ಹಲ್ಲಿಗಳ ಕಾಟ ಮನೆಯಲ್ಲಿ ಜಾಸ್ತಿ ಆಗಿದೆಯೇ ಹಾಗಾದ್ರೆ ಈ ಉಪಾಯ ಮಾಡಿ ಸಾಕು ಜನುಮದಲ್ಲಿ ಹಲ್ಲಿಗಳು ನಿಮ್ಮ ಮನೆಯ ಬಳಿ ಸುಳಿಯಲ್ಲ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಮಕ್ಕಳಿದ್ದ ಮನೆ ನಂದ ಗೋಕುಲ ಅಂತ ಹೇಳ್ತಾರೆ, ಹಾಗೆ ಮಕ್ಕಳಿದ್ದ ಮನೆಯೂ ಅಷ್ಟೇ ಸ್ವಚ್ಛವಾಗಿರಬೇಕು ಶುಭ್ರವಾಗಿ ಇರಬೇಕು ಯಾಕೆ ಅಂದರೆ ಮಕ್ಕಳಿದ್ದ ಮನೆಯಲ್ಲಿ ಮಕ್ಕಳು ನೆಲದ ಮೇಲೆ ಓಡಾಡುತ್ತಿರುತ್ತಾರೆ,ಆದ ಕಾರಣ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ, ಅದರಲ್ಲಿಯೂ ಮಕ್ಕಳಿದ್ದ ಮನೆ ಅಂತೂ ತುಂಬಾನೇ ಸ್ವಚ್ಛವಾಗಿ ದ್ದಷ್ಟು ಆರೋಗ್ಯಕ್ಕೂ ಉತ್ತಮ ಮತ್ತು ಮಕ್ಕಳಿಗೂ ಕೂಡ ಒಳ್ಳೆಯದು.ಮನೆಯ ಗೋಡೆಗಳಲ್ಲಿ ಎಲ್ಲಿ ನೋಡಿದರು ಹಲ್ಲಿ ಗಳು ಇರುವುದು ಸಾಮಾನ್ಯ ಗೋಡೆಗಳಲ್ಲಿ  ಬರುವಂತಹ ಸಣ್ಣ ಸಣ್ಣ ಕೀಟಗಳು ಸೊಳ್ಳೆ ಇತ್ಯಾದಿಗಳನ್ನು ಹಿಡಿದು ತಿನ್ನುವುದು ಹಲ್ಲಿಗಳ  ಕೆಲಸ

ಇದರಿಂದ ಮನೆಯಲ್ಲಿ ಕೀಟಗಳ ಸಮಸ್ಯೆ ಕಡಿಮೆಯಾಗುತ್ತದೆ ಹಲ್ಲಿಗಳ  ಸಂಖ್ಯೆ ಅತಿಯಾದರೆ ಕೆಲವರಿಗೆ ಕಿರಿಕಿರಿಯಾಗುತ್ತದೆ ಇನ್ನು ಕೆಲವರು ಹಲ್ಲಿಯನ್ನು ನೋಡಿದ ಕೂಡಲೇ ಬೆಚ್ಚಿಬೀಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ಹಲ್ಲಿಯು ಯಾವುದೇ ಕಾರಣಕ್ಕೆ ನಮಗೆ ಯಾವುದೇ ರೀತಿಯಾದಂತಹ ಹಾನಿಯನ್ನುಂಟುಮಾಡುವುದಿಲ್ಲ. ಆದರೆ ನಿಮಗೆ ಹಲ್ಲಿ ಇಷ್ಟವೇ ಇಲ್ಲ ಎಂದರೆ ಆಗ ನೀವು ಈ ರೀತಿಯಾಗಿ ಮಾಡುವುದರಿಂದ ಹಲ್ಲಿಗಳನ್ನು ಮನೆಯಿಂದ ದೂರ ಮಾಡಬಹುದು.ಹಲ್ಲಿಗಳು ಎಲ್ಲಿಂದ ಬರುತ್ತವೆ ಹೇಗೆ ಬರುತ್ತವೆ ಎನ್ನುವುದು ಗೊತ್ತಿಲ್ಲ ಆದರೆ ಆಗಾಗ ಹಲ್ಲಿಗಳು ಮನೆಗಳ ಗೋಡೆಗಳಿಗೆ ಬರುತ್ತವೆ ಅದನ್ನು ಓಡಿಸುವುದು ಎಲ್ಲರಿಗೂ ಕೂಡ ಕಷ್ಟದ ಕೆಲಸ

