ಈ ಕಥೆಯನ್ನು ನೀವೇನಾದರೂ ಓದಿದರೆ ನಿಜವಾಗಲೂ ನಿಮ್ಮ ಕಣ್ಣಿನಲ್ಲಿ ನೀರು ಬರುತ್ತದೆ ಹಾಗೂ ನೀವೇನಾದರೂ ನಿಮ್ಮ ಅಮ್ಮನನ್ನು ದೂರ ಮಾಡಿಕೊಳ್ಳುತ್ತಿದ್ದರೆ ಇವಾಗಲೇ ನೀವು ಕಾಲ್ ಮಾಡಿ ನಿಮ್ಮ ಅಮ್ಮನ ಬಗ್ಗೆ ವಿಚಾರಿಸುತ್ತೀರಾ .ಇವಾಗಿನ ಸಂದರ್ಭದಲ್ಲಿ ನಾವು ಪೇಟೆಯಲ್ಲಿ ದುಡಿಯುವುದಕ್ಕೆ ಬಂದಿರುತ್ತೇವೆ ಆದರೆ ನಮ್ಮ ಅಮ್ಮ ಯಾವುದೋ ಊರಿನಲ್ಲಿ ನಮಗೋಸ್ಕರ ಹಾಗೂ ನಾವು ದಿನಾಲು ಕಾಲ್ ಮಾಡು ವಂತಹ ಸಮಯ ಕೋಸ್ಕರ ಎದುರು ನೋಡುತ್ತಿರುತ್ತಾಳೆ.ಅಮ್ಮ ಮಾಡಿರುವಂತಹ ನಮಗೆ ಎಷ್ಟೋ ಕೆಲಸಗಳು ನಮಗೆ ಯಾವಾಗಲೂ ತಲೆಯಲ್ಲಿ ಬರುವುದೇ ಇಲ್ಲ. ಇವತ್ತು ನಾವು ಹೇಳುವಂತಹ ಕಥೆ ನಿಮಗೆ ಹಾಗೂ ನಿಮ್ಮ ಮನಸ್ಸಿಗೆ ನೋವನ್ನುಂಟು ಮಾಡಬಹುದು. ಆದರೆ ಇದು ಸತ್ಯ ಮುಂದೆ ಓದಿ.
ಹೊಸದಾಗಿ ಒಂದು ಮದುವೆಯಾಗಿರುತ್ತದೆ. ಮದುವೆಯಾಗಿ ಕೇವಲ ಮೂರು ತಿಂಗಳು ಕೂಡ ಆಗಿರುವುದಿಲ್ಲ,ಪತ್ನಿ ಯಾವಾಗಲೂ ತನ್ನ ಅತ್ತೆಯ ಮೇಲೆ ಆರೋಪವನ್ನು ಮಾಡುತ್ತಿರುತ್ತಾಳೆ.ಒಂದು ದಿನ ಮನೆಯಲ್ಲಿ ಒಂದು ಚಿನ್ನದ ಸರಗಳು ಕಾಣೆಯಾಗುತ್ತದೆ ಪತ್ನಿ ಹೇಳುತ್ತಾಳೆ ನಮ್ಮ ಮನೆಯಲ್ಲಿ ಕೇವಲ ಮೂರು ಜನ ಇದ್ದೇವೆ .ಮೂರು ಜನರಲ್ಲಿ ಚಿನ್ನ ಹಾಕದಿರುವುದು ನಿನ್ನ ತಾಯಿ. ಯಾಕೆಂದರೆ ನಮ್ಮಲ್ಲಿ ನಾವ್ ಇಬ್ಬರನ್ನು ಬಿಟ್ಟರೆ ನಿಮ್ಮ ತಾಯಿ ಮಾತ್ರ ಇರೋದು ಎಂದು ತನ್ನ ಪತಿಗೆ ಹೇಳುತ್ತಾಳೆ.ಇದನ್ನೆಲ್ಲ ಕೇಳಿಸಿಕೊಂಡ ಪತಿ. ಈ ತರ ನಮ್ಮ ಅಮ್ಮನಿಗೆ ಅಪವಾದ ಮಾಡಬೇಡ ಎಂದು ಎಷ್ಟು ಹೇಳಿದರೂ ಕೂಡ ಪತ್ನಿ , ಕೇಳದೆ ಜೋರಾಗಿ ಕೈ ತೋರಿಸಿಕೊಂಡು ಗಂಡನ ಮೇಲೆ ನೋಡುತ್ತಾ ಹಾರವನ್ನು ಕದ್ದಿದ್ದು ನಿಮ್ಮ ತಾಯಿಯೆಂದು ಎಷ್ಟು ಪತಿ ಹೇಳಿದರೂ ಕೇಳದೆ ಅರಚುತ್ತಾ ಇರುತ್ತಾಳೆ.
