ಈ ಒಂದು ಹೋಟೆಲ್ ಸಂಪೂರ್ಣವಾಗಿ ಬಂಗಾರದಿಂದ ನಿರ್ಮಾಣವಾಗಿದೆ … ಈ ಒಂದು ಹೋಟೆಲ್ ಅನ್ನು ಕಟ್ಟಲು ಆದ ಖರ್ಚು ಎಷ್ಟು ಎಂದು ಗೊತ್ತಾದ್ರೆ ನಿಮ್ಮ ತಲೆ ತಿರುಗುತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇಡೀ ವಿಶ್ವದಲ್ಲಿ ಅತ್ಯಂತ ಅಮೂಲ್ಯವಾದ ಬೆಲೆ ಬಾಳುವಂತಹ ವಸ್ತು ಅಂದರೆ ಅದು ಚಿನ್ನ ಹೌದು ಇದೀಗ ಚಿನ್ನ ಅಂದರೆ ಎಲ್ಲರೂ ಕೂಡ ಇಷ್ಟಪಡುವಂತಹ ಒಂದು ಲೋಹ.ಈ ಲೋಹಕ್ಕೆ ಅದೆಷ್ಟು ಮಹತ್ವವಿದೆ ಅದೆಷ್ಟು ವಿಶೇಷತೆ ಇದೆ ಅಂದರೆ ಪ್ರತಿಯೊಬ್ಬರು ಕೂಡ ಇಷ್ಟ ಪಡುವಂತಹ ಈ ಲೋಹ ಇದೀಗ ಅತ್ಯಂತ ದುಬಾರಿಯಾಗಿರುವ ಒಂದು ಲೋಹವು ಕೂಡ ಆಗಿದೆ. ಆದರೆ ನಾನು ನಿಮಗೆ ಇಂದಿನ ದಿನ ತಿಳಿಸಿಕೊಡಲು ಹೊರಟಿರುವಂಥ ವಿಚಾರವನ್ನು ತಿಳಿದರೆ ನಿಮಗೆ ನಿಜಕ್ಕೂ ಶಾಕ್ ಆಗೋದು ಸತ್ಯ .ಹೌದು ಸುಮಾರು ಇಪ್ಪತ್ತೈದು ಅಂತಸ್ತಿನ ಹೋಟೆಲನ್ನು ಇಪ್ಪತ್ತ್ನಾಲ್ಕು ಕ್ಯಾರೆಟ್ ಚಿನ್ನದಿಂದ ಕಟ್ಟಲಾಗಿರುವ ಈ ಒಂದು ಹೋಟೆಲ್ ಅನ್ನು ನೀವು ಕೂಡಾ ಕನಸಿನಲ್ಲೂ ಊಹಿಸಿಕೊಂಡಿರುವುದಿಲ್ಲ.ಭೂಮಿ ಮೇಲೆ ಇರುವ ಸ್ವರ್ಗದಂತೆ ಕಾಣಿಸುವ ಈ ಹೋಟೆಲ್ ಬಗ್ಗೆ ಹೇಳುವುದಾದರೆ ಬರೋಬ್ಬರಿ ಹನ್ನೊಂದು ವರುಷಗಳನ್ನು ತೆಗೆದುಕೊಂಡು ಈ ಒಂದು ಹೋಟೆಲ್ ಅನ್ನು ಕಟ್ಟಿಸಲಾಗಿದೆ.

ಸುಮಾರು ಇಪ್ಪತ್ತೈದು ಅಂತಸ್ತಿನ ಹೋಟೆಲ್ ಇದರಲ್ಲಿ ಟ್ಯೂಬ್ ಲೈಟ್ ನಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ಮತ್ತು ಟಾಯ್ಲೆಟ್ ಕಟ್ಟಿಸುವುದಕ್ಕೆ ಕೂಡ ಚಿನ್ನವನ್ನೇ ಬಳಸಲಾಗಿದೆ ಅಂದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ.ಈ ಚಿನ್ನದ ಹೋಟೆಲ್ ಇರುವುದಾದರೂ ಎಲ್ಲಿ ಅಂದರೆ ವಿಯೆಟ್ನಾಂನ ರಾಜಧಾನಿಯಾಗಿರುವ ಹನಾಯ್ ನಲ್ಲಿ . ವಿಯೆಟ್ನಾಂನ ರಾಜಧಾನಿಯಾಗಿರುವ ಹನಾಯ್ನಲ್ಲಿ ಇರುವ ಈ ಹೋಟೆಲ್ ನ ಹೆಸರು ದಿ ಡಾಲ್ಸ್ಸೆ ಹನಾಯ್ ಗೋಲ್ಡನ್ ಲೇಕ್ ಎಂದು.ಇದೀಗ ಹನ್ನೊಂದು ವರ್ಷಗಳ ನಂತರ ನಿರ್ಮಿಸಲಾಗಿರುವ ಈ ಹೋಟೆಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಮತ್ತು ಹಂಡ್ರೆಡ್ ಪರ್ಸೆಂಟ್ ಪ್ಯೂರ್ ಚಿನ್ನದಿಂದ ಕಟ್ಟಲಾಗಿರುವ ಈ ಟ್ವೆಂಟಿ ಫೋರ್ ಕ್ಯಾರೆಟ್ ಹೋಟೆಲ್ ಅನ್ನು ನಿರ್ಮಿಸುವುದಕ್ಕೆ ಖರ್ಚಾಗಿರುವ ಹಣ ಬರೋಬ್ಬರಿ ಒಂದೂವರೆ ಸಾವಿರ ಕೋಟಿ ರೂಪಾಯಿಗಳು.

