ಈ ರೀತಿಯ ರುದ್ರಾಕ್ಷಿಯನ್ನು ಹಾಕಿಕೊಂಡರೆ ಯಾವ ಯಾವ ದೋಷ ನಿವಾರಣೆಯಾಗುತ್ತದೆ ಗೊತ್ತ … ನಿಮಗೆ ಸರಿಯಾದಂತಹ ರುದ್ರಾಕ್ಷಿಯನ್ನು ಹಾಕಿಕೊಳ್ಳಿ…!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಿರಿಯರು ಹೇಳುವ ಪ್ರಕಾರ ರುದ್ರಾಕ್ಷಿ ಹಾಕಿಕೊಂಡರೆ ನಮ್ಮ ದೇಹದಲ್ಲಿ ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಒಂದು ಧನಾತ್ಮಕ ಶಕ್ತಿ ಉಂಟಾಗುತ್ತದೆ ಅದು ನಿಮ್ಮ ದೇಹದಲ್ಲಿ ಆಗಿರಬಹುದು ಅಥವಾ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಡ ಧನಾತ್ಮಕವಾಗಿ ಪರಿಸರ ಉಂಟಾಗಬಹುದು.ಇವತ್ತು ನಾವು ನಿಮಗೆ ರುದ್ರಾಕ್ಷಿಯನ್ನು ಹಾಕಿಕೊಂಡರೆ ಯಾವ ತರ ಆದ ಲಾಭಗಳು ನಿಮಗಿವೆ ಹಾಗೂ ಯಾವ ತರದ ರುದ್ರಾಕ್ಷಿಗಳು ನಿಮಗೆ ಸರಿ ಹೊಂದುತ್ತವೆ ಎಂದು. ಹಾಗೂ ರುದ್ರಾಕ್ಷಿ ಇರುವಂತಹ 14 ವಿಧಗಳನ್ನು ನಾವು ನಿಮಗೆ ಇವತ್ತು ಸಂಪೂರ್ಣವಾಗಿ ಹೇಳಿ ಕೊಡಲಿದ್ದೇವೆ.ಪುರಾಣದ ಪ್ರಕಾರ ತರಕಾಸುರ ಎಂಬ ರಾಕ್ಷಸನಿಗೆ ಮೂರು ಜನ ಮಕ್ಕಳು ಇದ್ದರಂತೆ, ಅವರ ಪ್ರಕಾರ ತಾರಾ ಕ್ಷ ಕಮಲಾಕ್ಷ ಹಾಗೂ ವಿದ್ಯುನ್ಮಾಲಿ , ಈ ಮೂವರನ್ನು ಪುರಾಣದಲ್ಲಿ ತ್ರಿಪುರಾಸುರರ ಎಂದು ಕೂಡ ಕರೆಯುತ್ತಾರೆ, ಈ ಮೂರು ಜನರು ತರಕಾಸುರ ರಾಕ್ಷಸ ಸತ್ತ ನಂತರ,

ಈ ಮೂವರು ಮಕ್ಕಳು ದೇವಾನುದೇವತೆಗಳನ್ನು ತುಂಬಾ ತೊಂದರೆ ಏನು ಕೊಟ್ಟಿದ್ದಾರಂತೆ ಎಂದು ಹೇಳುತ್ತದೆ ನಮ್ಮ ಪುರಾಣ. ಹೀಗೆ ಇವರ ತೊಂದರೆಯಿಂದಾಗಿ ಶಿವನಿಗೆ ಕಣ್ಣೀರು ಬರುತ್ತದೆ .