ಮನೆಯಲ್ಲಿ ಚಿಕ್ಕ ಪುಟ್ಟ ಕ್ರಿಮಿ ಕೀಟಗಳ ಕಾಟ ಇರುವೆಗಳ ಕಾಟ ಸಾಮಾನ್ಯವಾದದ್ದು ಇದನ್ನು ಹೇಗೋ ಪರಿಹರಿಸಿಕೊಂಡು ಬಿಡಬಹುದು, ಆದರೆ ಈ ಹಲ್ಲಿಗಳ ವಿಚಾರದಲ್ಲಿ ಹಾಗೆ ತಿಳಿಯುವುದು ತುಂಬಾನೇ ಕಷ್ಟ, ಬೇರೆ ಚಿಕ್ಕಪುಟ್ಟ ಜೀವಿಗಳನ್ನು ಮನೆಯಿಂದ ಓಡಿಸುವುದು ಸುಲಭ ಆದರೆ ಈ ಹಲ್ಲಿಗಳನ್ನು ಮನೆಯಿಂದ ಆಚೆ ಹಾಕುವುದು ಅಂದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ.ಹಾಗಾದರೆ ಹೇಗೆ ಸುಲಭವಾಗಿ ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಈ ಹಲ್ಲಿಗಳ ಸಮಸ್ಯೆಗೆ ಫುಲ್ ಸ್ಟಾಪ್ ಹಾಕುವುದು ಅಂತ ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು ಮಾರನೇ ದಿವಸವೇ ನೀವು ಕೂಡ ಈ ಒಂದು ಪರಿಹಾರವನ್ನು ಮಾಡಿ ಇದರಿಂದ ಹಲ್ಲಿಗಳು ಕೇವಲ ಎರಡು ಮೂರು ದಿನಗಳಲ್ಲಿಯೇ ನಿಮ್ಮ ಮನೆ ಬಿಟ್ಟು ಹೋಗುವುದು ಖಚಿತ.

ಹಲ್ಲಿಗಳು ಬಿಸಿ ಅಥವಾ ತಾಪ ಹೆಚ್ಚಿರುವ ಸ್ಥಳಗಳಲ್ಲಿ ವಾಸಿಸಲು ಬಯಸುತ್ತವೆ ಈ ಸಂದರ್ಭದಲ್ಲಿ ನೀವು ಹಲ್ಲಿಗಳ ಮೇಲೆ ಮಂಜುಗಡ್ಡೆ ನೀರನ್ನು ಹಾಕುವುದರಿಂದ ಅವುಗಳ ವೇಗವನ್ನು ಇದು ನಿಧಾನಗೊಳಿಸುತ್ತದೆ ಮತ್ತು ಅದನ್ನು ಹಿಡಿಯಲು ಹಾಗೆ ಹೊರಕ್ಕೆ ಎಸೆಯಲು ಸುಲಭವಾಗುತ್ತೆ.ಈರುಳ್ಳಿಯಲ್ಲಿರುವ ವಾಸನೆಯು ಹಲ್ಲಿಗಳು ಸಹಿಸಲಾಗದಂತಹ ಸೂಕ್ಷ್ಮ ವಾಸನೆಯನ್ನು ನೀಡುತ್ತವೆ ನೀವು ಕೆಲವು ಚೂರುಗಳನ್ನು ಅಂದರೆ ಈರುಳ್ಳಿಯ ಚೂರುಗಳನ್ನು ಕತ್ತರಿಸಿ ಮನೆಯ ಸುತ್ತಲೂ ಇಡಬಹುದು ಅಥವಾ ಈರುಳ್ಳಿ ರಸವನ್ನು ನೀರಿನೊಂದಿಗೆ ಬೆರೆಸಿ ಸಿಂಪಡಿಸಬಹುದು ಹೌದು ಈರುಳ್ಳಿ ರಸವನ್ನು ತೆಗೆದು ನೀರಿನೊಂದಿಗೆ ಬೆರೆಸಿ ಹಲ್ಲಿ ಓಡಾಡುವ ಜಾಗದಲ್ಲಿ ಸಿಂಪಡಿಸಿ ಇದರಿಂದ ಹಲ್ಲಿಗಳು ಮತ್ತೆ ನಿಮ್ಮ ಮನೆಯ ಕಡೆ ಬರಲ್ಲ

