ಈತ 7000 ಕೋಟಿಗೆ ಅಧಿಪತಿ ಆದರೆ ಬೇಕರಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದಾನೆ ಅದಕ್ಕೆ ಕಾರಣ ಏನು ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈತ ಸುಮಾರು ಏಳು ಸಾವಿರ ಕೋಟಿಗೆ ಅಧಿಪತಿ ಯಾಗಿರುವ ಉದ್ಯಮಿಯ ಮಗ. ಇತರ ತಂದೆಯು ವಜ್ರಗಳ ವ್ಯಾಪಾರಿ ಆದರೆ ಈ ಹುಡುಗ ಮಾತ್ರ ಕೇರಳದ ಕೊಚ್ಚಿನ್ ಒಂದು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.ಕಾರಣ ಮಾತ್ರ ತುಂಬಾ ಇಂಟರೆಸ್ಟಿಂಗ್ ಆಗಿದೆ ಸ್ನೇಹಿತರೆ.ನಾನು ಯಾವುದೋ ಸಿನಿಮಾ ಸ್ಟೋರಿಯನ್ನು ಹೇಳುತ್ತಿಲ್ಲ ಇದು ಅಸಲಿ ಕಥೆ. ಇದು ನಿಜವಾಗ್ಲು ನಡೆದಿರುವಂತಹ ಘಟನೆ. ಹುಡುಗನ ಹೆಸರು ದ್ರವ್ಯ ವಯಸ್ಸು 21 ವರ್ಷ,ಅಮೆರಿಕದಲ್ಲಿ ಎಂಬಿಎ ಮುಗಿಸಿಕೊಂಡು ಬಂದಿದ್ದಾನೆ. ಆತನ ತಂದೆ ವಜ್ರಗಳ ವ್ಯಾಪಾರಿ,ಪ್ರತಿ ವರ್ಷ ತನ್ನ ಸಿಬ್ಬಂದಿಗೆ 400 ಅಪಾರ್ಟ್ ಮೆಂಟ್ ಹಾಗೂ ಸಾವಿರ ಕಾರುಗಳನ್ನು ಕೊಟ್ಟು ದೇಶದಲ್ಲಿ ಪ್ರಸಿದ್ಧಿಯಾದ ಉದ್ಯಮಿ.ಹರಿಕೃಷ್ಣ ಡೈಮಂಡ್ ಕಂಪನಿಯ ಓನರ್. ಇವರ ಒಟ್ಟು ಆಸ್ತಿ 7000 ಕೋಟಿ. ಇವರಿಗೆ ಸೂರತ್ನಲ್ಲಿ 11 ಅಂತಸ್ತಿನ ಮನೆ ಇದೆ. ಇವನು ತುಂಬಾ ಕಷ್ಟ ಪಟ್ಟು ಕಂಪನಿ ಯನ್ನು ಬೆಳೆಸಿದ್ದಾರೆ.ಹಾಗೆ ವಯಸ್ಸಾದ ಕಾರಣ ಕಂಪನಿ ಯ ಜವಾಬ್ದಾರಿಯನ್ನು ಒಬ್ಬನೇ ಮಗ ದ್ರವ್ಯ ಗೆ ಕೊಡಲು ಬಯಸಿದರು.ಆದರೆ 11 ಅಂತಸ್ತಿನ ಮನೆಯಲ್ಲಿ ಬೆಳೆದ ಮಗನಿಗೆ ಹಣದ ಬೆಲೆ ಗೊತ್ತಿಲ್ಲ.ತಾನು ಕಷ್ಟ ಪಟ್ಟ ಬಗ್ಗೆ ಅರಿವಿಲ್ಲ ಎಂದು ತಂದೆ ಒಂದು ಪ್ಲಾನ್ ಮಾಡಿದರು.

ಮಗನ ಕೈಗೆ 7000 ಸಾವಿರ ಕೊಟ್ಟ ತಂದೆ,ಎಲ್ಲಾದರೂ ಹೋಗಿ ಸಾಮಾನ್ಯ ವ್ಯಕ್ತಿಯಾಗಿ ದುಡಿದು ಸಾಮಾನ್ಯ ಜನರಂತೆ ಕೆಲಸ ಮಾಡಿ ಎಂದು ಹೇಳಿ ನಾಲ್ಕು ಷರತ್ತುಗಳನ್ನು ವಿಧಿಸಿದನು.ನೀನು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತರಬೇಕು ನನ್ನ ಹೆಸರನ್ನು ಎಲ್ಲೂ ಬಳಸಬಾರದು ಎಂದು ಆತ ತನ್ನ ಮಗನಿಗೆ ಹೇಳಿ ಕಳಿಸುತ್ತಾನೆ.ಹೌದು ಒಂದೇ ಸ್ಥಳದಲ್ಲಿ ವಾರಕ್ಕಿಂತ ಹೆಚ್ಚು ದಿನ ಕೆಲಸ ಮಾಡಬಾರದು ನಿನ್ನ ತಾಯಿ ಹಾಗೂ ಮೂರು ಜನ ಸೋದರಿಯರ ಜೊತೆ ಮಾತನಾಡಬಾರದು. ನನಗೆ ತುಂಬಾ ಎಮರ್ಜೆನ್ಸಿ ಇದ್ದರೆ ಯಾರಲ್ಲಾದರೂ ಮೊಬೈಲನ್ನು ಪಡೆದು ನನಗೆ ಕರೆ ಮಾಡು ಎಂದು ಹೇಳಿದನು. ಹೀಗೆ ತಂದೆ ಶರತ್ತು ತನ್ನ ಮಗನಿಗೆ ವಿಧಿಸಿದನು.

