ಸ್ಯಾಂಡಲ್ ವುಡ್ ಚೆಲುವೆ ರಚಿತಾ ರಾಮ್ ಅವರ ಮನೆ ಹೇಗಿದೆ ಗೊತ್ತ…ಹಾಗೆ ಅವರ ಬಳಿ ಇರುವ ಒಟ್ಟು ಅಸ್ತಿ ಎಷ್ಟು ಗೊತ್ತ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಸಿನಿರಂಗದ ಸೆಲೆಬ್ರಿಟಿಗಳು ಅಂದರೆ ಹಾಗೆ ಅವರುಗಳ ಜೀವನವೇ ಬೇರೆಯಾಗಿರುತ್ತದೆ ಇನ್ನು ಅವರು ಐಶಾರಾಮಿ ಜೀವನ ನಡೆಸಲು ಬಹಳ ಇಷ್ಟಪಡುತ್ತಾರೆ ಅವರಿಗೆ ಅವಕಾಶಗಳು ಇರುವವರೆಗೂ ಅವರಿಗೆ ಬಹಳ ಬೆಲೆ ಇರುತ್ತದೆ. ಇನ್ನು ಅವಕಾಶಗಳು ಕಡಿಮೆಯಾದರೆ ಯಾರು ಸಹ ತಿರುಗಿಯೂ ನೋಡುವುದಿಲ್ಲ ಹೌದು ಸಿನಿಮಾರಂಗದಲ್ಲಿ ಅವಕಾಶಗಳು ಕಡಿಮೆಯಾದರೆ ಅವರುಗಳು ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಿಲ್ಲ ಆ ರೀತಿ ಮರೆಯಾಗಿ ಬಿಡುತ್ತಾರೆ ಆದರೆ ಈಗ ನಾವು ಮಾತನಾಡುತ್ತಿರುವುದು ಸಿನಿಮಾರಂಗದಿಂದ ಆಗಿರುವವರ ಬಗ್ಗೆ ಅಲ್ಲ. ನಾವು ಈ ದಿನದ ಲೇಖನದಲ್ಲೇ ಮಾತನಾಡುತ್ತಾ ಇರುವುದು ನಮ್ಮ ಸ್ಯಾಂಡಲ್ವುಡ್ನ ಅದ್ಭುತ ನಟಿ ಗುಳಿಕೆನ್ನೆಯ ಬೆಡಗಿ ಫೇಮಸ್ ಆಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಕುರಿತು 2013 ರಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಗುಳಿಕೆನ್ನೆಯ ಬೆಡಗಿ ನಮ್ಮ ಸ್ಯಾಂಡಲ್ ವುಡ್ ನಂಬರ್ ಒನ್ ಹೀರೋಯಿನ್ ಆಗಿದ್ದಾರೆ.

