ಇಲ್ಲಿರುವ ಆಂಜನೇಯ ಸ್ವಾಮಿ ನೀವು ಬೇಡಿದ್ದೆಲ್ಲವನ್ನು ಕೂಡ ನೀಡುತ್ತಾನೆ ಅಂತೆ ಹಾಗಾದ್ರೆ ಈ ಶಕ್ತಿಶಾಲಿ ಹನುಮ ದೇವರ ದೇವಸ್ಥಾನ ಇರುವುದು ಎಲ್ಲಿ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನಿಮಗಿದು ಮಾಹಿತಿ ತಿಳಿದಿರಲಿ ಬೆಂಗಳೂರಿಗೆ ಹೋಗುತ್ತಿದ್ದಾರೆ ಅಥವಾ ಬೆಂಗಳೂರಿನ ವಾಸಿಗಳಾಗಿದ್ದಾರೆ ಅಥವ ನೀವು ಎಂದಾದರೂ ಬೆಂಗಳೂರಿಗೆ ಭೇಟಿ ನೀಡಿದಾಗ ಕತ್ರಿಗುಪ್ಪೆ ಬಳಿ ಹೋದಾಗ ನೀವು ಈ ಹರಕೆ ಹನುಮನ ದರ್ಶನವನ್ನು ಪಡೆದು ಬನ್ನಿ . ಯಾಕೆ ಅಂದರೆ ತುಂಬ ವಿಶೇಷವಾಗಿ ಇರುವ ಈ ಹರಕೆ ಹನುಮನ ದೇವಾಲಯಕ್ಕೆ ಹೋಗಿ ಬಂದವರಿಗೆ ವಿಶೇಷ ಆಶೀರ್ವಾದ ಲಭಿಸುತ್ತದೆ ಮತ್ತು ನೀವು ಏನನ್ನೇ ಬೇಡಿ ಬಂದರೂ ಸಹ ಆ ಬೇಡಿಕೆಗಳು ಐದಾರು ವಾರಗಳಲ್ಲಿ ನೆರವೇರುತ್ತದೆ ಅಂತ ಇಲ್ಲಿಯ ಭಕ್ತಾದಿಗಳು ನಂಬಿದ್ದಾರೆ ಮತ್ತು ಇಲ್ಲಿಗೆ ಬರುವ ಭಕ್ತಾದಿಗಳು ಹನುಮನ ದರ್ಶನವನ್ನು ಪಡೆದು ತಮ್ಮ ಇಷ್ಟಾರ್ಥಗಳನ್ನು ಹನುಮನ ಬಳಿ ಹೇಳಿಕೊಂಡು ಹೋಗುತ್ತಾರೆ ಮತ್ತು ಹರಕೆ ಮಾಡಿಕೊಂಡು ಸಹ ಹೋಗುತ್ತಾರೆ.

ಈ ದೇವಾಲಯದ ವಿಶೇಷತೆ ಬಗ್ಗೆ ಮೊದಲು ತಿಳಿಯೋಣ ಹರಕೆ ಹನುಮನ ದೇವಸ್ಥಾನಕ್ಕೆ ಈ ಹೆಸರು ಬಂದಿದೆ ಒಂದು ವಿಶೇಷ. ಸಾವಿರದ ಒಂಬೈನೂರ ಎಂಬತ್ತ್ ಎರಡನೇ ಇಸವಿಯಲ್ಲಿ, ಬೆಂಗಳೂರಿನ ಕತ್ರಗುಪ್ಪೆ ಇಂದ ಸ್ವಲ್ಪ ದೂರದಲ್ಲಿ ಲೇಔಟ್ ನಿರ್ಮಾಣ ಆಗುತ್ತದೆ ಮತ್ತು ಇಲ್ಲಿನ ಜನರು ತಮ್ಮ ಶ್ರೇಯಾಭಿವೃದ್ಧಿಗಾಗಿ ಒಂದು ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಆಂಜನೇಯನ ಚಿಕ್ಕ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿ,ಅದಕ್ಕೆ ಗುಡಿಯನ್ನು ಕಟ್ಟುತ್ತಾರೆ ಮತ್ತು ಜನರು ಪ್ರತಿ ದಿವಸ ಬಂದು ಇಲ್ಲಿ ಆಂಜನೇಯ ಸ್ವಾಮಿಯ ಬಳಿ ಬೇಡಿ ಹೋಗುತ್ತಿದ್ದರೂ ಹಾಗೆಯೇ ತಮ್ಮ ಇಷ್ಟಾರ್ಥಗಳನ್ನು ಕೂಡ ಆಂಜನೇಯನ ಬಳಿ ಹೇಳಿಕೊಂಡು ಹರಕೆ ಮಾಡಿಕೊಂಡು ಹೋಗುತ್ತಿದ್ದರು ಜನರು ಬೇಡಿದ ಇಷ್ಟಾರ್ಥಗಳನ್ನು ಮತ್ತು ಮಾಡಿಕೊಂಡ ಹರಕೆಯನ್ನು ಐದಾರು ವಾರಗಳಲ್ಲಿಯೇ ನೆರವೇರಿಸುತ್ತಿದ್ದ ಇಲ್ಲಿ ನೆಲೆಸಿರುವ ಆಂಜನೇಯ ಅದಕ್ಕಾಗಿಯೇ ಇಲ್ಲಿಯ ಜನರು ಈ ಆಂಜನೇಯ ಸ್ವಾಮಿಗೆ ಹರಕೆ ಆಂಜನೇಯ ಅಂತ ಹೆಸರನ್ನು ಸಹ ಇಟ್ಟರು.

