ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಹೇಳುತ್ತಿರುವಂತಹ ವಿಚಾರ ಯಾವುದೆ ಪರಿಹಾರ ಆಗಲಿ ಅಥವಾ ಮನೆ ಮದ್ದುಗಳು ಆಗಲಿ ಅಲ್ಲ. ಒಂದಿಷ್ಟು ಇಂಟ್ರೆಸ್ಟಿಂಗ್ ಆದ ವಿಚಾರಗಳನ್ನು ತಿಳಿದುಕೊಳ್ಳೋಣ.ಹೌದು ನಿಮಗೆ ಇದು ಗೊತ್ತಾ ಕಾಫಿಯಿಂದ ವಾತಾವರಣದ ಬಗ್ಗೆ ನಾವು ತಿಳಿದುಕೊಳ್ಳಬಹುದು. ಯೋಚನೆ ಮಾಡ್ತಾ ಇದ್ದೀರಾ ಹೌದು ಇದರ ಬಗ್ಗೆ ನೀವು ಕೂಡ ತಿಳಿದುಕೊಳ್ಳಬೇಕು ಅನ್ನೋದಾದರೆ,ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಲೇಬೇಕು ಹಾಗೂ ಇಂತಹ ಇನ್ನಷ್ಟು ಇಂಟ್ರೆಸ್ಟಿಂಗ್ ಆದ ವಿಚಾರವನ್ನು ಈ ಮಾಹಿತಿಯ ಮುಖಾಂತರ ನಿಮಗೆ ತಿಳಿಸಿಕೊಡುತ್ತೇನೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.
ಮೊದಲಿಗೆ ನೀವು ನಮ್ಮ ದೇಶಗಳಲ್ಲಿ ಇರುವಂತಹ ಕೋಳಿಗಳನ್ನು ನೋಡಿರ್ತೀರಾ ಕೋಳಿಗಳು ಸಾಮಾನ್ಯವಾಗಿ ಒಂದೆ ಬಣ್ಣದಲ್ಲಿ ಇರುವುದಿಲ್ಲ ಅಲ್ವಾ. ವಿಧವಾದ ಬಣ್ಣದ ಕೋಳಿಗಳನ್ನು ನಮ್ಮ ದೇಶದಲ್ಲಿ ನಾವು ನೋಡಿರುತ್ತೇವೆ,ಅದೆ ಇಂಡೊನೇಷ್ಯಾದ ಕೋಳಿಗಳ ಬಗ್ಗೆ ಹೇಳುವುದಾದರೆ ಇಲ್ಲಿರುವ ಕೋಳಿಗಳು ಕಣ್ಣಿನಿಂದ ಹಿಡಿದು ತನ್ನ ದೇಹದ ಬಣ್ಣ ಮತ್ತು ದೇಹದ ಮಾಂಸ ರಕ್ತ ಇವೆಲ್ಲವೂ ಕೂಡ ಕಪ್ಪು ಬಣ್ಣದ್ದೆ ಆಗಿರುತ್ತದಂತೆ.ಕಪ್ಪು ಬಣ್ಣದಿಂದಲೆ ಕೂಡಿರುವಂತಹ ಈ ಒಂದು ಕೋಳಿಯು ಅಯಾನ್ಸಿಯೆನೆ ಅನ್ನೊ ಒಂದು ಜಾತಿಗೆ ಸೇರಿರುವ ಕೋಳಿಗಳು ಆಗಿರುತ್ತದೆ. ಈ ಕೋಳಿಗಳ ಬೆಲೆ ಅತ್ಯಂತ ದುಬಾರಿ ಅಂತ ಹೇಳಬಹುದು.
ಚೀನಾದ ದಂಪತಿಗಳು ಒಮ್ಮೆ ಸರ್ಕಾರದಿಂದ ರಸ್ತೆ ಅಗಲೀಕರಣಕ್ಕೆ ಆದೇಶ ನೀಡಿತ್ತು. ಆ ದಂಪತಿಗಳು ತಮ್ಮ ಮನೆಯನ್ನು ಕೂಡ ಬಿಟ್ಟು ಹೋಗಬೇಕಾಗಿತ್ತು ಆದರೆ ಇದನ್ನು ನಿರಾಕರಿಸಿದ ದಂಪತಿಗಳು,ಮುಂದೆ ಚೀನಾ ದೇಶದ ಸರಕಾರ ಆ ದಂಪತಿಗಳ ಮನೆಯ ಜಾಗವನ್ನಷ್ಟೇ ಹೊರತುಪಡಿಸಿ ಸುತ್ತಮುತ್ತಲೂ ಮಾತ್ರ ರಸ್ತೆಯನ್ನು ಅಗಲೀಕರಣ ಮಾಡಿದ್ದಾರೆ. ಇದು ಕೇಳೋದಕ್ಕೆ ಸಾಮಾನ್ಯ ವಿಚಾರ ಅನ್ನಿಸಿದರೂ ರಸ್ತೆ ಅಗಲೀಕರಣವಾದ ಬಳಿಕ ಮಧ್ಯದಲ್ಲಿ ಆ ದಂಪತಿಗಳ ಮನೆ ಸುಂದರವಾದ ತಾಣದಂತೆ ಏರ್ಪಾ ಆಗಿರುವುದನ್ನು ನಾವು ಗಮನಿಸಬಹುದು.
