ಸ್ನೇಹಿತರೆ ಈಗ ನಾವು ತೆಗೆದುಕೊಳ್ಳುವಂತಹ ಗಾಳಿ ಯಾವ ರೀತಿ ಆಗಿದೆ ಎಂದು ನಮಗೆಲ್ಲರಿಗೂ ಕೂಡ ತಿಳಿದಿದೆ. ಇಂಥ ಕೆಟ್ಟ ಗಾಳಿಯಿಂದ ಪರಿಸರ ಹಾಳಾಗುವುದು ಮಾತ್ರವಲ್ಲದೆ ನಮಗೂ ಕೂಡ ಅಂದರೆ ನಮ್ಮ ಆರೋಗ್ಯಕ್ಕೂ ಕೂಡ ಕೆಟ್ಟ ಪರಿಣಾಮಗಳು ಬೀರುತ್ತವೆ.ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಮಗೆ ಬರುತ್ತವೆ. ಕೇವಲ ಗಾಳಿಯಿಂದ ಮಾತ್ರವಲ್ಲದೆ ಧೂಮಪಾನ ಸೇವನೆಯಿಂದ ಹಾಗೂ ಮಧ್ಯಪಾನ ಕುಡಿಯುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ.
ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಧೂಮಪಾನ ಮಾಡುವುದರಿಂದ ಶ್ವಾಸಕೋಶವು ಹಾಳಾಗುತ್ತದೆ ಇದರಿಂದ ಉಸಿರಾಟದ ಸಮಸ್ಯೆ ಕೂಡ ಉಂಟಾಗುತ್ತದೆ.ಧೂಮಪಾನ ಮಾಡುವವರು ಶ್ವಾಸಕೋಶವನ್ನು ಕೆಲವು ಮನೆಮದ್ದು ಗಳನ್ನು ಬಳಸಿ ಅದನ್ನು ಸ್ವಚ್ಛಗೊಳಿಸಿ ಕೊಳ್ಳಬಹುದು. ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ಮನೆಮದ್ದನ್ನು ಬಳಸಿ ಶ್ವಾಸಕೋಶ ವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುವುದು ಎಂದು ನಿಮಗೆ ಹಿಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ಹೌದು ಸ್ನೇಹಿತರೆ ಇಂದಿನ ದಿನಗಳಲ್ಲಿ ಶ್ವಾಸಕೋಶಕ್ಕೆ ಹಾಗೂ ಲಿವರ್ಗೆ ಸಂಬಂಧಿಸಿದಂತಹ ಕಾಯಿಲೆಗಳು ತುಂಬಾ ಜನರಿಗೆ ಕಾಡುತ್ತವೆ.ಇವತ್ತು ನಾನು ಹೇಳುವ ಡ್ರಿಂಕ್ ಅನ್ನು ನಾನು ಹೇಳಿದಂತೆ ನೀವು ತೆಗೆದುಕೊಂಡರೆ ನಿಮ್ಮ ಶ್ವಾಸಕೋಶ ಶುದ್ದಿ ಮಾಡಿಕೊಳ್ಳಬಹುದು.ಈ ಡ್ರಿಂಕ್ ಅನ್ನು ತಯಾರಿಸಲು ಮೊದಲು ಒಂದು ಗ್ಲಾಸನ್ನು ನೀರನ್ನು ತೆಗೆದುಕೊಳ್ಳಿ. ನೀರನ್ನು ಒಂದು ಚಿಕ್ಕದಾದ ಹಾಲು ಕಾಯಿಸುವ ಅಂತಹ ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ನಂತರ ಸ್ವಲ್ಪ ಹಸಿಶುಂಠಿಯನ್ನು ತೆಗೆದುಕೊಂಡು ಅಂದರೆ ಅದನ್ನು ಮೇಲಿನ ಸಿಪ್ಪೆಯನ್ನು ತೆಗೆದು ಒಂದುವರೆ ಇಂಚಿನಷ್ಟು ಹಸಿಶುಂಠಿಯನ್ನು ತೆಗೆದುಕೊಳ್ಳಿ.
ಹಸಿಶುಂಠಿ ಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡಿಕೊಳ್ಳಿ. ನಂತರ ಹಸಿಶುಂಠಿಯನ್ನು ನೀರಿರುವ ಪಾತ್ರೆಗೆ ಹಾಕಿ. ಹಸಿಶುಂಠಿ ಶ್ವಾಸಕೋಶ ದಲ್ಲಿರುವ ಬೇಡವಾದ ಕಲ್ಮಶವನ್ನು ಹೊರಹಾಕಿ ದರಲ್ಲಿ ಸಹಕಾರಿಯಾಗುತ್ತದೆ.ನಂತರ ನೀರಿಗೆ ಹಸಿಶುಂಠಿಯನ್ನು ಹಾಕಿದ ನಂತರ ಅದಕ್ಕೆ ಒಂದು ಅರ್ಧ ಈರುಳ್ಳಿಯನ್ನು ಬೆರೆಸಬೇಕು. ಈರುಳ್ಳಿಯನ್ನು ಒಂದು ಚಿಕ್ಕ ಪೀಸ್ ಅಷ್ಟು ತೆಗೆದುಕೊಳ್ಳಬೇಕು. ಈರುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ತುಂಬಾನೆ ಇರುತ್ತದೆ.ಮುಖ್ಯವಾಗಿ ನಮ್ಮ ಶ್ವಾಸಕೋಶವನ್ನು ಶುದ್ಧೀಕರಿಸುವುದು ಕ್ಕೆ ಈರುಳ್ಳಿ ತುಂಬಾ ಸಹಕಾರಿಯಾಗುತ್ತದೆ. ನಂತರ ಅದಕ್ಕೆ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿಕೊಳ್ಳಬೇಕು.
