ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಈ ಸಂಗತಿಗಳು ಗೊತ್ತಾದ್ರೆ ಇನ್ನಷ್ಟು ಭಕ್ತಿ ಹೆಚ್ಚಾಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ. ಇಂದಿನ ವಿಷಯದಲ್ಲಿ ನಾನು ನಿಮಗೆ ಧರ್ಮಸ್ಥಳದ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ತಿಳಿಸಿ ಕೊಡಲಿದ್ದೇನೆ ಸ್ನೇಹಿತರೆ , ಹೌದು ಸ್ನೇಹಿತರೆ ಧರ್ಮಸ್ಥಳ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ದೇಶ ವಿದೇಶಗಳಿಂದ ಬಂದ ಭಕ್ತರು ಕೂಡ ಇಲ್ಲಿಗೆ ಭೇಟಿ ಕೊಡುತ್ತಾರೆ.ಭೇಟಿಕೊಟ್ಟು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ. ಈ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆಯಲು ದಿನಕ್ಕೆ ಸಾವಿರಾರು ಜನ ಆಗಮಿಸುತ್ತಾರೆ.ಹೀಗೆ ಆಗಮಿಸಿದಂತಹ ಎಲ್ಲರಿಗೂ ಕೂಡ ಇಲ್ಲಿ ಭೋಜನವು ಸಿಗುತ್ತದೆ.ಧರ್ಮಸ್ಥಳದಲ್ಲಿ ಇರುವಂತಹ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ಇಲ್ಲಿನ ಭಕ್ತಾದಿಗಳಿಗೆ ಯಾವ ರೀತಿಯಲ್ಲಿಯೂ ಕೂಡ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಇಲ್ಲಿನ ಅನ್ನದಾಸೋಹ ತುಂಬಾನೇ ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಸುಮಾರು 400 ವರ್ಷಗಳ ಹಿಂದೆ ಅನ್ನದಾಸೋಹ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. ಧರ್ಮಸ್ಥಳ ವೆಂಬ ಪುಣ್ಯಕ್ಷೇತ್ರಕ್ಕೆ ದೇಶವಿದೇಶಗಳಿಂದ ದಿನಕ್ಕೆ ಐದು ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸುತ್ತಾರೆ.ಹಾಗೆ ಎಲ್ಲಾ ಆಗಮಿಸಿದಂತಹ ಭಕ್ತರಿಗೂ ಕೂಡ ಇಲ್ಲಿ ಭೋಜನವು ಸಿಗುತ್ತದೆ. ಧರ್ಮಸ್ಥಳ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ಯಾರು ಕೂಡ ದಾಸೋಹವನ್ನು ಪಡೆಯದೇ ಹೋಗುವುದಿಲ್ಲ. ಈ ಕ್ಷೇತ್ರದಲ್ಲಿ ಮಾಡುವಂತಹ ಅಡುಗೆಯಲ್ಲಿ ಪ್ರತಿದಿನ 2000 ತೆಂಗಿನಕಾಯಿಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ.

ಹಾಗೆಯೇ ಸ್ನೇಹಿತರೆ ಇಲ್ಲಿರುವಂತಹ ಅನ್ನಪೂರ್ಣೇಶ್ವರಿಯ ಶಾಲೆಯಲ್ಲಿ ಒಂದೇ ಸಮಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಊಟ ಮಾಡುತ್ತಾರೆ.ಸಾಂಬಾರ್ ಪುಡಿ ಯನ್ನು ಇಲ್ಲಿ ಕೈ ನಿಂದ ಹಾಕುವುದಿಲ್ಲ ಬದಲಾಗಿ ಬಕೆಟ್ ನಿಂದ ಸುರಿಯುತ್ತಾರೆ. ಪ್ರತಿದಿನ ಇಲ್ಲಿ 50 ರಿಂದ 60 ಸಾವಿರ ಜನಕ್ಕೆ ಊಟವನ್ನು ಹಾಕಲಾಗುತ್ತದೆ.ಇದರ ಸ್ಥಳವೆಂಬ ಪುಣ್ಯಕ್ಷೇತ್ರಕ್ಕೆ ಬಂದು ಹಸಿದುಕೊಂಡು ಹೋದವರು ಯಾರೊಬ್ಬರೂ ಕೂಡ ಇಲ್ಲ. ಹಸಿದು ಬಂದವರಿಗೆ ಅನ್ನದಾನವನ್ನು ಮಾಡುವಂತಹ ಪುಣ್ಯಕ್ಷೇತ್ರವಾಗಿದೆ ಧರ್ಮಸ್ಥಳ. ಇಲ್ಲಿ ಅನ್ನವನ್ನು ಸುಮಾರು 80 ರಿಂದ 90 ಕ್ವಿಂಟಾಲ್ ಅಕ್ಕಿಯಿಂದ ಮಾಡಲಾಗುತ್ತದೆ.

