ಟೀ ಪೌಡರ್ ಅನ್ನು ನೀವೇನಾದ್ರು ಈ ರೀತಿ ಮಾಡಿ ಹೇರ್ ಡೈ ತಯಾರಿಸಿದ ನಂತರ ಹೀಗೆ ಕೂದಲಿಗೆ ಹಚ್ಚಿದರೆ ಸಾಕು ಒಂದೊಂದು ಕೂದಲನ್ನು ಕೂಡ ಬುಡದಿಂದ ಕಪ್ಪಗೆ ಮಾಡುತ್ತೆ ಈ ಮನೆಮದ್ದು ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಕೂದಲು ಬಿಳಿಯಾಗಿದ್ದರೆ ಆ ಒಂದು ಸಮಸ್ಯೆ ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡು ಬರುತ್ತದೆ ಅಂತ ನಾವು ಅಂದು ಕೊಳ್ಳುತ್ತಾ ಇದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಬಾಲ ನೆರೆಯಂತಹ ಸಮಸ್ಯೆ ಬೇರೆ ಕಾಡುತ್ತಿದೆ.ಕೂದಲು ಉದುರುವ ಸಮಸ್ಯೆಯ ಜೊತೆಗೆ ಈ ಬಿಳಿ ಕೂದಲಿನ ಸಮಸ್ಯೆ ಕೂಡ ಒಂದಾಗಿ ಬಿಟ್ಟಿದೆ. ಆದ ಕಾರಣ ಈ ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹರಿಸಿ ಕೊಳ್ಳುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗಬೇಕು ಅಂತಹ ಒಂದು ಮನೆ ಮದ್ದನ್ನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದರೊಂದಿಗೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.ಹುಡುಗಿಯರಿಗೆ ಅಂತು ಕೇಶರಾಶಿ ಸೊಂಪಾಗಿದ್ದರೆ ಎಷ್ಟು ಅಂದವಾಗಿ ಹುಡುಗಿಯರು ಕಾಣ್ತಾರೆ ಅಲ್ವಾ

ಅಷ್ಟೇ ಅಲ್ಲದೆ ಈ ಹುಡುಗಿಯರು ಉತ್ತರವಾಗಿ ಕೂದಲನ್ನು ಬೆಳೆಸಿದರೆ ಇನ್ನು ಅವರ ಅಂತ ದುಪ್ಪಟ್ಟು ಆಗುತ್ತದೆ ಹುಡುಗರಿಗಂತೂ ಕೂದಲು ಉದುರುವ ಸಮಸ್ಯೆ ಕಾಡ್ತಾ ಇದ್ರೆ ಆದಷ್ಟು ಬೇಗ ಬೊಕ್ಕತಲೆಯ ಸಮಸ್ಯೆ ಉಂಟಾಗುತ್ತದೆ.ಈ ರೀತಿಯಾಗಿ ಕೂದಲು ಉದುರುವಂತೆ ಸಮಸ್ಯೆಗೆ ಮತ್ತು ಬಿಳಿ ಕೂದಲಿನ ಸಮಸ್ಯೆಗೆ ಲಾಂಗ್ ಲಾಸ್ಟಿಂಗ್ ಅಂದರೆ ಹೆಚ್ಚು ಕಾಲ ಪರಿಣಾಮಕಾರಿ ಆಗಿರುವಂತಹ ಪರಿಹಾರವನ್ನು ನೀಡುತ್ತೇವೆ.ಈ ಪರಿಹಾರವನ್ನು ಮಾಡುವುದಕ್ಕಾಗಿ ನಿಮಗೆ ಬೇಕಾಗಿರುವುದು ಹೆನ್ನಾ ಪೌಡರ್ ಅಂದರೆ ಮೆಹಂದಿ ಪುಡಿ ಮತ್ತು ಟೀ ಪುಡಿ, ಟೀ ಪುಡಿಯನ್ನು ಮತ್ತೊಮ್ಮೆ ನೀವು ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು.