ಹಾಗೂ ದೇವಾನುದೇವತೆಗಳು ಶಿವನಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ, ಹೀಗೆ ಶಿವನಲ್ಲಿ ಮಾಡಿರುವಂತಹ ಕಣ್ಣೀರುಗಳು ಭೂಮಿಯ ಮೇಲೆ ಬಿದ್ದಾಗ ಕಣ್ಣೀರುಗಳು ರುದ್ರಾಕ್ಷಿಯ ಗಳಾಗಿ ಪರಿವರ್ತನೆಯಾದವು ಎಂದು ಪುರಾಣದಲ್ಲಿ ಹೇಳುತ್ತಾರೆ.ರುದ್ರಾಕ್ಷಿಯಲ್ಲಿ ಹದಿನಾರು ಬಗೆಯ ರುದ್ರಾಕ್ಷಿಗಳು ಇವೆ ಅದರ ಬಗ್ಗೆ ಕೆಲವೊಂದು ವಿಚಾರಗಳನ್ನು ಕೆಳಗಡೆ ಕೊಟ್ಟಿದ್ದೇವೆ ತಪ್ಪದೆ ನೋಡಿ ? ಹಾಗೂ ಧರಿಸುವುದರಿಂದ ನಿಮಗೆ ಆಗುವಂತಹ ಲಾಭಗಳನ್ನು ಕೂಡ ನಾವು ಕೆಳಗೆ ಕೊಟ್ಟಿದ್ದೇನೆ ದಯವಿಟ್ಟು ನಿಮಗೆ ಬೇಕಾದಂತಹ ರುದ್ರಾಕ್ಷಿಯನ್ನು ಬಳಕೆ ಮಾಡಿಕೊಳ್ಳಿ !!

ಏಕಮುಖ ರುದ್ರಾಕ್ಷಿ ನಾವು ಹಾಕಿಕೊಳ್ಳುವುದರಿಂದ ನಿಮಗೇನಾದರೂ ಬ್ರಹ್ಮ ಹತ್ಯ ದೋಷ ಏನಾದರೂ ಇದ್ದರೆ ಅದನ್ನು ದೂರ ಮಾಡಿಕೊಳ್ಳಲು ಏಕಮುಖ ರುದ್ರಾಕ್ಷಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತದೆ.ದ್ವಿಮುಖ ರುದ್ರಾಕ್ಷಿ, ಇದು ಮುಖ ರುದ್ರಾಕ್ಷಿ ಹಾಕುವುದರಿಂದ ಇದರಲ್ಲಿ ಇರುವಂತಹ ಧನಾತ್ಮಕ ಶಕ್ತಿಗಳು ನಿಮ್ಮಲ್ಲಿ ಇರುವಂತಹ ಪಾಪಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ,ಹಾಗೂ ನೀವು ಯಾವುದಾದರೂ ಒಂದು ಕೆಟ್ಟ ಕೆಲಸವನ್ನು ಮಾಡಲು ಹೊರಟಾಗ ಏನು ಪ್ರಾಸಗಳು ಮಾಡಲು ಬಿಡುವುದಿಲ್ಲ ಎಂದು ಪುರಾಣವು ಹೇಳುತ್ತದೆ.ತ್ರಿ ಮುಖ ರುದ್ರಾಕ್ಷಿ .ಈ ತ್ರಿ ಮುಖ ರುದ್ರಾಕ್ಷಿ ಅಗ್ನಿಯ ಸ್ವರೂಪವಾಗಿದ್ದು, ಇದರಲ್ಲಿ ದೋಷವನ್ನು ನಿವಾರಣೆಯನ್ನು ಮಾಡುವಂತಹ ಶಕ್ತಿಯನ್ನು ಈ ರುದ್ರಾಕ್ಷಿ ಬಂದಿದೆ, ಪುರಾಣದ ಪ್ರಕಾರ ತ್ರಿ ಮುಖ ರುದ್ರಾಕ್ಷಿ ಯನ್ನು ಹಾಕಿಕೊಳ್ಳುವುದರಿಂದ ಸ್ತ್ರೀ ಹತ್ಯೆ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳುತ್ತದೆ ಪುರಾಣ.

