ಅತೀಯಾದ ಕೆಮ್ಮು ಇದ್ದರೆ ನೀವು ಹೀಗೆ ಮಾಡಿದರೆ ಸಾಕು ಎಂಟು ತಿಂಗಳಿನ ಮಗುವಿನಿಂದ ಹಿಡಿದು ಮುದುಕರವರೆಗೂ ಎಷ್ಟೇ ಕೆಮ್ಮು ಇದ್ದರೂ ಕೂಡ ಒಂದೇ ದಿನದಲ್ಲಿ ಕೆಮ್ಮು ಕಡಿಮೆ ಆಗುತ್ತದೆ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಎಂಟು ತಿಂಗಳಿನಿಂದ ಹಿಡಿದು ದೊಡ್ಡವರು ಕೂಡ ಈ ಒಂದು ಮನೆಮದ್ದನ್ನು ಉಪಯೋಗಿಸಬಹುದು. ನೀವೇನಾದರೂ ಈ ಮನೆಮದ್ದನ್ನು ಉಪಯೋಗಿಸಿದ್ದೇ ಆದಲ್ಲಿ ನಿಮಗೆ ಜನ್ಮದಲ್ಲಿ ಮತ್ತೆ ಕೆಮ್ಮು ಬರಲ್ಲ.ಸಾಮಾನ್ಯವಾಗಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರಿಗೆ ತುಂಬಾನೇ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಎಷ್ಟು ವೈದ್ಯರ ಹತ್ತಿರ ಹೋಗಿ ಬಂದರೂ ಕೂಡ ಅದೂ ವಾಸಿಯಾಗುವುದಿಲ್ಲ ಈ ರೀತಿಯಾಗಿ ಒಂದು ರೀತಿಯ ಮನೆಮದ್ದನ್ನು ನೀವು ಉಪಯೋಗಿಸಿಕೊಂಡು ಒಂದು ಚಮಚದಷ್ಟು ತೆಗೆದುಕೊಂಡಿದ್ದಲ್ಲಿ ನಿಮಗೆ ಜನುಮದಲ್ಲಿ ಕೆಮ್ಮ ಅನ್ನೋದು ಬರುವುದಿಲ್ಲ .

ಹಾಗೆಯೇ ನಿಮ್ಮ ಎದೆಯಲ್ಲಿ ಕಫ ಏನಾದರೂ ಕಟ್ಟಿದ್ದರೆ ಅದು ಕೂಡ ಕರಗಿ ನೀರಾಗಿ ಹೊರಹೋಗುತ್ತದೆ.ಈ ಮನೆಮದ್ದನ್ನು ಯಾವ ರೀತಿಯಾಗಿ ತಯಾರಿಸಿಕೊಳ್ಳುವುದು ಮತ್ತು ಹೇಗೆ ತೆಗೆದುಕೊಳ್ಳುವುದು ಹಾಗೂ ಚಿಕ್ಕ ಮಕ್ಕಳಿಗೆ ಹೇಗೆ ತೆಗೆದುಕೊಳ್ಳುವುದು ಹಾಗೂ ದೊಡ್ಡವರು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ.ಕೆಮ್ಮು ಮತ್ತು ಎದೆಯಲ್ಲಿ ಕಫ ಹಾಗೂ ಇನ್ನಿತರ ಸಮಸ್ಯೆ ಬಂದಾಗ ನೀವು ಮನೆಯಲ್ಲೇ ಇರುವಂತಹ ಅಂದರೆ ಅಡುಗೆಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಒಂದು ರೀತಿಯಾದಂತಹ ಮನೆಮದ್ದನ್ನು ತಯಾರಿಸಿಕೊಂಡರೆ ನೀವು ಆಸ್ಪತ್ರೆಗೆ ಹೋಗುವ ಪ್ರಸಂಗ ಬರುವುದಿಲ್ಲ ಹಾಗೂ ನಿಮ್ಮ ಆರೋಗ್ಯವನ್ನು ಬಲಿಷ್ಠವಾಗಿ ಇಟ್ಟುಕೊಳ್ಳಬಹುದು.