ಇದು ಪತಿಗೆ ಸಹಿಸೋಕೆ ಆಗದೆ ಕೆನ್ನೆಗೆ ಒಂದು ಜೋರಾಗಿ ಬಾರಿಸುತ್ತಾನೆ .ಇದನ್ನು ಸಹಿಸಲಾಗದಂತಹ ಪತ್ನಿ ತಾನು ತನ್ನ ತವರು ಮನೆಗೆ ಹೋಗುತ್ತೇನೆ ಎಂದು ಹೊರಟುಬಿಡುತ್ತಾಳೆ. ಹೀಗೆ ಹೋದಂತಹ ಸಂದರ್ಭದಲ್ಲಿ ನೀನು ಏಕೆ ನಿನ್ನ ತಾಯಿಯ ಮೇಲೆ ಅಷ್ಟೊಂದು ನಂಬುತ್ತೀಯಾ ಹಾಗೂ ಅವಳ ಪರ ಹೆಚ್ಚಾಗಿ ಮಾತಾಡುತ್ತೀಯಾ ಎಂದು ಪತ್ನಿ ಹೇಳುತ್ತಾಳೆ.ಇದಕ್ಕೆ ಉತ್ತರಿಸಿ ದಂತಹ ಗಂಡ ತನ್ನ ಪೂರ್ವದ ಪರಿಚಯವನ್ನು ಮಾಡಿಕೊಳ್ಳುತ್ತಾನೆ, ನಾನು ಚಿಕ್ಕವನಿದ್ದಾಗ ನನ್ನ ತಂದೆ ಅಚಾನಕ್ ಆಗಿ ಸತ್ತು ಹೋದರು, ಹೀಗೆ ಹೋಗುವಂತಹ ತನ್ನ ತಂದೆ ನನ್ನನ್ನು ಹಾಗೂ ನನ್ನ ತಾಯಿಯನ್ನು ನಡು ರೋಡಿನಲ್ಲಿ ಯೇ ಬಿಟ್ಟು ಹೋದರು.ಹಾಗಂತ ಹೇಳಿ ನನ್ನ ತಾಯಿ ನನ್ನನ್ನು ರೋಡಿನಲ್ಲಿ ಬಿಟ್ಟು ಎಲ್ಲೋ ಹೋಗಿ ಬದುಕಬಹುದಿತ್ತು ಆದರೆ ನನ್ನ ತಾಯಿ ನನಗೋಸ್ಕರ ನನ್ನನ್ನು ಸಾಕುವುದಕ್ಕೋಸ್ಕರ ಅಕ್ಕ ಪಕ್ಕದವರ ಮನೆಗೆ ಹೋಗಿ ಮುಸರೆ ಯನ್ನು ತಿಕ್ಕಿ ಸಾಧ್ಯವಾದಷ್ಟು ಕೆಲಸವನ್ನು ಮಾಡಿ ನನ್ನನ್ನು ಬೆಳೆಸಿದ್ದಾರೆ.