ಅರಿಶಿಣಯನ್ನು ಕಾಲು ಚಮಚದಷ್ಟು ತೆಗೆದುಕೊಳ್ಳಿ. ನಂತರ ಅರಿಶಿನ ಪುಡಿಯನ್ನು ಹಾಕಿದಮೇಲೆ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ಟೋವ್ ಆನ್ ಮಾಡಿ ಚೆನ್ನಾಗಿ ಆ ಮಿಶ್ರಣವನ್ನು ಕುದಿಸಿ ಕೊಳ್ಳಬೇಕು. ಒಂದು ಗ್ಲಾಸ್ ನಷ್ಟಿರುವ ನೀರು ಅರ್ಧ ಗ್ಲಾಸ್ ನಷ್ಟು ಆಗುವವರೆಗೂ ಕುದಿಸಿ ಕೊಳ್ಳಬೇಕು.ಸ್ನೇಹಿತರೆ ಇಲ್ಲಿ ನಾವು ಉಪಯೋಗಿಸಿರುವ ಶುಂಠಿ ಈರುಳ್ಳಿ ಹಾಗೂ ಅರಿಶಿನಪುಡಿ ನಮ್ಮ ಶ್ವಾಸಕೋಶದಲ್ಲಿರುವ ಮಲಿನವನ್ನು ಸ್ವಚ್ಛಗೊಳಿಸುವುದರ ತುಂಬಾನೇ ಸಹಕಾರಿಯಾಗುತ್ತವೆ. ಮುಖ್ಯವಾಗಿ ನಮ್ಮ ಶರೀರದಲ್ಲಿರುವ ಟಾಕ್ಸಿನ್ ಅನ್ನು ಹೊರಗಡೆ ಹಾಕಿ ಶ್ವಾಸಕೋಶವನ್ನು ಆರೋಗ್ಯವಾಗಿರಲು ತುಂಬಾನೇ ಸಹಾಯಮಾಡುತ್ತದೆ ಮಿಶ್ರಣ.ಕುದಿಸಿದ ನಂತರ ಆ ಮಿಶ್ರಣವನ್ನು ತಣ್ಣಗಾಗಲು ಬಿಡಿ . ತಣ್ಣಗಾದನಂತರ ಡ್ರಿಂಕ್ 1 ಸ್ಪೂನ್ ನಷ್ಟು ಜೇನುತುಪ್ಪವನ್ನು ಬೆರೆಸಬೇಕು. ತಯಾರಿಸಿದ ಡ್ರಿಂಕ್ ಅನ್ನು ಪ್ರತಿದಿನ ಎರಡು ಬಾರಿ ತೆಗೆದುಕೊಳ್ಳಬೇಕು.
ಬೆಳಗ್ಗೆ ಮತ್ತು ಸಾಯಂಕಾಲ ತೆಗೆದುಕೊಳ್ಳಬೇಕು. ಎರಡು ಚಮಚದಷ್ಟು ತೆಗೆದುಕೊಳ್ಳಬೇಕು. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಎರಡು ಸ್ಪೂನ್ ನಷ್ಟು ತೆಗೆದುಕೊಳ್ಳಬೇಕು. ಸಾಯಂಕಾಲ ಸಮಯದಲ್ಲಿ ಮಲಗುವ ಮುಂಚೆ ಎರಡು ಸ್ಪೂನ್ ಎಷ್ಟು ತೆಗೆದುಕೊಳ್ಳಬೇಕು.ನೀವು ಜಾಸ್ತಿ ಧೂಮಪಾನ ಮತ್ತು ಮದ್ಯಪಾನ ಮಾಡಿದರೆ ಇದನ್ನು ಅಂದರೆ ಈ ಡ್ರಿಂಕ್ ಅನ್ನು ಮೂರು ತಿಂಗಳ ಕಾಲ ತೆಗೆದುಕೊಳ್ಳಬೇಕು. ಆ ರೀತಿಯಾಗಿ ತೆಗೆದುಕೊಂಡರೆ ನಿಮಗೆ ಒಳ್ಳೆಯ ರಿಸಲ್ಟ್ ಸಿಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ಶ್ವಾಸಕೋಶವನ್ನು ಹೇಗೆ ಮನೆಮದ್ದನ್ನು ಉಪಯೋಗಿಸಿ ಶುದ್ಧೀಕರಿಸಬಹುದು.ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ಶುಭದಿನ.