ಅಗಸೇ ಬೀಜದ ವನ್ನು ನೀವೇನಾದ್ರು ಈ ರೀತಿ ಸೇವಿಸಿದರೆ ಸಾಕು ನಿಮ್ಮ ಅರೋಗ್ಯ ನೀವು ಅಂದುಕೊಂಡಕ್ಕಿಂತ ಉತ್ತಮವಾಗಿರುತ್ತದೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಉತ್ತರ ಕರ್ನಾಟಕದ ಮಂದಿ ಹೆಚ್ಚಾಗಿ ಬಳಸುವ ಈ ಒಂದು ಅಗಸೆ ಬೀಜದ ಮಹತ್ವ ಅಷ್ಟಾಗಿ ಹೆಚ್ಚು ಜನಕ್ಕೆ ತಿಳಿದಿಲ್ಲ, ಇನ್ನು ಈ ಅಗಸೆ ಬೀಜವನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ದೊರೆಯುತ್ತದೆ ಆರೋಗ್ಯಕರ ಲಾಭ ಯಾವೆಲ್ಲಾ ಇದೆ ಈ ಅಗಸೆ ಬೀಜದಲ್ಲಿ.ಅಗಸೆ ಬೀಜವನ್ನು ಹೇಗೆ ಸೇವಿಸಬೇಕು ಅನ್ನೋದರ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ.ಹಾಗೂ ಈ ಉಪಯುಕ್ತ ಆರೋಗ್ಯಕರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ ಯಾಕೆಂದರೆ ಒಳ್ಳೆಯ ಮಾಹಿತಿಯನ್ನು ಶೇರ್ ಮಾಡುವುದು ಕೂಡ ಒಂದು ಒಳ್ಳೆಯ ಕೆಲಸ ಅಂತಾನೇ ಹೇಳ್ತಾರೆ.

ಈ ಒಂದು ಬೀಜದಲ್ಲಿರುವ ಪೋಷಕಾಂಶವೂ ಎಷ್ಟು ಮಹತ್ತರವಾದದ್ದು ಅಂದರೆ ವಿಶ್ವದಲ್ಲಿಯೇ ಉತ್ತಮವಾದ ಆಹಾರ ಪದಾರ್ಥಗಳನ್ನು ತಿಳಿಸಿ ಎಂದು ಹೇಳಿದರೆ ಅಂತಹ ಉತ್ತಮ ಪದಾರ್ಥಗಳಲ್ಲಿ ಒಂದು ಅಗಸೆ ಬೀಜ ಕೂಡಾ ಸೇರಿಕೊಳ್ಳುತ್ತದೆ.ಹೆಚ್ಚು ಮಹತ್ವವನ್ನು ಕೂಡ ಪಡೆದುಕೊಳ್ಳುತ್ತದೆ. ಇದು ಅಷ್ಟಾಗಿ ಹೆಚ್ಚು ಜನರಿಗೆ ತಿಳಿದಿಲ್ಲ ಆದರೆ ಇದರಲ್ಲಿರುವ ಆರೋಗ್ಯಕರ ಲಾಭಗಳು ಮಾತ್ರ ಅಗಾಧವಾದದ್ದು. ಕೇವಲ ಹದಿನೈದು ಗ್ರಾಂ ಅಗಸೆ ಬೀಜವನ್ನು ಸೇವಿಸುವುದರಿಂದ. ಇಪ್ಪತ್ತು ಕೆಜಿ ಶೇಂಗಾವನ್ನು ಹತ್ತು ಕೆಜಿ ಬಾದಾಮಿಯನ್ನು ಮತ್ತು ಒಂದು ಕೆಜಿ ಮೀನನ್ನು ತಿಂದಾಗ ಎಷ್ಟು ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ದೊರೆಯುತ್ತದೆಯೋ ಅಷ್ಟು ಪೌಷ್ಟಿಕಾಂಶವನ್ನು ಕೇವಲ ಅಗಸೆ ಬೀಜದಿಂದ ಪಡೆದುಕೊಳ್ಳಬಹುದಾಗಿದೆ ಅಂತೆ.

