ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುತಕ್ಕಂತಹ ಅನೇಕ ಪದ್ಧತಿಗಳಲ್ಲಿ ರಾತ್ರಿ ಸಮಯದಲ್ಲಿ ಅಥವಾ ಸೂರ್ಯ ಮುಳುಗಿದ ನಂತರ ಉಗುರನ್ನು ಕತ್ತರಿಸಬಾರದು ಎಂಬ ಪದ್ಧತಿ ಇದೆ, ಹಾಗಾದರೆ ಈ ಒಂದು ಪದ್ಧತಿಯ ಹಿಂದೆ ಇರುವ ಕಾರಣಗಳೇನು ಮತ್ತು ಇದನ್ನು ಪಾಲಿಸುವುದರಿಂದ ,ಏನು ಪ್ರಯೋಜನ ಇನ್ನೂ ಉಗುರಿಗೆ ಸಂಬಂಧಪಟ್ಟ ಅನೇಕ ವಿಚಾರಗಳನ್ನು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಫ್ರೆಂಡ್ಸ್ ಈ ಒಂದು ಇಂಟರೆಸ್ಟಿಂಗ್ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಜೊತೆಗೆ ಮಾಹಿತಿಗೆ ಒಂದು ಲೈಕ್ ನೀಡೋದನ್ನು ಮಾತ್ರ ಮರೆಯದಿರಿ.ಹೌದು ನಮ್ಮ ಹಿರಿಯರು ಹೇಳುತ್ತಿದ್ದರು ರಾತ್ರಿ ಸಮಯದಲ್ಲಿ ಅಥವಾ ಸೂರ್ಯ ಮುಳುಗಿದ ನಂತರ ಉಗುರುಗಳನ್ನು ಕತ್ತರಿಸಬಾರದು ಅಂತ ಯಾಕೆ ಅಂದರೆ ನಮ್ಮ ಪೂರ್ವಜರ ಕಾಲದಲ್ಲಿ ಕತ್ತಲಾದ ಮೇಲೆ ಬೆಳಕು ಇರುತ್ತಿರಲಿಲ್ಲ ಆಗ ಉಗುರನ್ನು ಕತ್ತರಿಸುವುದರಿಂದ ಉಗುರುಗಳು ಎಲ್ಲಿ ಬೀಳುತ್ತಿದ್ದವು ಎಂದು ತಿಳಿಯುತ್ತಿರಲಿಲ್ಲ
ಎನ್ನುವ ಉಗುರನ್ನು ಕತ್ತರಿಸುವುದಕ್ಕೆ ಸರಿಯಾದ ಉಪಕರಣಗಳು ಕೂಡ ಇರುತ್ತಿರಲಿಲ್ಲ ಕತ್ತರಿ ಅಥವಾ ಚಾಕುವಿನಿಂದ ಉಗುರನ್ನು ಕತ್ತರಿಸಬೇಕಿತ್ತು, ಕತ್ತಲಿರುವ ಕಾರಣ ಉಗುರುಗಳನ್ನು ಸರಿಯಾಗಿ ಕತ್ತರಿಸುವುದಕ್ಕೆ ಆಗುತ್ತಿರಲಿಲ್ಲ ಗಾಯಗೊಳ್ಳುತ್ತಿದ್ದು ಕಾರಣ ಸಂಜೆ ಸಮಯದ ಮೇಲೆ ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಿದ್ದರು.ಇದೊಂದು ಉಗುರನ್ನು ಮನೆಯಲ್ಲಿ ಒಳಗೆ ರಾತ್ರಿ ಸಮಯದಲ್ಲಿ ಕತ್ತರಿಸುವುದರಿಂದ ಅದು ನೆಲದ ಮೇಲೆ ಬೀಳುತ್ತಿತ್ತು ಓಡಾಡುವಾಗ ಆಹಾರದೊಂದಿಗೆ ಬೆರೆತು ಅದನ್ನು ಅಪ್ಪಿ ತಪ್ಪಿ ಸೇವಿಸಿದಾಗ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದೆ ನಾಗುವುದು ಅಥವಾ ಅಲರ್ಜಿ ಸಮಸ್ಯೆ ಕಾಡಬಹುದು ಎಂಬ ಕಾರಣಕ್ಕಾಗಿಯೂ ಕೂಡ ನಮ್ಮ ಹಿರಿಯರು ಈ ರೀತಿಯ ಒಂದು ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದ್ದರು.