ನಿಮಗಿದು ಗೊತ್ತಾ ಸಾಮಾನ್ಯವಾಗಿ ಪೆಂಗ್ವಿನ್ ಅಂದರೆ ಅದನ್ನು ಯಾರು ಕೂಡ ಮನೆಯಲ್ಲಿ ಹಾಕಿಕೊಳ್ಳುವುದಿಲ್ಲ ಆದರೆ ಜಪಾನ್ನಲ್ಲಿ ಒಬ್ಬ ವ್ಯಕ್ತಿ ಒಂದು ಪೆಂಗ್ವಿನ್ ಅನ್ನು ಸಾಕಿಕೊಂಡಿದ್ದಾರೆ ಇದು ಎಷ್ಟು ಬುದ್ಧಿವಂತಿಕೆಯನ್ನು ಹೊಂದಿದೆ ಅಂದರೆ ಪ್ರತಿದಿನ ಅದು ಮಾರುಕಟ್ಟೆಗೆ ಹೋಗುವಾಗ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿ ಅದರಲ್ಲಿ ಮೀನುಗಳನ್ನು ತೆಗೆದುಕೊಂಡು ಬರುತ್ತದೆ ಅಂತ ಎಷ್ಟು ಆಶ್ಚರ್ಯಕರವಾಗಿ ಇರುತ್ತದೆ ಅಲ್ವಾ ಈ ಒಂದು ದೃಶ್ಯ ಕಾಣಲಿಕ್ಕೆ.ನಿಮಗಿದು ಗೊತ್ತಾ ನೀವು ಕುಡಿಯುವ ಕಾಫಿಯಿಂದ ವಾತಾವರಣದಲ್ಲಿ ಮಳೆ ಬರುತ್ತದೆಯೋ ಇಲ್ಲವೋ ಅಂತ ತಿಳಿದುಕೊಳ್ಳುವಂತೆ ಸಾಮಾನ್ಯವಾಗಿ ಕಾಫಿಯನ್ನು ಮಾಡಿದಾಗ
ಈ ಕಾಫಿಯಲ್ಲಿ ಲೋಟದ ಸುತ್ತ ನೊರೆ ಇರುವುದನ್ನು ನಾವು ಗಮನಿಸಬಹುದು. ಆದರೆ ಮಳೆ ಬರುವ ಸಾಧ್ಯತೆ ಇದ್ದರೆ ಈ ಕಾಫಿ ಲೋಟದಲ್ಲಿ ನೊರೆ ಮಧ್ಯ ಭಾಗದಲ್ಲಿ ಇರುತ್ತದೆ ಅಂತೆ. ನೀವು ಒಮ್ಮೆ ಈ ಒಂದು ಪ್ಯಾಕ್ಟ್ ಅನ್ನು ಚೆಕ್ ಮಾಡಿ ನೋಡಿ.ನಿಮಗಿದು ಗೊತ್ತಾ ಪ್ರಪಂಚದಲ್ಲಿಯೇ ಅತ್ಯಂತ ಆರೋಗ್ಯಕರವಾದ ಹಣ್ಣು ಯಾವುದು ಅಂದರೆ ಕೆಲವರು ಆ್ಯಪಲ್ ಬನಾನಾ ಕಿವಿ ಫ್ರೂಟ್ ಅಂತ ಹೇಳ್ತಾರೆ. ಆದರೆ ಸುಮಾರು ಇಪ್ಪತ್ತೈದು ಪೋಷಕಾಂಶಗಳನ್ನು ಹೊಂದಿರುವಂತಹ ಅವಕಾಡೊ ಹಣ್ಣು ಅತ್ಯಂತ ಆರೋಗ್ಯಕರ ಹಣ್ಣು ಅಂತ ಕರೆಸಿಕೊಂಡಿದೆಯಂತೆ.