ಕೆಮ್ಮು ಸಾಮಾನ್ಯವಾಗಿ ಎಲ್ಲರಿಗೂ ಬಂದೇ ಬರುತ್ತದೆ ಹಾಗೂ ಇದು ದೀರ್ಘಕಾಲದ ಕೆಮ್ಮು ಕೂಡ ಕೆಲವರಿಗೆ ಇರುತ್ತದೆ.ಈ ಕೆಮ್ಮು ಅನ್ನು ಹೋಗಲಾಡಿಸಲು ಮನೆಮದ್ದು ಯಾವುದೆಂದರೆ ಇದಕ್ಕೆ ಉಪಯೋಗಿಸುವ ಪದಾರ್ಥಗಳು ಯಾವುವು ಎಂದರೆ,ಮೊದಲನೆಯದಾಗಿ ಕಾಳುಮೆಣಸು ಮತ್ತು ಲವಂಗ ಹಾಗೂ ಹಸಿಶುಂಠಿ.ಹೌದು ಈ ಮೂರು ಪದಾರ್ಥಗಳನ್ನು ಉಪಯೋಗಿಸಿಕೊಂಡು ನೀವು ಈ ಒಂದು ಮನೆಮದ್ದನ್ನು ತಯಾರಿಸಿಕೊಂಡು ಒಂದು ಚಮಚದಷ್ಟು ತೆಗೆದುಕೊಳ್ಳುತ್ತಾ ಬಂದರೆ ನಿಮಗೆ ಸಂಪೂರ್ಣವಾಗಿ ನಿಮ್ಮ ದೇಹದಲ್ಲಿ ಇರುವಂತಹ ಅಂದರೆ ಇರುವಂತಹ ಕಪ್ಪು ಕರಗಿ ಕೆಮ್ಮು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಮೊದಲನೇದಾಗಿ ಒಂದು ತವಾವನ್ನು ಬಿಸಿ ಮಾಡಲು ಕೊಳ್ಳಲು ಇಟ್ಟುಕೊಳ್ಳಬೇಕು.ನಂತರ ಇದಕ್ಕೆ ಮೂರರಿಂದ ನಾಲ್ಕು ಕಾಳುಮೆಣಸು ಮತ್ತು ಮೂರರಿಂದ ನಾಲ್ಕು ಲವಂಗವನ್ನು ತೆಗೆದುಕೊಳ್ಳಬೇಕು ಹಾಗೆಯೇ ಇವೆರಡನ್ನೂ ತವಾ ಮೇಲೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ಇವೆರಡು ಪದಾರ್ಥಗಳು ಬಿಸಿಯಾದ ನಂತರ ಒಂದು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು.