ಆದರೆ ಇದೀಗ ಟೆಕ್ನಾಲಜಿ ಬೆಳೆದಿದೆ ನಾವುಗಳು ಉಗುರನ್ನು ಕತ್ತರಿಸಿ ಕೊಳ್ಳುವುದಕ್ಕಾಗಿ ಒಂದು ಉಪಕರಣವನ್ನು ಕೂಡ ಕಂಡು ಹಿಡಿದುಕೊಂಡಿದ್ದೇವೆ ಮತ್ತು ರಾತ್ರಿ ಸಮಯದಲ್ಲಿ ಬೆಳಕು ಕೂಡ ಇರುತ್ತದೆ ಆದರೂ ಕೂಡ ಈ ರೀತಿ ಕತ್ತಲಾದ ಮೇಲೆ ಮನೆಯೊಳಗೆ ಉಗುರನ್ನು ಕತ್ತರಿಸಲು ಹೋಗಬಾರದು .ಯಾಕೆ ಅಂದರೆ ಈ ಉಗುರುಗಳು ನೆಲದ ಮೇಲೆ ಬಿದ್ದಾಗ ಅದು ನಮಗೆ ತಿಳಿಯುವುದಿಲ್ಲ ನಮಗೆ ಗೊತ್ತಾಗದೆ ಆಹಾರದೊಂದಿಗೆ ಬರೆಯಬಹುದು ಅಥವಾ ಮೂಕ ಪ್ರಾಣಿಗಳು ಆಹಾರವನ್ನು ಸೇವಿಸುವಾಗ ಆ ಆಹಾರದೊಂದಿಗೆ ಬೆರೆತು ಮೂಕ ಪ್ರಾಣಿಗಳಿಗೆ ಅಲರ್ಜಿ ಸಮಸ್ಯೆಯಾಗಬಹುದು ಇವೆಲ್ಲದರ ಕಾರಣದಿಂದಾಗಿ ಸಂಜೆಯ ಸಮಯದಲ್ಲಿ ಉಗುರನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ.
ಇನ್ನು ಉಗುರನ್ನು ಕತ್ತರಿಸಿದಾಗ ಆ ಉಗುರುಗಳನ್ನು ಹಿಂದಿನ ದಿನಗಳಲ್ಲಿ ತೆಗೆದುಕೊಂಡು ಹೋಗಿ ಮಾಟ ಮಂತ್ರ ಪ್ರಯೋಗ ಮಾಡುತ್ತಿದ್ದರು ಎಂಬ ಕಾರಣದಿಂದಾಗಿಯೂ ಹಿರಿಯರು ಈ ರೀತಿ ಹೇಳುತ್ತಿದ್ದರೂ ಆದ ಕಾರಣ ಉಗುರನ್ನು ಕತ್ತರಿಸಿಕೊಂಡ ನಂತರ ಅವು ಗುರುಗಳನ್ನು ತಪ್ಪದೇ ಚರಂಡಿ ಅಥವಾ ಮೋರಿಗೆ ಹಾಕುವುದು ಒಳ್ಳೆಯದು,ಇಂದಿನ ದಿನಗಳಲ್ಲಿ ಯಾರೂ ಕೂಡ ಮಾಟಮಂತ್ರ ಪ್ರಯೋಗ ಮಾಡಿಸುವುದಕ್ಕೆ ಉಗುರನ್ನು ಬಳಸದೇ ಇರಬಹುದು, ಆದರೆ ಉಗುರನ್ನು ಕತ್ತರಿಸಿ ನೆಲದ ಮೇಲೆ ಭೂಮಿಯ ಮೇಲೆ ಹಾಕುವುದರಿಂದ ಅದು ಮೂಕ ಪ್ರಾಣಿಗಳು ತಿನ್ನುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ರೀತಿ ಮಾಡದೇ ಇರುವುದು ಒಳ್ಳೆಯ ಕೆಲಸ.ಉಗುರನ್ನು ಕತ್ತರಿಸುವಾಗ ಹೊಟ್ಟೆಯ ಆಕಾರದಲ್ಲಿ ಕತ್ತರಿಸಬೇಕು ಯಾಕೆ ಅಂದರೆ ಆಗ ಉಗುರು ಆಕರ್ಷಕವಾಗಿ ಕಾಣುತ್ತದೆ, ಉಗುರುಗಳನ್ನು ಅತ್ತವಾಗಿ ಕತ್ತರಿಸಿದಾಗ ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಉಗುರುಗಳನ್ನು ಕತ್ತರಿಸುವಾಗ ಸ್ವಲ್ಪ ಉಗುರುಗಳನ್ನು ಬಿಟ್ಟು ಕತ್ತರಿಸುವುದು ಒಳ್ಳೆಯದು.