ಚತುರ್ಮುಖ ರುದ್ರಾಕ್ಷಿ , ಚತುರ್ಮುಖ ರುದ್ರಾಕ್ಷಿ ಯ ಪ್ರಕಾರ ಇದು ಬ್ರಹ್ಮಂಗೆ ಸಂಬಂಧಪಟ್ಟಂತಹ ರುದ್ರಾಕ್ಷಿ ಆಗಿರುತ್ತದೆ ಇದನ್ನು ಬ್ರಹ್ಮ ಸ್ವರೂಪ ಎಂದು ಕೂಡ ಕರೆಯುತ್ತಾರೆ, ಪುರಾಣದ ಪ್ರಕಾರ ಚತುರ್ಮುಖ ರುದ್ರಾಕ್ಷಿ ಗೆ ನರಹತ್ಯೆ ದೋಷವನ್ನು ನಿರ್ಮಾಣ ಮಾಡುವಂತಹ ಶಕ್ತಿಯನ್ನು ಹೊಂದಿದೆ.ಪಂಚಮುಖಿ ರುದ್ರಾಕ್ಷಿ , ಪಂಚಮುಖಿ ರುದ್ರಾಕ್ಷಿ ಗೆ ಹಲವಾರು ಶಕ್ತಿಯನ್ನು ಬಂದಿದ್ದು ಯಾವ ತರದ ದೋಷಗಳನ್ನು ಕೂಡ ನಿವಾರಣೆ ಮಾಡುವಂತಹ ರುದ್ರಾಕ್ಷಿಗೆ ಹಲವಾರು ಜನರು ಮಾರು ಹೋಗುತ್ತಾರೆ, ಹಾಗೂ ಯಾವುದಾದರೂ ನೀವು ಜ್ಯೋತಿ ಶಾಲೆ ಹೋದರೆ ಪಂಚಮುಖಿ ರುದ್ರಾಕ್ಷಿ ಯನ್ನೇ ಹೆಚ್ಚಾಗಿ ಕೊಡುತ್ತಾರೆ ಯಾಕೆಂದರೆ ಇದರಲ್ಲಿ ಯಾವುದೇ ತರಹದ ದೋಷಗಳು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ.ಷಣ್ಮುಖ ರುದ್ರಾಕ್ಷಿ , ರುದ್ರಾಕ್ಷಿಯಲ್ಲಿ ಹೆಸರಿನಲ್ಲಿ ಹೇಳುವಂತೆ ಕುಮಾರಸ್ವಾಮಿ ದೇವರಿಗೆ ಅತಿ ಹೆಚ್ಚು ಬಳಸುವಂತಹ ಈ ರುದ್ರಾಕ್ಷಿ ಇದನ್ನೇನಾದರೂ ನೀವು ನಿಮ್ಮ ಬಲದಿಂದಲೇ ಧರಿಸಿ ಕೊಂಡರೆ ನಿಮ್ಮ ಕಷ್ಟ ಪರಿಹಾರಗಳು ನಿವಾರಣೆಯಾಗುತ್ತದೆ ಹಾಗೆ ಬ್ರಹ್ಮ ದೋಷ ದಿನಾಲು ಇದ್ದಲ್ಲಿ ಅದು ಸಂಪೂರ್ಣವಾಗಿ ಕಳೆದು ಹೋಗುತ್ತದೆ.ಸಪ್ತ ಮುಖ ರುದ್ರಾಕ್ಷಿ , ಸಪ್ತ ಮುಖ ರುದ್ರಾಕ್ಷಿಯಿಂದ ಕಳ್ಳತನದ ಆಪಾದನೆ ಏನಾದರೂ ನಿಮಗೆ ಇದ್ದಲ್ಲಿ ಅದು ನಿವಾರಣೆಯಾಗುತ್ತದೆ,ಅದರಲ್ಲೂ ಕೂಡ ಆಭರಣವನ್ನು ಕಲಿಯುವ ದೋಷ ದಿನ ಆದರೂ ನಿಮಗೆ ಇದ್ದಲ್ಲಿ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಸಪ್ತ ಮುಖ ರುದ್ರಾಕ್ಷಿ ಗೆ ಇದೆ.

