ಭಾರತ ದೇಶದ ಎಂಬ ಪುಣ್ಯ ಭೂಮಿಯಲ್ಲಿ ಮಹಾನ್ ದೇವಾನು ದೇವತೆಗಳ ದೇವಸ್ಥಾನಗಳಲ್ಲಿ ತಿರುಪತಿ ಕೂಡ ಅಗ್ರಸ್ಥಾನದಲ್ಲಿರುತ್ತದೆ ಈ ದೇವಸ್ಥಾನದ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ಅಚ್ಚರಿ ಸಂಗತಿಗಳನ್ನ ನಾವು ಇಲ್ಲಿ ತಿಳಿಯಬಹುದು. ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಿಮಗೆ ಅಚ್ಚರಿ ಯಾದಂತಹ ವಿಚಾರವೊಂದರ ಬಗ್ಗೆ ನಿಮಗೆ ಈ ಮಾಹಿತಿ ಮೂಲಕ ತಿಳಿಸಿಕೊಡುತ್ತೇವೆ. ಹೌದು ತಿರುಪತಿ ಎಂಬುದು ಅಚ್ಚರಿಗಳ ಸಾಗರವೇ ಆಗಿದೆ ಇಲ್ಲಿ ಒಂದೊಂದು ಪದ್ಧತಿಗೂ ಕೂಡ ಅದರದೇ ಆದ ವಿಶೇಷತೆ ವೈಶಿಷ್ಟತೆಗಳು ಇರುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.
ಪ್ರತಿಯೊಂದು ದೇವಾಲಯಗಳಲ್ಲಿಯೂ ಗೌಡ ಮೊದಲು ದೇವರ ದರ್ಶನ ಪಡೆಯುವುದು ಅರ್ಚಕರಾಗಿರುತ್ತಾರೆ ಹಾಗಾದರೆ ತಿರುಪತಿ ತಿಮ್ಮಪ್ಪನ ಆಲಯದಲ್ಲಿ ತಿಮ್ಮಪ್ಪನ ಮೊದಲ ದರ್ಶನ ಕೊನೆಯ ದರ್ಶನವನ್ನ ಮಾಡುವವರು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ ಹೌದು ಪ್ರತಿಯೊಂದು ದೇವಾಲಯದಲ್ಲಿಯೂ ಕೂಡಾ ಮೊದಲ ದೇವರ ದರ್ಶನ ಪಡೆಯುವ ಅರ್ಚಕರು ಆಗಿರುತ್ತಾರೆ ಆದರೆ ತಿಮ್ಮಪ್ಪನ ದೇವಾಲಯದಲ್ಲಿ ಮೊದಲ ದರ್ಶನ ಪಡೆಯುವವರು ಅಥವಾ ಮೊದಲ ದರ್ಶನ ಪಡೆಯುವ ಭಾಗ್ಯ ಅರ್ಚಕರಿಗೆ ಇರುವುದಿಲ್ಲ.
ಹಾಗಾದರೆ ಮತ್ಯಾರೋ ತಿಮ್ಮಪ್ಪನ ಮೊದಲ ದರ್ಶನ ಪಡೆಯುವುದು ಹಾಗೂ ಕೊನೆಯ ದರ್ಶನ ಪಡೆಯುವುದು ಯಾರಿಗೆ ಅಂತ ಆ ಭಾಗ್ಯ ಎಂಬುದನ್ನು ಹೇಳುವುದಾದರೆ ತಿರುಪತಿ ಅಲ್ಲಿ ಇವತ್ತಿಗೂ ಕೂಡ ಪ್ರತಿಯೊಂದು ಪದ್ಧತಿಗಳ ನೂರಾರು ವರುಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಅದೇ ರೀತಿ ಇವತ್ತಿಗೂ ಕೂಡ ತಿರುಪತಿಯಲ್ಲಿ ಎಲ್ಲಾ ತರಹದ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಅದೇ ರೀತಿ ತಿರುಪತಿಯಲ್ಲಿ ದೇವರ ದರ್ಶನ ಪಡೆಯುವುದು ಕೂಡ ಪದ್ದತಿಯಿದೆ ಮೊದಲು ದೇವರ ದರ್ಶನ ಪಡೆಯುವರು ಬೇರೆ ಅವರೇ ಇದ್ದಾರೆ ಹೌದು ಸನ್ನಿಧಿ ಗೊಲ್ಲರು ಎಂಬ ವಂಶಸ್ಥರು ತಿರುಪತಿಯ ಮೊದಲ ದರ್ಶನ ಪಡೆಯುವುದು ಹೌದು ಈ ದೇವಾಲಯದಲ್ಲಿ ಪ್ರತಿಯೊಂದು ಕೆಲಸಕ್ಕೂ ಅಂದರೆ ದೇವರ ಪೂಜೆಯಿಂದ ಹಿಡಿದು ಪ್ರಸಾದ ಮಾಡುವವರು ಪ್ರಸಾದ ವಿತರಣೆ ಮಾಡುವವರು ಅಡುಗೆ ಮಾಡುವವರು ಎಲ್ಲರೂ ಕೂಡ ಪದ್ಧತಿ ಪ್ರಕಾರವೇ ನಡೆಸಿಕೊಂಡು ಬರಲಾಗುತ್ತಿದೆ ಇದ್ದ ಹಾಗೆ ಇಲ್ಲಿ ಮೊದಲ ದೇವರ ದರ್ಶನ ಪಡೆಯುವವರು ಹಾಗೂ ಮೊದಲು ದೇವರ ಗರ್ಭಗುಡಿಯನ್ನು ತೆರೆಯುವವರು ಸನ್ನಿಧಿ ಗೊಲ್ಲ ವಂಶಸ್ಥರು ಆಗಿರುತ್ತಾರೆ.
ಹಾಗಂತ ಸುಮ್ಮನೆ ಹೋಗಿ ಈ ವ್ಯಕ್ತಿಗಳು ಗರ್ಭಗುಡಿಯ ದ್ವಾರ ವನ್ನು ತೆರೆಯುವಂತಿಲ್ಲ ಮೊದಲು ಅರ್ಚಕರು ಸನ್ನಿಧಿ ಗೊಲ್ಲರ ಮನೆಯ ಬಳಿ ಹೋಗಿ ಅವರನ್ನು ಆಹ್ವಾನಿಸಬೇಕು ನಂತರ ಆ ವಂಶಸ್ಥರಲ್ಲಿ ಒಬ್ಬ ವ್ಯಕ್ತಿ ಮಡಿ ತೊಟ್ಟು ಬಂದು ಅರ್ಚಕರು ಸುಪ್ರಭಾತ ಹೇಳುವಾಗ ಬಾಗಿಲನ್ನು ತೆರೆದು ಮೊದಲು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ ಈ ರೀತಿ ತಿಮ್ಮಪ್ಪನ ದರ್ಶನ ಪಡೆಯುವ ಭಾಗ್ಯ ಸನ್ನಿಧಿ ಗೊಲ್ಲರ ವಂಶಸ್ಥರಿಗೆ ಇದೆ. ರಾತ್ರಿ ಮಹಾಮಂಗಳಾರತಿಯ ನಂತರ ತಿಮ್ಮಪ್ಪನ ಕೊನೆಯ ದರ್ಶನವನ್ನು ಕೂಡ ವಂಶಸ್ಥರೇ ಮಾಡಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಬರುತ್ತಾರೆ.