ನನ್ನ ತಾಯಿಯನ್ನು ನಾನು ಇವಾಗ ಇಂದ ಅಲ್ಲ ಇಪ್ಪತ್ತೈದು ವರ್ಷದಿಂದ ನೋಡಿದ್ದೇನೆ ನನಗೆ ಏನಾದರೂ ಹಸಿವಾಗಿದ್ದರೆ .ತಾನು ಊಟ ಮಾಡದೇ ಇದ್ದರೂ ಸಹಿತ ನನಗೆ ಊಟ ಮಾಡಿಸಿ ತಾನು ಬರಿ ಹೊಟ್ಟೆಯಲ್ಲಿ ಮಲಗುತ್ತಿದ್ದ ತಾಯಿಯನ್ನು ನಾನು ಎಷ್ಟು ಸಾರಿ ನೋಡಿದ್ದೇನೆ.ಯಾವುದೇ ಕಷ್ಟ ಬಂದರೂ ನನ್ನ ಹೊಟ್ಟೆಗೆ ಹಸಿವು ಆಗಬಾರದು ಎಂದು ತನ್ನ ಜೀವನವನ್ನೇ ಮುಡಿಪಾಗಿಟ್ಟು ಅಂತಹ ತಾಯಿಯ ಮೇಲೆ ನಾನು ಯಾವುದೇ ತರನಾದ ಆರೋಪವನ್ನು ಮಾಡುವುದಿಲ್ಲ.ಹಾಗೆಯೇ ಅವಳು ಏನೇ ಮಾಡಿದರೂ ಕೂಡ ಅದು ನನ್ನ ಸಂತೋಷಕ್ಕೆ ಆಗಿರುತ್ತದೆ ಹಾಗೂ ನನ್ನ ತಾಯಿ ಯಾವುದೇ ಕಾರಣಕ್ಕೂ ಈ ರೀತಿಯ ಕೆಲಸವನ್ನು ಮಾಡುವುದಿಲ್ಲ ಎಂದು ನನಗೆ ಗೊತ್ತು.ನೀನು ಪರಿಚಯವಾಗಿದ್ದು ಕೇವಲ ಮೂರು ತಿಂಗಳ ಹಿಂದೆ.
ಆದರೆ ಆ ದೇವತೆ ನನಗೆ ಪರಿಚಯವಾಗಿದ್ದು ಇಪ್ಪತ್ತೈದು ವರ್ಷಗಳ ಹಿಂದೆ. ನನ್ನನ್ನು ಈ ಮಟ್ಟಕ್ಕೆ ತಂದು ಇವತ್ತು ನನಗೆ ಹಾಗೂ ನಿನಗೆ ಮೂರತ್ತು ಊಟ ಮಾಡು ವಂತಹ ಶಕ್ತಿಯನ್ನು ಕೊಟ್ಟಂತಹ ಆ ತಾಯಿಯನ್ನು ನಾನು ಯಾವ ಕಾರಣಕ್ಕೂ ಆರೋಪ ಮಾಡುವುದಿಲ್ಲ ಹಾಗೂ ದೂಷಿಸುವುದಿಲ್ಲ .ಹೇಗಿದೆ ಸ್ನೇಹಿತರೆ, ಪ್ರತಿಯೊಬ್ಬ ಹೆಣ್ಣು ಮಕ್ಕಳು ಇದನ್ನು ಅರಿತುಕೊಳ್ಳಬೇಕಾದ ಅಂತಹ ವಿಚಾರ ಯಾಕೆಂದರೆ ಪ್ರತಿಯೊಬ್ಬ ಹೆಣ್ಣುಮಗಳು ಒಂದು ಸಾರಿ ಯೋಚನೆ ಮಾಡಿದರೆ ತಾನು ಕೂಡ ಕೆಲವೊಂದು ವರ್ಷಗಳ ಬಳಿಕ ಇದೇ ತರನಾದ ಸಂದರ್ಭ ಬರಬೇಕಾಗುತ್ತದೆ. ಅವಾಗ ನನಗೆ ಹಾಗೂ ತಾನು ಮಾಡಿದಂತಹ ಅನಾಚಾರ ಅರಿವಾಗುತ್ತದೆ. ಯಾವುದೇ ಪ್ರಾಣಿ ಯಾಗಿರಬಹುದು ತಾನು ಹೆತ್ತ ಮಕ್ಕಳಿಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟಿರುತ್ತಾರೆ .ಹಾಗಾದರೆ ಬುದ್ಧಿ ಇರುವಂತಹ ಮನುಷ್ಯರು ಇನ್ನಷ್ಟು ಚೆನ್ನಾಗಿ ತನ್ನ ಮಕ್ಕಳನ್ನು ನೋಡಿಕೊಳ್ಳಬಹುದು ನೀವೇ ಹೇಳಿ.
