ನೀವು ಗಮನಿಸಿದ್ದೀರಾ ,,ಹಳ್ಳಿಗಳ ಮನೆಗಳಲ್ಲಿ ಬಾಗಿಲುಗಳ ಮೇಲೆ ನಾಳೆ ಬಾ ಅಂತ ಯಾಕೆ ಬರದಿರುತ್ತಾರೆ ಗೊತ್ತ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಳ್ಳಿಯ ಕಡೆ ಈಗಲೂ ಕೂಡ ನಾಳೆ ಬಾ ಅನ್ನೋ ಒಂದು ವಾಕ್ಯವನ್ನು ಬಾಗಿಲ ಮೇಲೆ ಬರೆದಿರುತ್ತಾರೆ ಹಾಗಾದರೆ ನಾಳೆ ಬಾ ಅನ್ನೋ ಒಂದು ಪದದ ಹಿಂದೆ ಇರುವ ಅರ್ಥವೇನು ಮತ್ತು ಇದರ ಹಿಂದೆ ಕತೆ ಏನಾದರೂ ಇದೆಯಾ ಅನ್ನುವುದು ಕೆಲವರ ಸಂಶಯ ವಿರುತ್ತದೆ.ಹಾಗಾದರೆ ನಿಮಗೆ ಈ ರೀತಿ ಸಂಶಯವಿದ್ದರೆ ತಪ್ಪದೇ ಈ ದಿನದ ಈ ಲೇಖನವನ್ನು ತಪ್ಪದೆ ತಿಳಿದು ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ .ತೊಂಬತ್ತರ ದಶಕದಲ್ಲಿ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ಅದೊಂದು ಘಟನೆ ಎಲ್ಲರನ್ನೂ ಕೂಡ ಬೆಚ್ಚಿ ಬೀಳುವಂತೆ ಮಾಡಿತ್ತು ಆ ಒಂದು ಘಟನೆಯಿಂದಲೇ ಎಲ್ಲರೂ ಕೂಡ ತಮ್ಮ ಮನೆಯ ಬಾಗಿಲಿನಲ್ಲಿ ಈ ರೀತಿ ಬರೆಯಲು ಶುರು ಮಾಡಿದರು .

ಬೆಂಗಳೂರಿನ ಮಲ್ಲೇಶ್ವರಂ ಮತ್ತು ರಾಜಾಜಿನಗರದಲ್ಲಿ ಈ ರೀತಿ ಘಟನೆಗಳು ನಡೆಯುತ್ತಲೇ ಇದ್ದವು ಅದೇನೆಂದರೆ ಒಂದು ಪ್ರೇತಾತ್ಮ ಅಲ್ಲಿಯ ಜನರ ಮನೆಯ ಬಾಗಿಲನ್ನು ಒಡೆದು ಅವರ ಕುಟುಂಬಸ್ಥರ ಧ್ವನಿಯಲ್ಲಿ ಮಾತನಾಡಿ ಅವರು ಆಚೆ ಬರುವ ಹಾಗೆ ಮಾಡಿ ವ್ಯಕ್ತಿಯ ಪ್ರಾಣವನ್ನು ತೆಗೆದುಕೊಳ್ಳುತ್ತಾ ಇತ್ತು .1990 ರಲ್ಲಿ ಈ ಪ್ರೇತಾತ್ಮದ ಹಾವಳಿ ಹೆಚ್ಚಾಗಿತ್ತು ಮತ್ತು ಒಮ್ಮೆ ಲಿಂಗಾರೆಡ್ಡಿ ಅನ್ನೋ ಒಬ್ಬ ವ್ಯಕ್ತಿಯ ಮನೆಯ ಬಾಗಿಲನ್ನು ಬಡೆದು ಈ ಪ್ರೇತಾತ್ಮ ರಾತ್ರಿ ವೇಳೆ ಈ ವ್ಯಕ್ತಿಯ ತಾಯಿಯ ಧ್ವನಿಯಲ್ಲಿ ಮಾತನಾಡಿ ಬಾಗಿಲನ್ನು ತೆಗೆಯುವಂತೆ ಮಾಡಿತ್ತು ನಂತರ ವ್ಯಕ್ತಿ ಬಾಗಿಲನ್ನು ತೆಗೆದ ನಂತರ ಆ ವ್ಯಕ್ತಿಗೆ ಸಾವಿನ ರೂಪದಲ್ಲಿ ಪ್ರೇತಾತ್ಮ ಅವನ ಎದುರು ನಿಂತಿತ್ತು ನಂತರ ವ್ಯಕ್ತಿ ಅನ್ನು ಬಲಿ ತೆಗೆದುಕೊಂಡಿತ್ತು ಪ್ರೇತಾತ್ಮ .

