇ ಸೀಸನ್ಗಳಲ್ಲೂ ಕೂಡ ಈ ಒಂದು ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು.ಬಾಳೆಹಣ್ಣು ತುಂಬಾ ಉಪಯುಕ್ತವಾದ ಪ್ರೋಟೀನ್ ಭರಿತ ಹಣ್ಣು.

ಬಾಳೆಹಣ್ಣು ದೇಹದಲ್ಲಿರುವ ಉಷ್ಣಾಂಶವನ್ನು ಹೊರಹಾಕುತ್ತದೆ ದಿನಾಲು ಈ ಒಂದು ಹಣ್ಣನ್ನು ತಿನ್ನುವುದರಿಂದ ನಮ್ಮ ಮುಖದಲ್ಲಿ ಕಾಂತಿಯು ಹಚ್ಚುತ್ತದೆ ಹಾಗೆಯೇ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಬಾಳೆಹಣ್ಣು ತಿನ್ನಲು ತುಂಬಾ ರುಚಿಯಾಗಿರುತ್ತದೆ ಮತ್ತು ಸಿಹಿಯಾಗಿರುತ್ತದೆ. ಬಾಳೆಹಣ್ಣು ಎಲ್ಲಾ ಕಾಲಕ್ಕೂ ಎಲ್ಲಾ ಭಾಗಗಳಲ್ಲೂ ಸಿಗುವ ಹಣ್ಣು ಬಾಳೆಹಣ್ಣನ್ನು ದೇವರಿಗೆ ನೈವೇದ್ಯ ಮಾಡಲು ಕೂಡ ಬಳಸುತ್ತಾರೆ.ಬಾಳೆಹಣ್ಣುಗಳಲ್ಲಿ ತುಂಬಾ ವಿಧವಾದ ಹಣ್ಣುಗಳಿವೆ ಉದಾಹರಣೆಗೆ ಪಚ್ಚಬಾಳೆ, ಏಲಕ್ಕಿ ಬಾಳೆ, ರಸಬಾಳೆ ಇನ್ನು ಮುಂತಾದವುಗಳು.

ಬಾಳೆಹಣ್ಣುಗಳಲ್ಲಿ ಔಷಧೀಯ ಗುಣಗಳು ಇರುವುದರಿಂದ ಅನುದಿನವು ಇವುಗಳನ್ನು ಸೇವಿಸಿದರೆ ಆರೋಗ್ಯದಸುತ್ತದೆ. ಮೂಲವ್ಯಾಧಿ, ಆಮಶಂಕೆ, ಕರುಳಿನ ಹುಣ್ಣು ನಿವಾರಿಸುವಲ್ಲಿ ಬಾಳೆಹಣ್ಣು ಒಂದು ಕೈ ಮೇಲೆ. ತುಂಬಾ ತೆಳ್ಳಗಿರುವವರು ದೇಹದ ತೂಕವನ್ನು ಹೆಚ್ಚಿಸಲು ಪ್ರತಿದಿನ ಬಾಳೆಹಣ್ಣನ್ನು ಸೇವಿಸಬಹುದು. ಊಟ ಮಾಡಿದ ನಂತರ ಹಾಲು ಮತ್ತು ಬಾಳೆಹಣ್ಣು ಸೇವಿಸುವುದರಿಂದ ಸಂಭೋಗ ಶಕ್ತಿಯು ಹೆಚ್ಚುತ್ತದೆ. ಹಾಗಾದ್ರೆ ಈ ಬಾಳೆಹಣ್ಣಿನ ಜೊತೆ ಇದನ್ನು ಬೆರೆಸಿ ಮುಖದ ಮೊಡವೆಗಳಿಗೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಬಾಳೆಹಣ್ಣಿನ ಜೊತೆ ನಿಂಬೆರಸ ಹಾಗೂ ಜೇನುತುಪ್ಪವನ್ನು ಸೇರಿಸಿ ಈ ಒಂದು ಫೇಸ್ ಪ್ಯಾಕ್ ಮಾಡಬಹುದು ಹಾಗಾದ್ರೆ ಈಗ ಇದನ್ನ ಹೇಗೆ ಮಾಡಬೇಕು ಎಂದು ತಿಳಿಯೋಣ. ಮೊದಲನೆಯದಾಗಿ ತುಂಬಾ ಹಣ್ಣಾದ ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಹಾಕಿಕೊಳ್ಳಿ ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಉಪಯೋಗವನ್ನು ನೀಡುತ್ತದೆ ಹಾಗೂ ನಿಂಬೆ ಹಣ್ಣಿನ ರಸ ಮುಖದ ಜಿಡ್ಡನ್ನು ತೆಗೆಯುತ್ತದೆ.

ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಎರಡು ಚಮಚ ನಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಕಾಂತಿಯುತ ಮುಖವು ನಿಮ್ಮದಾಗುವುದು. ಇದು ಕಳೆಗಳನ್ನು ನಿವಾರಿಸುವುದು.ಇದನ್ನು ಮುಖ ತೊಳೆದ ನಂತರ ಚೆನ್ನಾಗಿ ಹಚ್ಚಿಕೊಳ್ಳಬೇಕು ಅರ್ಧ ತಾಸಿನ ನಂತರ ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ವಾರದಲ್ಲಿ ಎರಡು ಸಲ ಈ ಒಂದು ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ನಿಮ್ಮ ಮುಖ ಬೆಳ್ಳಗಾಗಿ, ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

ಬಾಳೆಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಉಜ್ಜಿ ಮಸಾಜ್ ಮಾಡಿ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆ ನಿವಾರಣೆ ಆಗುತ್ತದೆ. ಇದಲ್ಲದೆ ನಿಮ್ಮ ಕೈ, ಸಹ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುವುದರಿಂದಲೂ ಹೊಳೆಯುವ ಚರ್ಮವನ್ನು ಪಡೆಯಬಹುದಾಗಿದೆ. ಇದಲ್ಲದೆ ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಹಚ್ಚಬಹುದು.ಈ ಫೇಸ್ ಪ್ಯಾಕ್ ಮಾಡಿಕೊಂಡು ಲಾಭ ಮಾಡಿಕೊಳ್ಳಿ ಹಾಗೂ ನಿಮ್ಮ ಮುಖದಲ್ಲಿರುವ ಮೊಡವೆ ಗಳನ್ನು ಓಡಿಸಿ ನಿಮ್ಮ ಕುಟುಂಬದವರಿಗೂ ಹಾಗೂ ನಿಮ್ಮ ಗೆಳೆಯ ಗೆಳತಿಯರಿಗೂ ಒಂದು ಫೇಸ್ ಪ್ಯಾಕ್ ಬಗ್ಗೆ ತಿಳಿಸಿ ಅವರು ಕೂಡ ಸುಂದರವಾಗಿ ಕಾಣುವ ಹಾಗೆ ಮಾಡಿ. ಈ ಫೇಸ್ ಪ್ಯಾಕ್ ತುಂಬಾ ಉಪಯುಕ್ತವಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.