1987ರಲ್ಲಿ ಲೇಔಟ್ ನಲ್ಲಿ ನಿರ್ಮಾಣ ಮಾಡಿದ ಈ ಗುಡಿಯಲ್ಲಿ ಚಿಕ್ಕ 3ತಿಯ ಜೊತೆಗೆ ನಮಸ್ಕಾರ ಮಾಡಿದಂತಹ ಆಂಜನೇಯನ ದೊಡ್ಡ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ಈ ಹರಕೆ ಆಂಜನೇಯನ ದೇವಾಲಯವು ಇನ್ನಷ್ಟು ಪ್ರಸಿದ್ಧಿ ಹೊಂದಿತು ಸಾಕಷ್ಟು ಜನ ದೂರದಿಂದ ಈ ದೇವಾಲಯಕ್ಕೆ ಬರುತ್ತಿದ್ದರು ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ತಮ್ಮ ಇಷ್ಟಾರ್ಥಗಳನ್ನು ಆಂಜನೇಯನ ಮುಂದೆ ಹೇಳಿಕೊಂಡು ಹರಕೆ ಅನ್ನು ಸಹ ಮಾಡಿಕೊಂಡು ಹೋಗುತ್ತಿದ್ದರು. ಇಲ್ಲಿಯ ಭಕ್ತಾದಿಗಳಿಗೆ ತಮ್ಮ ಬೇಡಿಕೆಗಳು ನೆರವೇರಿರುವ ನಿದರ್ಶನಗಳು ಹಲವಾರು ಇವೆ. ಆದ್ದರಿಂದಲೇ ಈ ದೇವಾಲಯವು ಹೆಚ್ಚು ಪ್ರಸಿದ್ಧಿ ಹೊಂದಿದೆ.

ಜನರು ತಮ್ಮ ಬೇಡಿಕೆಗಳು ನೆರವೇರಿದ ನಂತರ ಹರಕೆಯನ್ನು ತೀರಿಸುವುದಕ್ಕಾಗಿ ಇಲಿಯ ಆಂಜನೇಯಸ್ವಾಮಿಗೆ ಎಲೆಯ ಆಕಾರ ಅಥವಾ ವಡೆ ಹಾರವನ್ನು ಸಿಂಧೂರದ ಅಲಂಕಾರವನ್ನು ಮಾಡಿಸುತ್ತಿದ್ದರು. ಈ ರೀತಿಯ ತಮ್ಮ ಹರಕೆಗಳನ್ನು ಭಕ್ತಾದಿಗಳು ಇಲ್ಲಿ ಬಂದು ತೀರಿಸುತ್ತಾರೆ. ನೀವು ಕೂಡ ಎಂದಾದರೂ ಬೆಂಗಳೂರಿನ ಕತ್ರಿಗುಪ್ಪೆಯ ಬಳಿ ಹೋದಾಗ ಅಲ್ಲೇ ಇರುವ ಐಟಿಐ ಲೇಔಟ್ ನ ಬಳಿ ಇರುವ ಹರಕೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಆಂಜನೇಯನ ದರ್ಶನವನ್ನು ಪಡೆದು ಬನ್ನಿ.

ಇನ್ನೂ ಈ ದೇವಾಲಯದ ವಿಳಾಸವು ಹೀಗಿದೆ ಕತ್ರಿಗುಪ್ಪೆಯ ವಿದ್ಯಾಪೀಠದಿಂದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಮುಂದೆ ಹೋದರೆ ಎಡಭಾಗದಲ್ಲಿ ಐಟಿಐ ಲೇಔಟ್ ಇದೆ ಅಲ್ಲಿ ನಾಮಫಲಕವೂ ಕೂಡ ಕಾಣಿಸುತ್ತದೆ ಅಲಿಯಿಂದ ಎಡಭಾಗಕ್ಕೆ ಸ್ವಲ್ಪ ಮುಂದೆ ಹೋದರೆ ಹರಕೆ ಆಂಜನೇಯನ ಗುಡಿ ಕಾಣಿಸುತ್ತದೆ. ಇನ್ನು ಭಕ್ತಾದಿಗಳಿಗೆ ಅನುಕೂಲವಾಗಲೆಂದು ಸರಳ ಸಮಾರಂಭ ಗಳು ಕೂಡ ಇಲ್ಲಿ ನಡೆಯುತ್ತದೆ ಇದಕ್ಕಾಗಿ ಗುಡಿಯ ಬಳಿ ಒಂದು ಭವನವನ್ನು ಕೂಡ ಕಟ್ಟಿಸಲಾಗಿದೆ.

Leave a Reply

Your email address will not be published.