ಹಾಗೆಯೇ ಆಧುನಿಕ ಉಪಕರಣಗಳನ್ನು ಬಳಸಿ ಅಡುಗೆಯನ್ನು ತಯಾರು ಮಾಡಲಾಗುತ್ತದೆ. ಇಲ್ಲಿ ಅಡುಗೆ ಮಾಡುವಾಗ ಯಾರೂ ಕೂಡ ಕೈಯನ್ನು ಹಾಕುವುದಿಲ್ಲ ಬದಲಾಗಿ ಉಪಕರಣಗಳನ್ನು ಬಳಸಿ ಅಡುಗೆಯನ್ನೂ ಮಾಡುತ್ತಾರೆ. ಇಲ್ಲಿ ಬಹಳ ಸುಚಿತ್ವ ಕಾಪಾಡಿಕೊಂಡು ಬಂದಿದ್ದಾರೆ.ಧರ್ಮಸ್ಥಳದಲ್ಲಿ ಇರುವಂತಹ ಅನ್ನಪೂರ್ಣ ಶಾಲೆಯಲ್ಲಿ ಮುನ್ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.ಧರ್ಮಸ್ಥಳಕ್ಕೆ ಬಂದ ಭಕ್ತಾದಿಗಳು ಅತಿಥಿಗಳು ಎಂದು ಧರ್ಮಸ್ಥಳದಲ್ಲಿ ಭೋಜನವನ್ನು ನೀಡಲಾಗುತ್ತದೆ.ಅದರಲ್ಲೂ ಲಕ್ಷದೀಪೋತ್ಸವದ ಸಮಯದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಆ ಸಮಯದಲ್ಲೂ ಕೂಡ ಬಂದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವನ್ನು ಮಾಡಲಾಗುತ್ತದೆ.ಸ್ನೇಹಿತರೆ ವರ್ಷದಿಂದ ವರ್ಷಕ್ಕೆ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತದೆ. ಕಳೆದ ವರ್ಷದಂತೆ 80 ಲಕ್ಷಕ್ಕೂ ಹೆಚ್ಚು ಜನರು ಶ್ರೀ ಮಂಜುನಾಥನ ದರ್ಶನಕ್ಕೆ ಬರುತ್ತಿದ್ದರು ಎಂಬ ಮಾಹಿತಿ ಇದೆ.ಧರ್ಮಸ್ಥಳದಲ್ಲಿ ಇರುವಂತಹ ಭೋಜನ ಶಾಲೆಯನ್ನು ದೊಡ್ಡ ವಿಸ್ತೀರ್ಣದಲ್ಲಿ ಕಟ್ಟಿದ್ದಾರೆ. ಮತ್ತು ಭೋಜನಶಾಲೆಯಲ್ಲಿ ಅಡುಗೆ ಮಾಡುವಂತಹ ಕ್ರಮಗಳು ಕೂಡ ತುಂಬಾನೇ ಬದಲಾವಣೆಗಳಿಂದ ಕೂಡಿವೆ.ನೋಡಿದ್ರಲ್ಲ ಸ್ನೇಹಿತರ ಹಸಿವು ಎಂದು ಬಂದವರನ್ನು ಧರ್ಮಸ್ಥಳ ಕ್ಷೇತ್ರ ಯಾವತ್ತೂ ಕೂಡ ಕೈಬಿಡುವುದಿಲ್ಲ ಅಷ್ಟು ಜನರಿಗೆ ನಾನು ವರ್ಷಗಳಿಂದಲೂ ಇಲ್ಲಿಯವರೆಗೆ ಪ್ರಸಾದವನ್ನು ವಿನಿಯೋಗ ಮಾಡುತ್ತಲೇ ಬಂದಿದೆ.ಇಲ್ಲಿ ವೀರೇಂದ್ರ ಹೆಗ್ಗಡೆಯವರ ಪಾತ್ರ ಪ್ರಮುಖವಾಗಿದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯ ಬಗ್ಗೆ ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.