ನಂತರ ಹಸಿಶುಂಠಿಯನ್ನು ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ಪ್ಲೀಸ್ ಗಳನ್ನಾಗಿ ಕಟ್ ಮಾಡಿಕೊಳ್ಳಬೇಕು ನಂತರ ಅವುಗಳನ್ನು ತವಾ ಮೇಲೆ ಹಾಕಿ ಬಿಸಿ ಮಾಡಿ ಕೊಳ್ಳಬೇಕು.ಈ ಮೂರು ಪದಾರ್ಥಗಳನ್ನು ಬಿಸಿ ಮಾಡಿಕೊಂಡ ನಂತರ.ಮೊದಲುಬಿಸಿ ಮಾಡಿಕೊಂಡಂತಹ ಹಸಿ ಶುಂಠಿಯನ್ನು ಕುಟ್ಟಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು. ನಂತರ ಕಾಳು ಮೆಣಸು ಮತ್ತು ಲವಂಗವನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.ಲವಂಗ ಮತ್ತು ಕಾಳುಮೆಣಸಿನ ಪುಡಿಯನ್ನು ಬೇರೆಯಾಗಿ ಬೇರೆ ಒಂದು ಬೌಲ್ ನಲ್ಲಿ ಹಾಕಿಕೊಳ್ಳಬೇಕು.ಜಜ್ಜಿ ಇಟ್ಟು ಕೊಂಡಂತಹ ಹಸಿಶುಂಠಿಯನ್ನು ಮತ್ತೊಂದು ಬೌಲ್ ನಲ್ಲಿ ಹಾಕಿಕೊಳ್ಳಬೇಕು.ಹೀಗೆ ಮಾಡಿಕೊಂಡಂತಹ ಬೇರೆಬೇರೆ ಪುಡಿಯನ್ನು ಮತ್ತು ಜಜ್ಜಿ ಕೊಂಡಂತಹ ಶುಂಠಿಯನ್ನು ಉಪಯೋಗಿಸಬಹುದು. ಇದನ್ನು ಚಿಕ್ಕ ಮಕ್ಕಳಿಗೆ ಹೇಗೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿಕೊಡುತ್ತೇನೆ.

ಎಂಟು ತಿಂಗಳಿನಿಂದ ಎರಡು ವರ್ಷಗಳ ಒಳಗೆ ಇರುವ ಮಕ್ಕಳಿಗೆ ಪುಡಿ ಮಾಡಿಟ್ಟುಕೊಂಡ ಲವಂಗ ಮತ್ತು ಕಾಳುಮೆಣಸು ಮಿಶ್ರಣವನ್ನು ಕಾಲು ಚಮಚದಷ್ಟು ತೆಗೆದುಕೊಂಡು ಅದಕ್ಕೆ ಒಂದು ಹನಿ ಜೇನುತುಪ್ಪವನ್ನು ಬೆರೆಸಿ ಮಕ್ಕಳಿಗೆ ರಾತ್ರಿ ಮಲಗುವ ಮುನ್ನ ಕೊಡಬೇಕು.ಹಾಗೂ ಎರಡು ವರ್ಷದಿಂದ ಹತ್ತು ವರ್ಷದ ಮಕ್ಕಳಿಗೆ ಲವಂಗ ಮತ್ತು ಕಾಳುಮೆಣಸಿನ ಪುಡಿ ಜೊತೆಗೆ ಒಂದು ಹನಿ ಶುಂಠಿಯರಸ ಹಾಗೂ ಜೇನುತುಪ್ಪವನ್ನು ಸೇರಿಸಿ ಮಲಗುವುದಕ್ಕಿಂತ ಮುಂಚೆ ಕೊಡಬೇಕು.ಹಾಗೆಯೇ 10 ವರ್ಷ ಮೇಲ್ಪಟ್ಟವರಿಗೆ 5ರಿಂದ 6 ಹನಿ ಹಸಿ ಶುಂಠಿ ರಸ ಹಾಗೂ ಲವಂಗ ಮತ್ತು ಕಾಳುಮೆಣಸಿನಪುಡಿ ಇದಕ್ಕೆ ಮತ್ತೆ 5ರಿಂದ 6 ಹನಿ ಜೇನುತುಪ್ಪವನ್ನು ಬೆರೆಸಿಕೊಂಡು ತಿನ್ನಬೇಕು .

ಇದನ್ನು ಮಲಗುವ ಮುಂಚೆ ತಿಂದರೆ ಬೆಳಗ್ಗೆ ಏಳುವಾಗ ನಿಮ್ಮಲ್ಲಿರುವ ಅಂತಹ ಕೆಮ್ಮು ಸಂಪೂರ್ಣವಾಗಿ ಗುಣಮುಖವಾಗುತ್ತದೆ.ನೋಡಿದ್ರಲ್ಲ ಹೀಗೆ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ .ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಗೆ ನಿಮ್ಮ ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.