ನೀವು ಏನಾದರೂ ನಿಮ್ಮ ತಾಯಿಯನ್ನು ಕಡೆಗಣಿಸುತ್ತಿದ್ದರೆ ದಯವಿಟ್ಟು ಇವಾಗಲೇ ಫೋನ್ ಮಾಡಿ ನಿಮ್ಮ ತಾಯಿಯ ಹಾಗೂ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿ, ಕೇವಲ ನಿಮ್ಮ ಮಾತುಗಳನ್ನು ಕೇಳಿದರೆ ನಿಮ್ಮ ತಾಯಿ ಸಂತೋಷವಾಗುತ್ತದೆ .ಹಾಗೂ ಯಾವುದೇ ಕಾರಣಕ್ಕೂ ತಾಯಿಯು ನಿಮ್ಮನ್ನು ಕಷ್ಟದಲ್ಲಿ ನೋಡುವ ಹಾಗೆ ನೋಡಲು ಬಯಸುವುದಿಲ್ಲ. ಇದನ್ನು ಎಲ್ಲರೂ ಅರಿತುಕೊಂಡು ಹೋದರೆ ನಿಜವಾಗಲೂ ಯಾರ ಮನೆಯಲ್ಲೂ ಕೂಡ ಜಗಳಗಳು ಉಂಟಾಗುವುದಿಲ್ಲ.ಈ ಕಥೆಯಲ್ಲಿ ಇರುವಂತ ಹಾಗೆ ಮಗನು ತಾಯಿಗೆ ಸಪೋರ್ಟ್ ಮಾಡುತ್ತಿರುವುದು ಒಳ್ಳೆಯದೇ ಆದರೆ ಕೇವಲ 10ರಿಂದ 15 ಶೇಕಡವಾರು ಮಾತ್ರವೇ ತಾಯಿಯರು ಸ್ವಲ್ಪ ಪ್ರಾಬ್ಲಮ್ ಮಾಡುತ್ತಾರೆ.ಆದರೆ ಇನ್ನುಳಿದ 85 ರಷ್ಟು ಜನರು ಮಗನಿಗೋಸ್ಕರ ಹಾಗೂ ಮಗನ ಹೆಂಡತಿ ಮಕ್ಕಳಿಗೋಸ್ಕರ ತಮ್ಮ ಜೀವನವನ್ನೇ ಮುಡುಪಾಗಿ ರುತ್ತಾರೆ. ಒಂದು ವಿಚಾರ ತಿಳಿದುಕೊಳ್ಳಿ ಮಕ್ಕಳನ್ನು ಬೆಳೆಸುವ ವರೆಗೂ ಅಮ್ಮ ನಮಗೆ ಎಷ್ಟು ಮಾಡುತ್ತಾಳೆ
ನೀವು ಬೆಳೆದು ಅವಳಿಗೆ ಮೂರತ್ತು ಊಟ ಕೊಡುವಂತಹ ಸಂದರ್ಭ ಬಂದಾಗ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿ. ಹಾಗಾದರೆ ಮಾತ್ರವೆ ನಿಮ್ಮ ಜೀವನದಲ್ಲಿ ನೀವು ಯಶಸ್ಸು ಕಾಣುತ್ತೀರಿ .ಈ ಲೇಖನವೇ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಕೊಟ್ಟಿರುವಂತಹ ಬಟನ್ ಮೇಲೆ ಕ್ಲಿಕ್ ಮಾಡಿ ಬೇಸಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.