ಈ ಹಲ್ಲಿಗಳು ಇದ್ದಾಗ ಮನೆಯ ಕಿಟಕಿ ಬಾಗಿಲುಗಳನ್ನು ತೆಗೆಯುವುದಕ್ಕೂ ಕೂಡ ಭಯ ಆಗುತ್ತಾ ಇರುತ್ತದೆ ಯಾಕೆ ಎಂದರೆ ಈ ಹಲ್ಲಿಗಳು ಇಂತಹ ಮೂಲೆಗಳಲ್ಲಿ ಹೆಚ್ಚಾಗಿ ಇರುತ್ತವೆ, ಇದೀಗ ಮನೆಯಲ್ಲಿಯೇ ಮಾಡಬಹುದಾದ ಈ ಪರಿಹಾರಕ್ಕೆ ಬೇಕಾಗಿರುವಂತಹದ್ದು ಕೇವಲ ಮೂರೆ ಮೂರು ಪದಾರ್ಥ, ಬೆಳ್ಳುಳ್ಳಿ ಲವಂಗ ಮತ್ತು ಮೆಣಸಿನ ಕಾಳು ಅಷ್ಟೇ.ಮೊದಲಿಗೆ ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆದುಕೊಂಡು ಇದರ ಎಸಳುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ನಂತರ ಐದರಿಂದ ಆರು ಬೆಳ್ಳುಳ್ಳಿ ಎಸಳು ,ಏಳರಿಂದ ಎಂಟು ಲವಂಗ ಮತ್ತು ಏಳರಿಂದ ಎಂಟು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಿ.

ಇದೀಗ ಬೆಳ್ಳುಳ್ಳಿಯನ್ನು ಮೆಣಸಿನ ಕಾಳು ಮತ್ತು ಲವಂಗ ದೊಂದಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ, ಇದೀಗ ಇದನ್ನು ಶೋಧಿಸಿ ಇದರ ರಸವನ್ನು ಬೇರ್ಪಡಿಸಿಕೊಳ್ಳಿ.ನಿಮ್ಮ ಮನೆಯಲ್ಲಿ ಒಂದು ಸ್ಪ್ರೇ ಬಾಟಲ್ ಇದ್ದರೆ ಆ ಸ್ಪ್ರೇ ಬಾಟಲ್ ಒಳಗೆ ಈ ಬೆಳ್ಳುಳ್ಳಿ ರಸವನ್ನು ಹಾಕಿ ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರನ್ನು ಬೆರೆಸಬೇಕು, ಜಾಸ್ತಿ ನೀರನ್ನು ಹಾಕದಿರಿ ಈ ಬೆಳ್ಳುಳ್ಳಿಯ ವಾಸನೆ ಕಡಿಮೆಯಾಗಿ ಬಿಡುತ್ತದೆ, ಆಗ ಈ ಬೆಳ್ಳುಳ್ಳಿಯ ಘಾಟ ಕಡಿಮೆಯಾದರೆ ಹಲ್ಲಿಗಳು ಅಷ್ಟು ಬೇಗ ಮನೆ ಬಿಟ್ಟು ಹೋಗುವುದಿಲ್ಲ.

ಈ ಒಂದು ಪರಿಹಾರ ನಿಮಗೆ ಒಂದು ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ ಹಾಗೆ ಕಡಿಮೆ ಖರ್ಚಿನಲ್ಲಿ ಸಮಯ ಉಳಿಸಿಕೊಂಡು ಹಳ್ಳಿಗಳ ಮನೆಯಿಂದ ಆಚೆ ಕಳಿಸಬಹುದು ಈ ಒಂದು ವಿಧಾನದಿಂದ ನಿಮಗೆ ಈ ಒಂದು ಮಾಹಿತಿ ಉಪಯುಕ್ತ ಆಗಿದೆ ಅಂದಲ್ಲಿ, ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ.ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮಿಸ್ ಮಾಡದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.