ಈ ಘಟನೆಯ ಬಳಿಕ ಅಲ್ಲಿಯ ಜನರು ರಾತ್ರಿ ವೇಳೆ ಮನೆಯಿಂದ ಆಚೆ ಬರಲು ಕೂಡ ಹೆದರುತ್ತಿದ್ದರು ನಂತರ ಒಮ್ಮೆ ಒಂದು ಹೆಂಗಸಿನ ಮನೆಯ ಬಾಗಿಲನ್ನು ಬಡಿದಿತ್ತು ಆ ಒಂದು ಪ್ರೇತಾತ್ಮ ನಂತರ ಆಕೆಯ ಗಂಡನ ಧ್ವನಿಯಲ್ಲಿ ಮಾತನಾಡಿದ ಪ್ರೇತಾತ್ಮ ಹೆಂಗಸು ಎದ್ದು ಕಿಟಕಿಯಿಂದ ಯಾರು ಬಂದಿದ್ದಾರೆ ಎಂದು ನೋಡಿದರೆ ಅಲ್ಲಿ ಯಾರೂ ಕೂಡ ನಿಂತಿರಲಿಲ್ಲ .ಆಶ್ಚರ್ಯ ಪಡುವ ವಿಚಾರವೇನು ಅಂದರೆ ಪ್ರೇತಾತ್ಮ ಗಂಡನ ದಾರಿಯಲ್ಲಿ ಮಾತನಾಡಿದರೂ ಕೂಡ ಆಕೆಯ ಗಂಡ ಆಕೆಯ ಪಕ್ಕದಲ್ಲಿ ಮಲಗಿಕೊಂಡಿದ್ದ ನಂತರ ಆ ಮಹಿಳೆ ಯೋಚಿಸಿದಳು ಊರಿನವರು ಮಾತನಾಡುತ್ತಿದ್ದ ಪ್ರೇತಾತ್ಮ ಇದೇ ಇರಬೇಕು ಎಂದು ಭಾವಿಸುತ್ತಾಳೆ .

ಮಹಿಳೆ ಚೆನ್ನಾಗಿ ಯೋಚಿಸಿ ಆ ಪ್ರೇತಾತ್ಮಕ್ಕೆ ನಾಳೆ ಬಾ ಎಂದು ಹೇಳಿ ಕಳುಹಿಸುತ್ತಾಳೆ ನಂತರ ಪ್ರೇತಾತ್ಮ ಆ ರಾತ್ರಿ ಕಳೆದ ನಂತರ ಮಾರನೇ ದಿವಸ ಮತ್ತೆ ಆಕೆಯ ಗಂಡನ ಧ್ವನಿಯಲ್ಲಿ ಬಾಗಿಲನ್ನು ಬಡಿಯುತ್ತದೆ ಆಗಲೂ ಕೂಡ ಮಹಿಳೆ ಎದ್ದು ನಾಳೆ ಬಾ ಎಂಬ ಶಬ್ದವನ್ನು ನುಡಿಯುತ್ತಾಳೆ .ಈ ರೀತಿಯಾಗಿ ನಾಳೆ ಬಾ ಅನ್ನುವ ಪದವು ಪ್ರೇತಾತ್ಮದ ಕಾಟದಿಂದ ಪಾರಾಗಲು ಒಂದು ಉಪಾಯ ದೊರೆತಂತೆ ಆಗಿ ಎಲ್ಲ ಜನರು ಕೂಡ ತಮ್ಮ ಮನೆಯ ಬಾಗಿಲಿನಲ್ಲಿ ಈ ರೀತಿ ಬೋರ್ಡ್ ಹಾಕಲು ಶುರು ಮಾಡಿದರು .ಅಂದಿನಿಂದ ಹಳ್ಳಿ ಕಡೆಯಲ್ಲಿ ಈ ರೀತಿ ನಾಳೆ ಬಾ ಅನ್ನೋ ಒಂದು ವಾಕ್ಯವನ್ನು ಬಾಗಿಲ ಮೇಲೆ ಬರೆಯಲು ಶುರುವಾಯಿತು ಎಂಬ ನಂಬಿಕೆಯಿದೆ ಆದರೆ ಈ ಒಂದು ಕಥೆ ಎಷ್ಟು ನಿಜ ಅಥವಾ ಸುಳ್ಳು ಅಂತ ಮಾತ್ರ ಗೊತ್ತಿಲ್ಲ , ಈಗಲೂ ಕೂಡ ಹಳ್ಳಿ ಮನೆಗಳಲ್ಲಿ ಈ ರೀತಿ ಬಾಗಿಲ ಮೇಲೆ ನಾಳೆ ಬಾ ಅನ್ನೋ ಒಂದು ಪದವನ್ನು ಬರೆದಿರುವುದು ಮಾತ್ರ ನಿಜ .

Leave a Reply

Your email address will not be published.