ಮುಟ್ಟಿದರೆ ಮುನಿ ಗಿಡದ ಉಪಯೋಗಗಳು ನಿಮಗೆ ಗೊತ್ತಾದ್ರೆ ಈಗಲೇ ಅದನ್ನು ಉಪಯೋಗಿಸುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಪ್ರಕೃತಿ ನಮಗೆ ಅದೆಂತಹ ಅಗಾಧವಾದ ಸೌಕರ್ಯಗಳನ್ನು ನೀಡಿದೆ ಅಂದರೆ ಈ ಪ್ರಕೃತಿಯ ನಡುವೆ ಇರುವ ಕೆಲವೊಂದು ಗಿಡಮೂಲಿಕೆಗಳನ್ನು ನಾವು ತಿಳಿದರೆ ಅದನ್ನು ನಂಬುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ .ಅಂತಹ ಉತ್ತಮವಾದ ಔಷಧೀಯ ಗುಣವಿರುವ ಗಿಡಮೂಲಿಕೆಗಳು ನಮ್ಮ ಪ್ರಕೃತಿಯ ನಡುವೆಯೇ ಇದೆ ಅಂತಹ ಒಂದು ಗಿಡಮೂಲಿಕೆಯ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಎಂತಹ ಇಂಗ್ಲಿಷ್ ಮೆಡಿಸಿನ್ ಕೈಯಿಂದಲೂ ನಿವಾರಿಸುವುದಕ್ಕೆ ಸಾಧ್ಯವಾಗದೇ ಇರುವಂತಹ ಕೆಲವೊಂದು ಅಪರೂಪವಾದ ಗುಣಗಳನ್ನು ನಾವು ಈ ಒಂದು ಗಿಡಮೂಲಿಕೆಯಲ್ಲಿ ಕಾಣಬಹುದಾಗಿದೆ.ಈ ಗಿಡವು ಅಪರೂಪವಾಗಿ ಸಿಗುವುದೇನೋ ಅಲ್ಲ ನಿರ್ಜನ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದುಕೊಂಡಿರುವ ಈ ಹಸಿರು ಸಸಿಗಳು ಮೇಯಲು ಬಂದ ಪ್ರಾಣಿಗಳಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತವೆ,

ಮೇಯಲು ಹೋದರೆ ಮುದುರಿಕೊಂಡು ತನ್ನನ್ನು ತಾವು ರಕ್ಷಿಸಿಕೊಂಡು ಬಿಡುತ್ತವೆ. ಹೌದು ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ಹೇಳಲು ಹೊರಟಿರುವಂಥ ವಿಶೇಷವಾದ ಮಾಹಿತಿ ಎಂದರೆ ಅದು ಮುಟ್ಟಿದರೆ ಮುನಿ ಗಿಡ, ಇದನ್ನ ಆಂಗ್ಲ ಭಾಷೆಯಲ್ಲಿ ಟಚ್ ಮಿ ನಾಟ್ ಅಂತ ಕೂಡ ಕರೆಯುತ್ತಾರೆ.ಮುಟ್ಟಿದರೆ ಮುನಿ ಗಿಡವನ್ನು ಸಂಸ್ಕೃತದಲ್ಲಿ ಅಂಜಲಿ ಕಾರಿಕೆ ಎಂದು ಕರೆಯುತ್ತಾರೆ ಇನ್ನು ಆಡು ಭಾಷೆಯಲ್ಲಿ ಇದನ್ನು ಮುಟ್ಟಿದರೆ ಮುನಿ ನಾಚಿಕೆ ಮುಳ್ಳು ಪತಿವ್ರತೆ ಲಜ್ಜವತಿ ಅಂತೆಲ್ಲ ಕರೆಯಲಾಗಿದ್ದು,ಇದರ ಮೂಲ ದಕ್ಷಿಣ ಮತ್ತು ಮಧ್ಯ ಅಮೆರಿಕ ಎಂದು ಹೇಳಲಾಗಿದೆ ಮತ್ತು ಈ ಗಿಡಗಳು ಹೂವನ್ನು ಕೂಡ ಬಿಡುತ್ತವೆ ಇದು ನೇರಳೆ ಬಣ್ಣವನ್ನು ಹೊಂದಿ ದೂರು ಕೂಡ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತವೆ.