ಅಷ್ಠ ಮುಖ ರುದ್ರಾಕ್ಷಿ , ಈ ರುದ್ರಾಕ್ಷಿಯ ಪ್ರಕಾರ ಯಾವುದೇ ಗಂಡು-ಹೆಣ್ಣು ಸಂಬಂಧದಲ್ಲಿ ಬಿರುಕು ಉಂಟಾದರೆ ಅದನ್ನು ಮತ್ತೆ ಸರಿದೂಗಿಸುವ ಅಂತಹ ಶಕ್ತಿಯನ್ನು ಈ ರುದ್ರಾಕ್ಷಿ ಹೊಂದಿದೆ. ಹಾಗೂ ಈ ರುದ್ರಾಕ್ಷಿಯನ್ನು ವಿನಾಯಕನ ಸ್ವರೂಪ ಎಂದು ಕೂಡ ಕರೆಯುತ್ತಾರೆ.ನವ ಮುಖ ರುದ್ರಾಕ್ಷಿ, ಈ ರುದ್ರಾಕ್ಷಿಯನ್ನು ಹಾಕಿಕೊಳ್ಳುವುದರಿಂದ ನಿಮಗೆ ಇರುವಂತಹ ಬ್ರಹ್ಮ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆ ಇದು ಭೈರವನ ರೂಪ ಕೊಡಬಹುದು.ದಶ ಮುಖ ರುದ್ರಾಕ್ಷಿ , ಈ ರುದ್ರಾಕ್ಷಿಯ ಪ್ರಕಾರ ನಿಮಗೆ ಇರುವಂತಹ ಸರ್ಪದೋಷ ವನ್ನು ನಿವಾರಣೆ ಮಾಡುವಂತಹ ಶಕ್ತಿ ಈ ದಶ ಮುಖ ರುದ್ರಾಕ್ಷಿಗೆ ಇದೆ,ಇದನ್ನು ವಿಷ್ಣು ಸುರೂಪ ಎಂದು ಕೂಡ ಕರೆಯುತ್ತಾರೆ.ಏಕದಶ ಮುಖ ರುದ್ರಾಕ್ಷಿ , ನೀವೇನಾದರೂ ದಾನ ಧರ್ಮದಲ್ಲಿ ಅತಿ ಹೆಚ್ಚಾಗಿ ಇಂಟರೆಸ್ಟ್ ಇದ್ದರೆ, ಈ ರುದ್ರಾಕ್ಷಿಯ ಹಾಕಿಕೊಳ್ಳುವುದರಿಂದ ನೀವು ಸಾವಿರಾರು ಗೋವುಗಳಿಗೆ ದಾನ ಮಾಡಿದರು ಪುಣ್ಯ ನಿಮಗೆ ಬರುತ್ತದೆ ಎಂದು ಹೇಳುತ್ತದೆ ಪುರಾಣ.ದ್ವಾದಶ ಮುಖ ರುದ್ರಾಕ್ಷಿ , ಈ ರುದ್ರಾಕ್ಷಿಯನ್ನು ಹಾಕಿಕೊಳ್ಳುವುದರಿಂದ ನಿಮ್ಮಲ್ಲಿ ಇರುವಂತಹ ಯಾವುದೇ ಕಾಯಿಲೆಗಳು ಹಾಗೂ ನಿಮಗೆ ಬರಬಹುದಾದಂತಹ ವಿಚಿತ್ರ ಕಾಯ್ದೆಗಳನ್ನು ತಡೆಯಬಹುದು ಆದಂತಹ ಶಕ್ತಿಯನ್ನು ಈ ರುದ್ರಾಕ್ಷಿ ಬಂದಿದೆ.ತ್ಯೋದಶ ಮುಖ ರುದ್ರಾಕ್ಷಿ , ಈ ತರದ ರುದ್ರಾಕ್ಷಿ ದೊರಕುವುದು ತುಂಬಾ ಕಷ್ಟ ನಿಮಗೆ ಏನಾದರೂ ರುದ್ರಾಕ್ಷಿ ದರಿಸಿದರೆ ಇದರಲ್ಲಿ ಸಾವಿರಾರು ದೋಷವನ್ನು ಕಳೆಯುವಂತಹ ಶಕ್ತಿ ರುದ್ರಾಕ್ಷಿಗೆ ಹೊಂದಿದೆ, ಇದನ್ನು ಕೇವಲ ಹಿಮಾಲಯದಲ್ಲಿ ಕೂತುಕೊಂಡು ಜಪ ಮಾಡುವಾಗ ಹಲವಾರು ಋಷಿಮುನಿಗಳು ಇದನ್ನು ಬಳಕೆ ಮಾಡುತ್ತಾರೆ.