ಚಾಲೆಂಜ್ ಆಗಿ ತೆಗೆದುಕೊಂಡ ತನ್ನ ಮಗ ದ್ರವ್ಯ ತಲುಪಿದ್ದು ಕೇರಳದ ಕೊಚ್ಚಿನ್ ಗೆ. ಕೊಚ್ಚಿನ್ ಗೆ ಬರುವ ಹೊತ್ತಿಗೆ ತಂದೆ ಕೊಟ್ಟ rs.7000 ಖಾಲಿಯಾಗಿತ್ತು. ಆಗ ದ್ರವ್ಯಕ್ಕೆ ಕೇರಳ ಭಾಷೆಯ ಬರುತ್ತಿರಲಿಲ್ಲ.60ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೆಲಸ ಕೇಳಿದರು ಭಾಷೆ ಬರಲ್ಲ ಎಂದು ಅವನನ್ನು ವಾಪಸ್ಸು ಕಳಿಸುತ್ತಿದ್ದರು.ಒಂದು ವಾರ ಕೆಲಸವಿಲ್ಲದೆ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ ದ್ರವ್ಯ ಗೆ ಕೊನೆಗೆ ಬೇಕರಿಯಲ್ಲಿ ಕೆಲಸ ಸಿಕ್ಕಿತು.ಒಂದುವಾರ ಕೆಲಸಮಾಡಿದ ದ್ರವ್ಯ ನಂತರ ಶೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡ. ಆದರೆ ಸರಿಯಾಗಿ ಸ್ಮೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಲ್ಲಿ ಎರಡು ದಿನಕ್ಕೆ ಕೆಲಸದಿಂದ ತೆಗೆದು ಹಾಕಿದರು. ನಂತರ ಚಪ್ಪಲಿ ಅಂಗಡಿ ನಂತರ ಕಾಲ್ ಸೆಂಟರ್,ಅಲ್ಲಿ ಕೆಲಸ ಮಾಡುತ್ತಿದ್ದಾಗ ಅವನಿಗೆ ತಂದೆಯ ಅಸಿಸ್ಟೆಂಟ್ ಬಂದು ವಾಪಸ್ ಬರುವಂತೆ ಹೇಳುತ್ತಾರೆ.

ನಂತರ ಈತನ ಹೆಸರು ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಬಂತು. ತಂದೆ ಕೆಲಸ ಮಾಡಿಸಿಕೊಂಡವರು ಹಾಗೂ ಬೈದವರು ಶಾಕ್ ಆದ್ರು.ತಂದೆ ಬಳಿ ಹೋದ ದ್ರವ್ಯ ನನಗೆ ನಿಜವಾದ ಪ್ರಪಂಚ ಗೊತ್ತಾಯಿತು ಎಂದು ಹೇಳಿ ತಂದೆಗೆ ಧನ್ಯವಾದಗಳು ತಿಳಿಸಿದ,ತಾನು ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಮಗ ಮಜಾ ಮಾಡುವುದನ್ನು ತಪ್ಪಿಸಲು ತಂದೆ ಮಾಡಿದ ಪ್ಲಾನ್.ನೋಡಿ ಸ್ನೇಹಿತರೆ ಜನಗಳು ಹೇಗೆಲ್ಲ ಇರುತ್ತಾರೆ ಅಂತ ನೋಡಿದ್ರಲ್ಲ ಮಗನನ್ನು ದಾರಿಗೆ ತರಲು ತಂದೆಯಂತಹ ಪ್ಲಾನ್ ಮಾಡಿದ್ದಾನೆ ಎಂದು.ಕಷ್ಟಪಟ್ಟು ದುಡಿಯುವವರಿಗೆ ದುಡ್ಡಿನ ಬೆಲೆ ಗೊತ್ತಿರುತ್ತದೆ ಆದರೆ ದುಡಿದ ದುಡ್ಡನ್ನು ಖರ್ಚು ಮಾಡುವವರು ದುಡ್ಡಿನ ಬೆಲೆ ಗೊತ್ತಿರುವುದಿಲ್ಲ ಸ್ನೇಹಿತರೆ. ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ.

Leave a Reply

Your email address will not be published.