ಹಸಿರು ಬಣ್ಣದಲ್ಲಿ ಬೆಳೆಯುವ ಈ ಗಿಡವು ಸೊಂಪಾಗಿ ಬೆಳೆದುಕೊಳ್ಳುತ್ತವೆ ಮತ್ತು ಇದು ಮೇಲೆಂದು ಬಂದ ಪ್ರಾಣಿಗಳಿಗೆ ಆಕರ್ಷಕವಾಗಿ ಕಾಣುತ್ತವೆ ಮೇಯಲು ಹೋದರೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ನಾಚಿ ಕೆಂಪಗಾಗಿ ಕೇವಲ ಮುಳ್ಳು ಅಥವಾ ಒಣಗಿದ ಗಿಡ ಅಂತ ಕಾಣಿಸಿಕೊಳ್ಳುತ್ತವೆ. ಈ ಗಿಡದ ಬಗೆಗಿನ ಔಷಧೀಯ ಗುಣವನ್ನು ಹೇಳುವುದಾದರೆ ಇದರಲ್ಲಿ ಅಗಾಧವಾದ ಔಷಧೀಯ ಅಂಶವಿದೆ.ಇಂದಿನ ದಿನಗಳಲ್ಲಿ ಜನರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತ ಅವರು ಈ ಒಂದು ಮುಟ್ಟಿದರೆ ಮುನಿ ಸೊಪ್ಪಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಈ ಸೊಪ್ಪಿನ ರಸವನ್ನು ತೆಗೆದು ಅದನ್ನು ನಿಯಮಿತವಾಗಿ ಸೇವಿಸುತ್ತ ಬರುವುದರಿಂದ ಕ್ರಮೇಣವಾಗಿ ನೋವು ಕಡಿಮೆಯಾಗಿ ಸಮಸ್ಯೆಯೂ ಕೂಡ ಪರಿಹಾರಗೊಳ್ಳುವುದು.

ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಹಾಗೂ ಅಸಿಡಿಟಿ ಇವು ಹೆಚ್ಚಾಗಿದ್ದರೆ ಈ ಒಂದು ಸೊಪ್ಪಿನ ಪರಿಷ್ಕರ ವನ್ನು ಮಾಡಿ ಒಳ್ಳೆಯ ಪ್ರಯೋಜನವೂ ದೊರೆಯುತ್ತದೆ ಹಾಗೂ ನಮ್ಮ ಹಿರಿಯರು ಈ ಮುಟ್ಟಿದರೆ ಮುನಿ ಸೊಪ್ಪಿನಿಂದ ಮತ್ತೊಂದು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರೂ,ಅದೇನೆಂದರೆ ಹಿಂದಿನ ದಿನಗಳಲ್ಲಿ ಗಿಡಗಳು ಮುಳ್ಳುಗಳು ಚುಚ್ಚಿ ರಕ್ತ ಸ್ರಾವವಾಗುತ್ತಿದ್ದರೆ ಅದರ ಮೇಲೆ ಕೂಡಲೇ ಮುಟ್ಟಿದರೆ ಮುನಿ ಸೊಪ್ಪಿನ ರಸವನ್ನು ಹಾಕುತ್ತಿದ್ದರೂ ಇದರಿಂದ ನೋವು ನಿವಾರಣೆಯಾಗುವುದರ ಜೊತೆಗೆ ರಕ್ತಸ್ರಾವವೂ ಕಡಿಮೆಗೊಳ್ಳುತ್ತಿತ್ತು.ಋತುಚಕ್ರದ ಸಮಯದಲ್ಲಿಯೇ ಹೆಣ್ಣು ಮಕ್ಕಳಿಗೆ ಇದು ಒಳ್ಳೆಯ ಔಷಧೀಯ ಪ್ರಯೋಜನವನ್ನು ನೀಡುತ್ತದೆ ಹೌದು ಋತುಸ್ರಾವದಲ್ಲಿ ಹೊಟ್ಟೆ ನೋವು ಕಾಲುಗಳ ಎಳೆತ ಆಗುತ್ತಿದ್ದರೆ ಅಂಥವರು ಈ ಸೊಪ್ಪಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು .

ಹಾಗೂ ಬಾಣಂತಿಯರಲ್ಲಿ ಹೊಟ್ಟೆ ಕರಗಿಸಿಕೊಳ್ಳುವುದಕ್ಕೆ ಈ ರಸ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೊಡವೆ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದ್ದರೆ ಆ ಮೊಡವೆಗಳ ಮೇಲೆ ಈ ಮುಟ್ಟಿದರೆ ಮುನಿಯ ಸೊಪ್ಪಿನ ರಸವನ್ನು ಹಚ್ಚಿಕೊಳ್ಳುವುದರಿಂದ ಮೊಡವೆಯ ಕಲೆ ನಿವಾರಣೆಗೊಳ್ಳಲಿದೆ.ಒಟ್ಟಾರೆ ಈ ಮುಟ್ಟಿದರೆ ಮುನಿ ಗಿಡದಲ್ಲಿ ಸೊಪ್ಪಿನಿಂದ ಹಿಡಿದು ಬೇರು ಮತ್ತು ಹೂವಿನಲ್ಲಿಯು ಅಗಾಧವಾದ ಔಷಧೀಯ ಗುಣವಿದೆ ಅಂತಾನೇ ಹೇಳಬಹುದಾಗಿದೆ. ಈ ಮಾಹಿತಿ ನಿಮಗೆ ಪ್ರಯೋಜನವಾಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಮತ್ತು ಬೇರೆಯವರಿಗೂ ಶೇರ್ ಮಾಡಿ

Leave a Reply

Your email address will not be published.