ನಂತರ ನಿಮಗೆ ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವುದು ಕಬ್ಬಿಣದ ಬಾಣಲೆ, ನೀವು ಕಬ್ಬಿಣದ ಬಾಣಲೆಯನ್ನು ಬಳಸಬೇಕು. ಮೊದಲು ಕಬ್ಬಿಣದ ಬಾಣಲೆಯನ್ನು ತೆಗೆದುಕೊಂಡು ಇದಕ್ಕೆ ಮೆಹಂದಿ ಪುಡಿಯನ್ನು ಹಾಕಿ ಹುರಿದಿಟ್ಟು ಕೊಳ್ಳಬೇಕು ಎಷ್ಟು ಹರಿಯಬೇಕು ಅಂದರೆ ಈ ಮೆಹಂದಿ ಪುಡಿ ಬಣ್ಣ ಬದಲಾಗಬೇಕು ಅಷ್ಟು ಪ್ರಮಾಣದಲ್ಲಿ ಹುರಿಯಬೇಕು ಆದರೆ ಹೆಚ್ಚು ಬಣ್ಣ ಬದಲಾಗುವವರೆಗೂ ಮೆಹಂದಿ ಪುಡಿಯನ್ನು ಹುರಿಯುವ ಅವಶ್ಯಕತೆ ಇಲ್ಲ.ಇದೀಗ ಮೆಹಂದಿ ಪುಡಿ ಹುರಿಯುವಾಗ ಫ್ಲೇಮ್ ಅನ್ನ ಅಂದರೆ ಸ್ಟೌವನ್ನು ಆಫ್ ಮಾಡಿಕೊಳ್ಳಿ. ಪುಡಿ ಮಾಡಿಕೊಂಡಂತಹ ಟೀ ಪುಡಿಯನ್ನು ಮೆಹಂದಿ ಪುಡಿಯೊಂದಿಗೆ ಬೆರೆಸಿ ಅದನ್ನು ಕೂಡ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ

ಆದರೆ ನೆನಪಿನಲ್ಲಿ ಇಡೀ ಟೀ ಪುಡಿಯನ್ನು ಹುರಿಯುವಾಗ ನೀವು ಸ್ಟೌವ್ ಆನ್ ಮಾಡಿರಬಾರದು. ಈ ಎರಡು ಪದಾರ್ಥಗಳು ಹುರಿದಿಟ್ಟುಕೊಂಡ ನಂತರ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕುತ್ತಾ ಇದನ್ನು ಕೂದಲಿಗೆ ಲೇಪಿಸಿ ಕೊಳ್ಳುವ ಪ್ರಮಾಣದಲ್ಲಿ, ಅಂದರೆ ಅಷ್ಟು ತೆಳುವಾಗಿ ಪೇಸ್ಟ್ ಮಾಡಿಕೊಳ್ಳಿ.ಈ ಪೇಸ್ಟ್ ಅನ್ನು ನೀವು ತಕ್ಷಣವೇ ಕೂದಲಿಗೆ ಲೇಪಿಸಿಕೊಳ್ಳಬಹುದು ಲೇಪಿಸಿಕೊಂಡು ನಂತರ ನಾಲ್ಕು ಗಂಟೆಗಳವರೆಗೆ ಹಾಗೇ ಬಿಡಿ. ನಂತರ ಶಾಂಪು ಬಳಸದೆ ಕೂದಲನ್ನು ತೊಳೆಯಿರಿ.ಕೂದಲು ತೊಳೆದ ದಿನ ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿ ಕೂದಲಿಗೆ ಮಸಾಜ್ ಮಾಡಿಕೊಳ್ಳಿ ಅಂದರೆ ಕೂದಲಿನ ಬುಡಕ್ಕೆ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ.ಮಾರನೆಯ ದಿವಸ ಶಾಂಪು ಬಳಸಿ ಕೂದಲನ್ನು ಸ್ವಚ್ಛ ಪಡಿಸಿಕೊಳ್ಳಿ ಈ ರೀತಿ ನೀವು ಮಾಡುತ್ತಾ ಬಂದರೆ ಕೂದಲು ಕಪ್ಪಾಗುತ್ತದೆ ಹಾಗೆ ಕೂದಲು ಉದುರುವುದು ಕೂಡ ಕ್ರಮೇಣವಾಗಿ ಕಡಿಮೆ ಆಗುವುದರ ಜೊತೆಗೆ ಕೂದಲು ಉದ್ದವಾಗಿ ಬೆಳೆಯುತ್ತದೆ.

Leave a Reply

Your email address will not be published.