ಉತ್ತರ ಕರ್ನಾಟಕದ ಮಂದಿ ಅದೆಷ್ಟು ರಘಡ್ ಇರುತ್ತಾರೆ ಅಂತ ನಾವು ತಿಳಿದಿದ್ದೇವೆ ನೋಡಿದ್ದೇವೆ ಮತ್ತು ಕೇಳಿದ್ದೇವೆ, ಇಷ್ಟು ಆರೋಗ್ಯಕರವಾಗಿರಲು ಅವರ ಆರೋಗ್ಯದ ಗುಟ್ಟು ಈ ಅಗಸೆ ಬೀಜ ಕೂಡ ಒಂದು ಅಂತ ಹೇಳಿದರೆ ತಪ್ಪಾಗಲಾರದು .ಅವರ ಆಹಾರ ಪದ್ಧತಿಯಲ್ಲಿ ಅಗಸೆ ಬೀಜವೂ ಕೂಡ ಒಂದಾಗಿದ್ದು ಇದು ಅನೇಕ ಶಕ್ತಿಯನ್ನು ಕೂಡಾ ನೀಡುತ್ತದೆ ನಿಮಗೂ ಕೂಡ ಸಾಧ್ಯವಾದರೆ ಈ ಅಗಸೆ ಬೀಜವನ್ನು ಮಾರುಕಟ್ಟೆಯಲ್ಲಿ ಹೋಗಿ ಕೊಂಡುಕೊಂಡು ಬಂದು ಇದರ ಸೇವನೆಯನ್ನು ತಪ್ಪದೇ ಮಾಡಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ .

ಇಂದಿನ ಆರೋಗ್ಯ ಪದ್ಧತಿಯನ್ನು ನೋಡ್ತಾ ಹೋದ್ರೆ ದೇಹಕ್ಕೆ ಯಾವ ಪೋಷಕಾಂಶಗಳು ದೊರೆಯುತ್ತಿಲ್ಲ ಕೇವಲ ಕ್ಯಾಲರಿ ಪೋಜು ಫ್ಯಾಟ್ ಇಂತಹ ಪದಾರ್ಥಗಳೇ ಸೇರ್ತಾ ಇದೆ.ಇದರ ಮಧ್ಯದಲ್ಲಿ ದೇಹಕ್ಕೆ ಬೇಕಾಗುವ ಪ್ರೋಟಿನ್ ,ವಿಟಮಿನ್ಸ್,  ಮಿನರಲ್ಸ್ ಯಾವು ಕೂಡ ಸರಿಯಾದ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಆದರೆ ಈ ಒಂದೇ ಒಂದು ಅಗಸೆ ಬೀಜ ನಮ್ಮ ದೇಹಕ್ಕೆ ಬೇಕಾಗುವ ನಾರಿನಾಂಶ ಮಿನರಲ್ಸ್, ಪ್ರೊಟೀನ್ಸ್ ,ವಿಟಮಿನ್ಸ್ ಎಲ್ಲವನ್ನೂ ದೊರಕಿಸಿಕೊಡುವುದರಲ್ಲಿ ಸಹಕಾರಿಯಾಗಿದೆ.

ಅಗಸೆ ಬೀಜದಲ್ಲಿರುವ ನಾರಿನಂಶ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ ರಕ್ತದಲ್ಲಿರುವ ಬೇಡದೆ ಇರುವ ಕೊಬ್ಬಿನ ಅಂಶವನ್ನು ಕೂಡ ಕರಗಿಸುವಲ್ಲಿ ಸಹಾಯ ಮಾಡುವುದರ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಕಾಯಿಲೆಗಳು ಬಾರದೇ ಇರುವ ಹಾಗೆ ಇದು ನೋಡಿಕೊಳ್ಳುತ್ತದೆ.ಕಣ್ಣಿನ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ. ಹಾಗಾದರೆ ಇಷ್ಟೆಲ್ಲ ಆರೋಗ್ಯಕರ ಪ್ರಯೋಜನ ವಿರುವ ಅಗಸೆ ಬೀಜವನ್ನು ಹೇಗೆ ಸೇವಿಸಬೇಕು ಅಂದರೆ ಚಟ್ನಿ ರೂಪದಲ್ಲಿ ಅಥವಾ ಈ ಅಗಸೆ ಬೀಜವನ್ನು ಪುಡಿ ಮಾಡಿ ಮೊಸರಿನೊಂದಿಗೆ ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ತುಂಬಾನೇ ಒಳ್ಳೆಯದು.ಆದರೆ ಮತ್ತೊಂದು ಮಾಹಿತಿಯನ್ನು ನಾವು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಅದೇನೆಂದರೆ ಅಗಸೆ ಬೀಜವನ್ನು ಪುಡಿ ಮಾಡಿ ಹದಿನೈದು ನಿಮಿಷದೊಳಗೆ ಸೇವಿಸಬೇಕು ಇಲ್ಲವಾದಲ್ಲಿ ಇದರಲ್ಲಿರುವ ಅಗತ್ಯ ಪೋಷಕಾಂಶಗಳು ಗಾಳಿಯಲ್ಲಿ ಲೀನವಾಗುತ್ತದೆ.

Leave a Reply

Your email address will not be published.