ಹೌದು ರಚಿತಾ ರಾಮ್ ಅವರು 2013ರಲ್ಲಿ ತೆರೆಕಂಡ ಬುಲ್ ಬುಲ್ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್ವುಡ್ಗೆ ಪ್ರವೇಶಿಸಿದರು. ಇವರು ನಟನೆ ಮಾಡಿದ ಮೊದಲ ಸಿನಿಮಾನೇ ಅದೆಷ್ಟು ಜನಪ್ರಿಯತೆ ಗಳಿಸಿದ್ದು ಯಶಸ್ಸು ಗಳಿಸಿದ್ದು ಅಂದರೆ ಈ ಮೂಲಕ ನಟಿ ರಚಿತಾ ರಾಮ್ ಅವರು ಲಕ್ಕಿಯೆಸ್ಟ್ ಹೀರೋಯಿನ್ ಎಂದು ಕೂಡ ಖ್ಯಾತಿ ಪಡೆದುಕೊಂಡರು, ಇವರು ಬಳಿಕ ಸ್ಯಾಂಡಲ್ವುಡ್ನಲ್ಲಿ ಹಲವು ಅವಕಾಶಗಳನ್ನು ಸಹ ಪಡೆದುಕೊಂಡರು. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ರ್ ವರ ಅಂಬರೀಶ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ರವರ ದಿಲ್ ರಂಗೀಲಾ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಮತ್ತು ಚಕ್ರವರ್ತಿ ಕಿಚ್ಚ ಸುದೀಪ್ರವರ ಜೊತೆ ರನ್ನ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಜೊತೆ ರಥಾವರ, ಪುನೀತ್ ರಾಜಕುಮಾರ್ ಅವರ ಜೊತೆ ನಟಸಾರ್ವಭೌಮ, ಚಕ್ರವ್ಯೂಹ, ಇನ್ನು ನೀನಾಸಂ ಸತೀಶ್ ಅವ್ರ ಜೊತೆ ಅಯೋಗ್ಯ ಚಿತ್ರದಲ್ಲಿ ನಡೆಸುವುದರ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯಾಗಿರುವ ರಚಿತರಾಮ್ ಅವರು ಹೆಚ್ಚಿನ ಅವಕಾಶಗಳನ್ನು ಅಧಿಕಾರದಲ್ಲಿ ಹಿಡಿದಿದ್ದು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ನಟನೆ ಮಾಡುತ್ತಾ ಇದ್ದಾರೆ‌. ಮತ್ತೊಮ್ಮೆ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ನಟಿ ರಚಿತಾ ರಾಮ್ ಅವರು ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಬುಲ್ ಬುಲ್ ಸಿನಿಮಾ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾರೆ ಇನ್ನು ಬುಲ್ ಬುಲ್ ಸಿನಿಮಾದಲ್ಲಿ ಅಂಬರೀಶ್ ಅವರು ಸಹ ಅಭಿನಯ ಮಾಡಿದ್ದು ಸಿನಿಮಾ ಹೆಚ್ಚು ಖ್ಯಾತಿ ಪಡೆದುಕೊಂಡಿತ್ತು.

ಈ ಮೊದಲೇ ಹೇಳಿರುವ ಹಾಗೆ ನಟಿ ರಚಿತಾ ರಾಮ್ ಅವರು ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟಿಯಾಗಿದ್ದಾರೆ ಹಾಗೂ ಇವರು ತಮ್ಮ ಸಿನಿಮಾಗಳಿಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು ಅಂತ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ. ಹೌದು ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಪ್ರತಿ ಸಿನಿಮಾಕೆ ಪಡೆದುಕೊಳ್ಳುವ ಸಂಭಾವನೆ 50 ಲಕ್ಷ ರೂಪಾಯಿಗಳು. ಈ ಅದ್ಭುತ ನಟಿಯ ಬಳಿ ಇದೀಗ ಒಟ್ಟು ಆಸ್ತಿ ಎಷ್ಟಿರಬಹುದು ಎಂದು ಹೇಳಬೇಕೆಂದರೆ ಇವರ ಬಳಿ 18 ರಿಂದ 20 ಆಸ್ತಿ ಕೋಟಿ ಇದ್ದು, ಜೊತೆಗೆ ಒಂದು ಫಾರ್ಚುನರ್ ಮತ್ತು ಹೋಂಡಾ ಕ್ರೇಟಾ ಕಾರ್ ಕೂಡ ಇದೆ. ಇನ್ನು ಬೆಂಗಳೂರಿನ ಬುಲ್ ಟೆಂಪಲ್ ರೋಡ್ ಚಾಮರಾಜಪೇಟೆಯಲ್ಲಿ ರಚಿತರಾಮ್ ಅವರ ದುಬಾರಿ ಭವ್ಯ ಬಂಗಲೆ ಇದ್ದು‌ ಈ ಭವ್ಯ ಬಂಗಲೆಯ ಫೋಟೋವನ್ನು ನೀವು ಈ ಲೇಖನದಲ್ಲಿ ಕಾಣಬಹುದು.

Leave a Reply

Your email address will not be published.