ಚತುರ್ದಶ ಮುಖಿ ರುದ್ರಾಕ್ಷಿ , ಈ ರುದ್ರಾಕ್ಷಿಯು ಯಾವುದೇ ಕಾರಣಕ್ಕೂ ನಮಗೆ ದೊರಕುವುದು ಕಷ್ಟ ಏಕೆಂದರೆ ಇದರಲ್ಲಿ ಇರುವಂತಹ ಒಳ್ಳೆಯ ಗುಣಗಳು ಅದರಲ್ಲೂ ಇದನ್ನು ನೋಡಿದರೆ ಸಾಕು ನಿಮ್ಮಲ್ಲಿ ಇರುವಂತಹ ಪಾಪಗಳು ಕಳೆದುಹೋಗುತ್ತದೆ ಮುಟ್ಟಿದರೆ ಕೋಟಿ ಪುಣ್ಯ ಗಳು ಬರುತ್ತವೆ ಹಾಗೆ ಏನಾದರೂ ಧರಿಸಿದರೆ ನಿಮಗೆ ಜೀವನದಲ್ಲಿ ಯಾವುದೇ ತರಹದ ಕಷ್ಟಗಳು ಬರುವುದಿಲ್ಲ ಹಾಗೂ ನೀವು ಅದೃಷ್ಟವಂತರು ಆಗುತ್ತೀರಾ. ಆದರೆ ಇಲ್ಲಿವರೆಗೂ ನಮಗೆ  ರುದ್ರಾಕ್ಷಿ ಇಲ್ಲಿವರೆಗೂ ಕಂಡುಬಂದಿಲ್ಲ.ರುದ್ರಾಕ್ಷಿಗಳು ನಲ್ಲಿಕಾಯಿ ಗಾತ್ರದಲ್ಲಿರುತ್ತವೆ, ನನ್ನ ಪ್ರಕಾರ ರುದ್ರಾಕ್ಷಿಯನ್ನು ಯಾವ ಜಾತಿ ಬೇಕಾದರೂ ಹಾಕಬಹುದು ಎನ್ನುವುದು ನನ್ನ ಅಭಿಪ್ರಾಯ ವಾಗಿದೆ, ಆದರೆ ಹಲವಾರು ಜನರು ಇದನ್ನು ಅದೇ ಜಾತಿ ಹಾಕಬೇಕಿದೆ ಜಾತಿ ಹಾಕಬೇಕು ಎಂದು ಕೂಡಾ ಹೇಳುತ್ತಾರೆ,

ಅದಕ್ಕೆ ನಮಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಗಳ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ. ನಾನು ಇದರ ಬಗ್ಗೆ ಹೆಚ್ಚಾಗಿ ಮಾತಾಡುವುದಿಲ್ಲ. ನೀವೇನಾದರೂ ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ಇವಾಗಲೇ ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

Leave a Reply

Your email address will not be published.