ಒಂದೂವರೆ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಹೋಟೆಲ್ ನಿರ್ಮಿಸಿದ ಈ ಹೋಟೆಲ್ ಮಾಲೀಕನಿಗೆ ಇದೀಗ ಒಂದು ಸಂಕಷ್ಟ ಎದುರಾಗಿದೆ ಅದೇನೆಂದರೆ ಹೋಟೆಲ್ ನಿರ್ಮಿಸಿದ ನಂತರ ವಿದೇಶಿಗರು ಈ ಒಂದು ಹೋಟೆಲ್ ಗೆ ಆಕರ್ಷಿತರಾಗಿ ಬಂದು ತಂಗುತ್ತಾರೆ ಎಂಬ ಊಹೆ ಯಲ್ಲಿದ್ದ ಈ ಹೋಟೆಲ್ನ ಮಾಲೀಕರಿಗೆ,ಇದೀಗ ಈ ವೈರಸ್ ನಿಂದಾಗಿ ಆಗಿರುವ ನಷ್ಟ ಅಗಾಧವಾದದ್ದು ಹಾಗೆ ಇವರು ಇದೀಗ ಚಿಂತೆಗೊಳಗಾಗಿದ್ದಾರೆ ಅದೇನೆಂದರೆ ಈ ವೈರಸ್ ಪ್ರಭಾವ ಯಾವಾಗ ಕಡಿಮೆಯಾಗುತ್ತದೆ ಯಾವಾಗ ಹೋಟೆಲ್ಗೆ ಜನ ಆಕರ್ಷಕರಾಗಿ ಬರುತ್ತಾರೆ ಎಂದು.ಅದೇನೇ ಆಗಿರಲಿ ಈ ಚಿನ್ನದ ಹೋಟೆಲ್ ವಿಯೆಟ್ನಮ್ನ ಸುಂದರವಾದ ತಾಣ ಆಗುವುದರಲ್ಲಿ ಎರಡನೆ ಮಾತೇ ಇಲ್ಲ. ಮತ್ತೊಂದು ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು .

ಅದೇನೆಂದರೆ ಈ ಚಿನ್ನದ ಹೋಟೆಲ್ ನಲ್ಲಿ ಒಂದು ದಿನ ತಂಗುವುದಕ್ಕೆ ಸುಮಾರು ಹದಿನೆಂಟು ಸಾವಿರದ ಏಳು ರ ಐವತ್ತು ರೂಪಾಯಿಗಳು ಅಂದರೆ ಒಂದು ದಿನಕ್ಕೆ ಇನ್ನೂರ ಐವತ್ತು ಡಾಲರ್ ಖರ್ಚು ಮಾಡಬೇಕಾಗುತ್ತದೆ.ಈ ಹೋಟೆಲನ್ನು ಸಾವಿರದ ಐನೂರು ಕೋಟಿ ರೂಪಾಯಿಯನ್ನು ಖರ್ಚು ಮಾಡಿ ಕಟ್ಟಿಸಲಾಗಿದ್ದು ಇದರಲ್ಲಿ ನಾನೂರು ರೂಮ್ಗಳು ಬಹಳ ಆಕರ್ಷಕವಾಗಿರುವ ಈ ಹೋಟೆಲ್ ಅನ್ನು ಜೀವನದಲ್ಲಿ ಒಂದು ಬಾರಿಯಾದರೂ ನೋಡಬೇಕು ಅಂತ ಅನ್ನಿಸುತ್ತದೆ.ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಈ ಹೋಟೆಲ್ ನ ಬಗ್ಗೆ ಇದಿಷ್ಟು ಮಾಹಿತಿಯಾಗಿದೆ, ನಿಮಗೂ ಮಾಹಿತಿ ಇಂಟ್ರೆಸ್ಟಿಂಗ್ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published.